Home Cinema ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು “Me Too” ಬಿರುಗಾಳಿ..!? ಮಾಡಲ್, ಬಹುಬಾಷಾನಟಿಯ ಅಂಗಾಂಗಗಳನ್ನು ಮುಟ್ಟಿ ಅಸಭ್ಯ ವರ್ತನೆ..?!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು “Me Too” ಬಿರುಗಾಳಿ..!? ಮಾಡಲ್, ಬಹುಬಾಷಾನಟಿಯ ಅಂಗಾಂಗಗಳನ್ನು ಮುಟ್ಟಿ ಅಸಭ್ಯ ವರ್ತನೆ..?!

1707
0
SHARE

ಮೀ ಟೂ ಸುನಾಮಿ ಸಮಯದಲ್ಲಿ ಹರ್ಷಿಕಾ ಪೊಣ್ಣಚ್ಚ ಸಿಡಿಸಿದ ಬೆನ್ನಲ್ಲೇ, ಮತ್ತೊಂದು ಹಂತದ ಬಿರುಗಾಳಿ ಎದ್ದಿದೆ. ಚಿತ್ರರಂಗದಲ್ಲಿ ಮತ್ತೊಮ್ಮೆ ಅಲ್ಲೋಲ ಕಲ್ಲೋಲ ಶುರುವಾಗಿದೆ. ಗಾಂಜಾ ಮತ್ತಲ್ಲಿ ತೇಲುವ ನಟಿಯಾರು, ಆ ನಟನೊಟ್ಟಿಗೆ ಕಾರಿನಲ್ಲಿದ್ದ ನಟಿಯಾರು ಅನ್ನುವ ಚರ್ಚೆ ಶುರುವಾಗಿದೆ. ಇದ್ರ ನಡುವೆ ಚಿತ್ರರಂಗದಲ್ಲಿ ನಡೆದ ಮತ್ತೊಂದು ದೌರ್ಜನ್ಯದ ಕಥೆನೂ ಬಹಿರಂಗಗೊಂಡಿದೆ.ಕೈರಾ, ಮೀ ಟೂ ಸುನಾಮಿಯಲ್ಲಿ..

ಮೀ ಟೂ ಅಂದ ಮತ್ತೊಬ್ಬ ನಟಿ. ಕೈರಾ, ಬೆಸಿಕಲಿ ಮುಂಬೈನ ಹುಡುಗಿ. ಕನ್ನಡ ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಯನ್ನ ಮಾಡಿಕೊಳ್ತಿದ್ದಾರೆ ಕೈರಾ. ಹೀಗಿರುವಾಗ್ಲೇ.. ಖ್ಯಾತ ನಿರ್ದೇಶಕ ಶಿವಮಣಿಯ ಶಿಷ್ಯ ಅಂತೇಳಿಕೊಂಡು, ಮ್ಯಾನೇಜರ್ ಮಹೇಶ್ ಎಂಬಾತ ಕೈರಾಗೆ ಕಾಟ ಕೊಟ್ಟಿದ್ದಾನೆ.ಹೌದು, ಅಸಲಿಗೆ ಕೈರಾ ಸದ್ಯ ಅಭಿರಾಮಿ ಅನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂತಹ ಸಮಯದಲ್ಲಿ, ಶಿವಮಣಿ ಮುಂದಿನ ಸಿನಿಮಾಗೆ ನಾಯಕಿ ಹುಡುಕುತ್ತಿದ್ದಾರೆ,

ನಿನ್ನ ಫೋಟೊಗಳು ಇಷ್ಟವಾಗಿವೆ.. ಮೀಟಿಂಗ್ ಇದೆ ಬಾ ಎಂದು ಮಹೇಶ್ ಮಹಿ ಕರೆದಿದ್ದಾನೆ. ಆರಂಭದಲ್ಲಿ ಇರಬಹುದೆನೋ ಅಂದುಕೊಂಡ ಕೈರಾ ಮಹೇಶ್ ವರ್ತನೆನಿಂದ ಪ್ರಶ್ನೆ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಅಸಲಿಗೆ ಮೊದಲು ೧೧:೩೦ಗೆ ಮೀಟಿಂಗ್ ಇದೆ ಅಂದಿದ್ದ ಮಹೇಶ್ ನಂತರ ಕಾರಿನಲ್ಲಿ ಕುರುವಂತೆ ಹೇಳಿದ್ದಾನೆ.

ಮೀಟಿಂಗ್ ೦೧:೩೦ಕ್ಕೆ ಮುಂದೂಡಲಾಗಿದೆ ಅನ್ನುವ ಮೂಲಕ, ಐದು ಲಕ್ಷ ದುಡ್ಡಿದೆ ನಿನಗೆ ವ್ಯಯಕ್ತಿಕ ಸಹಾಯ ಮಾಡ್ತೀನಿ ಅಂತ ವರಾತ ಶುರುವಿಟ್ಟುಕೊಂಡಿದ್ದಾನೆ. ಮುಟ್ಟಲು ಮುಂದಾಗಿದ್ದಾನೆ. ಇದೇ ವೇಳೆ ಹೌಹಾರಿದ ಕೈರಾ, ಹೇಗೋ ತಪ್ಪಿಸಿಕೊಂಡು ಬಂದಿದ್ದಾರೆ. ಇದೆಲ್ಲ ಆಗಿದ್ದು ಕಳೆದ ಶನಿವಾರ. ಇದೇ ಕಹಿ ಘಟನೆಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೈರಾ, ಇಂಥವರಿಂದ ದೂರವಿರಿ ಅನ್ನುವ ಮನವಿಯನ್ನ ಮಾಡಿಕೊಂಡಿದ್ದಾಳೆ.

ನಾಚಿಯಾಗಬೇಕು ಇಂಥವರಿಗೆ ಅಂತ ಛೀಮಾರಿ ಹಾಕಿದ್ದಾಳೆ.ಅದೇನೆ ಇರ‍್ಲಿ, ಸದ್ಯ ಮೀ ಟೂ ಅಭಿಯಾನದಲ್ಲಿ ದಿನಕ್ಕೊಂದು ಪ್ರಕರಣಗಳು ಹೊರಬೀಳ್ತೀವೆ. ಕೆಲವರು ಮೀ ಟೂ ಪರ ನಿಲ್ಲುತ್ತಿದ್ದರೆ, ಕೆಲವರು ವಿರೋಧ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇನ್ನೆಲ್ಲಿ ಹೋಗಿ ಮುಟ್ಟುತ್ತೋ ಕಾದು ನೋಡಬೇಕು..

LEAVE A REPLY

Please enter your comment!
Please enter your name here