Home Cinema ಸ್ಯಾಂಡಲ್ ವುಡ್ ಗೆ ಇದು ಟ್ರೈಲರ್ ಮಾತ್ರ; ಮುಂದೆ ಇದೆ ಇ.ಡಿ ಕ್ಲೈಮ್ಯಾಕ್ಸ್.!? ಲೆಕ್ಕ ಪಕ್ಕಾ...

ಸ್ಯಾಂಡಲ್ ವುಡ್ ಗೆ ಇದು ಟ್ರೈಲರ್ ಮಾತ್ರ; ಮುಂದೆ ಇದೆ ಇ.ಡಿ ಕ್ಲೈಮ್ಯಾಕ್ಸ್.!? ಲೆಕ್ಕ ಪಕ್ಕಾ ಇಲ್ಲದ ಆ ಸ್ಟಾರ್ ನಟನಿಗೆ ಕಾಡುತ್ತಿದ್ಯಾ ಬಂಧನದ ಭೀತಿ.!? ಸರಿಯಾದ ಸಾಕ್ಷ್ಯಾಧಾರವಿಲ್ಲದಿದ್ರೆ ನಟ, ನಿರ್ಮಾಪಕರಿಗೆ ಜೈಲೂಟ ಫಿಕ್ಸ್.!

523
0
SHARE

ಅದು ಇಡೀ ಕನ್ನಡ ಚಿತ್ರ ರಂಗವನ್ನೇ ಬೆಚ್ಚಿ ಬೀಳಿಸಿದ್ದ ರೇಡ್. ಆ ಒಂದು ರೇಡ್ ನಿಂದ ನ್ಯೂ ಇಯರ್ ಗುಂಗಿನಲ್ಲಿ ಇದ್ದ ಇಡೀ ಚಿತ್ರೋದ್ಯಮ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು. ಕನ್ನಡದ ಸ್ಟಾರ್ ನಟರ ಮನೆ ಬಾಗಿಲಿಗೆ ಬೆಳ್ಳಂ ಬೆಳ್ಳಿಗೆ ಬಂದಿದ್ದ ಐಟಿ ಅಧಿಕಾರಿಗಳು ಸ್ಟಾರ್ ನಟರ ಮನೆ ಜಾಲಾಡಿದ್ರು.ಬೆಳಗ್ಗೆ ಏಳು ಘಂಟೆ ಹೊತ್ತಿಗೆಲ್ಲ ಐಟಿ ಅಧಿಕಾರಿಗಳ ತಂಡ ಸ್ಯಾಂಡಲ್ ವುಡ್ ಮೇಲೆ ವ್ಯವಸ್ಥಿತವಾಗಿಯೇ ರೇಡು ನಡೆಸಿತ್ತು. ಅದೇ ಸಮಯಕ್ಕೆ ಸರಿಯಾಗಿ ಕಿಚ್ಚಾ ಸುದೀಪ್ ಅವರ ಜೆಪಿನಗರದ ಪುಟ್ಟೇನಹಳ್ಳಿಯಲ್ಲಿನ ಮನೆ ಮುಂದೆ ಎಲ್ಲೋ ಬೋರ್ಡ್ ಕಾರಿನಲ್ಲಿ ಐಟಿ ಅಧಿಕಾರಿಗಳ ತಂಡ ಬಂದಿಳಿದಿತ್ತು.

ಹಾಗೆ ಬಂದ ಅಧಿಕಾರಿಗಳು ಘಂಟೆಗಟ್ಟಲೆ ಪರಿಶೀಲನೆ ನಡೆಸಿದ್ದರು. ಇದೇ ಸಮಯದಲ್ಲಿ ಎಂಟು ಮಂದಿ ಐಟಿ ಅಧಿಕಾರಿಗಳ ತಂಡ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮನೆಯಂಗಳಕ್ಕೆ ಬಂದಿಳಿದಿದ್ದರು. ಇದೆಲ್ಲದ್ರಿಂದ ಒಂದರ್ಥದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಗೃಹಬಂಧನ ಕ್ಕೊಳಗಾಗಿದ್ದರು. ಕನ್ನಡ ಮಹಾತಾರೆಯರು ಬಹುತೇಕ ಮೂರು ದಿನಗಳ ಗೃಹಬಂಧನದಲ್ಲಿದ್ದರು. ಹೊರಗಿನ ಪ್ರಪಂಚದಿಂದ ಸಂಪೂರ್ಣ ಸಂಪರ್ಕ ಕಡೆದುಕೊಂಡಿದ್ದರು. ಹಾಗಾಗೇ, ದಾಳಿ ಕೊನೆಯಾದಾಗ ಎಲ್ಲರ ಮುಖದಲ್ಲೂ ಕಂಡು ಬಂದಿದ್ದು ಒಂದು ತರಹದ ನೆಮ್ಮದಿ.  ಐತಿಹಾಸಿಕ ದಾಳಿಯಲ್ಲಿ ಮೊದಲು ಮುಗಿದಿದ್ದು ಕನ್ನಡದ ಪವರ್ ಸ್ಟಾರ್ ಪುನೀತ್ ಮನೆಯ ಮೇಲಾದ ದಾಳಿ.

ಭರ್ತಿ ಎರಡು ದಿನ ಪುನೀತ್ ಮನೆಯನ್ನ ಶೋಧಿಸಿದ ಐ,ಟಿ.ಅಧಿಕಾರಿಗಳೂ ಹಣ ಹೂಡಿಕೆ, ನಿರ್ಮಾಣ, ಸಂಭಾವನೆ, ಹಾಗೂ ಇನ್ನುಳಿದ ವಿಚಾರಗಳ ಬಗ್ಗೆ ಮಾಹಿತಿಯನ್ನ ಪಡೆದಿದ್ದಾರೆ. ಶಿವಣ್ಣ, ಸುದೀಪ ಹಾಗೂ ಯಶ್ ಮನೆಯನ್ನೂ ಎರಡೂವರೆ ದಿನಗಳ ಕಾಲ ಜಾಲಾಡಿದ್ದಾರೆ ಐ,ಟಿ.ಅಧಿಕಾರಿಗಳು. ಇನ್ನೂ ನಡೆದ ದಾಳಿ ಹಿಂದಿನ ಕಾರಣವೇನು. ಹೀಗೊಂದು ಪ್ರಶ್ನೆಗುತ್ತರ ಯಾರ ಬಳಿ ಇಲ್ಲದಿದ್ದರೂ, ಸಹಜವಾದ ಅಸಹನೆ ಯಶ್ ಹಾಗೂ ಶಿವಣ್ಣರಲ್ಲಿ ಇದ್ದಿದ್ದು ಸುಳ್ಳಲ್ಲ ಐ.ಟಿ.ದಾಳಿ ಏಕಾಏಕಿನೂ ನಡೆದಿಲ್ಲ. ಅನೇಕ ದಿನಗಳ ತಯಾರಿ ಇದೇ ರೇಡ್ ಹಿಂದಿತ್ತು. ಪಕ್ಕಾ ಪೂರ್ವ ತಯಾರಿಯೊಂದಿಗೆ ನಡೆಸಿದ ಇದೇ ದಾಳಿ ಬಹುತೇಕ ಮೂರು ದಿನಗಳವರೆಗೆ ನಡೆದಿದೆ.

ಹೀಗೆ ಮೂರು ದಿನಗಳವರೆಗೆ ನಡೆದ ದಾಳಿಯಲ್ಲಿ ಶಿವಣ್ಣ, ಅಪ್ಪು, ಯಶ್, ಸುದೀಪ ಮನೆಯನ್ನ ಜಾಲಾಡಿರುವ ಐ,ಟಿ.ಅಧಿಕಾರಿಗಳೂ ಕೆಲ ಮಹತ್ವದ ದಾಖಲೆಯನ್ನ ವಶಪಡಿಸಿಕೊಂಡಿದ್ದಾರೆ. ಅಂದ ಹಾಗೆ ಈ ದಾಳಿಯಲ್ಲಿ ಸಿಕ್ಕ ಅಘೋಷಿತ ಆಸ್ತಿ ಎಷ್ಟು ಗೊತ್ತೆ ಬರೊಬ್ಬರಿ 120 ಕೋಟಿ.ಕೆಜಿಎಫ್ ಬಿಡುಗಡೆಗೂ ಮುನ್ನ, ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್, ಇದು ಕನ್ನಡದ ಕಾಸ್ಟ್ಲೀ ಸಿನಿಮಾ ಅನ್ನುವ ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲ ಕೆ.ಜಿ.ಎಫ್‌ಗಾಗಿ ಐವತ್ತು ಕೋಟಿಗೂ ಅಧಿಕ ಮೊತ್ತ ಖರ್ಚಾಗಿದೆ ಅಂಥನೂ ಅಂದಿದ್ದರು. ಇನ್ನೂ ಸಿನಿಮಾ ದೇಶಾಂದ್ಯತ ಬಿಡುಗಡೆಯಾಗಿದ್ದರಿಂದ ಗಳಿಸಿದ ಹಣದ ವಿಚಾರ, ಎಲ್ಲರಿಗೂ ಸರಾಗವಾಗಿ ಗೊತ್ತಾಗುವಂತಾಯ್ತು. ಸಿನಿಮಾ 150 ಕೋಟಿ ಲೂಟಿ ಮಾಡಿದೆ ಅನ್ನುವದೂ ಜಗಜ್ಜಾಹೀರಾಯ್ತು.

ಇದುವೇ ಐ,ಟಿ.ಅವ್ರ ಕಣ್ಣು ಅರಳುವಂತೆ ಮಾಡಿದ್ದು. ಐವತ್ತು ಕೋಟಿಗೂ ಅಧಿಕ ಹಣಹೂಡುವಷ್ಟು ಹಣ ಕನ್ನಡ ಚಿತ್ರರಂಗದಲ್ಲಿದೆಯಾ ಅನ್ನುವ ಅನುಮಾನಕ್ಕೂ ಕಾರಣವಾಗುವಂತೆ ಮಾಡ್ತು.ತೆರಿಗೆ ವಂಚಿಸಿರುವ ನಟ, ನಿರ್ಮಾಪಕರನ್ನು ಶೀಘ್ರ ವಿಚಾರಣೆಗೆ ಒಳಪಡಿಸಲಾಗುವುದು. ತೆರಿಗೆ ಬಾಕಿ ಇರಿಸಿರುವ ನಟ, ನಿರ್ಮಾಪಕರು ಕೂಡಲೇ ಪಾವತಿಸಲು ಸೂಚಿಸಲಾಗುವುದು ಅಂತಾ ಐಟಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ, ಅಥವಾ ಇ.ಡಿ. ಜತೆ ಮಾಹಿತಿ ವಿನಿಮಯ ಮಾಡಿ ಕೊಳ್ಳಲಿದೆ. ಇದು ಸ್ಯಾಂಡಲ್‌ವುಡ್‌ನ‌ ನಟ, ನಿರ್ಮಾಪಕರ ಪಾಲಿಗೆ ಇನ್ನಷ್ಟು ಕಗ್ಗಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸ್ಯಾಂಡಲ್ ವುಡ್ ನಟರ ಮತ್ತು ನಿರ್ಮಾಪಕರ ಮೇಲಾದ ಈ ದಾಳಿಯಲ್ಲಿ ಸರಿ ಸುಮಾರು 120 ಕೋಟಿ ಆಸ್ತಿಯನ್ನ ಜಪ್ಪಿ ಮಾಡಲಾಗಿದೆ, ಅದ್ರಲ್ಲಿ 109 ಕೋಟಿ ದಾಖಲೆ ರಹಿತ ಆದಾಯವಾದ್ರೆ ಇನ್ನು 11 ಕೋಟಿ ಅಘೋಷಿತ ಆದಾಯ ಅಂತ ಹೇಳಲಾಗುತ್ತಿದೆ. ಅಲ್ಲಿಗೆ ಒಟ್ಟಾರೆ 120 ಕೋಟಿ ರೂಪಾಯಿಗಳು. ಇಷ್ಟು ದುಡ್ಡಲ್ಲಿ ಯಾರದ್ದು ಎಷ್ಟು ಪಾಲು ಅನ್ನೋದನ್ನ ಐಟಿ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ,ಈಗ ಸಧ್ಯಕ್ಕೆ 120 ಕೋಟಿ ಲೆಕ್ಕವನ್ನ ಐಟಿ ಅಧಿಕಾರಿಗಳು ಕೇಳುತ್ತಿದ್ದಾರೆ. ಅಷ್ಟೆ ಅಲ್ಲದೆ ಈ ಕೇಸನ್ನ ಈಡಿ ಕೊಡಲು ಚಿಂತನೆ ಕೂಡ ನಡೆಸಲಾಗುತ್ತಿದೆ. ಒಂದು ವೇಳೆ ಇಡಿ. ಈ ಪ್ರಕರಣವನ್ನ ವಹಿಸಿಕೊಂಡಿದ್ದೇ ಆದಲ್ಲಿ ನಟನಿರ್ಮಾಪಕರು ಮತ್ತೊಷ್ಟು ಸಂಕಷ್ಟ ಎದುರಿಸ ಬೇಕಾಗುತ್ತೆ. ಏಕೆಂದ್ರೆ ಇಡಿ ಸಂಸ್ಥೆ ಐಟಿಯ ರೀತಿಯಲ್ಲ, ಸಿನಿಮಾ ಸ್ಟ್ರೈಲ್ ನಲ್ಲೇ ಹೇಳಬೇಕು ಅಂದ್ರೆ ಐಟಿ ದಾಳಿ ಜೆಸ್ಟ್ ಟ್ರೈಲರ್ ಮಾತ್ರ  ಮೇನ್ ಪಿಕ್ಚರ್ ಇಡಿ ಹತ್ತಿರ ಹೋದಾಗಲೇ ಗೊತ್ತಾಗುತ್ತೆ.

ಸ್ಯಾಂಡಲ್​ವುಡ್ ನಟ, ನಿರ್ಮಾಪಕರ ಸಂಪತ್ತಿನ ಕೋಟೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ ಬರೋಬ್ಬರಿ 109 ಕೋಟಿ ರೂಪಾಯಿ ಮೊತ್ತದ ಅಘೋಷಿತ ಆಸ್ತಿ ಪತ್ತೆ ಹಚ್ಚಿದೆ! ದಾಳಿ ವೇಳೆ ಮನೆ ಹಾಗೂ ಕಚೇರಿಗಳಲ್ಲಿ ಕೋಟಿಗಟ್ಟಲೆ ಹಣ, ಕೆ.ಜಿ.ಗಟ್ಟಲೆ ಚಿನ್ನಾಭರಣ ಪತ್ತೆಯಾಗಿರುವುದರಿಂದ ದಾಳಿಗೆ ಗುರಿಯಾದವರಿಗಿನ್ನು ಇ.ಡಿ ಸಂಕಷ್ಟ ಬೆನ್ನೇರಲಿದೆ. ಸಿನಿಮಾ ನಿರ್ಮಾಣ ಹಾಗೂ ಚಿತ್ರಮಂದಿರ ಪ್ರದರ್ಶನದಿಂದ ಸಂಗ್ರಹವಾದ ದಾಖಲೆಗಳಿಲ್ಲದ ಕೋಟ್ಯಂತರ ರೂಪಾಯಿಗಳನ್ನು ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿ ತೆರಿಗೆ ಕಟ್ಟದಿರುವುದು ಬೆಳಕಿಗೆ ಬಂದಿದೆ. ಈಗ ಪತ್ತೆಯಾಗಿರುವ ಆಸ್ತಿ ಮೌಲ್ಯ ತನಿಖೆ ಮುಂದುವರಿದಂತೆ ಮತ್ತಷ್ಟು ಏರಿಕೆಯಾಗಬಹುದು ಎಂದು ಐಟಿ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ದಾಖಲೆ ಇಲ್ಲದ ಕೋಟ್ಯಂತರ ಹಣವನ್ನು ಆಸ್ತಿ ಮತ್ತು ಚಿನ್ನಾಭರಣದ ಮೇಲೆ ಹೂಡಿಕೆ ಮಾಡಿರುವುದು ಐಟಿ ಪರಿಶೀಲನೆಯಲ್ಲಿ ಗೊತ್ತಾಗಿದೆ. ಸಿನಿಮಾ ಹಕ್ಕುಗಳ ಮಾರಾಟ, ಡಿಜಿಟಲ್ ಹಕ್ಕು, ಚಿತ್ರಮಂದಿರ ಆದಾಯ, ಟಿವಿ ಹಕ್ಕುಗಳು, ಆಡಿಯೋ ಮತ್ತು ಸ್ಯಾಟಲೈಟ್ ಹಕ್ಕುಗಳು ಸೇರಿ ಇತರ ಮೂಲಗಳಿಂದ ಗಳಿಸಿದ ಆದಾಯಕ್ಕೆ ಲೆಕ್ಕ ತೋರಿಸಿಲ್ಲ. ವಿತರಕರಿಂದ ಪಡೆದ ದಾಖಲಾತಿ ಇಲ್ಲದ ರಸೀದಿ ಮತ್ತು ತಮ್ಮ ಕೆಲ ಖರ್ಚುಗಳ ಬಗ್ಗೆಯೂ ಮಾಹಿತಿ ಇಲ್ಲ. ಅಘೋಷಿತ ಆಸ್ತಿ ಹೊಂದಿರುವುದನ್ನು ದಾಳಿ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ಇನ್ನು ಕೆಲ ದಾಖಲಾತಿ ಜಪ್ತಿ ಮಾಡಿದ್ದು, ಪರಿಶೀಲಿಸಿದ ಬಳಿಕ ಅಕ್ರಮ ಆಸ್ತಿ ಮೌಲ್ಯ ಇನ್ನಷ್ಟು ಏರುವ ಸಾಧ್ಯತೆ ಇದೆ. ನಟ, ನಿರ್ವಪಕರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆಗೆ ಸಹಕರಿಸಿ, ಕೇಳಿದ ದಾಖಲೆಗಳನ್ನು ನೀಡಬೇಕಾಗುತ್ತದೆ. ಒಂದೆರಡು ದಿನದಲ್ಲಿ ವಿಚಾರಣೆ ಮುಗಿಯುವುದಿಲ್ಲ. ವರ್ಷಗಳೇ ಬೇಕಾಗುತ್ತದೆ. ಕರೆದಾಗೆಲ್ಲ ವಿಚಾರಣೆಗೆ ಬರಬೇಕಾಗಬಹುದೆನ್ನಲಾಗಿದೆ.

ನೋಟು ಅಮಾನ್ಯೀಕರಣದ ನಂತರ ಕಪ್ಪು-ಬಿಳುಪು ನೋಟಿನ ದಂಧೆ ನಿಂತಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಈಗಲೂ ಈ ದಂಧೆ ಎಗ್ಗಿಲ್ಲದೆ ಸಾಗಿದೆ. 2 ಕೋಟಿ ರೂ. ಬಂಡವಾಳ ಹೂಡಿ ಸಿನಿಮಾ ಮಾಡುವ ನಿರ್ವಪಕ, ಲೆಕ್ಕದಲ್ಲಿ ಮಾತ್ರ ನಾಲ್ಕು ಕೋಟಿ ತೋರಿಸುತ್ತಾನೆ. ಅದಕ್ಕೆ ಬೇಕಾದ ದಾಖಲೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾನೆ. ಒಂದು ವೇಳೆ ಸಿನಿಮಾದಿಂದ ಹಾಕಿದ ಬಂಡವಾಳವೇ ವಾಪಾಸು ಬರದಿದ್ದರೂ ಇಷ್ಟು ಕೋಟಿ ರೂ. ಆದಾಯ ಬಂದಿದೆ ಎಂದು ತೋರಿಸುತ್ತಾನೆ. ಆಗ ಬ್ಲ್ಯಾಕ್ ಮನಿ ವೈಟ್ ಆಗುತ್ತದೆ. ಅದರ ಜತೆಗೆ ಬಾಕ್ಸ್​ಆಫೀಸ್​ನಲ್ಲಿ ಕಲೆಕ್ಷನ್ ಇರದಿದ್ದರೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬಾಡಿಗೆ ಕಟ್ಟಿ ಸಿನಿಮಾ ಪ್ರದರ್ಶನ ಮಾಡುವುದು. ನಂತರ ಸಿನಿಮಾದಿಂದ ಸಾಕಷ್ಟು ಲಾಭವಾಗಿದೆ ಎಂದು ಲೆಕ್ಕ ತೋರಿಸಿ, ಕಪ್ಪು ಹಣವನ್ನು ಬಿಳಿ ಹಣ ಮಾಡಲಾಗುತ್ತಿದೆ ಅಂತಾ ಹೇಳಲಾಗುತ್ತಿದೆ.

ಐಟಿ ದಾಳಿ ವೇಳೆ ಸಂಗ್ರಹಿಸಿರುವ ಮಾಹಿತಿಯನ್ನು ಇಡಿ ಇಲಾಖೆಗೆ ಪತ್ರ ಮುಖೇನ ತಿಳಿಸಿದ್ದು, ಲೇವಾದೇವಿ ಕಾಯ್ದೆ (ಫೇಮಾ) ವಂಚಿಸಿದ್ದಲ್ಲಿ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ಈ ಪ್ರಕರಣದಲ್ಲಿ ಇಡಿ ಪ್ರವೇಶವಾದರೆ ನಟರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸ್ಯಾಂಡಲ್​ವುಡ್ ಆರ್ಥಿಕ ವ್ಯವಹಾರಗಳ ಬಗ್ಗೆ ಐಟಿ ಇಲಾಖೆ ಕಳೆದ 3 ತಿಂಗಳಿಂದಲೇ ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿತ್ತು. ಆ ವೇಳೆ ಗುರುತಿಸಲಾದ ನಟರು, ನಿರ್ವಪಕರು, ಸಿನಿಮಾ ನಿರ್ಮಾಣ ಸಂಸ್ಥೆಗಳು ಹಾಗೂ ಇವರ ಜತೆ ವ್ಯವಹಾರ ಹೊಂದಿರುವವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಅಘೋಷಿತ ಆಸ್ತಿ ಹಾಗೂ ವಿವಿಧ ಮೂಲಗಳಿಂದ ಬರುವ ಆದಾಯದ ದಾಖಲಾತಿಗಳು ಪತ್ತೆಯಾಗಿವೆ. ಅದ್ರ ಎಫೆಕ್ಟ್ ನಿಂದಲೇ ಇಂದು ಸ್ಯಾಂಡಲ್ ವುಡ್ ಬೆಚ್ಚಿ ಬೀಳಿಸುವಂತ ದಾಳಿಯನ್ನ ಮಾಡಿದೆ.

ಮೊದಲು ಯಶ್ ಮನೆಗೆ ಬಂದಿದ್ದ ಐಟಿ ಅಧಿಕಾರಿಗಳು ಮತ್ತು ಯಶ್ ತಾಯಿಯ ನಡುವೆ ವಾಗ್ವಾದವೇ ನಡೆದು ಹೋಗಿತ್ತು. ಯಾವುದೇ ಕಾರಣಕ್ಕೆ ನಮ್ಮ ಮನೆ ಶೋಧ ಮಾಡಬಾರದು ಅಂತಾ ಯಶ್ ತಾಯಿ ಐಟಿ ಅಧಿಕಾರಿಗಳಿಗೆ ತಾಕೀತು ಮಾಡಿದ್ರಂತೆ. ನಂತರ ಮುಂಬೈನಿಂದ ಯಶ್ ಬಂದ ಮೇಲೆ ಸರಾಗವಾಗಿ ರೇಡ್ ಮಾಡಲು ಸಾಧ್ಯವಾಗಿದ್ದಂತೆ. ಹೀಗೆ ರೇಡ್ ಮಾಡಿದ ಅಧಿಕಾರಿಗಳಿಗೆ ಸುಮಾರು 13 ಕೋಟಿಯಷ್ಟು ತೆರಿಗೆ ವಂಚನ ಮಾಡಿದ್ದಾರೆ ಅನ್ನೋ ಸತ್ಯ ಹೊರ ಬಿದ್ದಿದೆಯಂತೆ.

ಇದುವರೆಗೂ ಸುಮಾರು 45 ಕೋಟಿಗೆ ಆಸ್ತಿ ತೆರಿಗೆಯನ್ನೇ ಕಟ್ಟಿಲ್ವಂತೆ. ಸಧ್ಯ ಯಶ್ ವಿರುದ್ಧ ಐಟಿ ವಂಚನೆ ಕೇಸ್ 276ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಐಟಿ ಚಿಂತನೆ ನಡೆಸಿದೆ. ಒಂದು ವೇಳೆ ಆದೇ ಆದ್ರೆ ನಿಜಕ್ಕೂ ಯಶ್ ಗೆ ದೊಡ್ಡ ಕಂಟಕ ಎದುರಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.ಒಟ್ಟಾರೆ ಐಟಿ ದಾಳಿಯಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕ ಮತ್ತು ನಟರ 120 ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿದೆ. ಈ ಆಸ್ತಿ ವಿಚಾರವಾಗಿ ಮುಂದೆ ಯಾರೆಲ್ಲ ತಲೆ ದಂಡವಾಗುತ್ತೆ. ಈ ಆಸ್ತಿಯಲ್ಲಿ ಯಾರದ್ದು ಎಷ್ಟು ಪಾಲು. ಆ ಎಲ್ಲಾ ಪ್ರಶ್ನೆಗೂ ಕಾಲವೇ ಉತ್ತರಿಸಲಿದೆ.

LEAVE A REPLY

Please enter your comment!
Please enter your name here