Home Crime ಸೈರಾಟ್ ಚಿತ್ರದ ಮಾದರಿಯಲ್ಲೇ ಗರ್ಭಿಣಿ ಮಗಳ ಹತ್ಯೆ..! ಪ್ರೀತಿಸಿ ಮದುವೆಯಾಗಿದ್ದಕ್ಕೆ ಹೆತ್ತವರಿಂದಲೇ‌ ಮಗಳ ಕೊಲೆ..!

ಸೈರಾಟ್ ಚಿತ್ರದ ಮಾದರಿಯಲ್ಲೇ ಗರ್ಭಿಣಿ ಮಗಳ ಹತ್ಯೆ..! ಪ್ರೀತಿಸಿ ಮದುವೆಯಾಗಿದ್ದಕ್ಕೆ ಹೆತ್ತವರಿಂದಲೇ‌ ಮಗಳ ಕೊಲೆ..!

427
0
SHARE

ಸೈರಾಟ್ ಚಿತ್ರದ ಮಾದರಿಯಲ್ಲಿ ಮರ್ಯಾದ ಹತ್ಯೆ ನಡೆದಿದೆ. ಪ್ರೀತಿಸಿ ಮದುವೆಯಾಗಿ ಊರು ಬಿಟ್ಟು ಬಂದು ಬೇರೆಡೆ ನೆಲೆಸಿದ್ದ ಯುವತಿಯನ್ನು ಗರ್ಭಿಣಿ ಎಂದು ನೋಡದೆ 2 ವರ್ಷಗಳ ನಂತ್ರ ಹತ್ಯೆ ಮಾಡಿದ್ದಾರೆ. ನಂಬಿಸಿ ಮಗಳ ಮನೆಯಲ್ಲಿ ದೀಪಾವಳಿ ಆಚರಿಸಲು ನಿಂತ ಪೋಷಕರು ಮಗಳ ಕತ್ತು ಕೊಯ್ದು ರಕ್ತದೋಕುಳಿಯಾಡಿ ಪರಾರಿಯಾಗಿದ್ದಾರೆ.

ಮರಾಠಿ ಭಾಷೆಯಲ್ಲಿ ಮೂಡಿ ಬಂದ ಈ ಸೈರಾಟ್ ಸಿನಿಮಾ ಎಲ್ಲಿರಿಗೂ ಗೊತ್ತೆ ಇದೆ. ಹಳ್ಳಿಯ ಯುವಕ, ಯುವತಿಯ ಪ್ರೇಮ ಪ್ರಸಂಗದ ಕಥೆ ಹೊಂದಿರೋ ಚಿತ್ರ, ಕ್ಲೈಮಾಕ್ಸ್ ನಲ್ಲಿ ಮರ್ಯಾದಾ ಹತ್ಯೆಯ ಮೂಲಕ ವೀಕ್ಷಕರ ಕಣ್ಣಲ್ಲಿ ನೀರು ತರಿಸಿತು. ಈ ಸಿನಿಮಾ ಮಾದರಿಯಲ್ಲೇ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಭೀಕರ ಹತ್ಯೆ ನಡೆದಿದೆ.

ಈಕೆ ಹೆಸರು ರೇಣುಕಾ ಅಂತ..ರಾಯಚೂರಿನಲ್ಲಿ ವಾಸಗಿದ್ದ ಈಕೆ, ಮನೆಯವರ ವಿರೋಧದ ನಡುವೆಯೇ ನೆರೆ ಗ್ರಾಮದ ಶಂಕರ ಎಂಬ ಯುವಕನನ್ನು ಮನಸಾರೆ ಪ್ರೀತಿಸಿ ಮದುವೆಯಾಗಿದ್ದಳು. ರಹಸ್ಯವಾಗಿ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ವಾಸವಾಗಿದ್ದರು. ಆದ್ರೆ ಯುವತಿ ಪೋಷಕರು ಮಗಳ ಮನೆಗೆ ಬಂದು ಗರ್ಭಿಣಿಯಾಗಿದ್ದ ರೇಣುಕಾಳ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

2016ರಲ್ಲಿ ರೇಣುಕಾ, ಶಂಕರ್‌ನನ್ನು ಮದುವೆಯಾಗಿ ಸಂತಸದಿಂದ ಜೀವನ ಸಾಗಿಸುತ್ತಿದ್ರು. ಗರ್ಭಿಣಿಯಾಗಿದ್ದ ರೇಣುಕಾಗೆ ಹೆತ್ತವರ ನೆನಪಾಯಿತು. ಆಗ ತನ್ನ ಮನೆಯವರಿಗೆ ಕಾಲ್ ಮಾಡಿ, ವಿಚಾರಿಸಿದ್ದಾಳೆ. ಕೂಡಲೇ ತಾಯಿ ಶಿವಲಿಂಗಮ್ಮ, ಅಣ್ಣ ಮಲ್ಲಿಕಾರ್ಜುನ್ ಪೂಜಾರಿ, ತಂಗಿಯ ಗಂಡ ರಮೇಶ್ ಯಲಗೂರಿನ ರೇಣುಕಾ ಮನೆಗೆ ಬಂದಿದ್ರು. ಆದ್ರೆ ಮನೆಗೆ ಬಂದೋರು ಪುನಃ ವಾಪಸ್ ಆಗಿದ್ರೆ ಇಂತಹ ಘಟನೆಯೇ ನಡೆಯುತ್ತಿರಲಿಲ್ಲ.

ದೀಪಾವಳಿದ ನೆಪದಲ್ಲಿ ಮನೆಯಲ್ಲೇ ಠಿಕಾಣಿ ಹೂಡಿದ್ರು. ಗಂಡ ಶಂಕರ್ ಹಬ್ಬದ ದಿನದಂದು ಒಳ್ಳೆ ವ್ಯಾಪಾರ ಆಗುತ್ತೆ ಅಂತ ಅಂಗಡಿಗೆ ಹೋಗಿಬಿಟ್ಟ. ಬಳಿಕ ರೇಣುಕಾಳ ಕುಟುಂಬಸ್ಥರು ರೇಣುಕಾಳ ಕತ್ತು ಸೀಳಿ ಪರಾರಿಯಾಗಿದ್ದಾರೆ. ಪತ್ನಿ ಕಳೆದುಕೊಂಡ ಗಂಡ ಈಗ ಗೋಳಾಡುತ್ತಿದ್ದಾನೆ.ಸದ್ಯ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಹಂತಕರಿಗೆ ಕೊಳ ತೋಡಗಿಸಿ ರೇಣುಕಾಳ ಸಾವಿಗೆ ನ್ಯಾಯಕೊಡಿಸಬೇಕಿದೆ.

LEAVE A REPLY

Please enter your comment!
Please enter your name here