Home KARNATAKA ಸೋತು ಸುಣ್ಣವಾಗಿರೋ ಮುಂಬೈಗೆ ಪಂಜಾಬ್ ಚಾಲೆಂಜ್…ರೋಹಿತ್ ಪಡೆಗಿದು ಮಾಡು ಇಲ್ಲವೇ ಮಡಿ ಪಂದ್ಯ…

ಸೋತು ಸುಣ್ಣವಾಗಿರೋ ಮುಂಬೈಗೆ ಪಂಜಾಬ್ ಚಾಲೆಂಜ್…ರೋಹಿತ್ ಪಡೆಗಿದು ಮಾಡು ಇಲ್ಲವೇ ಮಡಿ ಪಂದ್ಯ…

149
0
SHARE

ಇಂದೋರ್ ನಲ್ಲಿಂದು ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಜಿದ್ದಾಜಿದ್ದಿ ನಡೆಯಸಲಿವೆ. ಪ್ರಚಂಡ ಫಾರ್ಮ್ ನಲ್ಲಿರೋ ಪ್ರೀತಿಬಾಯ್ಸ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ರೆ, ,ಸುದೀರ್ಘ ಸೋಲುಗಳಿಂದ ಕಂಗೆಟ್ಟಿರೋ ಅಂಬಾನಿ ಬ್ರಿಗೇಡ್ ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹೀಗಾಗಿ ಇಂದಿನ ನಿರ್ಣಾಯಕ ಪಂದ್ಯವನ್ನ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಮುಂಬೈ ಇಂಡಿಯನ್ಸ್ ಇದೆ…
ಐಪಿಎಲ್ ಟೂರ್ನಿಯಲ್ಲಿಂದು ಸತತ ಸೋಲುಗಳಿಂದ ಕಂಗೆಟ್ಟಿರೋ ಮುಂಬೈ ಇಂಡಿಯನ್ಸ್ ಹಾಗೂ ಅತ್ಯದ್ಭುತ ಫಾರ್ಮ್ ನಲ್ಲಿರೋ ಕಿಂಗ್ಸ್ ಇಲೆವನ್ ಮುಖಾಮುಖಿಯಾಗಲಿವೆ. ಇಂದೋರ್ ನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಮುಂಬೈ ಹಾಗೂ ಪಂಜಾಬ್ ತಂಡಗಳು ಭರ್ಜರಿಯಾಗಿ ಪ್ರಾಕ್ಟೀಸ್ ಮಾಡಿಕೊಂಡಿದ್ದು, ಜಿದ್ದಾಜಿದ್ದಿನ ಹೋರಾಟ ನಡೆಸುವ ಹಪಹಪಿಯಲ್ಲಿವೆ…

ಹಾಲಿ ಚಾಂಪಿಯನ್ ಮುಂಬೈ ತಂಡ ಸೀಸನ್ 11ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಸೋಲಿನ ಸುಳಿಗೆ ಸಿಲುಕಿದೆ. ಅಲ್ಲದೇ ಟೂರ್ನಿಯಲ್ಲಿ ಆಡಿರೋ 8 ಪಂದ್ಯಗಳಲ್ಲಿ 6ರಲ್ಲಿ ಸೋತು 2ರಲ್ಲಿ ಗೆದ್ದಿದೆ. ಹೀಗಾಗಿ ಮುಂಬೈಗೆ ಪ್ರತಿ ಪಂದ್ಯವೂ ಮುಖ್ಯವಾಗಿದ್ದು, ಗೆಲ್ಲಲೇಬೇಕಾದ ಒತ್ತಡ ಉಂಟಾಗಿದೆ. ಆದ್ರೆ ಪಂಜಾಬ್ ತಂಡ ಪ್ರಚಂಡ ಫಾರ್ಮ್ ನಲ್ಲಿದ್ದು, ಆಡಿರೋ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ರಲ್ಲಿ ಸೋತಿದ್ದು, ಪ್ಲೇ ಆಫ್ ಹಂತಕ್ಕೇರುವ ಲೆಕ್ಕಾಚಾರದಲ್ಲಿದೆ…

ದುರ್ಬಲ ಪರ್ಫಾಮೆನ್ಸ್ ನೀಡ್ತಿರೋ ಮುಂಬೈ ಇಂಡಿಯನ್ಸ್ ಪಂಜಾಬ್ ವಿರುದ್ಧ ಶತಾಯ ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಆದ್ರೆ ಟೂರ್ನಿಯುದ್ಧಕ್ಕೂ ಅಮೋಘ ಪ್ರದರ್ಶನ ನೀಡ್ತಿರೋ ಪ್ರೀತಿ ಪಡೆಯಲ್ಲಿ ಹೊಡಿಬಡಿ ಆಟಕ್ಕೆ ಸಮರ್ಥರಾದ ದೈತ್ಯರಿದ್ದಾರೆ. ಅದ್ರಲ್ಲೂ .ಯೂನಿವರ್ಸೆಲ್ ಬಾಸ್ ಕ್ರಿಸ್ ಗೇಲ್ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಉತ್ತಮ ಫಾರ್ಮ್ ನಲ್ಲಿದ್ದು, ರನ್ ಹೊಳೆ ಹರಿಸೋ ತಾಕತ್ತನ್ನ ಹೊಂದಿದ್ದಾರೆ. ಹೀಗಾಗಿ ಗೇಲ್ ಹಾಗೂ ರಾಹುಲ್ ಮೇಲೆ ರೋಹಿತ್ ಪಡೆಗೆ ದಿಗಿಲು ಉಂಟಾಗಿದೆ. ..

ರೋಹಿತ್ ಪಡೆಯ ಬೌಲಿಂಗ್ ಡಿಪಾರ್ಟ್ ಮೆಂಟ್ ಕೂಡ ದುರ್ಬಲವಾಗಿದ್ದು, ಯುವ ಸ್ಪಿನ್ನರ್ ಮಯಾಂಕ್ ಮಾರ್ಕೆಂಡೆಯನ್ನ ಹೊರತು ಪಡೆಸಿ, ಜಸ್ಪ್ರಿತ್ ಬೂಮ್ರಾ, ಮೆಕ್ಲೆನಾಘಾನ್ ಮಾರಕ ದಾಳಿ ನಡೆಸುವಲ್ಲಿ ವಿಫಲವಾಗ್ತಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನಪ್ ಕೈಕೊಟ್ಟಿರೋದು ತಂಡಕ್ಕೆ ದೊಡ್ಡ ಪೆಟ್ಟು ನೀಡ್ತಿದೆ…

ಒಂದು ವಾರದಿಂದ ವಿಶ್ರಾಂತಿ ಮೂಡ್ ನಲ್ಲಿದ್ದ ಪಂಜಾಬ್,ಯಾವುದೇ ಟೆನ್ಷನ್ ಇಲ್ಲದೇ ಮುಂಬೈ ವಿರುದ್ಧ ಕಣಕ್ಕಿಳಿಯಲಿದೆ. ಆದ್ರೆ ರೋಹಿತ್ ಪಡೆ ಮಾತ್ರ ಗೆಲುವಿನ ಮಂತ್ರ ಪಠಿಸುತ್ತಿದ್ದು, ಪ್ರೀತಿಪಡೆಯನ್ನ ಸೋಲಿಸಲು ರಣತಂತ್ರ ರೂಪಿಸಿದೆ…

 

LEAVE A REPLY

Please enter your comment!
Please enter your name here