Home District ಸ್ವಪಕ್ಷಕ್ಕೆ ಕಂಟಕವಾಗ್ತಾರಾ BJP ಶಾಸಕ ಯತ್ನಾಳ್..! ರಂಗೇರಿದ ವಿಜಯಪುರ ‘ಲೋಕ’ ಸಂಗ್ರಾಮ ಅಖಾಡ…!

ಸ್ವಪಕ್ಷಕ್ಕೆ ಕಂಟಕವಾಗ್ತಾರಾ BJP ಶಾಸಕ ಯತ್ನಾಳ್..! ರಂಗೇರಿದ ವಿಜಯಪುರ ‘ಲೋಕ’ ಸಂಗ್ರಾಮ ಅಖಾಡ…!

541
0
SHARE

ಗೊಮ್ಮಟ ನಗರಿ ಲೋಕ ಸಂಗ್ರಾಮಕ್ಕೆ ಸಜ್ಜಾಗಿದೆ. ಮೈತ್ರಿ ಪಕ್ಷ ಇನ್ನೂ ಅಭ್ಯರ್ಥಿಯ ಹುಡುಕಾಟದಲ್ಲಿದ್ರೆ, ಬಿಜೆಪಿ ಹಾಲಿ ಸಂಸದ ಹಾಗೂ ಕೇಂದ್ರ ಸಚಿವರನ್ನ ಬಹುತೇಕ ಫೈನಲ್ ಮಾಡಿದೆ.

ಇತ್ತ ಹಾಲಿ ಸಂಸದರಿಗೆ ಆ ಪಕ್ಷದ ಶಾಸಕರೆ ಗೆಲುವಿಗೆ ತೊಡಕಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಉಭಯ ನಾಯಕರು ಅಂತರ ಕಾಯ್ದುಕೊಂಡು ಟಾಂಗ್ ಕೊಡ್ತಾ ಸುದ್ದಿಯಲ್ಲಿದ್ದಾರೆ.ಗುಮ್ಮಟನಗರಿಯಲ್ಲಿ ಲೋಕ ಸಮರ ಸಖತ್ ಕಾವು ಪಡೆದುಕೊಂಡಿದೆ. ಮೈತ್ರಿ ಅಭ್ಯರ್ಥಿ ಈವರೆಗೂ ಘೋಷಣೆಯಾಗಿಲ್ಲ. ಬಿಜೆಪಿಯಲ್ಲಿ ಹಾಲಿ ಸಂಸದ ರಮೇಶ ಜಿಗಜಿಣಗಿ ಅಭ್ಯರ್ಥಿಯಾಗೋದು ಫೈನಲ್ ಆಗಿದೆ.

ವಿಪರ್ಯಾಸ ಎಂದ್ರೆ ಬಿಜೆಪಿಗೆ ಈ ಬಾರಿ ಗೆಲುವಿನ ಲೆಕ್ಕಾಚಾರ ತಲೆ ಕೆಳಗಾಗುವು ಲಕ್ಷಣಗಳು ಗೋಚರವಾಗ್ತಿವೆ. ಜಿಗಜಿಣಗಿಗೆ ಅವರದೇ ಪಕ್ಷದ ಶಾಸಕ ಯತ್ನಾಳ್ ಮಗ್ಗಲು ಮುಳ್ಳಾಗಿ ಕಾಡ ತೊಡಗಿದ್ದಾರೆ. ಶಾಸಕ ಯತ್ನಾಳ್ ಹಾಗೂ ಕೇಂದ್ರ ಸಚಿವ ಜಿಗಜಿಣಗಿ ನಡುವಿನ ಸಂಬಂಧ ಅಷ್ಟಕ್ಕಷ್ಟೆ. ಮೊನ್ನೆ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ನೇತೃತ್ವದಲ್ಲಿ ನಡೆದ ಬಂಜಾರ ಸಮಾವೇಶದಲ್ಲಿ ಯತ್ನಾಳ್ ಜಿಗಜಿಣಗಿಗೆ ಟಾಂಗ್ ನೀಡಿದ್ದಾರೆ.

ನನಗೆ ಯಾರನ್ನ ಬೇಕಾದ್ರು ಗೆಲ್ಲಿಸೋದು ಗೊತ್ತು, ಸೋಲಿಸೋದು ಗೊತ್ತು ಅಂತಾ ಜಿಗಜಿಣಗಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.ಯತ್ನಾಳ್ ಬಿಜೆಪಿಗೆ ಮರು ಸೇರ್ಪಡೆಯಾಗ್ತಿದ್ದ ವೇಳೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಿರೋಧಿಸಿದ್ದರು. ಯತ್ನಾಳ್ ರನ್ನ ಪಕ್ಷಕ್ಕೆ ಸೇರಿಸಿಕೊಳ್ಬಾರ್ದು ಟಿಕೆಟ್ ನೀಡಬಾರದು ಅಂತ ಒತ್ತಡ ತಂದು ವಿಫಲರಾಗಿದ್ರು. ಕೊನೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದ ಯತ್ನಾಳ್ ಗೆಲವು ಸಾಧಿಸಿ ಕೇಸರಿ ಗುಲಾಲ್ ಆಡಿದ್ದರು.

ಇನ್ನೂ ಹಾಲಿ ಸಂಸದರಿಗೆ ಟಿಕೆಟ್ ನೀಡಬಾರದು ಹೊಸಬರಿಗೆ ಅವಕಾಶ ನೀಡಬೇಕು ಅಂತ ಯತ್ನಾಳ್ ಬಹಿರಂಗವಾಗಿಯೇ ಹೇಳಿದ್ದಾರೆ. ಆದ್ರೆ ಜಿಗಜಿಣಗಿ ನನ್ನ ರಾಜಕೀಯ ಜೀವನದಲ್ಲಿ ಚುನಾವಣೆ ಮಾಡಲು ಮಾರ್ಕೆಟ್ ನಲ್ಲಿ ಹಣ ವಸೂಲಿಗೇನು ಇಳಿದಿಲ್ಲ. ನಾನೊಬ್ಬ ಸದ್ದು-ಗದ್ದಲವಿಲ್ಲದ ರಾಜಕಾರಣಿ ಯಾರ ಹಂಗು ಇಲ್ಲದಂತೆ ಜನ ನನ್ನ ಗೆಲ್ಲಿಸಲಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ವಿಜಯಪುರದಲ್ಲಿ ಯತ್ನಾಳ್ ಹಾಗೂ ಜಿಗಜಿಣಗಿ ನಡುವೆ ನಡೆಯುತ್ತಿರುವ ಶೀತಲ ಸಮರ ಬಿಜೆಪಿಯಲ್ಲಿ ಢವ ಢವ ಶುರುಮಾಡಿದೆ ಈ ವರೆಗೆ ಸೈಲೆಂಟಾಗಿದ್ದ ಶಾಸಕ ಯತ್ನಾಳ್ ನಡೆ ಸದ್ಯ ಕಮಲ ಪಕ್ಷಕ್ಕೆ ಕಂಟಕವಾಗಿದೆ. ಮತ್ತೊಂದೆಡೆ ಕಾರ್ಯಕರ್ತರಲ್ಲು ಗೊಂದಲಕ್ಕೆ ದಾರಿ ಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here