Home Cinema ಸ್ಕ್ರೀನ್ ಮೇಲೆ ಬಂದ್ರೂ ಅಕ್ಕ ರೋಡ್ ಮೇಲ್ ಬಂದ್ರೂ ಈ ಪೊಲೀ ಹುಡ್ಗರದ್ದೇ ಕಾಟ…ನಮ್ಮ ಜಯಕ್ಕನ್ನಾ...

ಸ್ಕ್ರೀನ್ ಮೇಲೆ ಬಂದ್ರೂ ಅಕ್ಕ ರೋಡ್ ಮೇಲ್ ಬಂದ್ರೂ ಈ ಪೊಲೀ ಹುಡ್ಗರದ್ದೇ ಕಾಟ…ನಮ್ಮ ಜಯಕ್ಕನ್ನಾ ಅದ್ಯಾಕಿಂಗ್ ಕಾಡ್ತಾರೋ ಗೊತ್ತಿಲ್ಲ….

624
0
SHARE

ಅದೇನ್ ಹುಡ್ಗರು ಅದ್ಯಾಕಿಂಗ್ ಆಡ್ತಾರೋ…ಸ್ಕ್ರೀನ್ ಮೇಲೆ ಬಂದ್ರೂ..ಅಕ್ಕ ರೋಡ್ ಮೇಲ್ ಬಂದ್ರೂ ಈ ಪೊಲೀ ಹುಡ್ಗರದ್ದೇ ಕಾಟ…ಈ ನಮ್ಮ ಬಿಗ್ ಬಾಸ್ ಜಯಕ್ಕ ಬಿಟಿಎಂ ಕ್ಷೇತ್ರದಿಂದ ಎಲೆಕ್ಷನ್ ಗೆ ನಿಂತಿದೆ..ಹೋದ್ ಹೋದ ಕಡೆಯಲ್ಲೆಲ್ಲಾ ಸಿಕ್ಕಾಪಟ್ಟೆ ರೆಸ್ಪಾನ್ಸ್…ಜನ ಮನೆ ಮಗಳು ಬಂದ್ಲು ಅಂತಾ ಆರತಿ ಎತ್ತಿ ಒಳಗೆ ಬಿಟ್ಕೊಳ್ತಿದ್ದಾರೆ..

ಇದ್ರ ಮಧ್ಯೆ ಜಯಕ್ಕನಿಗೆ ಪೊಲೀ ಹುಡ್ಗರ ಕಾಟ ಜಾಸ್ತಿಯಾಗಿದ್ಯಂತೆ…ಅಕ್ಕ ಎಲ್ಲೇ ಕ್ಯಾಂಪೈನ್ ಗೆ ಹೋದ್ರು ಗಾಡಿಗಳಲ್ಲಿ ಫಾಲೋ ಮಾಡ್ಕೊಂಡು ಬರೋ ಪಡ್ಡೆ ಹೈಕ್ಳು ಅಕ್ಕನಿಗೆ ಕೆಟ್ಟ ಕೆಟ್ಟದಾಗಿ ಟೀಸ್ ಮಾಡ್ತಿದ್ದಾರಂತೆ. ಜಯಕ್ಕನ ಕಾರನ್ನೇ ಫಾಲೋ ಮಾಡ್ಕೊಂಡು ಬಂದು ವಿಷುಯಲ್ ಹೊಡಿಯೋದು, ಕಣ್ ಹೊಡಿಯೋದು , ಕೆಟ್ಟ ಕೆಟ್ಟದಾಗಿ ಸಿಗ್ನಲ್ ಕೊಡೋದು ಮಾಡ್ತಿದ್ದಾರಂತೆ…

ಯಾಕ್ರೋ ಅಂತಾ ಜಯಕ್ಕ ಕಾರ್ ಇಳಿತ್ತಿದ್ದಂಗೆ ಎದ್ನೋ ಬಿದ್ನೋ ಅಂತಾ ಓಡಾಡ್ತಿದ್ದಾರಂತೆ. ಒಂದು ಏರಿಯಾ ಆದ್ರೆ ಪರವಾಗಿಲ್ಲ, ಬಿಟಿಎಂ ಲೇಔಟ್, ಮೈಕೋ ಲೇಔಟ್, ತಾವರೆಕೆರೆ, ಕೋರಮಂಗಲ, ಮಡಿವಾಳ, ಹೆಚ್.ಎಸ್.ಆರ್ ಲೇಔಟ್, ಸುದ್ದುಗಂಟೆಪಾಳ್ಯ ಎಲ್ಲಿ ಹೋದ್ರು ಎಲ್ಲಾ ಕಡೆ ಲೈನ್ ಹೊಡಿಯೋ ಹುಡ್ಗುರು ಸಿಕ್ಕಾಪಟ್ಟೆ ಕ್ವಾಟ್ಲೆ ಕೊಡ್ತಾವಂತೆ.

ಈ ಪೊಲೀ ಬಡ್ಡೆತ್ತವ್ ಗಳಿಂದ ರೋಸಿ ಹೋದ ನಮ್ಮ ಜಯಕ್ಕ ಡಿಸಿಪಿ ಬೋರಲಿಂಗಯ್ಯನೋರ್ಗೆ ಕಂಪ್ಲೆಂಟ್ ಕೊಟ್ಟವ್ರೇ…ನಂಗೇ ಗನ್ ಮ್ಯಾನ್ ಬೇಕು ಅಂತಾ ರಿಕ್ವೆಸ್ಟ್ ಕೂಡಾ ಕೊಟ್ಟವ್ರಂತೆ…

LEAVE A REPLY

Please enter your comment!
Please enter your name here