Home Elections 2019 ಸೋತ್ ಬಿಟ್ಟಿದ್ದಾರೆ, ಮನೆಗೆ ಹೋಗ್ತಾರೆ ಅಂತಾರೆ. ಆದ್ರೆ, ಸೋತು ಮತ್ತೆ ಎದ್ದು ಬರೋದು ಗೊತ್ತಿದೆ-H.D.ದೇವೇಗೌಡ

ಸೋತ್ ಬಿಟ್ಟಿದ್ದಾರೆ, ಮನೆಗೆ ಹೋಗ್ತಾರೆ ಅಂತಾರೆ. ಆದ್ರೆ, ಸೋತು ಮತ್ತೆ ಎದ್ದು ಬರೋದು ಗೊತ್ತಿದೆ-H.D.ದೇವೇಗೌಡ

455
0
SHARE

ಸೋತರೂ ನಾನು ಸುಮ್ಮನೆ ಕೂತಿಲ್ಲ,ಮತ್ತಷ್ಟು ಪಕ್ಷ ಸಂಘಟನೆ ಮಾಡ್ತೀನಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರಕಟಿಸಿದ್ದಾರೆ.ಇನ್ನೂ,ನಮ್ಮ ಕಾರ್ಯಕರ್ತರು ಮೆಚ್ಚುವಂಥ, ಪಕ್ಷವನ್ನು ಮತ್ತಷ್ಟು ಬಲಿಷ್ಟವಾಗುವಂತೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಚಾಲೆಂಜ್ ಮಾಡಿದ್ದಾರೆ. .

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾದ 579 ಸದಸ್ಯರಿಗೆ ಜೆಡಿಎಸ್ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡರ ತಮ್ಮನ್ನು ಟೀಕಿಸುವವರಿಗೆ ತಿರುಗೇಟು ನೀಡಿದರು. ಮೈತ್ರಿ ಸರ್ಕಾರ ಮಾಡಿದ್ದಿರಿಂದ ಒಂದು ಸ್ಥಾನ ಬಂದಿದೆ, ಕಾಂಗ್ರೆಸ್ ನವರು ಅನ್ಯಾಯ ಆಗಿದೆ ಅಂತಾರೆ .ಆದ್ರೆ ಅದ್ಯಾವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೋದಿಲ್ಲ .ವಯಸ್ಸಾದ್ರೂ , ಸೋತು ಹೋದ್ರೂ ಪಕ್ಷ ಕಟ್ಟುವ ಕೆಲಸವನ್ನು ಮಾತ್ರ ಬಿಡಲ್ಲ ಎಂಬ ಶಪಥ ಮಾಡಿದರು.

ಇನ್ನು, ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಅನ್ಯಾಯ ಮಾಡಿದ್ರಾ ಅನ್ನೋ ಪ್ರಶ್ನೆ ದೊಡ್ಡ ಗೌಡರಿಗೆ ಕಾಡೋದಿಕ್ಕೆ ಶುರುವಾಗಿದೆ. ಲಿಂಗಾಯತರಿಗೆ ನಾನು ಕೊಟ್ಟಷ್ಟು ಅವಕಾಶ ಯಾರ್ ಕೊಟ್ಟಿದ್ದಾರೆ . ಸಂಪುಟದಲ್ಲಿ ಕೂಡ ಅವಕಾಶ ಕೊಟ್ಟಿದ್ದೇವೆ .ಅವ್ರ ಜೀವಮಾನದಲ್ಲಿ ಸಿಗದಷ್ಟು ಅವಕಾಶ ಕೊಟ್ಟಿದ್ದೇವೆ. ಆದ್ರೆ ಲಿಂಗಾಯಿತರು ಬಿಜಾಪುರದಲ್ಲಿ ನಮ್ಮ ಕೈ ಹಿಡಿಯಲಿಲ್ಲ ಎಂದು ದೇವೇಗೌಡರು ವಿಷಾದ ವ್ಯಕ್ತಪಡಿಸಿದರು. ಯಾರೇ ಪಕ್ಷ ಬಿಟ್ಟು ಹೋದರೂ ಹೆದರುವುದಿಲ್ಲ .ಆದ್ರೆ ಪಕ್ಷಕ್ಕೆ ದ್ರೋಹ ಮಾಡಬೇಡಿ ಎಂದು ಹೆಚ್ ಡಿ ದೇವೇಗೌಡರು ಎಲ್ಲಾ ಕಾರ್ಯಕರ್ತರಿಗೆ ವಾರ್ನ್ ಮಾಡಿದರು.

ಇನ್ನೂ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ರವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಮತ ಹಾಕಿದ್ರೆ ಬಿಜೆಪಿ ಗೆಲ್ಲುತ್ತೆ ಎಂದು ಅಪಪ್ರಚಾರ ಮಾಡಲಾಯ್ತು. ಮುಸ್ಲೀಮರನ್ನು ದಾರಿ ತಪ್ಪಿಸಿದ್ದರಿಂದಲೇ ಬಿಜೆಪಿ 104 ಸ್ಥಾನ ಪಡೆಯಲು ಸಾಧ್ಯವಾಯ್ತು. ಅದಕ್ಕೋಸ್ಕರ ಕೆಲ ಅಧಿಕಾರಿಗಳ ತಂಡ ಕೂಡ ರಚನೆಯಾಗಿತ್ತು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ರು

ಚುನಾವಣೆಯಲ್ಲಿ ಸೋತಿದ್ದೇನೆ ಅನ್ನೋ ಕಾರಣಕ್ಕೆ ಗ್ರಾಮವಾಸ್ತವ್ಯ ಮಾಡ್ತಾ ಇರೋದು ಅಲ್ಲಾ . ಈ ಬಗ್ಗೆ ಎಷ್ಟೆ ಟೀಕೆಗಳು ಬಂದರೂ ನಾನು ಎದುರಿಸೋಕೆ ತಯಾರಿದ್ದೇನೆ . ನಮ್ಮ ಕಾರ್ಯಕರ್ತರು ಹೆಮ್ಮೆ ಪಡುವಂತೆ ಗ್ರಾಮವಾಸ್ತವ್ಯವನ್ನು ಮಾಡಿ ತೋರಿಸುತ್ತೇನೆ . ಈ ಮೂಲಕ ಹೊಸ ಹೋರಾಟ ಶುರು ಮಾಡುತ್ತಾ ಇದ್ದೇನೆ ಎಂದು ಸಿಎಂ ಸಭೆಯಲ್ಲಿ ಕಾರ್ಯಕರ್ತರಿಗೆ ಭರವಸೆ ನೀಡಿದ್ರು .

LEAVE A REPLY

Please enter your comment!
Please enter your name here