Home District ಸೊಸೆಯನ್ನೇ ಮಂಚಕ್ಕೆ ಕರೆದ ಕಾಮುಕ ಮಾವ..ಒಪ್ಪದಿದ್ದಕ್ಕೆ ಚೂರಿಯಿಂದ ಇರಿದು ಕೊಂದ ಕೀಚಕ

ಸೊಸೆಯನ್ನೇ ಮಂಚಕ್ಕೆ ಕರೆದ ಕಾಮುಕ ಮಾವ..ಒಪ್ಪದಿದ್ದಕ್ಕೆ ಚೂರಿಯಿಂದ ಇರಿದು ಕೊಂದ ಕೀಚಕ

2343
0
SHARE

ಆಕೆ ಮನೆ ಬೆಳಗಿ ನಂದಾ ದೀಪವಾಗಬೇಕಿದ್ದ ಸೊಸೆ. ಆದ್ರೆ ಆಕೆಯ ಮೇಲೆ ಮಾವನ ಕಾಮದ ಕಣ್ಣು ಬಿದ್ದು ಸೊಸೆಯ ಬದುಕೆ ಅಂತ್ಯವಾಯ್ತು. ಮಾವನ‌ ಕಾಮದಾಟಕ್ಕೆ ಒಪ್ಪದ ಕಾರಣಕ್ಕೆ ಸೊಸೆಯನ್ನೆ ಮಾವ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಈ ಗೃಹಣಿ ಹೆಸ್ರು ವೀಣಾ. ತನ್ನ ಗಂಡನೊಂದಿಗೆ ಸಂತೃಪ್ತ ಸಂಸಾರ ನಡೆಸುತ್ತಿದ್ದ ಯುವತಿ.ಆದರೆ ಇತ್ತೀಚಿನ ದಿನಗಳಲ್ಲಿ ಅವಳ ಗ್ರಹಚಾರ ಕೆಟ್ಟಿತ್ತು.ಮಗಳಂತೆ ನೋಡಬೇಕಾಗಿದ್ದ ಮಾವನ ಕಾಮದೃಷ್ಟಿ ಅವಳ ಮೇಲೆ ಬಿದ್ದಿತ್ತು. ಪದೇ-ಪದೇ ಮಂಚಕ್ಕೆ ಬರುವಂತೆ ಕರೆಯುತ್ತಿದ್ದ ಪಾಪಿ ಮಾವನ ಕಾಟ ಎಲ್ಲೆ ಮೀರಿತ್ತು.

ಆದರೆ ಶನಿವಾರ ರಾತ್ರಿ ಮಾತ್ರ ಇದು ಅತಿರೇಕಕ್ಕೆ ಹೋಗಿತ್ತು.ಸೊಸೆಯನ್ನು ತನ್ನೊಂದಿಗೆ ಮಲಗುವಂತೆ ಒತ್ತಾಯಿಸಿದ್ದ ಕೀಚಕನಿಗೆ ಗೃಹಿಣಿ ಸಹಕರಿಸಲಿಲ್ಲ.ಇದು ಕಾಮುಕ ಮಾವ ನಾಗರಾಜನ ಪಿತ್ತ ನೆತ್ತಿಗೇರಿಸುವಂತೆ ಮಾಡಿತ್ತು. ಮನೆಯಲ್ಲಿದ್ದ ಚೂರಿಯಿಂದ ಮನಬಂದಂತೆ ಕೂಯ್ದು ಕೊಲೆ ಮಾಡಿದ್ದಾನೆ ಪಾಪಿ ಮಾವ.ಇದೀಗ ಮಗನೇ ಅಪ್ಪನ ಕಂತ್ರಿ ಬುದ್ಧಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾನೆ.ಎಂಟು ವರ್ಷದ ಹಿಂದೆ ವೀಣಾಳನ್ನು ರಾಗಿಮುದ್ದನಹಳ್ಳಿಯ ಅನಿಲ್ ಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿದ್ದ ಅನಿಲ್ ಮತ್ತು ವೀಣಾಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅನಿಲ್ ಪತ್ರಿಕೆ ವಿತರಕನಾಗಿ ಊರಿನಲ್ಲಿ ಅಂಗಡಿ ಇಟ್ಟುಕೊಂಡ ಜೀವನ‌ ಮಾಡ್ತಿದ್ದ.

ಮಾವ ನಾಗರಾಜು ತನ್ನ ಹೆಂಡ್ತಿ ಇರೋವರೋ ಚೆನ್ನಾಗಿಯೇ ಇದ್ದು, ಹೆಂಡತಿ‌ ಸತ್ತ ಬಳಿಕ ಸೊಸೆಯ ಮೇಲೆ ಕಣ್ಣು ಹಾಕಿದ್ದಾನೆ.‌ಗಂಡ ಅಂಗಡಿಯಲ್ಲಿದ್ದಾಗ ಮನೆಗೆ ಬಂದು ಸೊಸೆ ವೀಣಾಳನ್ನು ಮಂಚಕ್ಕೆ ಬರಲು ಒತ್ತಾಯಿಸಿದ್ನಂತೆ. ಈ ಹಿಂದೆ ಎರಡು ಮೂರು ಬಾರಿ ಈ ವಿಷಯದಿಂದ ಮನೆಯಲ್ಲಿ ಗಲಾಟೆಯಾಗಿ ಊರಿನಲ್ಲಿ ಇದೇ ವಿಷಯಕ್ಕೆ ಪಂಚಾಯ್ತಿ ಕೂಡ ಆಗಿತ್ತಂತೆ. ಈ ವಿಷಯ ತಿಳಿದು ವೀಣಾ ಮನೆಯವರು ಬೇರೆ ಮನೆ ಮಾಡಿಸಿದ್ರಂತೆ. ಅನಿಲ್ ಹೆಂಡ್ತಿ ಮಕ್ಕಳ ಜೊತೆ ಬೇರೆ ಮನೆಯಲ್ಲಿ ವಾಸವಾಗಿದ್ದು, ನೆನ್ನೆ ರಾತ್ರಿ ಮಗ ಅನಿಲ್ ಅಂಗಡಿಯಲ್ಲಿದ್ದಾಗ ವೀಣಾ ಇದ್ದ ಮನೆಗೆ ಬಂದು ಸೊಸೆಯನ್ನು ಮಂಚಕ್ಕೆ ಕರೆದು ಒಪ್ಪದಿದ್ದಾಗ ಆಕೆಯ ಕತ್ತು ಕುಯ್ದು, ಎದೆಗೆ ಚೂರಿಯಿಂದ ಇರಿದು ಸಾಯಿಸಿ ಮಾವ ನಾಗರಾಜು ಪರಾರಿಯಾಗಿದ್ದಾನೆ.ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ, ಕೊಲೆಗೈದು ಪರಾರಿಯಾಗಿರುವ ಕಾಮುಕ ಮಾವನ ಬಂಧನಕ್ಕೆ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here