Home District ಸೂರ್ಯ ಪಥ ಬದಲಿಸುವ ಹೊತ್ತು- ಮೈತ್ರಿ ಸರ್ಕಾರಕ್ಕೆ ಬರಲಿದ್ಯಾ ಕುತ್ತು.!? ಸಂಕ್ರಾಂತಿಯ ಸಂದರ್ಭದಲ್ಲೇ ಪಥ ಬದಲಿಸುತ್ತಾ...

ಸೂರ್ಯ ಪಥ ಬದಲಿಸುವ ಹೊತ್ತು- ಮೈತ್ರಿ ಸರ್ಕಾರಕ್ಕೆ ಬರಲಿದ್ಯಾ ಕುತ್ತು.!? ಸಂಕ್ರಾಂತಿಯ ಸಂದರ್ಭದಲ್ಲೇ ಪಥ ಬದಲಿಸುತ್ತಾ ರಾಜ್ಯ ರಾಜಕಾರಣ.!? ಚಲನೆ-ಬದಲಾವಣೆ-ಸೋಲು-ಗೆಲುವು ಎಲ್ಲವೂ ಎಲ್ಲವೂ ಜಗದ ನಿಯಮ.!

2419
0
SHARE

ರಾಜ್ಯ ರಾಜಕಾರಣವೇ ದೊಡ್ಡ ಸ್ಥಿಂತ್ಯರಕ್ಕೆ ರೆಡಿಯಾಗುತ್ತಿದೆ. ಯಾವ ಸಮಯದಲ್ಲಿ ಏನ್ ಆಗುತ್ತೋ ಯಾವಾಗ ಸರ್ಕಾರ ಬೀಳುತ್ತೋ ಅನ್ನೋದು ಸಧ್ಯಕ್ಕೆ ಕುತೂಹಲವಾಗಿದೆ. ಏಕೆಂದ್ರೆ ಅಪಾಯದ ಅಂಚಿನಲ್ಲೇ ರಚನೆಗೊಂಡ ಸಮ್ಮಿಶ್ರ ಸರ್ಕಾರ ಹಗ್ಗದ ಮೇಲಿನ ನಡಿಗೆ ನಡೆದುಕೊಂಡು ಹಾಗೂ ಹೀಗು 6 ತಿಂಗಳನ್ನ ಕಳೆದು ಬಿಟ್ಟಿದೆ. ಈ ಆ ತಿಂಗಳಲ್ಲಿ ಸರ್ಕಾರ ನಡೆಸಿದ್ದಿಕ್ಕಿಂತ ಹೆಚ್ಚಾಗಿ ಸರ್ಕಾರ ಯಾವಾಗ ಬಿದ್ದು ಹೋಗುತ್ತೋ ಅನ್ನೋ ಯೋಚನೆಯೇ ಆಳುವ ವರ್ಗಕ್ಕೆ ಆವರಿಸಿತ್ತು, ಸಧ್ಯದ ಸಮಯದಲ್ಲಿ ಆ ಭಯ ಮತ್ತಷ್ಟು ಹೆಚ್ಚಾಗಿದೆ.

ರಾಜ್ಯ ರಾಜಕಾರಣದಲ್ಲಿ ಮತ್ತೆ ಅಗೋಚರ ವಿದ್ಯಮಾನಗಳು ನಡೆಯುತ್ತಿವೆ..ಎಲ್ಲವೂ ಅಷ್ಟೇ ನಿಗೂಢವಾಗಿದೆ.. ಯಾವುದೇ ಸಮಯದಲ್ಲಿ ಎಲ್ಲವೂ ಬಹಿರಂಗವಾಗುವ ಸಾಧ್ಯತೆಗಳೂ ಇವೆ..ತೆರೆ ಮರೆಯ ಕಸರತ್ತುಗಳು,ತಂತ್ರಗಳು ಏನೇ ಇದ್ದರೂ ಸಂಕ್ರಾಂತಿ ಹಬ್ಬ ಮತ್ತೊಂದು ರಾಜಕೀಯ ಸುಗ್ಗಿಗೆ ಸಾಕ್ಷಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.. ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಬಿಜೆಪಿ ನಾಯಕರು, ಒಂದು ಹಂತದಲ್ಲಿ ಸಕ್ಸಸ್ ಆಗಿದ್ದಾರೆ ಎಂದೂ ಹೇಳಲಾಗುತ್ತಿದೆ..

ಈಗಾಗಲೇ 12 ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇನ್ನೇನು ಮೈತ್ರಿ ಸರ್ಕಾರಕ್ಕೆ ಕೌಂಟ್ ಡೌನ್ ಶುರುವಾಗಿದೆ ಎಂದೇ ಗುಸು ಗುಸು ಮಾತು ಕೇಳಿಬರುತ್ತಿದೆ.. ರಿವರ್ಸ್ ಆಪರೇಷನ್ ಆಗದಿರಲಿ ಅಂತ ನೋಡಿಕೊಳ್ಳುವ ಸಲುವಾಗಿಯೇ ಈಗಾಗಲೇ ಬಿಜೆಪಿಯ ಶಾಸಕರನ್ನು ದೆಹಲಿಯಲ್ಲೇ ಇರಿಸುವ ಪ್ಲಾನ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.. ಸಂಕ್ರಾಂತಿ ಮುಗಿಯುವವರೆಗೂ ರಾಜ್ಯ ಬಿಜೆಪಿ ಶಾಸಕರು ದೆಹಲಿಯಲ್ಲೇ ವಾಸ್ತವ್ಯ ಹೂಡಿ, ಆಪರೇಷನ್ ಸಕ್ಸಸ್ ಆದ್ರೆ ಅಲ್ಲಿಂದಲೇ ಒಟ್ಟಾಗಿ ರಾಜ್ಯಕ್ಕೆ ಬಂದಿಳಿಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಆಪರೇಷನ್ ಕಮಲ ಬಗ್ಗೆ  ಪ್ರತಿಕ್ರಿಯಿಸಿರುವ ಮೈತ್ರಿ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್, ಒಂದಿಷ್ಟು ಕುತೂಹಲಕಾರಿ ಮಾಹಿತಿಗಳನ್ನೂ ಬಹಿರಂಗಪಡಿಸಿದ್ದಾರೆ.. ಮೂರು ಜನ ಮುಂಬೈಗೆ ಹೋಗಿದ್ದಾರೆ.. ಯಾರನ್ನು ಭೇಟಿ ಮಾಡೋಕೆ ಹೋಗಿದ್ದಾರೋ ಗೊತ್ತಿಲ್ಲ.. ಆದ್ರೆ ಯಾವ ಹೊಟೇಲ್ ನಲ್ಲಿ ಇದ್ದಾರೆ ಎಂಬುದು ಗೊತ್ತಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.. ಆದ್ರೆ ಮುಂಬೈಗೆ ಹೋದ ಆ ಮೂವರು ಯಾರು ಎಂಬುದನ್ನು ಬಹಿರಂಗ ಪಡಿಸಲು ನಿರಾಕರಿಸಿರುವ ಅವರು ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ..

ಡಿಕೆ ಶಿವಕುಮಾರ್ ಈ ರೀತಿ ಹೇಳಿದ್ದೇ ತಡ ಆಪರೇಷನ್ ಕಮಲ ನಡೆಸುತ್ತಿರೋದು ಪಕ್ಕ ಆಗಿದೆ, ಮಾತ್ರವಲ್ಲ ಈ ಸಂಕ್ರಾಂತಿ ರಾಜಕೀಯ ಪಥ ಬದಲಾವಣೆಗೂ ಕಾರಣಲಾಗಲಿದೆ ಅಂತಾ ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಬಿಜೆಪಿ ನಾಯಕರು ಹೋಳೋದೇ ಬೇರೆ. ನಾವು ಯಾವುದೇ ಕಾರಣಕ್ಕೂ ಆಪರೇಷನ್ ಮಾಡೋಡಿಲ್ಲ. ಯಾರಿಗೂ ಆಮೀಷ ಕೊಡುತ್ತಿಲ್ಲ ಅಂತಾ ಸ್ಪಷ್ಟ ಪಡಿಸುತ್ತಿದ್ದಾರೆ, ಬೆಂಕಿ ಇಲ್ಲದೆ ಹೋಗೆ ಆಡೋಲ್ಲ… ಸೋ ಬಿಜೆಪಿ ನಾಯಕರು ಸರ್ಕಾರ ಅಸ್ಥಿರ ಕೊಳಿಸಲು ಪ್ರಯತ್ನ ಪಡುತ್ತಿದ್ದಾರೆ, ಆ ಕಾರಣಕ್ಕೆ ದೋಸ್ತಿ ಪಾಳೆಯದಲ್ಲಿ ಸರ್ಕಾರ ಬೀಳುವ ಭಯ ಧಗ ಧಗಿಸುತ್ತಿದೆ.

ಬಿಜೆಪಿ ಆಪರೇಷನ್ ಕಮಲಕ್ಕೆ ವಿರುದ್ಧವಾಗಿ ಕೈ ಪಾಳಯದಲ್ಲಿ ತಂತ್ರ ರೂಪಿಸಲು ಸಚಿವ ಡಿಕೆಶಿವಕುಮಾರ್ ಮುಂಬೈಗೆ ತೆರಳುತ್ತಿದ್ದಾರೆ, ಮುಂಬೈನಲ್ಲಿ ಜಲಸಂಪನ್ಮೂಲ ಇಲಾಖೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವ ನೆಪ ಹೇಳಿ ಮುಂಬೈಗೆ ಪಯಣ ಬೆಳೆಸಲಿದ್ದಾರೆ. ಇನ್ನು ಮುಂಬೈನಲ್ಲಿರುವ ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಿ ಮತ್ತೆ ಅವರನ್ನ ಪಕ್ಷಕ್ಕೆ ವಪಾಸ್ಸು ಕರೆ ತರುತ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ. ನಾಲ್ವರು ಮುಂಬೈನಲ್ಲಿರುವ ಬಗ್ಗೆ ಮಾಹಿತಿಯಿದೆ ಎಂದು ಡಿಕೆಶಿಯೇ ಹೇಳಿದ್ರು..

ಹೀಗಾಗಿಯೇ ಮುಂಬೈಗೆ ತೆರಳ್ತಿದ್ದಾರೆ ಎಂಬ ಡಿಕೆಶಿ ನಡೆ ನಿಗೂಡವಾಗಿದೆ..ಸೋ ಈ ಸಂಕ್ರಾಂತಿಯಲ್ಲಿ ದೊಡ್ಡ ರಾಜಕೀಯ ಕ್ರಾಂತಿ ನಡೆಯುತ್ತಿದೆ. ಈ ಹಬ್ಬ ಯಾರಿಗೆ ಸಿಹಿ ಕೊಡುತ್ತೆ ಯಾರಿಗೆ ಕಹಿ ಕೊಡುತ್ತೆ. ಕ್ರಾಂತಿಯ ಬೆಂಕಿಯಲ್ಲಿ ಸರ್ಕಾರ ಹೊಳೆಯುತ್ತಾ, ಸುಟ್ಟು ಹೋಗುತ್ತಾ? ಆಪರೇಷನ್ ಮಾಡಲು ಹೊರಟಿರೋ ಬಿಜೆಪಿ ನಾಯಕರೇ ಆಫರೇಷನ್ ಆಗ್ತಾರ. ಇಲ್ಲಾ ಆಪರೇಷನ್ ಸಕ್ಸಸ್ ಮಾಡ್ತಾರ? ಈ ಎಲ್ಲದಕ್ಕೂ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗಲಿದೆ.

ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯಾಗುತ್ತದೆ ಎಂಬ ಸುದ್ದಿ ಕೇಳಿ ಆತಂಕದಲ್ಲೇ ದಿನ ಕಳೆಯುತ್ತಿದ್ದ ರಾಜ್ಯ ಕಾಂಗ್ರೆಸ್‌ ನಾಯಕರು ಪ್ರತಿ ದಿನ ಅತೃಪ್ತ ಶಾಸಕರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಮೂಲಕ ವಿಶ್ವಾಸದಲ್ಲಿರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಮೊದಲು ಚಿಕ್ಕೋಡಿ ಸದಲಗಾ ಕ್ಷೇತ್ರ ಶಾಸಕ ಗಣೇಶ್‌ ಹುಕ್ಕೇರಿ ಕಾಂಗ್ರೆಸ್‌ ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು, ಆದ್ರೆ ತಕ್ಷಣವೇ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ತೊರೆಯುವುದಿಲ್ಲ ಎಂದು ಟ್ವೀಟ್‌ ಮಾಡಿ, ಸ್ಪಷ್ಟನೆ ನೀಡಿದರು. ಇನ್ನು ಚಿಂಚೋಳಿ ಶಾಸಕ ಉಮೇಶ್‌ ಜಾಧವ ಕೂಡ ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿ ಹರಡಿದ್ದು, ಆದರೆ, ಅವರು ಈ ಬಗ್ಗೆ ಯಾರಿಗೂ ಸಂಪರ್ಕಕ್ಕೆ ಸಿಗದೇ ಇರುವುದು ಕೈ ನಾಯಕರಿಗೆ ಆತಂಕವುಂಟು ಮಾಡಿದೆ.

ಬೈಲಹೊಂಗಲ ಶಾಸಕ ಮಹಾಂತೇಶ್‌ ಕೌಜಲಗಿ, ಬಸವ ಕಲ್ಯಾಣ ಶಾಸಕ ಬಿ. ನಾರಾಯಣರಾವ್‌ ಹಾಗೂ ಪ್ರತಾಪ್‌ಗೌಡ ಪಾಟೀಲ್‌ ಪಕ್ಷದಲ್ಲಿ ಆಗಿರುವ ಅನ್ಯಾಯಕ್ಕೆ ಕಾಂಗ್ರೆಸ್‌ನಲ್ಲಿಯೇ ಇದ್ದುಕೊಂಡು ನ್ಯಾಯ ಕೇಳುವುದಾದರೆ ನಾವು ನಿಮ್ಮೊಂದಿಗೆ ಬರುತ್ತೇವೆ ಎಂದು ರಮೇಶ್‌ ಜಾರಕಿಹೊಳಿಗೆ ನೇರವಾಗಿಯೇ ಹೇಳಿದ್ದಾರಂತೆ.  ಇನ್ನು ಕಂಪ್ಲಿ ಶಾಸಕ ಗಣೇಶ್‌ ಕೂಡ ಸಚಿವ ಡಿ.ಕೆ. ಶಿವಕುಮಾರ್‌ ರನ್ನು ಭೇಟಿ ಮಾಡಿ ತಾವು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ರಮೇಶ್‌ ಜಾರಕಿಹೊಳಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದ್ದರೂ ಸಂಖ್ಯಾಬಲ ಇದ್ದರಷ್ಟೇ ತಮ್ಮೊಂದಿಗೆ ಬರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ, ಅದಕ್ಕಾಗಿ ರಮೇಶ್‌ ಜಾರಕಿಹೊಳಿ ನಿರೀಕ್ಷಿತ ಸಂಖ್ಯಾ ಬಲ ಸೇರಿಸಲು ಮುಂಬೈನಲ್ಲಿ ಕುಳಿತು ಕಸರತ್ತು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಅಥಣಿ ಶಾಸಕ ಮಹೇಶ್‌ ಕಮಠಳ್ಳಿ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಮಾತ್ರ ರಮೇಶ್‌ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ಅವರೊಂದಿಗೆ ನಿಂತಿದ್ದಾರೆ ಎನ್ನಲಾಗಿದೆ.

ಆದರೆ, ಬಿಜೆಪಿಯವರ ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್‌ ಶಾಸಕರು ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಳ್ಳದಿರುವುದು ಕಾಂಗ್ರೆಸ್‌ ನಾಯಕರು ಸಂಕ್ರಾಂತಿ ನಂತರವೂ ಯಾವುದೇ ಕ್ರಾಂತಿಯಾಗುವುದಿಲ್ಲ ಎಂದು ನಿಟ್ಟುಸಿರುವ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವ ಸ್ಥಾನ ಸಿಗಲಿಲ್ಲವೆಂದು ನಿರಾಶರಾಗಿ ಕಾಂಗ್ರೆಸ್‌ ಹೈಕಮಾಂಡ್‌ ವಿರುದ ಮುನಿಸಿಕೊಂಡು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದ ಅಧಿಕಾರ ವಹಿಸಿಕೊಳ್ಳದೇ ದೂರವುಳಿದಿರುವ ಉಮೇಶ ಜಾಧವ, ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ.

ಚಿಂಚೋಳಿ ವಿಧಾನಸಭೆ ಮತ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾದರೂ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎನ್ನುವ ಅಸಮಾಧಾನ ಉಮೇಶ ಜಾಧವ ಅವರಲ್ಲಿದೆ ಎಂದು ಹೇಳಲಾಗುತ್ತಿದೆ. ಆ ಕಾರಣಕ್ಕೆ ಇವರು ಬಿಜೆಪಿಯ ಕಡೆ ಮುಖ ಮಾಡಿದ್ದಾರಂತೆ.ಸೋ ಅಲ್ಲಿಗೆ ಒಟ್ಟು 18 ಶಾಸಕರು ಬೇಲಿಯ ಮೇಲೆ ಕುಳಿತು ಕೊಂಡಿದ್ದಾರೆ. ಯಾರು ಯಾವಾಗ ಹೋಗ್ತಾರೋ ಗೊತ್ತಾಗುತ್ತಿಲ್ಲ. ಸಧ್ಯಕ್ಕಂತು ರಾಜಕೀಯವಾಗಿ ಕ್ಷಿಪ್ರ ಕ್ರಾಂತಿಯಾಗುತ್ತಿರೋದು ಪಕ್ಕ. ಈ ಕ್ರಾಂತಿ ಮುಂದುವರೆಯುತ್ತಾ, ದೋಸ್ತಿ ಸರ್ಕಾರ ಗಟ್ಟಿಯಾಗಿ ಉಳಿಯುತ್ತಾ? ಅನ್ನೋದು ಸಧ್ಯಕ್ಕೆ ಉತ್ತರ ಸಿಗದ ಪ್ರಶ್ನೆ.

LEAVE A REPLY

Please enter your comment!
Please enter your name here