Home Crime “ಸುರೇಶ್ ಗೌಡರನ್ನ ಕೊಲ್ಲಬೇಕು” ಎಂದು ಕಾಮೆಂಟ್ ಮಾಡುವ ಮಟ್ಟಕ್ಕೆ ತುಮಕೂರು ಗ್ರಾಮಾಂತರದಲ್ಲಿ ರಾಜಕೀಯ ಕಿಚ್ಚು..!? ಮುಗಿಯದ...

“ಸುರೇಶ್ ಗೌಡರನ್ನ ಕೊಲ್ಲಬೇಕು” ಎಂದು ಕಾಮೆಂಟ್ ಮಾಡುವ ಮಟ್ಟಕ್ಕೆ ತುಮಕೂರು ಗ್ರಾಮಾಂತರದಲ್ಲಿ ರಾಜಕೀಯ ಕಿಚ್ಚು..!? ಮುಗಿಯದ ಜೆಡಿಎಸ್-ಬಿಜೆಪಿ ಜಟಾಪಟಿ

2697
0
SHARE

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರುಗಳ ವಾಗ್ಯುದ್ಧ ಮುಗಿದ ಕೆಲವೇ ದಿನಗಳಲ್ಲಿ ಮತ್ತೇ ಸುದ್ದಿಯಾಗಿದೆ..ಮಾಜಿ ಶಾಸಕರ ಭ್ರಷ್ಟಾಚಾರಾ ಆರೋಪಕ್ಕೆ ನೇಣು ಹಾಕಿಕೊಳ್ಳೋ ಟಾಂಗ್ ನೀಡಿದ್ದ ಹಾಲಿ ಶಾಸಕರು ತಮ್ಮ ವಾಕ್ಸಮರ ನಿಲ್ಲಿಸಿದ್ದರು..ಅದೇ ವಿಚಾರಕ್ಕೆ ಇದೀಗ ಎರಡೂ ಪಕ್ಷದ ಕಾರ್ಯಕರ್ತರು ಫೇಸ್ ಬುಕ್ ನಲ್ಲಿ ಯುದ್ದವೇ ನಡೆಸಿದ್ದಾರೆ..

ಸುರೇಶ್ ಗೌಡರನ್ನ ಕೊಲ್ಲಬೇಕು ಎಂದು ಕಾಮೆಂಟ್ ಮಾಡುವ ಮಟ್ಟಕ್ಕೆ ಗ್ರಾಮಾಂತರದಲ್ಲಿ ರಾಜಕೀಯ ಕಿಚ್ಚು ಏರಿದೆ.ಚುನಾವಣೆ ಮುಗಿದು ನಾಲ್ಕು ತಿಂಗಳಷ್ಟೇ ಕಳೆದಿದೆ.. ತುಮಕೂರು ಗ್ರಾಮಾಂತರ ಕ್ಷೇತ್ರ ಒಂದಲ್ಲಾ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿರುವಂತೆ ಆಗಿದೆ… ಹಾಲಿ ಜೆಡಿಎಸ್ ಶಾಸಕ ಗೌರಿಶಂಕರ್ ಹಾಗೂ ಬಿಜೆಪಿ ಮಾಜಿ ಶಾಸಕ ಸುರೇಶ್‍ಗೌಡ ಪರಸ್ಪರ ಹಾವೂ ಮುಂಗಿಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ..

ಶಾಸಕ ಸಿ.ಗೌರಿಶಂಕರ್ ಮೇಲೆ ಮಾಜಿ ಶಾಸಕ ಸುರೇಶ್ ಗೌಡರು ಭ್ರಷ್ಟಾಚಾರದ ಆರೋಪ ಮಾಡಿದ್ದರು,,ಅದಕ್ಕೆ ಉತ್ತರಿಸಿದ್ದ ಶಾಸಕ ಗೌರಿಶಂಕರ್, ಭ್ರಷ್ಟಾಚಾರ ಸಾಬೀತಾದರೇ ನೇಣು ಹಾಕಿಕೊಳ್ಳೋದಾಗಿ ಟಾಂಗ್ ನೀಡಿದ್ದರು…ಇದೀಗ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೇ ವಾರ್ ಗರಿದೆರದಿದೆ..ಮಾಜಿ ಶಾಸಕ ಸುರೇಶ್ ಗೌಡನನ್ನು ಸಾಯಿಸಿಬಿಡೋಣ ಅನ್ನೋ ಮಟ್ಟಕ್ಕೆ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ..

ಮಾಜಿ ಶಾಸಕ ಸುರೇಶ್ ಗೌಡರನ್ನು ಸಾಯಿಸಿ ಬಿಡೋಣ ಅಂತ ಜೆಡಿಎಸ್ ಕಾರ್ಯಕರ್ತನೋರ್ವ ಕಾಮೆಂಟ್ ಮಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕ ಗೌರಿಶಂಕರ್ ವಿರುದ್ಧ ಸುರೇಶ್ ಗೌಡ ಮಾಡಿದ ಆರೋಪದಿಂದ ಶುರುವಾದ ಜಟಾಟಪಿ ಇದೀಗ ಕಾರ್ಯಕರ್ತರು ಪರಸ್ಪರ ಬೈದಾಡಿಕೊಳ್ಳುವ ಹಂತ ತಲುಪಿದೆ.

ಜೆಡಿಎಸ್ ಕಾರ್ಯಕರ್ತ ರಂಗನಾಥ್ ಗೌಡ ಎಂಬಾತ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಗೌರಿಶಂಕರ್ ನಡೆಸಿದಸುದ್ದಿಗೋಷ್ಟಿಯನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಪರಸ್ಪರ ಕಾಮೆಂಟ್ ಮಾಡಿಕೊಂಡಿದ್ದಾರೆ. ಈ ವೇಳೆ ಪ್ರವೀಣ್ ಸೌಮ್ಯ ಎಂಬಾತ ಸುರೇಶ್ ಗೌಡರನ್ನು ಸಾಯಿಸಿ ಬಿಡೋಣ ಅಂತ ಕಾಮೆಂಟ್ ಮಾಡಿದ್ದಾರೆ..

ಇನ್ನೂ ಈ ಕಾಮೆಂಟ್ ಗೆ ತೀವ್ರ ವಿರೋಧ ವ್ಯಕ್ತ ಪಡಿಸಿರುವ ಬಿಜೆಪಿ ಕಾರ್ಯಕರ್ತರು ಪ್ರವಿಣ್ ವಿರುದ್ಧ ಕ್ರಮಕೈಗೊಳ್ಳುವಂತೆ ಎಎಸ್ಪಿಗೆ ದೂರು ನೀಡಿದ್ದಾರೆ..ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ‌‌..ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸೋದಾಗಿ ಎಚ್ಚರಿಸಿದ್ದಾರೆ…

ಗ್ರಾಮಾಂತರ ಕ್ಷೇತ್ರದಲ್ಲಿ ಇದೀಗ ರಾಜಕೀಯ ದ್ವೇಷದ್ದೇ ಕಿಚ್ಚು..ಎಲ್ಲಿ ನೋಡಿದ್ರೂ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಸಮರ ಸಾಗ್ತಿದೆ..ಉಭಯ ನಾಯಕರ ಈ ಮಾತುಗಳಿಂದ ನಿಜಕ್ಕೂ ಕಾರ್ಯಕರ್ತರು ಬಲಿಯಾಗೋ ಲಕ್ಷಣ ಗೋಚರಿಸುತ್ತಿದೆ.‌.ಹಾಲಿ ಮಾಜಿ ಶಾಸಕರುಗಳ ವಾಗ್ಯುದ್ದ ನಿಲ್ಲಿಸಿ ಕಾರ್ಯಕರ್ತರ ನಡುವೇ ಹತ್ತಿರೋ ದ್ವೇಷಕ್ಕೆ ನಾಂದಿ ಹಾಡಬೇಕಿದೆ..

LEAVE A REPLY

Please enter your comment!
Please enter your name here