ಆ ಹುಡುಗರು ಇನ್ನೂ ಹದಿಹರೆಯದ ಹುಡುಗರು, ವಿದ್ಯಾಬ್ಯಾಸದಲ್ಲಿ 9 ನೇ ತರಗತಿ ಓದುತ್ತಿದ್ದ ಹುಡಗನಿಗೆ ಸೈಕಲ್ ಮೇಲೆ ವ್ಯಾಮೋಹ.. ಈ ಹುಡುಗನ ವ್ಯಾಮೋಹಕ್ಕೆ ಸ್ನೇಹಿತರಿಗೆ ಬಿತ್ತು ಹಿಗ್ಗಾ ಮುಗ್ಗ ಥಳಿತ ಬಿದ್ದಿದೆ.9ನೇ ತರಗತಿ ವಿದ್ಯಾರ್ಥಿಗೆ ಇದ್ದ ಸೈಕಲ್ ವ್ಯಾವೋಹ ಜೊತೆಯಲ್ಲಿ ಇದ್ದ ಸ್ನೇಹಿತರಿಗೂ ಕಂಕಟವನ್ನು ತಂದಿದೆ.
ಉದ್ಯಮಿ ಕೃಷ್ಣಮೂರ್ತಿ ಮನೆ ಮುಂಭಾಗ ನಿಂತಿದ್ದ ಸೈಕಲ್ನ್ನು ಟ್ಯೂಷನ್ಗೆ ಹೋಗಿದ್ದ ವಿದ್ಯಾರ್ಥಿಗಳು ಕದಿದ್ದಾರೆಂದು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಹಿಗ್ಗಮುಗ್ಗಾ ಥಳಿಸಲಾಗಿದೆ. ಕಳೆದ ಸೋಮವಾರ ಉದ್ಯಮಿ ಮತ್ತು ಕೃಷ್ಣಮೂರ್ತಿ ಮತ್ತು ಆತನ ಸ್ನೇಹಿತರು ಪವನ್, ವಿನೋದ್ ಮತ್ತು ಭಾಸ್ಕರ್ ಎಂಬ ಮೂವರು ಹುಡುಗರನ್ನ ಇನೋವಾ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ.
ಮನೆಗೆ ಮಕ್ಕಳು ಬಾರದಿದ್ದಕ್ಕೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದಾಗ ಕಿಡ್ನ್ಯಾಪ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಎಜುಬಾಂಡ್ ಟ್ಯೂಷನ್ ಸುತ್ತಮುತ್ತಲಿನ ಸಿಸಿಕ್ಯಾಮೆರಾ ನೋಡಿದಾಗ ಆರೋಪಿಗಳು ಮಕ್ಕಳನ್ನ ಕರೆದುಕೊಂಡು ಹೋದ ದೃಶ್ಯ ಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದ ಪೊಲೀಸ್ರಿಗೆ ಇನ್ನೋವಾ ಕಾರಿನ ಸಂಖ್ಯೆ ಜಕ್ಕೂರು ಬಳಿ ಇರುವುದಾಗಿ ಮಾಹಿತಿ ತಿಳಿಯುತ್ತೆ.. ತಕ್ಷಣವೇ ಅಮೃತಹಳ್ಳಿ ಪೊಲೀಸ್ರು ಕಂಪ್ಲೆಂಟ್ ದಾಖಲಾದ ಒಂದು ಘಂಟೆಯಲ್ಲಿ ಆರೋಪಿಗಳನ್ನ ಬಂಧಿಸುತ್ತಾರೆ.. ಅಷ್ಟರಲ್ಲಾಗಲೇ ಆ ವಿದ್ಯಾರ್ಥಿಗಳಿಗೆ ಆರೋಪಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಮಕ್ಕಳು ತಪ್ಪು ಮಾಡಿದ್ದಾರೆಂದು ಬುದ್ದಿ ಹೇಳದ ಉದ್ಯಮಿ ಕೃಷ್ಣಮೂರ್ತಿ ಮತ್ತು ಸ್ನೇಹಿತರು ಮಾಡಿದ ತಪ್ಪಿಗೆ ಕೃಷ್ಣ ಜನ್ಮಸ್ಥಾನವನ್ನು ಸೇರಿದ್ದಾರೆ.