Home Life Style ಸ್ಮಾರ್ಟ್ ಇಲಾಖೆಯಾಗಿ ಆರ್.ಟಿ.ಓ ಕಾರ್ಯಾಚರಣೆ…ಡಿಜಿ ಲಾಕರ್ ಮೂಲಕ ವಾಹನ ದಾಖಲಾತಿ ಪರಿಶೀಲನೆ

ಸ್ಮಾರ್ಟ್ ಇಲಾಖೆಯಾಗಿ ಆರ್.ಟಿ.ಓ ಕಾರ್ಯಾಚರಣೆ…ಡಿಜಿ ಲಾಕರ್ ಮೂಲಕ ವಾಹನ ದಾಖಲಾತಿ ಪರಿಶೀಲನೆ

159
0
SHARE

ಆರ್.ಟಿ.ಓ ಇಲಾಖೆ ಫುಲ್ ಸ್ಮಾರ್ಟ್ ಆಗ್ತಿದೆ.. ಜಸ್ಟ್ ಒಂದು ಸ್ಮಾರ್ಟ್ ಫೋನಿದ್ರೆ ಸಾಕು, ನಿಮ್ಮ ವಾಹನಗಳ ಎಲ್ಲಾ ಒರಿಜಿನಲ್ ದಾಖಲಾತಿಗಳನ್ನ ಇಟ್ಟುಕೊಂಡಂತೆಯೇ.. ಡಿಜಿ ಆಪ್ ಅನ್ನೋ ಹೊಸ ಆಂಡ್ರಾಯ್ಡ್ ಆಪ್ ಇನ್ಟ್ರುಡ್ಯೂಸ್ ಮಾಡಿದ್ದು.. ಇದರ ಮೂಲಕವೇ ನಿಮ್ಮ ಡಿಎಲ್, ಆರ್,ಸಿಯ ಎಲ್ಲಾ ದಾಖಲಾತಿಗಳನ್ನ ತೋರಿಸ್ಬೋದು..

ಹೌದು.. ಈವರೆಗೂ ಟ್ರಾಫಿಕ್ ಪೊಲೀಸರು ಹಾಗೂ ಆರ್.ಟಿ.ಓ ಇಲಾಖೆಯಿಂದ ವಾಹನಗಳ ಪರಿಶೀಲನೆ ನಡೆಸುವಾಗ.. ಒರಿಜಿನಲ್ ಡಿಎಲ್, ಆರ್.ಸಿ ಹಾಗೂ ಎಮಿಷನ್ ಟೆಸ್ಟಿಗೆ ಸಂಬಂಧಿಸಿದಂತೆ ದಾಖಲೆಗಳನ್ನ ಪರಿಶೀಲಿಸಲಾಗ್ತಿತ್ತು.. ಕೆಲವೊಮ್ಮೆ ತಮ್ಮ ಬಳಿ ಒರಿಜಿನಲ್ ಡಾಕ್ಯುಮೆಂಟ್ ಇದ್ದು, ಮರೆತು ಬಂದಿದ್ದರೆ ಪೊಲೀಸರಿಗೆ ದಂಡ ಕಟ್ಟುವ ಪರಿಸ್ಥಿತಿ ಎದುರಾಗ್ತಿತ್ತು.. ಆದ್ರೆ ಇನ್ಮುಂದೆ ಹಾಗಾಗೊಲ್ಲಾ.. ಜಸ್ಟ್ ಒಂದು ಸ್ಮಾರ್ಟ್ ಫೋನ್ ಮೂಲಕವೇ, ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ.. ಆರ್.ಟಿ.ಓ ಇಲಾಖೆ, ಡಿಜಿ ಲಾಕರ್ ಅನ್ನೋ ಆಂಡ್ರಾಯ್ಡ್ ಆಪ್‌ನಲ್ಲಿ ವಾಹನಗಳ ಡಾಕ್ಯುಮೆಂಟ್ ಪರಿಚಯಿಸಿದೆ. ಇದರಲ್ಲಿ ಡಿಎಲ್, ಆರ್ ಸಿ ಮತ್ತು ಎಮಿಷನ್ ಸರ್ಟಿಫಿಕೇಟ್ ಎನೆಬಲಿಂಗ್ ನೋಟಿಫಿಕೇಷನ್ ಮಾಡಬೇಕಿದ್ದು.. ಡಿಜಿ ಲಾಕರ್ ತೋರಿಸಿದಾಗ ಅದು ಮಾನ್ಯ ಮಾಡುವಂತೆ ಸೂಚಿಸಿರೋದಾಗಿ ಸಾರಿಗೆ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ರು..

ಇನ್ನ ಡಿಜಿ ಲಾಕರ್ ಫಿಸಿಕಲ್ ಡಾಕ್ಯುಮೆಂಟಿಗೆ ಸಮಾನವಾದದ್ದು ಅಂತ ಪರಿಗಣಿಸಿದ್ದು, ಅದನ್ನ ತೋರಿಸಿದಲ್ಲಿ, ಅಥಂಟಿಕೇಷನ್ ಸರ್ಟಿಫಿಕೇಟ್ ಇದೆ ಅಂತ ಗೊತ್ತುಪಡಿಸಲಾಗುತ್ತೆ.. ಡ್ರಂಕ್ ಆಂಡ್ ಡ್ರೈವ್ ಅಥವಾ ಅಪಘಾತಗಳು ಮಾಡಿ, ಡಿಎಲ್ ಸೀಜ್ ಮಾಡುವಾಗ, ಡಿಜಿ ಲಾಕರ್ ಮಾನ್ಯ ಮಾಡಲಾಗುವುದಿಲ್ಲ.. ಬದಲಾಗಿ ಒರಿಜಿನಲ್ ಡಿಎಲ್ ನೀಡಬೇಕಾಗುತ್ತದೆ ಅಂತ ಸೂಚಿಸಿದ್ರು..

LEAVE A REPLY

Please enter your comment!
Please enter your name here