Home Cinema ಸ್ಯಾಂಡಲ್‌ವುಡ್ ಸಿನಿರಂಗವೇ ಇತ್ತ ನೋಡುವಂತೆ ಮಾಡಿದ ಈ ಸೀರೆಯುಟ್ಟ ನಾರಿಯರ‍್ಯಾರು..!? ಕಾಮಿಡಿ ಕಿಂಗ್-ಆರುಮುಗ ವೈಯ್ಯಾರಕ್ಕೆ ನಾಚಿ...

ಸ್ಯಾಂಡಲ್‌ವುಡ್ ಸಿನಿರಂಗವೇ ಇತ್ತ ನೋಡುವಂತೆ ಮಾಡಿದ ಈ ಸೀರೆಯುಟ್ಟ ನಾರಿಯರ‍್ಯಾರು..!? ಕಾಮಿಡಿ ಕಿಂಗ್-ಆರುಮುಗ ವೈಯ್ಯಾರಕ್ಕೆ ನಾಚಿ ನೀರಾಗಿದ್ದಾರೆ ನಾರಿಯರು..!?

420
0
SHARE

ಅಬ್ಬಬ್ಬಾ..!! ಏನ್ ಎಂಟ್ರಿ ಗುರು..!!!ಉದ್ದನೆ ಕೂದಲು ಬೀಸುತ್ತಾ..ತಲೆತುಂಬಾ ಮಲ್ಲಿಗೆ ಹೂವ ಮುಡಿದು..ಸೀರೆತೊಟ್ಟ ನಾರಿಯರಿಬ್ಬರು ತಳುಕುತ್ತಾ ಬಳಕುತ್ತಾ ಬರ್ತಿರೊದನ್ನ ಕಣ್ಣು ಮಿಟುಕಿಸ್ದೇ ನೋಡ್ತಿದ್ದಾರೆ ಚಿತ್ರಪ್ರಿಯರು…ಇಬ್ಬರು ಜಬರ್ದಸ್ತಾಗಿ ಈ ಪಾಠಿ ನಡೆದು ಬರ್ತಿರೊದನ್ನ ನೋಡ್ತಿದ್ರೆ ಯಾರಿಗೊ ಏನೋ ಸರಿಯಾಗೆ ಕಾದಿದೆ ಅಂತಾನೆ ಅರ್ಥ ಬಿಡಿ..

ಅಷ್ಟಕ್ಕು ಹೀಗೆ ಸೀರೆಯುಟ್ಟು ತಳುಕುತ್ತಾ ಬಳಕುತ್ತಾ ಬರ್ತಿರೋದು ಯಾವ ನಟಿಮಣಿಯರಪ್ಪ ಅಂತ ಯೋಚಿಸುತಿದ್ದಾರಾ..ಇವ್ರು ನಟಿಮಣಿಯರಲ್ಲ ಬದಲಿಗೆ ಅವಳಲ್ಲ ಅವನು…ಹೌದು, ಜಾಸ್ತಿ ತಲೆಕೆಡ್ಸೋಬೇಡಿ..ಇವ್ರು ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಕಾಮಿಡಿ ಸ್ಟಾರ್ ಶರಣ್ ಅಂಡ್ ದಿ ಗ್ರೇಟ್ ವಿಲನ್ ರವಿಶಂಕರ್ ಅವ್ರ ಹೋಸ ಅವತಾರ…

ಇದು, ಈ ಇಬ್ಬರು ಖ್ಯಾತ ಕಲಾವಿದರು ಅಭಿನಯಿಸಿರೊ ವಿಕ್ಟರ್ -೨ ಚಿತ್ರದ ಒಂದು ಝಲಕ್ ಅಷ್ಟೆ…ರ್ಯಂಬೋ-೨ ಚಿತ್ರದ ಸಕ್ಸಸ್‌ನ ನಂತರ ಈ ಜೋಡಿ ಮತ್ತೆ ವಿಕ್ಟರಿ-೨ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ…ವಿಕ್ಟರಿ-೨ ೨೦೧೩ರಲ್ಲಿ ತೆರೆಕಂಡ ಸೂಪರ್ ಹಿಟ್ ವಿಕ್ಟರಿ ಚಿತ್ರದ ಸೀಕ್ವೆಲ್…

ವಿಕ್ಟರಿ-೨ ಚಿತ್ರದಲ್ಲಿ ರವಿಶಂಕರ್ ಅಂಡ್ ಶರಣ್ ಇಬ್ಬರು ಮಹಿಳಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರಾಭಿಮಾನಿಗಳ ಅಚ್ಚರಿಗೆ ಕಾರಣರಾಗಿದ್ದಾರೆ..ಅಂದಹಾಗೆ ವಿಕ್ಟರಿ-೨ ಅಲೆಮಾರಿ ಸಂತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ..ಈಗಾಗಲೆ ಕಾಲೇಜ್ ಕುಮಾರ ಚಿತ್ರದ ಮೂಲಕ ರವಿಶಂಕರ್ ಜೊತೆ ಕೆಲಸ ಮಾಡಿದ್ದ ಸಂತು ಈಗ ವಿಕ್ಟರಿ-೨ ಮೂಲಕ ಮತ್ತೆ ರವಿಶಂಕರ್ ಜೊತೆಯಾಗಿದ್ದಾರೆ…

ಸದ್ಯ ವಿಕ್ಟರಿ-೨ ಚಿತ್ರದ ಪುಟ್ಟ ಟೀಸರ್ ಅಂಡ್ ಮೇಕಿಂಗ್ ಫೋಟೊಗಳು ರಿವೀಲ್ ಆಗಿದ್ದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ..ಸ್ಯಾಂಡಲ್‌ವುಡ್‌ನಲ್ಲಿ ಆರ್ಮುಗನಾಗಿ ಕೋಟೆಕಟ್ಟಿಕೊಂಡು ಅಬ್ಬರಿಸುತ್ತ… ಥರಹೇವಾರಿ ಪಾತ್ರಗಳಲ್ಲಿ ಮಿಂಚ್ತಿದ್ದ ರವಿಶಕಂರ್ ವಿಕ್ಟರಿ -೨ ಮೂಲಕ ಮಹಿಳಾ ಮೇಷ ಧರಿಸಿ ಅಭಿಮಾನಿಗಳ ಮುಂದೆ ಬಂದಿದ್ದಾರೆ..

ಸ್ಯಾಂಡಲ್‌ವುಡ್‌ನ ಖಡಕ್ ವಿಲನ್ ಮೊದಲ ಬಾರಿಗೆ ಈ ರೀತಿಯ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತಿರುವುದು ವಿಶೇಷ…ಥೇಟ್ ಮಹಿಳೆತರನೆ ಕಾಣುವ ರವಿಶಂಕರ್ ಮೇಕ್‌ಓವರ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.ಇನ್ನು ಇಲ್ಲಿ ಶರಣ್ ಪಾತ್ರ ಸಹ ಇಂಟ್ರಸ್ಟಿಂಗ್ ಆಗಿದೆ..

ಸ್ಯಾಂಡಲ್‌ವುಡ್‌ನ ಅಧ್ಯಕ್ಷ ಸೀರೆಯುಟ್ಟು ಮಹಿಳೆ ಆಗಿರೋದು ಇದೆ ಮೊದಲೇನಲ್ಲ..ಈ ಹಿಂದೆಯೆ ಅಂದ್ರೆ ಜೈಲಲಿತಾ ಸಿನಿಮಾದಲ್ಲೆ ಶರಣ್ ಮಹಿಳಾ ಮೇಷ ಧರಿಸಿ ಅಭಿಮಾನಿಗಳಿಗೆ ದರ್ಶನ ನೀಡಿದ್ರು..ಈಗ ಮತ್ತೊಮ್ಮ ವಿಕ್ಟರಿ-೨ ಮೂಲಕ ರವಿಶಂಕರ್ ಜೊತೆ ಸೇರಿ ಸೀರೆಯುಟ್ಟು ಸೊಂಟ ಬಳುಕಿಸಿ ಸಿನಿಮಾಭಿಮಾನಿಗಳ ಕುತೂಹಲಕ್ಕೆ ಕಾರಣರಾಗಿದ್ದಾರೆ…

ಇನ್ನು ವಿಶೇಷ ಅಂದ್ರೆ ಇಲ್ಲಿ ರವಿಶಂಕರ್ ಅಂಡ್ ಶರಣ್‌ಗೆ ಸಾತ್ ನೀಡಿದ್ದಾರೆ ಸಾಧುಕೋಕಿಲಾ..ಸಾಧು ಮಹಾರಾಜ್ ಸಹ ಇಲ್ಲಿ ಸೀರೆಯುಟ್ಟು ನಾರಿಯಾಗಿ ನಾಚಿದ್ದಾರೆ.ಅಂದ ಹಾಗೇ ವಿಕ್ಟರಿ ೨ ದಲ್ಲಿ ನಾಯಕಿಯಾಗಿ ಅಸ್ಮಿತಾ ಸೂದ್ ಇದ್ದಾರೆ. ವಿಕ್ಟರಿಯಲ್ಲೂ ಇವ್ರೇ ನಾಯಕಿಯಾಗಿದ್ದರು ಅನ್ನೋದು ಇನ್ನೊಂದು ವಿಶೇಷ.

ಇನ್ನು, ಅಪೂರ್ವ ಚಿತ್ರದ ನಾಯಕಿ ಅಪೂರ್ವ ಕೂಡಾ ಚಿತ್ರದ ಮತ್ತೊಂದು ಆಕರ್ಷಣೆ. ಇನ್ನು, ಶರಣ್ ಅತ್ಯಾಪ್ತ ತರುಣ್ ಸುಧೀರ್ ವಿಕ್ಟರಿ ೨ ಚಿತ್ರದ ಕ್ರಿಯೇಟಿವ್ ಹೆಡ್.ಸದ್ಯ ಔಟ್ ಅಂಡ್ ಔಟ್ ಎಂಟಟೈನ್ ಮೆಂಟ್ ಎಲಿಮೆಂಟ್ ಇರೊ ಕಾಮಿಡಿ ಸಿನಿಮಾ ವಿಕ್ಟರಿ ೨ಗೆ ಮಾಸ್ ಲೀಡರ್ ಚಿತ್ರಕ್ಕೆ ಬಂಡವಾಳ ಹೂಡಿದ್ದ ತರುಣ್ ಶಿವಪ್ಪ ಚಿತ್ರದ ನಿರ್ಮಾಪಕ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ ವಿಕ್ಟರಿ ೨ನ ಮತ್ತೊಂದು ವಿಶೇಷ. ಇನ್ನು ಚಿತ್ರದಲ್ಲಿ ತಬಲಾನಾಣಿ ಸೇರಿ ದೊಡ್ಡ ತಾರಾಬಳಗವಿದೆ. ಸದ್ಯ ರಿಲೀಸ್ ಆಗಿರೊ ಪುಟ್ಟ ಟೀಸರೆ ಪ್ರೇಕ್ಷಕರ ನಿರೀಕ್ಷೆ ಮಟ್ಟವನ್ನು ದುಪ್ಪಟ್ಟು ಮಾಡಿದೆ..

ವಿಲನ್ ಆಗಿ ಘರ್ಜಿಸುತ್ತಿದ್ದ ರವಿಶಂಕರ್ ಫುಲ್ ಟೈಂ ಕಾಮಿಡಿಯನ್ ಆದ್ರ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಕಾಡತೋಡಗಿದೆ.ಒಟ್ನಲ್ಲಿ ವಿಕ್ಟರಿ-೨ ಮೂಲಕ ಹೊಸದೊಂದು ದಾಖಲೆ ಬರೆಯೋಕೆ ಬರ್ತಿರೊ ಸ್ಯಾಂಡಲ್‌ವುಡ್‌ನ ವಿಲನ್ ಅಂಡ್ ಕಾಮಿಡಿ ದಿಗ್ಗಜರನ್ನ ನೋಡಲು ಕಾತುರದಿಂದ ಕಾಯ್ತಿದೆ ಅಭಿಮಾನಿಗಳ ಮನ …

LEAVE A REPLY

Please enter your comment!
Please enter your name here