Home Crime ಸ್ಟಾಫ್ ನರ್ಸಿಂದಲೇ ಸೂಪರಿಡೆಂಟ್ ಮೇಲೆ ಹಲ್ಲೆ..! ಹಲ್ಲೆ ಮಾಡಿ ಆತ್ಮಹತ್ಯೆ ಕಳ್ಳಾಟವಾಡಿದ ನರ್ಸಮ್ಮ..!

ಸ್ಟಾಫ್ ನರ್ಸಿಂದಲೇ ಸೂಪರಿಡೆಂಟ್ ಮೇಲೆ ಹಲ್ಲೆ..! ಹಲ್ಲೆ ಮಾಡಿ ಆತ್ಮಹತ್ಯೆ ಕಳ್ಳಾಟವಾಡಿದ ನರ್ಸಮ್ಮ..!

529
0
SHARE

ವಿಮ್ಸ್ ಆಸ್ಪತ್ರೆಯಲ್ಲಿ ರದ್ಧಾಂತ ನಡೆದಿದೆ,. ಮೇಲಾಧಿಕಾರಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ನರ್ಸಮ್ಮ ತ್ಮಹತ್ಯೆಗೂ ಯತ್ನಿಸಿದೆ. ಆದ್ರೆ ಸಿಸಿ ಟಿವಿಯಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದ್ದು, ಆತ್ಮಹತ್ಯೆ ನಾಟಕವಬಾಡಿದ್ದ ನರ್ಸಮ್ಮನ ಬಣ್ಣ ಬಯಲಾಗಿದೆ. ಆದ್ರೆ ಇಲ್ಲಿ ಯಾರದ್ದು ತಪ್ಪು ಅನ್ನೋದನ್ನ ಆಡಳಿತ ಮಂಡಳಿಯೇ ಹೇಳಬೇಕಿದೆ.ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗಷ್ಟೇ ಅಲ್ಲ ಸಿಬ್ಬಂದಿಗೂ ಇದೀಗ ಬೇಕಿದೆ ಚಿಕಿತ್ಸೆ.

ಹೌದು, ಸದಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡೋದಿಲ್ಲ ಎನ್ನುವ ಆರೋಪದ ಮೇಲೆ ಸುದ್ದಿಯಾಗೋ ವಿಮ್ಸ್ ಆಸ್ಪತ್ರೆ, ಇವತ್ತು ಸ್ವತಃ ಸಿಬ್ಬಂದಿ ಕಚ್ಚಾಟದಿಂದ ದೊಡ್ಡ ಸುದ್ದಿಯಾಗಿದೆ. ಬೆಳಿಗ್ಗೆ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ನರ್ಸ್ ರತ್ನಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು. ಅದ್ರೆ ಇದರ ಅಸಲಿಯತ್ತೆ ಬೇರೆಯದ್ದಾಗಿತ್ತು. ಸುಪರಿಡೆಂಟ್ ಸಂಪತ್ ಕುಮಾರ ಮೇಲೆ ಹಲ್ಲೆ ಮಾಡಿ ಅದು ಹೊರ ಬರುತ್ತದೆ ಎನ್ನುವ ಭಯಕ್ಕೆ ಆತ್ಮಹತ್ಯೆ ನಾಟಕವಾಡಿದ್ದಾಳೆ.

ಆರಂಭದಲ್ಲಿ ಆಕೆಯ ಮಾತನ್ನು ನಂಬಿದ ಸಿಬ್ಬಂದಿ ಸಿಸಿ ಟಿವಿ ದೃಧ್ಯ ನೋಡಿದಾಗ ರತ್ನಮ್ಮ ನಾಟಕಕ್ಕೆ ಬೆಚ್ಚಿ ಬಿದ್ದಿದ್ದಾರೆ. ಮಹಿಳೆ ಎನ್ನುವ ಟ್ರಂಪ್ ಕಾರ್ಡ್ ಬಳಸಲು ಹೋದ ರತ್ನಮ್ಮ ಇದೀಗ ಚಿಕಿತ್ಸೆ ನಾಟಕದಲ್ಲಿ ಆಸ್ಪತ್ರೆ ಸೇರಿದ್ದಾಳೆ.ನರ್ಸಮ್ಮನ ನಾಟಕ ನೋಡಿ ಸತ್ಯ ಎಂದು ತಿಳಿದಿದ್ದ ಸಿಬ್ಬಂದಿ ಮೇಲಾಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ರು.

ಆದ್ರೆ ಹಲ್ಲೆಗೊಳಗಾದ ಸಂಪತ್ ಕುಮಾರ ಸಿಸಿ ಟಿವಿ ದೃಶ್ಯ ತೋರಿಸಿದ ಮೇಲೆ ನರ್ಸ್ ರತ್ನಮ್ಮಳ ಅಸಲಿಯತ್ತು ಬಯಲಾಯ್ತು. ಇದೀಗ ಹಲ್ಲೆಗೊಳಗಾದ ಸಂಪತ್ ಕುಮಾರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ವಿಮ್ಸ್ ನಿರ್ದೇಶಕ ಕೃಷ್ಣ ಸ್ವಾಮಿ ತಪ್ಪಿತಸ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.ಈ ಘಟನೆಯಿಂದ ನಿಜಕ್ಕೂ ವಿಮ್ಸ್ ನಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ ನಡೆಯುತ್ತಿದ್ಯಾ, ಸ್ಟಾಫ್ ನರ್ಸ್ ರತ್ನಮ್ಮ ಯಾಕೆ ಹಲ್ಲೆ ಮಾಡಿದ್ಲು. ಆತ್ಮಹತ್ಯೆ ಮಾಡಿಕೊಳ್ಳುವ ನಾಟಕಕ್ಕೆ ಕಾರಣವಾದ್ರೂ ಏನು ? ಅನ್ನೊದನ್ನ ವಿಮ್ಸ್ ಆಡಳಿತ ಮಂಡಳಿಯೇ ಹೇಳಬೇಕಿದೆ.

LEAVE A REPLY

Please enter your comment!
Please enter your name here