Home Crime ಸೊಸೆಗೆ ಬುದ್ಧಿ ಕಲಿಸಲು ಮಾವನ ಮಾಸ್ಟರ್ ಪ್ಲ್ಯಾನ್..!! ಸಂಸಾರ ಒಂದು ಮಾಡೋದಕ್ಕೆ ಹೋಗಿ ಅಂದರ್..!

ಸೊಸೆಗೆ ಬುದ್ಧಿ ಕಲಿಸಲು ಮಾವನ ಮಾಸ್ಟರ್ ಪ್ಲ್ಯಾನ್..!! ಸಂಸಾರ ಒಂದು ಮಾಡೋದಕ್ಕೆ ಹೋಗಿ ಅಂದರ್..!

1103
0
SHARE

ನೂರು ಸುಳ್ಳು ಹೇಳಿ ಮದುವೆ ಮಾಡು ಅಂತಾರೆ. ಆದ್ರೆ ಕಿತ್ತು ಹೋದ ಸಂಸಾರ ಸರಿ ಮಾಡಿಸೋದಕ್ಕೆ ಕಳ್ಳತನ ಮಾಡ್ಸು ಅನ್ನೋದು ಹೊಸ ಗಾದೆ ಆಗಬಹುದು. ಹೀಗೆ ಮಗನ ಸಂಸಾರ ಸರಿ ಮಾಡಿಸೋದಕ್ಕೆ ಹೋಗಿ ಜೈಲು ಸೇರಿದ ತಂದೆಯ ಕಥೆಯಿದು.ಮದುವೆ ಮಾಡಿಸೋದಕ್ಕೆ ನೂರಾರು ಸುಳ್ಳು ಹೇಳಿ ಸರ್ಕಸ್ ಮಾಡಿದ್ದು ಕೇಳಿದ್ದೀವಿ.

ಆದ್ರೀ ಸ್ಟೋರಿ ಸ್ವಲ್ಪ ಲೇಟೆಸ್ಟ್ ಮಾಡೆಲ್ ಗೆ ಅಪ್ಡೆಟ್ ಆಗಿದೆ. ತನ್ನ ಮಗನ ಸಂಸಾರ ಸರಿ ಮಾಡೋದಕ್ಕೆ ಹೋದ ಅಪ್ಪ ಸೊಸೆ ಮನೆಯಲ್ಲಿ ಕಳ್ಳತನ ಮಾಡಿಸಿ ಸಿಕ್ಕಿಬಿದ್ದಿದ್ದಾನೆ. ಗುಲ್ಬರ್ಗಾದ ಸೋಮಶೇಖರ್ ತನ್ನ ಮಗನಿಗೆ ವೈಶಾಲಿ ಅನ್ನೋರ ಜೊತೆ ಮದುವೆ ಮಾಡಿಸಿದ್ರು. ಆದ್ರೆ ಅದ್ಯಾಕೋ ಸಂಸಾರ ನೌಕೆ ದಡ ಸೇರೋ ಮೊದಲೆ ಮುಳುಗೋದಕ್ಕೆ ಶುರುವಾಗಿತ್ತು. ಹೀಗಾಗಿ ಗಂಡ ಹೆಂಡತಿ ಬೇರೆ ಬೇರೆಯಾಗಿದ್ರು.

ಚಿಕ್ಕೋಡಿ ಪೋಸ್ಟ್ ಆಫೀಸ್ ನಲ್ಲಿ ಕ್ಲರ್ಕ್ ಆಗಿದ್ದ ವೈಶಾಲಿ ಅಲ್ಲೇ ಮನೆ ಮಾಡ್ಕೊಂಡಿದ್ರು. ಹೀಗೆ ಇಬ್ರು ದೂರ ಇದ್ರೆ ಮಗನ ಸಂಸಾರ ಸರಿ ಹೋಗೋದಿಲ್ಲ ಅಂತ ಸೋಮಶೇಖರ್ ಗೆ ಅನಿಸಿತ್ತು. ಹೀಗಾಗಿ ಸೋಮಶೇಖರ್ ದರೋಡೆಕೋರರನ್ನ ಸಂಪರ್ಕಿಸಿ ಸೊಸೆ ಮನೆಯಲ್ಲಿ ದರೋಡೆ ಮಾಡಿಸಿದ್ರು.

ಮನೆಯಲ್ಲಿರೋದನ್ನೆಲ್ಲಾ ದೋಚ್ಕೊಂಡು ಬಂದ್ರೆ ಮತ್ತೆ ಸೊಸೆ ಮಗನ ಹತ್ತಿರ ಬರ್ತಾಳೆ ಅನ್ನೋ ಪ್ಲಾನ್ ಇವರದ್ದಾಗಿತ್ತು.ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ವಿವಿ ಪುರಂ ಠಾಣೆಯಲ್ಲಿ ಅದೊಂದು ಫೋರ್ಡ್ ಕಾರ್ ಕಳ್ಳತನವಾಗಿತ್ತು. ಕಾರ್ ಮಾಲೀಕ ಠಾಣೆಗೆ ದೂರು ನೀಡಿದ್ದರು. ಕೇಸ್ ದಾಖಲಿಸಿ ಕಾರಿನ ಪತ್ತೆಗೆ ಬಲೆ ಬೀಸಿದ್ದ ಪೊಲೀಸ್ರು, ಯಶವಂತ್ ಮತ್ತು ಸಂದೀಪ್ ಬಂಧಿಸಿ ವಿಚಾರಣೆ ನಡೆಸಿದ್ರು.

ಈ ವೇಳೆ ಬಂಧಿತರು ಹಿಂದೆ ದರೋಡೆ ಮಾಡಿರೋದನ್ನ ಒಪ್ಪಿಕೊಂಡಿದ್ದಾರೆ. ಅಲ್ಲದೆ ಸೋಮಶೇಖರಪ್ಪ ತಮಗೆ ದರೋಡೆ ಮಾಡೋದಕ್ಕೆ ಸುಪಾರಿ ನೀಡಿದ್ರು ಅನ್ನೋ ಮಾಹಿತಿಯನ್ನ ನೀಡಿದ್ದಾರೆ. ಇದೀಗ ಪೊಲೀಸ್ರು ಕಾರ್ ಕಳ್ಳರ ಜೊತೆ ಸೋಮಶೇಖರಪ್ಪರನ್ನ ಕೂಡಾ ಬಂಧಿಸಿದ್ದಾರೆ. ಕಳ್ಳರಿಗೆ ಪುಕ್ಸಟೆ ಹಣ ಸಿಕ್ಕಿದ್ರೆ, ಇತ್ತ ಮಗನ ಸಂಸಾರ ಸರಿ ಮಾಡೋದಕ್ಕೆ ಹೋಗಿ ಇಳಿ ವಯಸ್ಸಲ್ಲಿ ಜೈಲಲ್ಲಿ ಮುಳುಗೋ ಸೂರ್ಯನನ್ನ ನೋಡ್ಕೊಳ್ತ ಕೂರೋ ಹಾಗೆ ಆಗಿದೆ.

LEAVE A REPLY

Please enter your comment!
Please enter your name here