Home Crime ಸೋಶಿಯಲ್ ಮೀಡಿಯಾದಲ್ಲಿ ಆಂಟಿಯ ಫ್ರೆಂಡ್ಸ್ ರಿಕ್ವೆಸ್ಟ್ ನ ಬಲೆಗೆ ಬಿದ್ದ..! ಮೂರೇ ದಿನಕ್ಕೆ ಮದುವೆ, ನಾಲ್ಕೇ...

ಸೋಶಿಯಲ್ ಮೀಡಿಯಾದಲ್ಲಿ ಆಂಟಿಯ ಫ್ರೆಂಡ್ಸ್ ರಿಕ್ವೆಸ್ಟ್ ನ ಬಲೆಗೆ ಬಿದ್ದ..! ಮೂರೇ ದಿನಕ್ಕೆ ಮದುವೆ, ನಾಲ್ಕೇ ದಿನಕ್ಕೆ ಲಕ್ಷ ಲಕ್ಷ ಪಂಗನಾಮ..!

1465
0
SHARE

ಸೋಷಿಯಲ್ ಮೀಡಿಯಾದಲ್ಲಿ ಸುಂದರವಾದ ಹುಡುಗಿಯರು ಫ್ರೆಂಡ್ಸ್ ರಿಕ್ವೆಸ್ಟ್ ಕಳಿಸಿದ್ರೆ , ಹುಡುಗರೆ ಎದೆ ಬ್ಲಾಸ್ಟ್ ಆಗುವಷ್ಟು ಹೊಡೆದುಕೊಳ್ಳುತ್ತೆ. ಆದ್ರೆ ಆಂಟಿ ಕಳಿಸಿದ ಫ್ರೆಂಡ್ಸ್ ರಿಕ್ವೆಸ್ಟ್ ನಿಂದ ಇಲ್ಲೊಬ್ಬನ ಬದುಕು ಈಗ ಬೀದಿಗೆ ಬಂದಿದೆ. ಮೂರೆ ದಿನದಲ್ಲಿ ಪರಿಚಯ, ಮದುವೆ, ಮೋಜು ಮಸ್ತಿ ಮಾಡಿ ಈಗ ನೀನವನಲ್ಲಾ ಅಂತಾ ಅಂಟಿ ಕೈ ಎತ್ತಿದ್ದಾಳೆ. ಮಂಕು ಬೂದಿ ಎರಚಿ ಲಕ್ಷ ಲಕ್ಷ ಹಣ ದೋಚಿ ಪರಾರಿಯಾಗಿದ್ದಾಳೆ.

ಹೀಗೆ ನಿಂತಿರುವ ಇತನ ಹೆಸರು ಶಿವಾನಂದ ಹಳ್ಳೇರ ಅಂತಾ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ನಿವಾಸಿ. ಪಾಪ ಇವನ ಸ್ಥಿತಿ ಈಗ ಇಂಗು ತಿಂದ ಮಂಗನ ಸ್ಥಿತಿಯಂತಾಗಿದೆ. ಬಾಹ್ಯ ಸೌಂದರ್ಯ ಮಾರುಹೋಗಿ ಹಣ ಮತ್ತು ಗುಣ ಎರಡನ್ನು ಕಳಕೊಂಡು ಬೀದಿಗೆ ಬಂದಿದ್ದಾನೆ.ಈತನ ಸ್ಥಿತಿಗೆ ಕಾರಣವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಸುಂದರ ಆಂಟಿ.

ಈಕೆಯ ಹೆಸರು ನಿರ್ಮಲಾ, ಸೊರಬ ತಾಲೂಕಿನ ಗೊಲಳಾನಗರದ ನಿವಾಸಿ. ಚನ್ನಾಗಿರೊ ಒಂದು ಆ್ಯಂಡ್ರಾಯ್ಡ್ ಮೊಬೈಲ್ ತಗೊಂಡು ಆಗೊಮ್ಮೆ ಇಗೊಮ್ನೆ ಗೇಮ್ ಆಡ್ತಾ ಕುತಿದ್ದ ವ್ಯಕ್ತಿಗೆ ಈಕೆ ಮ್ಯಾಟರ್ ಮೋನಿಯಲ್ಲಿ ಪ್ರೆಂಡ್ ರಿಕ್ವೆಷ್ಟ್ ಕಳಿಸ್ತಾಳೆ . ಹೀಗೆ ರಟ್ಟಿಹಳ್ಳಿಯ ಶಿವಾನಂದನಿಗೆ ಅಂಟಿ ರಿಕ್ವೆಸ್ಟ್ ಕಳಿಸಿದ್ದಾಳೆ. ಶಿವಾನಂದ ಹಿಂದು ಮುಂದು ನೋಡದೆ ಒಪ್ಪಿಕೊಂಡು ದಿನಪೂರ್ತಿ ಕಾಲಿಂಗ್ ಚಾಟಿಂಗ್ ಅಲ್ಲಿ ಬ್ಯೂಸಿ ಆಗಿದ್ದಾನೆ. ನಂತರ ಮೂರೆ ದಿನಗಳಲ್ಲಿ ಭೇಟಿಯಾಗಿ ಮದುವೆನೂ ಆಗಿ, ಸಂಸಾರ ಮಾಡಿರ್ತಾರಂತೆ.

ಮೂರು ದಿನದಲ್ಲಿ ಪರಿಚಯ ಆಗಿ ಮದುವೆ ಆಗಿ ಸಂಸಾರನೂ ಮಾಡಿದ ನಿರ್ಮಲಾ ಈಗ ತನ್ನ ಊರು ಸೇರಿದ್ದಾಳೆ. ಅಷ್ಟೆ ಅಲ್ಲ ಶಿವು ಡಾರ್ಲಿಂಗ್ ಮನೆ ಕಟ್ಟಿಸ್ತಾ ಇದೀನಿ ಹಣ ಕೊಡು ಅಂತಾ ಶಿವು ಬಳಿ 7 ಲಕ್ಷಕ್ಕೂ ಹೆಚ್ಚು ಹಣ ಪೀಕಿದ್ದಾಳೆ. ಆದ್ರೆ ಈಗ ಶಿವಾನಂದ ಫೋನ್ ಮಾಡಿದ್ರೆ ನಿನ್ಯಾರು ಅಂತಾ ಕೇಳ್ತಿದ್ದಾಳಂತೆ.ಯಾವಾಗ ಶಿವಾನಂದನಿಗೆ ನೀನು ಯಾರು ಅಂತ ನಿರ್ಮಲಾ ಕೇಳಿ ಬಿಟ್ಟಳೋ , ಆಗಲೇ ಶಿವಾನಂದನಿಗೆ ಅರ್ಥವಾಗಿದ್ದು ಇದು ಕೈ ಕೊಡು ಕೇಸ್ ಅಂತಾ. ಆಗ ಶಿವಾನಂದ ನಿರ್ಮಲಾ ಜೊತೆ ಮಾತಾಡಿದ ಸುತ್ತಾಡಿದ ಪೋಟೊ ಮತ್ತು ಆಡಿಯೋ ಕ್ಲೀಪ್ ಹಿಡಿದುಕೊಂಡು ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿದ್ದಾನೆ.

ನಾನು ಉಕ್ಕಡಗಾತ್ರಿ ದೇವಸ್ಥಾನದಲ್ಲಿ ಮದುವೆ ಆಗಿದ್ದೀನಿ ಎಂದಿದ್ದಾನೆ. ಆದ್ರೆ ಈ ಬಗ್ಗೆ ನಿರ್ಮಲಾಗೆ ವಿಚಾರಿಸಿದ್ರೆ ನಾವು ಮದುವೆ ಆಗಿಲ್ಲ ಈತನಿಂದ ಹಣ ಪಡೆದಿದ್ದೇನೆಂದು ಹೇಳಿ ಕಾಲ್ಕಿತ್ತಿದ್ದಾಳೆ.ನಿರ್ಮಾಲಾ ಸೋಷಿಯಲ್ ಮೀಡಿಯಾದಲ್ಲಿ ಇದೇ ರೀತಿ ಸಾಕಷ್ಟು ಜನರಿಗೆ ವಂಚನೆ ಮಾಡಿದ್ದಾಳಂತೆ.. ರಾಜಕೀಯ ನಾಯಕರುಗಳ ಜೊತೆ ಫೋಟೋ ತಗೆಸಿಕೊಂಡು ತಾನೂ ಪ್ರಭಾವಿ ಎಂದು ಬಿಂಬಿಸಿಕೊಂಡು ಹಲವರಿಗೆ ವಂಚಿಸಿದ್ದಾಳಂತೆ. ಅದರಲ್ಲೂ ಸೊರಬ ಶಾಸಕ ಹಾಗೂ ಬಿಜೆಪಿ ಮುಖಂಡರ ಜೊತೆ ಫೋಟೋ ತೆಗೆಸಿಕೊಂಡು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾಳಂತೆ. ಅದರಂತೆ ರಟ್ಟಿಹಳ್ಳಿಯ ಶಿವಾನಂದನಿಗೆ ವಂಚಿಸಿ ಈಗ ತನ್ನೂರಿಗೆ ಪರಾರಿಯಾಗಿದ್ದಾಳೆ.

LEAVE A REPLY

Please enter your comment!
Please enter your name here