Home Cinema ಸೆಲ್ಫಿ ತೆಗೆದುಕೊಳ್ಳಲೋದವರ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಮಾಡಿದ್ದು ನಿಜಾನಾ..?! ಅಸಲಿ ಕಾರಣವೇನು ಗೊತ್ತಾ..?!

ಸೆಲ್ಫಿ ತೆಗೆದುಕೊಳ್ಳಲೋದವರ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಮಾಡಿದ್ದು ನಿಜಾನಾ..?! ಅಸಲಿ ಕಾರಣವೇನು ಗೊತ್ತಾ..?!

2887
0
SHARE

ದರ್ಶನ್. ಚಂದನವನದ ಚಕ್ರವರ್ತಿ. ಅಭಿಮಾನಿಗಳ ಅಭಿಮಾನಿ. ತನ್ನ ಸುತ್ತ ಮುತ್ತ ಇದ್ದವರನ್ನ ಬೆಳೆಸುತ್ತಾ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ.. ಹೊಸ ಪ್ರತಿಭೆಗಳ ಬೆನ್ನಿಗೆ ನಿಂತು ಪ್ರೋತ್ಸಾಹಿಸುತ್ತಾ ಬರ‍್ತಿರುವ ದರ್ಶನ್ ಇದೀಗ ಬೇಡ್ದೇ ಇರುವ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಯಸ್, ದರ್ಶನ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಸದ್ದಿಲ್ಲದೇ ನಡಿತಿದೆ.

ಹೀಗಂತ, ಇದೀಗ ದರ್ಶನ್ ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ. ಇದಕ್ಕೆ ಕಾರಣ ದರ್ಶನ್ ಸಹಕಲಾವಿದನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಬ್ಬಿಸಲಾದ ವದಂತಿ ನಿಮಗೆ ಗೊತ್ತಿರಲಿ ದರ್ಶನ್ ತುಂಬಾನೇ ಸಾಫ್ಟ್ ವ್ಯಕ್ತಿ. ಹಾಗಂತ, ಅತಿಯಾದ ತರ‍್ಲೆಗಳನ್ನೂ ಇವರು ಸಹಿಸಲ್ಲ. ಬಿಕೌಜ್ ದರ್ಶನ್ ಎಷ್ಟು ಶಾಂತವಾಗಿರ‍್ತಾರೋ, ಅಷ್ಟೇ ಕೋಪನೂ ಮಾಡ್ಕೊತಾರೆ. ಇದೇ ದರ್ಶನ್ ಕೋಪ ನಿನ್ನೆ ಹಬ್ಬಿದ ಸುದ್ದಿಯನ್ನ ಕೆಲವರನ್ನ ನಂಬುವಂತೆ ಮಾಡಿದ್ದು.

ಅಸಲಿಗೆ ನಿನ್ನೆ ಬೆಂಗಳೂರಿನ ಬಳಿಯ ಕೊಡಿಗೇಹಳ್ಳಿಯಲ್ಲಿರುವ ಶಿವರಾಮ್ ಅವ್ರ ಸ್ಟುಡಿಯೋದಲ್ಲಿ ಯಜಮಾನ ಚಿತ್ರದ ಚಿತ್ರೀಕರಣ ನಡಿತಿತ್ತು. ಚಿತ್ರೀಕರಣಕ್ಕಾಗಿ ಅಂತನೇ ಸೆಟ್ ಕೂಡಾ ಹಾಕಲಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೂರಕ್ಕೂ ಹೆಚ್ಚು ಮಂದಿಯ ಸಹನಟರು ಮತ್ತು ಇನ್ನೂರು ಜನರ ತಂಡದೊಂದಿಗೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು.

ನಿಮಗೆ ಗೊತ್ತಿರಲಿ ಚಿತ್ರೀಕರಣ ನಡೆಯುತ್ತಿದ್ದ ಪ್ರದೇಶಕ್ಕೆ ಚಿತ್ರ ತಂಡ ಬಿಟ್ಟರೆ ಸಾರ್ವಜನಿಕರಿಗ್ಯಾರು ಪ್ರವೇಶ ಇರ‍್ಲಿಲ್ಲ. ಹಾಗಾಗಿ, ಸ್ವಲ್ಪ ನೆಮ್ಮದಿಯಾಗಿ ತಮ್ಮನ್ನ ತಾವ್ ಚಿತ್ರೀಕರಣದಲ್ಲಿ ತೋಡಗಿಸಿಕೊಂಡಿದ್ದ ದರ್ಶನ್, ಊಟದ ಸಮಯ ಸಮೀಪಿಸುತ್ತಿದ್ದಂತೆ ತಾಳ್ಮೆ ಕಳೆದುಕೊಂಡಿದ್ದರು. ಇದಕ್ಕೆ ಕಾರಣ ದರ್ಶನ್ ಅವರ ಸಹಕಲಾವಿದ ಶಿವು ಚಿತ್ರೀಕರಣವನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿಕೊಳ್ಳೋದನ್ನು ದರ್ಶನ್ ಗಮನಿಸಿದ್ದರು.

ಹಾಗಾಗಿ, ಶಿವುನನ್ನ ಹತ್ತಿರ ಕರೆದ ದರ್ಶನ್, ಮೊಬೈಲು ಪಡೆದುಕೊಂಡು ಪರಿಶೀಲಿಸಿದ್ದಾರೆ. ಅದರಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ಸೆರೆ ಹಿಡಿದಿದ್ದ ದೃಷ್ಯಾವಳಿಗಳ ಸಾಕ್ಷಿ ಸಿಕ್ಕಿದೆ. ಹೀಗಾಗುತ್ತಲೇ ನಿರ್ಮಾಪಕರು ಸೇರಿದಂತೆ ಇತರೇ ತಂತ್ರಜ್ಞರನ್ನು ಹತ್ತಿರ ಕರೆದ ದರ್ಶನ್ ಆ ಸಹ ಕಲಾವಿದ ಮಾಡಿದ್ದ ಕೆಲಸವನ್ನು ಜಾಹೀರು ಮಾಡಿದ್ದಾರೆ.

ಇದೆಲ್ಲ ಬಯಲಾಗುತ್ತಲೇ ದರ್ಶನ್ ಸಹ ಕಲಾವಿದ ಶಿವುಗೆ ಬೈದಿದ್ದಾರೆ. ‘ನೀನೂ ಒಬ್ಬ ಚಿತ್ರ ತಂಡದವನಾಗಿ ನಿರ್ಮಾಪಕರ ಮೇಲೆ ಕಾಳಜಿ ಇರಬೇಡವೇ? ನೀನು ಈ ಥರ ಚಿತ್ರೀಕರಣದ ದೃಷ್ಯಾವಳಿಗಳನ್ನು ಫೇಸ್‌ಬುಕ್, ಇನ್ಸ್ಟಾಗ್ರಾಮ್‌ಗಳಲ್ಲಿ ಹಾಕಿಕೊಂಡರೆ ಚಿತ್ರದ ಮೇಲಿನ ಕುತೂಹಲ ಎಲ್ಲಿ ಉಳಿಯುತ್ತೆ. ನಿನ್ನಂಥವರಿಂದಲೇ ಸಿನಿಮಾಗಳ ಗುಟ್ಟು ಚಿತ್ರೀಕರಣಕ್ಕೆ ಮುನ್ನವೇ ಬಯಲಾಗುತ್ತೆ. ಇಂಥಾ ಕೆಲಸ ಮಾಡೋಕೆ ನಾಚಿಕೆ ಆಗೋದಿಲ್ವಾ’ ಅಂತೆಲ್ಲ ಬೈದಿದ್ದಾರೆ. ತಿಳಿ ಹೇಳಿದ್ದಾರೆ.

ಮತ್ತು ಸ್ವತಃ ತಾವೇ ಆತನ ಮೊಬೈಲಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಕೋಪಗೊಂಡಿದ್ದದ್ದು ಹೌದಾದರೂ ಹಲ್ಲೆಯಂಥಾದ್ದೇನೂ ನಡೆದಿಲ್ಲ ಅಂತ ಚಿತ್ರ ತಂಡವೇ ಸ್ಪಷ್ಟೀಕರಣ ನೀಡಿದೆ.ಇನ್ನು ಇಷ್ಟೆಲ್ಲಾ ಆದ್ಮೇಲೆ, ಶಿವು ಹಾಗೂ ಸಹಕಲಾವಿದರು ಪೊಲೀಸ್ ಮೆಟ್ಟಿಲು ಏರುವ ಪ್ರಯತ್ನ ಮಾಡಿದ್ದಾರೆ. ದರ್ಶನ್ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ. ನಂತ್ರ ಅದೇಗೋ ಶಿವು ಹಾಗೂ ಸಹಕಲಾವಿದರ ಮನವೊಲಿಕೆ ಮಾಡಿದ ಯಜಮಾನ ತಂಡ, ಕೊನೆಗೂ ಪ್ರಕರಣಕ್ಕೆ ಫುಲ್ ಸ್ಟಾಫ್ ಇಟ್ಟಿದೆ.

ಅಂದ ಹಾಗೇ, ಇಲ್ಲಿ ಇನ್ನೊಂದು ವಿಚಾರವಿದೆ. ಚಿತ್ರತಂಡ ದರ್ಶನ್ ಕೈ ಮಾಡಿಲ್ಲ ಅನ್ನುವ ಮಾತನ್ನ ಹೇಳ್ತಿದ್ದರೂ, ಶಿವು ಮಾತ್ರ ದರ್ಶನ್ ನನಗೆ ಹೊಡೆದರು ಅನ್ನುವ ವಾದವನ್ನೇ ಮಂಡಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಏನ್ ಹೇಳ್ತಾರೆ ಎಂದು ಪ್ರಜಾಟಿವಿ ದರ್ಶನ್ ಅವ್ರನ್ನ ಸಂಪರ್ಕಿಸಿದಾಗ, ಪ್ರಶ್ನೆ ಮಾಡೋದೇ ತಪ್ಪಾ, ನಿರ್ಮಾಪಕರ ಬಗ್ಗೆ ಯೋಚನೇ ಮಾಡಿದ್ದೇ ತಪ್ಪಾ ಅನ್ನುವ ಬೇಸರದ ಮರು ಪ್ರಶ್ನೆಯನ್ನ ಹಾಕ್ತಾರೆ ಸಾರಥಿ.

ಇನ್ನು ಇದೇ ವೇಳೆ ದರ್ಶನ್ ಅವ್ರ ಹೆಸರಿಗೆ ಮಸಿ ಬಳಿಯಲು ಇದೇ ಘಟನೆಯನ್ನ ಮುಂದಿಟ್ಟುಕೊಂಡಿರುವ ಕೆಲವರು, ಹಿಂದೆ ಹದಿನೈದು ದಿನದ ಹಿಂದೆನೂ ಇಂಥಹದ್ದೇ ಘಟನೆ ನಡೆದಿತ್ತು ಅನ್ನುವ ಹುಸಿ ಬಾಂಬ್ ಸಿಡಿಸುವ ಪ್ರಯತ್ನಕ್ಕಿಳಿದಿದ್ದು ಇಲ್ಲಿನ ಇನ್ನೊಂದು ದುರಂತ. ಅದೇನೆ ಇರ‍್ಲಿ, ದರ್ಶನ್ ನಿರ್ಮಾಪಕ ಬಗ್ಗೆ ಕಾಳಜಿ ಹೊಂದಿರುವ ನಟ.ಇದೇ ಕಾಳಜಿನಿಂದನೇ ದರ್ಶನ್ ಚಿತ್ರೀಕರಣದ ದೃಶ್ಯಗಳನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುವದನ್ನ ಸಹಿಸಲ್ಲ. ಇದನ್ನೇ ಇದೀಗ ಅಸ್ತ್ರವನ್ನಾಗಿ ಬಳಸಿ ದರ್ಶನ್ ವಿರುದ್ಧ ಪಿತೂರಿ ನಡೆಸಲಾಗ್ತಿದೆ ಅನ್ನೋದು ದರ್ಶನ್ ಅಭಿಮಾನಿಗಳ ಒಕ್ಕೂರಿಲಿನ ಅಭಿಪ್ರಾಯ.

LEAVE A REPLY

Please enter your comment!
Please enter your name here