Home Crime ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋಕೆ ಮುಂಚೆ ಹುಷಾರ್..! ಅವಹೇಳನಕಾರಿ ಪೋಸ್ಟ್ ಹಾಕಿದ್ರೆ ಆಗ್ತೀರಾ ಅಂದರ್…

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋಕೆ ಮುಂಚೆ ಹುಷಾರ್..! ಅವಹೇಳನಕಾರಿ ಪೋಸ್ಟ್ ಹಾಕಿದ್ರೆ ಆಗ್ತೀರಾ ಅಂದರ್…

507
0
SHARE

ಸಾರ್ವಜನಿಕರೇ ಹುಷಾರ್.. ಇನ್ಮೂಂದೆ ಸಾಮಾಜಿಕ ಜಾಲತಾಣದಲ್ಲಿ ಕಾಂಟ್ರೋವರ್ಸಿ ಪೋಸ್ಟ್‌ಗಳನ್ನ ಹಾಕುವ ಮುನ್ನ ಕೊಂಚ ಎಚ್ಚರ ವಹಿಸಿ.. ಅಪ್ಪಿತಪ್ಪಿ ನಿವೇನಾದರು ಅಂತಹ ಪೋಸ್ಟ್‌ಗಳನ್ನ ಹಾಕಿದ್ದೆ ಆದಲ್ಲಿ ಜೈಲಲ್ಲಿ ಮುದ್ದೆ ಮುರಿಯೋದು ಗ್ಯಾರಂಟಿ.. ಅಷ್ಟಕ್ಕೂ ಇಲ್ಲೊಬ್ಬ ಆಸಾಮಿ ಜಗದ್ಗುರುಗಳ ಬಗ್ಗೆ ಅಪಹಾಸ್ಯಕಾರಿಯಾಗಿ ಪೋಸ್ಟ್ ಮಾಡಿ ಇದೀಗ ಕೃಷ್ಣನ ಜನ್ಮಸ್ಥಾನಕ್ಕೆ ಹೋಗಿದ್ದಾನೆ..

ಕಳೆದ ವಾರವಷ್ಟೆ ಕಲಬುರಗಿ ನಗರದ ಜೇವರ್ಗಿ ಕಾಲೋನಿ ನಿವಾಸಿಯಾದ ಅಯ್ಯನಗೌಡ ಎಂಬಾತ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿ ಇದೀಗ ಬಂಧನಕ್ಕೊಳಗಾಗಿದ್ದಾನೆ. ತನ್ನ ಫೇಸ್ ಬುಕ್ ಅಕೌಂಟ್‌ನಲ್ಲಿ ರಂಭಾಪುರಿ ಶ್ರೀಗಳ ಬಗ್ಗೆ ‘ರಂಭಾಪುರಿ ಶ್ರೀ ಗಯ್ಯಾಳಿ, ರಂಬೆ ಎಂಬ ವೇಶ್ಯೆ, ರಂಬಾ ಮಠದ ರಂಬೆ ಹಿಗೇ ಅನೇಕ ಅಸಹ್ಯಕಾರಿ ಪದಗಳನ್ನ ಬಳಸಿ ಪೋಸ್ಟ್ ಮಾಡಿದ್ದ.

ಆದರೆ ಈ ವಿವಾದತ್ಮಕ ಪೋಸ್ಟ್ ವೀರಶೈವ ಲಿಂಗಾಯತರ ಕೆಂಗಣ್ಣಿಗೆ ಮತ್ತು ಆಕ್ರೋಶಕ್ಕೆ ಗುರಿಯಾಗಿತ್ತು. ಕೂಡಲೇ ಆತನನ್ನ ಬಂಧಿಸಬೇಕು ಅಂತಾ ಒತ್ತಾಯಿಸಿ ಸಮಾಜದ ಮುಖಂಡರು ಸೈಬರ್ ಕ್ರೈಂ ಪೋಲಿಸರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದರು. ದೂರನ್ನ ದಾಖಲಿಸಿಕೊಂಡ ಕಲಬುರಗಿ ಪೊಲೀಸರು, ಕಾಂಟ್ರೋವರ್ಸಿ ಪೋಸ್ಟ್ ಮಾಡಿದ್ದ ಅಯ್ಯಣ್ಣಗೌಡ ಎಂಬಾತನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ‌.

ಜಗದ್ಗುರುಗಳ ಬಗ್ಗೆ, ಮಠಾಧೀಶರುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಅವಹೇಳನಕಾರಿ ‌ಗಳನ್ನ ಮಾಡಿ ಸಮಾಜದಲ್ಲಿ ಶಾಂತಿ ಕದಲುಡುವ ಕೆಲಸಗಳು ಮಾಡುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಕೂಡ ಜಗದ್ಗುರು ರೇಣುಕಾಚಾರ್ಯರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು‌. ಇದೀಗ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಗಾರ ಅಯ್ಯಣ್ಣಗೌಡ ಎಂಬಾತ ವೀರಶೈವರ ಪರವಾಗಿರುವ ರಂಭಾಪುರಿ ಶ್ರೀಗಳ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದ‌.

ಅವಹೇಳನಕಾರಿ ಪೋಸ್ಟ್ ಮಾಡುವರ ಮೇಲೆ ಸೈಬರ್ ಕ್ರೈಂ ಪೊಲೀಸರು ನಿಗಾ ಇಟ್ಟು ಕ್ರಮ ತೆಗೆದುಕೊಳ್ಳಬೇಕು ಅಂತಾ ಒತ್ತಾಯಿಸಿದ್ದಾರೆ‌.ಅದೆನೇ ಇರಲಿ ಸೋಷಿಯಲ್ ಮೀಡಿಯಾಗಳನ್ನ ಒಳ್ಳೆಯ ಕೆಲಸ ಕಾರ್ಯಗಳಿಗೆ ಬಳಸಿಕೊಂಡರೆ ಒಳ್ಳೆಯದು. ಅದು ಬಿಟ್ಟು ಸಮಾಜದಲ್ಲಿ ಶಾಂತಿ ಕದಲುಡುವ ಯತ್ನ ಮಾಡಿದ್ರೆ ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಸೇರೋದು ಗ್ಯಾರಂಟಿ.

LEAVE A REPLY

Please enter your comment!
Please enter your name here