Home Crime ಸೈಕಲ್ ರವಿ ಜೊತೆ M.B.ಪಾಟೀಲ ಪೋನ್ ಸಂಭಾಷಣೆ ಪ್ರಕರಣಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ M.B.ಪಾಟೀಲ್..?!

ಸೈಕಲ್ ರವಿ ಜೊತೆ M.B.ಪಾಟೀಲ ಪೋನ್ ಸಂಭಾಷಣೆ ಪ್ರಕರಣಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ M.B.ಪಾಟೀಲ್..?!

536
0
SHARE

ರೌಡಿಶೀಟರ್ ಸೈಕಲ್ ರವಿ ಜೊತೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಫೋನ್ ಸಂಭಾಷಣೆ ವಿಚಾರವಾಗಿ ಸೈಕಲ್ ರವಿ ಯಾರು ಅನ್ನೋದೆ ಗೊತ್ತಿಲ್ಲ ಅಂತಾ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು ಮಾಧ್ಯಮಗಳಲ್ಲಿ ಈ ವಿಚಾರ ತಿಳಿದು ನನಗೆ ದಿಗ್ಬ್ರಮೆಯಾಗಿದೆ.

ಅದು ಕೆಪಿಸಿಸಿ ಸದ್ಯಸ್ಯ ಅಂಬರೀಶ್ ಆಪ್ತ ಸಚ್ಚಿದಾನಂದ ಅವರದ್ದು.ಇನ್ನೊಂದು ಮೊಬೈಲ್ ನಂಬರ್ ಎಂಎಲ್ಸಿ ಪುಟ್ಟಣಯ್ಯ ಅವರದ್ದು.ನನಗೆ ಅಂತಹ ದುಷ್ಟರ ಸಂಪರ್ಕ ಇವತ್ತಿನವರಗೂ ಮಾಡಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ.ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಂಬಿಪಿ.ರೌಡಿಶೀಟರ್ ಸೈಕಲ್ ರವಿಯಂತವರ ಚಿಲ್ಲರೆ ವ್ಯಕ್ತಿಗಳ ಜೊತೆ ಸಂಬಂಧ ಇಟ್ಟುಕೊಳ್ಳುವಂತಹ ವ್ಯಕ್ತಿ ನಾನಲ್ಲ ಅಂತಾ ಕಿಡಿಕಾರಿದ್ರು.

ಆತ ಯಾರು, ನೋಡಲು ಹೇಗಿದ್ದಾನೆ ಅನ್ನೋದು ನನಗೆ ಗೊತ್ತಿಲ್ಲ. ನಾನು ಕೂಡ ಸಿಸಿಬಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಈ ಕುರಿತು ನಾನು ಮಾಹಿತಿ ಪಡೆದುಕೊಳ್ತಿದ್ದೇನೆ. ಕೆಟ್ಟ ವ್ಯಕ್ತಿಗಳ ಜೊತೆ ನಾನು ಯಾವತ್ತೂ ಸಂಬಂಧ ಇಟ್ಟುಕೊಳ್ಳಲ್ಲ, ಇದು ರಾಜ್ಯಕ್ಕೆ ಗೊತ್ತಿರುವ ವಿಚಾರ ಅಂತಾ ತಿಳಿಸಿದ್ರು. ಇನ್ನು, ಸೈಕಲ್ ರವಿ ಕರೆ ಮಾಡಿರುವ ಸಂಖ್ಯೆ ನನ್ನದಲ್ಲ. ಅದು ಕೆಪಿಸಿಸಿ ಸದಸ್ಯ ಅಂಬರೀಶ್ ಆಪ್ತ ಸಚ್ಚಿದಾನಂದ ಅವರದ್ದು.

ಇನ್ನೊಂದು ಮೊಬೈಲ್ ನಂಬರ್ ಎಂಎಲ್ಸಿ ಪುಟ್ಟಣಯ್ಯ ಅವರದ್ದು. ನನಗೆ ಅಂತಹ ದುಷ್ಟರ ಸಂಪರ್ಕ ಇವತ್ತಿನವರೆಗೂ ಮಾಡಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ. ನನ್ನ ಚಾರಿತ್ರ್ಯಹರಣ ಮಾಡಲು ಹೊರಟಿದ್ದಾರೆಂದು ಅವಾಚ್ಯ ಶಬ್ದಗಳಿಂದ ಎಂ.ಬಿ.ಪಾಟೀಲ್ ಖಾರವಾಗೇ ಪ್ರತಿಕ್ರಿಯಿಸಿದ್ದಾರೆ.ಕರೆ ಮಾಡಿರುವ ಸಂಖ್ಯೆ ನನ್ನದಲ್ಲ.

LEAVE A REPLY

Please enter your comment!
Please enter your name here