ಇಂದು ದೇಶಕ್ಕೆ ಸ್ವತಂತ್ರ ಸಿಕ್ಕು 72 ವರ್ಷವಾಗಿದ್ದು ಸ್ವತಂತ್ರೋತ್ಸವದ ಆಚರಣೆ ದೇಶದೆಲ್ಲೆಡೆ ಅದ್ದೂರಿಯಾಗಿ ಆಚರಿಸಲಾಯ್ತು.
ಅದೆ ರೀತಿ ಇಂದು ವಿವಾಹ ಬಂಧನಕೊಳಗಾಗಲು ಸಜ್ಜಾಗಿದ್ದ ಜೋಡಿಯೊಂದು ಕಲ್ಯಾಣ ಮಂಟಪದಲ್ಲೇ ದ್ವಜಾರೋಹಣ ನೆರವೇರಿಸುವ ಮೂಲಕ ತಮ್ಮಲ್ಲಿನ ದೇಶಪ್ರೇಮ ಮೆರೆದಿದ್ದಾರೆ. ಈ ಘಟನೆ ಆನೇಕಲ್ ತಾಲೂಕಿನ ಸಿಂಗಸಂದ್ರ ಗ್ರಾಮದಲ್ಲಿ ನಡೆದಿದೆ.
ಸಿಂಗಸಂದ್ರದ ಆದಿತ್ಯ ಕಲ್ಯಾಣ ಮಂಟಪದಲ್ಲಿ ಇಂದು ತರುಣ್ ಹಾಗೂ ರಂಜಿತಾ ಎಂಬ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೆ ಸಂದರ್ಭದಲ್ಲಿ ದ್ವಜಾರೋಹಣ ನೆರವೇರಿಸುವ ಮೂಲಕ ದಾಂಪತ್ಯ ಜೀವನದ ಮೊದಲ ಹೆಜ್ಜೆ ಇರಿಸಿದೆ…