Home Cinema ಸೂಪರ್ ಸ್ಟಾರ್‌ಗೆ ಶಾಕ್ ಮೇಲೆ ಶಾಕ್..!!! ಕರ್ನಾಟಕದಲ್ಲಿ “ಕಾಲ” ಚಿತ್ರ ಬಿಡುಗಡೆ ಮಾಡದಿದ್ದಕ್ಕೆ ಪೆಟ್ಟು ಬಿತ್ತಾ...

ಸೂಪರ್ ಸ್ಟಾರ್‌ಗೆ ಶಾಕ್ ಮೇಲೆ ಶಾಕ್..!!! ಕರ್ನಾಟಕದಲ್ಲಿ “ಕಾಲ” ಚಿತ್ರ ಬಿಡುಗಡೆ ಮಾಡದಿದ್ದಕ್ಕೆ ಪೆಟ್ಟು ಬಿತ್ತಾ ಮೋಸ್ಟ್ ಅವೇಟೆಡ್ ಸಿನಿಮಾ “2.o”ಗೆ..!!? ಹಣವಾಪಸ್ ಕೇಳುತ್ತಿದ್ದಾರೆ ವಿತರಕರು..!

2932
0
SHARE

ಇಂಡಿಯನ ಸಿನಿಮಾದ ಮೋಸ್ಟ್ ಅವೇಟೆಡ್ ಸಿನಿಮಾ. ರಜಿನಿಯ ಬಹುದೊಡ್ಡ ಸಾಹಸವಿರುವ ಚಿತ್ರ. ಸೆಟ್ಟೇರಿದಾಗ್ಲಿಂದಲೂ ಕಾಲಿವುಡ್‌ನಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದ ಚಿತಕ್ಕೆ, ಸದ್ಯ ಸಂಕಷ್ಟ ಎದುರಾಗಿದೆ, ಸೂಪರ್ ಸ್ಟಾರ್ ರಜಿನಿಕಾಂತ್ ನಂಬಿ ಹಣಹಾಕಿದವರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಂಕರ್ ನಿರ್ದೇಶನದ ಚಿತ್ರ 2.೦. ಸೂಪರ್ ಸ್ಟಾರ್ ರಜಿನಿಕಾಂತ್, ಆಮಿ ಜಾಕ್ಸನ್, ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ, ಲೈಕಾ ಪ್ರೋಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗ್ತಿರೋ ೨.೦ ಸಿನಿಮಾ. ಆಡಿಯೋ ಮೂಲಕ ಸಿಕ್ಕಾಪಟ್ಟೆ ಭರವಸೆ ಮೂಡಿಸಿತ್ತು. ಈ ವರ್ಷ ಪಕ್ಕಾ ರಿಲೀಸ್ ಆಗುತ್ತೆ ಅಂತ ಹೇಳಲಾಗಿತ್ತು. ಆದ್ರೆ ದಿಢೀರ್ ಅಂತ ಚಿತ್ರ ರಿಲೀಸ್ ಡೇಟ್‌ನ್ನು ಚಿತ್ರತಂಡ ಪೋಸ್ಟ್ ಪೋನ್ ಮಾಡಿದೆ.

ಲೈಕಾ ಪ್ರೋಡಕ್ಷನ್ ಅಡಿಯಲ್ಲಿ 450ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿರುವ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ದೊಡ್ಡ ಕ್ಯಾನ್‌ವಾಸ್‌ನಲ್ಲಿ ಚಿತ್ರ ಮೂಡಿಬರ್ತಿದ್ದು, ಹೊಸ ಹೊಸ ತಂತ್ರಜ್ಞಾನವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಹಾಗಾಗಿನೇ ಹಾಲಿವುಡ್‌ನ್ನು ಮೀರಿಸುವ ಮೇಕಿಂಗ್ ಮಾಡ್ತಿರುವ ಚಿತ್ರತಂಡಕ್ಕೆ ಎಷ್ಟು ಹಣ ಹಾಕಿದ್ರು ಸಾಕಾಗ್ತಿಲ್ಲ..ಅದೇ ಕಾರಣಕ್ಕೆ ಚಿತ್ರತಂಡ ಮುಂದಿನ ವರ್ಷ ಅಂದ್ರೆ 2019 ಬೇಸಿಗೆಗೆ ರಿಲೀಸ್ ಮಾಡುವ ಪ್ಲಾನ್‌ನಲ್ಲಿದೆ..
ಹಣವಾಪಸ್ ಕೇಳುತ್ತಿದ್ದಾರೆ ವಿತರಕರು..! 2.೦ ರಜಿನಿಕಾಂತ್ ಇರೋ ಸಿನಿಮಾ ಅಂತಾನೇ ದೊಡ್ಡ ದೊಡ್ಡ ವಿತರಕರು ಚಿತ್ರದ ವಿತರಣೆಗಾಗಿ ಮುಂಗಡ ಹಣವನ್ನು ಕೊಟಿದ್ರು. ಒಳ್ಳೆ ಪ್ರಾಫೀಟ್ ಮಾಡಬಹುದು ಅಂತ ಖುಷಿಯಲ್ಲಿದ್ರು.. ಆದ್ರೆ ಸಿನಿಮಾ ಮತ್ತೆ ಮತ್ತೆ ಮುಂದೂಡ್ತಿರೋದ್ರಿಂದ ವಿತರಕರೆಲ್ಲಾ ಗರಂ ಆಗಿದ್ದಾರೆ. ಬಡ್ಡಿ ಕಟ್ಟಲಾಗದೆ ಕಂಗಾಲಾಗಿದ್ದಾರೆ. ಸದ್ಯ ಸಿನಿಮಾದಿಂದ ಪ್ರಾಫೀಟ್ ಬರೋದಿರರ್ಲಿ ನಾವು ಹಾಕಿರುವ ಅಸಲು ಕೂಡ ಬರುವುದಿಲ್ಲ.. ಅಡ್ವಾನ್ಸ್ ದುಡ್ಡನ್ನು ವಾಪಸ್ ಕೊಟ್ಬಿಡಿ ಅಂತ ಚಿತ್ರ ತಂಡವನ್ನು ದಂಬಾಲು ಬಿದ್ದಿದ್ದಾರೆ…

ಇನ್ನು ಭಾರಿ ಕುತೂಹಲ ಮೂಡಿಸಿರೋ ಈ ಕಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ಆಡಿಯೋ, ಮತ್ತು ಬಿಡುಗಡೆ ವೇಳೆ ದೊಡ್ಡ ಮಾರುಕಟ್ಟೆ ಸೃಷ್ಟಿಸುತ್ತೆ ಅಂಥ ಚಿತ್ರತಂಡ ಅಂದಾಜಿಸಿತ್ತು. ಮಾಡ್ರನ್ ಟೆಕ್ನಾಲಜಿಯನ್ನು ಅಳವಡಿಸಿಕೊಂಡಿರುವ 2.೦ ಸಿನಿಮಾದ ವಿಎಫ್ ಎಕ್ಸ್‌ಗೆ ವರ್ಕ್ ಕಂಪ್ಲೀಟ್ ಮಾಡೋದಕ್ಕೆ ಇನ್ನು ಹಣದ ಅವಶ್ಯಕತೆ ಇದೆ. ಆದ್ರೆ ಬಂಡವಾಳ ಹಾಕೋದಕ್ಕೆ ಮಾತ್ರ ಎಲ್ಲರೂ ಹಿಂದೆ ಸರಿಯುತ್ತಿದ್ದಾರೆ. ಈಗಾಗಲ್ಲೇ ಚಿತ್ರದ ನಿರ್ಮಾಪಕರು ವಿತರಕರನ್ನು ಸಮಾಧಾನ ಪಡಿಸುವ ಕೆಲಸ ಕೂಡ ಮಾಡ್ತಿದ್ದಾರೆ…

ಇಷ್ಟೇಲ್ಲಾ ಆಗಿದ್ದು, ರಜಿನಿಯ ಆ ಒಂದು ಮಾತು. ಹೌದು. ಕರ್ನಾಟಕದಲ್ಲಿ ಕಾಲ ಚಿತ್ರಕ್ಕೆ ಎದುರಾಗಿದ್ದ ಕಂಟಕದ ಮತ್ತೊಂದು ಸುತ್ತಿನ ಎಫೆಕ್ಟ್ ಇದು. ಹಾಗಾಗೇ 2.೦ ಚಿತ್ರ ರಿಲೀಸ್ ಮುಂದಕ್ಕೆ ಹೋಗಿದೆ ಅನ್ನುವ ಮಾತುಗಳು ಇದೇ ವೇಳೆ ಕೇಳಿ ಬರ‍್ತಿವೆ. ಇನ್ನು, ರಜಿನಿಯ ಮಾತಿಗೆ ಕರ್ನಾಟದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ…

ಪರಭಾಷೆಗಳಿಗೆ ದೊಡ್ಡ ಮಾತುಕಟ್ಟೆಯಾಗಿರುವ ಕರ್ನಾಟಕದಲ್ಲಿ ಕಲೆಕ್ಷನ್ ಡೌನ್ ಆಗಿದೆ. ಈ ಎಲ್ಲಾ ಬೆಳವಣೆಗೆಯನ್ನು ನೋಡಿ ಚಿತ್ರತಂಡ ೨.೦ ಚಿತ್ರವನ್ನು ಮುಂದಕ್ಕೆ ಹಾಕಿರಬಹುದೆ ಎಂದು ಹೇಳಲಾಗ್ತಿದೆ. ಅದೇನೇ ಇದ್ರು.. ಮೇಕಿಂಗ್ ಮತ್ತು ದೊಡ್ಡ ಮಟ್ಟದ ಕ್ರೇಜ್ ನೋಡಿ ಚಿತ್ರ ನೋಡಲು ಕಾದುಕುಳಿತವರಿಗೆ ಈ ಸುದ್ದಿಕೇಳಿ ಶಾಕ್ ಆಗಿರೋದು ಮಾತ್ರ ಸುಳ್ಳಲ್ಲ..

 

LEAVE A REPLY

Please enter your comment!
Please enter your name here