Home District ಸೇನೆ ಸೇರಲು ಆಸಕ್ತಿ ತೋರುತ್ತಿದ್ದಾರೆ ಯುವತಿಯರು… ದೈಹಿಕ ಸಾಮರ್ಥ್ಯ ಟೆಸ್ಟ್‌ಗೆ 3 ಸಾವಿರ ನಾರಿಯರು...

ಸೇನೆ ಸೇರಲು ಆಸಕ್ತಿ ತೋರುತ್ತಿದ್ದಾರೆ ಯುವತಿಯರು… ದೈಹಿಕ ಸಾಮರ್ಥ್ಯ ಟೆಸ್ಟ್‌ಗೆ 3 ಸಾವಿರ ನಾರಿಯರು ಹಾಜರ್..

542
0
SHARE

ಭಾರತೀಯ ಸೇನೆಗೆ ಭರ್ತಿಯಾಗಬೇಕು ಎನ್ನುವ ಬಯಕೆ ಹೊಂದಿದ ನೂರಾರು ಯುವತಿಯರು ಇದೀಗ ಬೆಳಗಾವಿಗೆ ಆಮಿಸಿದ್ದಾರೆ. ಕುಂದಾನಗರಿ ಬೆಳಗಾವಿಯ ಹೆಮ್ಮೆಯ ಮರಾಠ ಲಘು ಪದಾತಿಗಳದಲ್ಲಿ ಮಹಿಳಾ ಸೇನಾ ಭರ್ತಿಯ ರ‍್ಯಾಲಿ ಆರಂಭವಾಗಿದೆ. ಬೆಳಗ್ಗೆಯಿಂದಲೇ ಆಗಮಿಸಿದ್ದ ಸಾವಿರಾರು ಯುವತಿಯರಿಗೆ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಲಾಯಿತು.

ರನ್ನಿಂಗ್, ಹೈಜಂಪ್, ಸದೃಢತೆಯ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಲಾಯಿತು. ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿ 5 ರಾಜ್ಯಗಳ ಅನೇಕ ಯುವತಿಯರು ಪಾಲ್ಗೊಂಡು ತಾವು ದೇಶ ಸೇವೆಗೆ ಸೇರಬೇಕು ಎನ್ನುವ ಕನಸಿನೊಂದಿಗೆ ಪರೀಕ್ಷೆ ನೀಡಿದ್ದಾರೆ.

ಇನ್ನೂ ಮಹಿಳಾ ರ‍್ಯಾಲಿ ಬಂದ ಆಕಾಂಕ್ಷಿಗಳು ಮಾತನಾಡಿ ತಮ್ಮ ಸಂತಸ ವ್ಯಕ್ತಪಡಿಸಿದ್ರು.ಇನ್ನೂ ಮಹಿಳಾ ಸೇನಾ ಭರ್ತಿ ರ‍್ಯಾಲಿ ಬಗ್ಗೆ ಮಾಹಿತಿ ಪಡೆದ ಸಾವಿರಾರು ಯುವತಿಯರು ನೇರವಾಗಿ ಎಂಎಲ್ಆರ್‌ಸಿ ಬಂದಿದ್ದಾರೆ. ಆದರೇ ಇಲ್ಲಿನ ಸೇನಾ ಅಧಿಕಾರಿಗಳು ಆನ್ ಲೈನ್ ಮೂಲಕ ಹೆಸರು ನೋಂದಾಯಿಸಿದ್ದ ಅಭ್ಯರ್ಥಿಗಳ ಪೈಕಿ ಮೆಟ್ರಿಕ್ಯುಲೇಷನ್ ಆಧಾರದ ಮೇಲೆ 3 ಸಾವಿರ ಯುವತಿಯರು ದೈಹಿಕ ಸಾಮರ್ಥ್ಯದ ಪರೀಕ್ಷೆ ಎದುರಿಸಿದ್ದಾರೆ. ಇದೇ ಮೊದಲ ಭಾರಿಗೆ ಮಹಿಳಾ ಸೇನಾ ಭರ್ತಿ ರ‍್ಯಾಲಿ ನಡೆಯುತ್ತಿದೆ. ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಯುವತಿಯರಿಗೆ ಎಲ್ಲಾ ಸೌಕರ್ಯ ಒದಗಿಸಲಾಗಿದೆ ಎನ್ನುತ್ತಾರೆ ಎಂಎಲ್ಐಆರ್‌ಸಿ ಬ್ರೀಗೆಡಿಯೆರ್ ದಿಪೇಂದ್ರ ರಾವತ್.

ಒಟ್ಟಾರೆಯಾಗಿ ಎಂಎಲ್ಐಆರ್‌ಸಿ ಭಾರತೀಯ ಸೇನೆಗೆ ಅನೇಕ ಕೊಡುಗೆಗಳನ್ನು ನೀಡಿ ಮನ್ನಣೆ ಗಳಿಸಿದೆ. ಇದೀಗ ದೇಶದಲ್ಲಿಯೇ ಮೊದಲ ಭಾರಿಗೆ ಮಹಿಳಾ ಸೇನಾ ಭರ್ತಿ ಇಲ್ಲಿಂದ ಆರಂಭವಾಗಿದ್ದು ವಿಶೇಷವಾಗಿದೆ. ಇನ್ನೂ ರಾಜ್ಯ ಸೇರಿ ದಕ್ಷಿಣ ಭಾರತದ ಅನೇಕ ರಾಜ್ಯಗಳ ಯುವತಿಯರು ದೇಶ ಸೇವೆಗೆ ಮುಂದಾಗಿದ್ದಾರೆ. ಇವರೆಲ್ಲರ ದೇಶ ಪ್ರೇಮ ಮೆಚ್ಚುವಂತದ್ದು.

LEAVE A REPLY

Please enter your comment!
Please enter your name here