Home District ಸೆಕೆಂಡ್‌ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸಿದ ಪೈಂಟರ್..!! ಪುನೀತನ ಸ್ಪೀಡ್ ಫೈಂಟಿಂಗ್ ನಲ್ಲಿ ಅರಳಿದ “ಭಗತ್...

ಸೆಕೆಂಡ್‌ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸಿದ ಪೈಂಟರ್..!! ಪುನೀತನ ಸ್ಪೀಡ್ ಫೈಂಟಿಂಗ್ ನಲ್ಲಿ ಅರಳಿದ “ಭಗತ್ ಸಿಂಗ್ ನಾಡಪ್ರಭು ಕೆಂಪೇಗೌಡರ” ಚಿತ್ರ..!!

658
0
SHARE

ಈತ ಬಡತನದಲ್ಲೇ ಅರಳಿದ ಪ್ರತಿಭೆ…ಕಡು ಬಡತನದಲ್ಲೂ ಕನಸು ನನಸು ಮಾಡಿಕೊಳ್ಳುತ್ತಿರುವ  ಹುಡುಗ ..ತನ್ನಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾನೆ..ಯಾರಿಂದಲೋ ಸ್ಪೂರ್ತಿ ತುಂಬಿಕೊಂಡು.. ತನ್ನ ಕಲೆಗೆ ಪ್ರತಿನಿತ್ಯ ಬಣ್ಣದ ಮೂಲಕ ಜೀವ ನೀಡುತ್ತಿರುವ ಈ ಹುಡುಗ  ಸ್ಪೀಡ್ ಪೇಟಿಂ ಗ್ ಮೂಲಕ ಗಮನ ಸೆಳೆಯುತ್ತಿದ್ದಾನೆ..

ಹೌದು.. ಈತನ ಹೆಸರು ಪುನೀತ್, ಡಿಗ್ರಿ ಮುಗಿಸಿರೋ ಈ ಹುಡುಗ .. 72ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ರನ್ನ ತನ್ನ ಕುಂಚದಲ್ಲಿ ನೆನೆದಿದ್ದಾನೆ.ಈತನ ಹೆಸರು ಪುನೀತ್..ಮೈಸೂರು ಮೂಲದ ಈ ಹುಡುಗ.ಏನಾದರೂ ಸಾಧಿಸಬೇಕೆಂಬ ಛಲವಾದಿ..

ಪ್ರತಿನಿತ್ಯ ಕನಸಿಗೆ ನೀರೆರೆದು ಪೋಷಿಸುತ್ತಿರೋ ಇವ್ರು ಸ್ಪೀಡ್ ಫೈಂಟಿಂಗ್ ಮೂಲಕ ಗಮನ ಸೆಳೆಯುತ್ತಿರೋ ಯುವ ಪ್ರತಿಭೆ..ಬಡತನದ ಹಂಗಿದ್ದರು ಲೆಕ್ಕಿಸದೆ, ತರಗತಿಗೂ ಹೋಗದೆ ಅವರಿವರು ಬಿಡಿಸಿದನ್ನು ನೋಡಿ ಹಂತ ಹಂತವಾಗಿ  ಸ್ಪೀಡ್ ಪೇಯಿಟಿಂಗ್ ಕಲಿತುಕೊಂಡಿದ್ದಾನೆ. ಮೈಸೂರಿನಲ್ಲಿ ಯಾವುದೇ ಕಾರ್ಯಕ್ರಮ ಇರಲಿ ಪುನೀತ್ ನ ಕೈಚಳಕ ಅಲ್ಲಿರುತ್ತೆ.

ಭಗತ್ ಸಿಂಗ್,ಸಂಗೊಳ್ಳಿ ರಾಯಣ್ಣ , ಸೈನಿಕರು ,ಪ್ರಭಾವಿ ವ್ಯಕ್ತಿಗಳು, ಪ್ರಚಲಿತ ಘಟನೆಗಳ ಮೇಲೆ ಕೆಲವೇ ಸೆಕೆಂಡುಗಳಲ್ಲಿ  ಚಿತ್ರ ಬರೆದು ಬೆರಗುಗೊಳಿಸುತ್ತಾನೆ.ಇವತ್ತು ನಾವೆಲ್ಲ ನೆಮ್ಮದಿಯ ನಿಟ್ಟುಸಿರಿ ಬಿಟ್ಟು ಜೀವನ ನಡೆಸುತ್ತಿದ್ದೇವೆ ಅಂದ್ರೆ ಅದಕ್ಕೆ ಕಾರಣ ಸೈನಿಕರು..ಗಡಿಯಲ್ಲಿ ನಿಂತು ದೇಶ ಕಾಯೋ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಶ್ರತುಗಳ ಜೊತೆ ಹೋರಾಡಿ ದೇಶವನ್ನ ರಕ್ಷಣೆ ಮಾಡುತ್ತಾರೆ..

ಇಂದು ಸ್ವಾತಂತ್ರೋತ್ಸವ ದಿನ ಈ  ದಿನ ನಮ್ಮ ವೀರ ಯೋದರನ್ನ ನೆನೆಯದೇ ಇದ್ದರೆ ಹೇಗೆ.. ಅದಕ್ಕಾಗಿ ಇಲ್ಲೊಬ್ಬ ಹುಡುಗ ತನ್ನ ಕಲೆಯ ಮೂಲಕ ಸೈನಿಕರಿಗೆ ನಮನ ಸಲ್ಲಿಸಿದ್ದಾನೆ .ಮೈಸೂರು ಮೂಲದ ಈತನ ಹೆಸರು ಪುನೀತ್..ಸ್ಪೀಡ್ ಫೈಂಟಿಂಗ್ ಮೂಲಕ ಗಮನ ಸೆಳೆಯುತ್ತಿರೋ ಈ ಯುವ ಪ್ರತಿಭೆ ಯಾವುದೇ ಚಿತ್ರ ಕೊಟ್ಟರು ಐದು ನಿಮಿಷದೊಳಗೆ ತನ್ನ ಕೈಚಳ ತೋರಿಸುತ್ತಾನೆ..

LEAVE A REPLY

Please enter your comment!
Please enter your name here