Home KARNATAKA ಸ್ವರ್ಗಕ್ಕೂ ಕಿಚ್ಚು ಹಚ್ಚುವಂತಿದೆ “ಅಂಬಾನಿ ಕುಟುಂಬ”ದ ಮದುವೆ ಮನೆ..! ಪಾಣಿಗ್ರಹಣಕ್ಕೆ ಖರ್ಚಾಗಿದ್ದು ನೂರು ಮಿಲಿಯನ್ ಡಾಲರ್..!...

ಸ್ವರ್ಗಕ್ಕೂ ಕಿಚ್ಚು ಹಚ್ಚುವಂತಿದೆ “ಅಂಬಾನಿ ಕುಟುಂಬ”ದ ಮದುವೆ ಮನೆ..! ಪಾಣಿಗ್ರಹಣಕ್ಕೆ ಖರ್ಚಾಗಿದ್ದು ನೂರು ಮಿಲಿಯನ್ ಡಾಲರ್..! ದುಬಾರಿ ಮದುವೆಯ ರೆಕಾರ್ಡ್ ಗಾಗಿ ಏರಲಿದೆ ಅಂಬಾನಿ ಕಾಲರ್..!

3094
0
SHARE

ಇಡೀ ದೇಶಾದ್ಯಂತ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಸದ್ದು  ಮಾಡುತ್ತಿರೋದು ಅಂದ್ರೆ ಮುಖೇಶ್ ಅಂಬಾನಿಯವರ ಮಗಳ ಮದುವೆಯ ಸುದ್ದಿ. ಇಲ್ಲಿಯವರೆಗೆ ಯಾರೂ ಇತಿಹಾಸದಲ್ಲಿ ಮಾಡಿರದಂತ ಮದುವೆಯಿದು ಎನ್ನುವ ಹೆಗ್ಗಳಿಕೆಯನ್ನ ಈ ಮದುವೆ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಖರ್ಚು ಮಾಡಿದ ಮದುವೆಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಇಂಗ್ಲೆಂಡ್ ನ ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನಾ ಮದುವೆ. ಅಂದು ಮಾಡಿದ ಖರ್ಚಿನ ಇಂದಿನ ಲೆಕ್ಕಾಚಾರದ ಪ್ರಕಾರ 110 ಮಿಲಿಯನ್ ಡಾಲರ್.. ಇನ್ನು ಎರಡನೇ ಸ್ಥಾನದಲ್ಲಿ ಲಕ್ಷ್ಮಿ ಮಿತ್ತಲ್ ಸಹೋದರನ ಮಗಳ ಮದುವೆ ಇದೆ. ಆ ಮದುವೆಗೆ ಒಟ್ಟು ಖರ್ಚು 66 ಮಿಲಿಯನ್ ಡಾಲರ್ ಖರ್ಚು ಮಾಡಲಾಗಿತ್ತಂತೆ.

ಆದ್ರೆ ಮುಖೇಶ್ ಅಂಬಾನಿಯವರ ಮಗಳ ಮದುವೆಯ ಬಜೆಟ್ 100 ಮಿಲಿಯನ್ ಅಮೆರಿಕನ್ ಡಾಲರ್ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಈ ಬಜೆಟ್ ಮೀರುವ ಎಲ್ಲಾ ಸಾಧ್ಯತೆಯಿದೆ ಅಂತಲೂ ಹೇಳಲಾಗುತ್ತಿದೆ.  ಇಂಗ್ಲೆಂಡ್ ಪ್ರಿನ್ಸ್ ಚಾರ್ಲ್ಸ್ ಮತ್ತು ಮೃತ ಡಯಾನರ ಮದುವೆಯ ಖರ್ಚಿನ ಲೆಕ್ಕವನ್ನ ಮೀರಿ ಅಂಬಾನಿ ಪುತ್ರಿಯ ಈ ಮದ್ವೆ ಪ್ರಥಮ ಸ್ಥಾನ ಅಲಂಕರಿಸುವ ಸಾಧ್ಯತೆ ನಿಚ್ಚಳವಾಗಿದೆ.ಇದೇ ಡಿಸೆಂಬರ್ 12 ರಂದು ಇಶಾ ಹಾಗೂ ಆನಂದ್ ಪಿರಮಾಳ್ ರ ವಿವಾಹ ಮುಂಬೈನಲ್ಲಿ ನಡೆಯಲಿದೆ. ವಿಶ್ವದ ಶ್ರೀಮಂತ ಉದ್ಯಮಿ  ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್ ಪಿರಮಾಳ್ ಅವರ ವಿವಾಹಕ್ಕೆ ದಿನಾಂಕ ಈಗಾಗಲೇ ನಿಗದಿಯಾಗಿದೆ.

ಈ ಅದ್ದೂರಿ ವಿವಾಹಕ್ಕೆ ಈಗಾಗಲೇ ವೆಡ್ಡಿಂಗ್ ಕಾರ್ಡ್ ಕೂಡ ಪ್ರಿಂಟ್ ಆಗಿದ್ದು ರಾಯಲ್ ಕುಟುಂಬದ ಈ ವೆಡ್ಡಿಂಗ್  ಇನ್ವಿಟೇಶನ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು ವಿಶ್ವದ ಈ ದುಬಾರಿ ಮದುವೆಯ ವೆಡ್ಡಿಂಗ್ ಕಾರ್ಡೊಂದರ ಬೆಲೆ 3 ಲಕ್ಷ…ಭಾರತದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಖೇಶ ಅಂಬಾನಿ ಮಗಳ ಮದುವೆಯ ಕಾರ್ಡನ್ನ ನೋಡಿದ್ರೆ ಅಕ್ಷರಶ: ನೀವು ದಂಗಾಗಿ ಹೋಗ್ತೀರಿ. ಯಾಕಂದ್ರೆ ಬರೀ ಈ ಕಾರ್ಡ್ ಗಳಿಗೆ ಇವ್ರು ಖರ್ಚು ಮಾಡಿದ್ದು ಬರೊಬ್ಬರಿ 70 ಕೋಟಿ… ಬಡವರ ಮದುವೆಗಳಿಗೆ ಹೋಲಿಸಿದ್ರೆ ಬರೀ ಇವ್ರು ಕಾರ್ಡಿಗೆ ಖರ್ಚು ಮಾಡಿರೋ ಹಣದಲ್ಲಿ ಸಾವಿರಾರು ಮದುವೆಗಳನ್ನ ಮಾಡಬಹುದು. ಈಗಾಗಲೇ ವಿಶ್ವದಲ್ಲೇ ಈ ಕಾರ್ಡು ಅತ್ಯಂತ ದುಬಾರಿ ಕಾರ್ಡೆನ್ನುವ ಹೆಗ್ಗಳಿಕೆಗೆ  ಪಾತ್ರವಾಗಿದೆ.

ಯಾಕಂದ್ರೆ ಈ ಹಿಂದೆ ಪ್ರಪಂಚದಲ್ಲಿ ನಡೆದಿದ್ದವೆನ್ನಲಾದ ದುಬಾರಿ ಮದುವೆಗಳಲ್ಲಿ ಇಷ್ಟೊಂದು ವೆಚ್ಚದ  ಕಾರ್ಡನ್ನ ಯಾರೂ ಮಾಡಿಸಿರಲಿಲ್ಲವಂತೆ. ತಮ್ಮ ಮದುವೆಗೆ ಬರೋ ಸೆಲೆಬ್ರೆಟಿಗಳಿಗೆ ಇಂಥದ್ದೇ ಕಾರ್ಡ್ ಕೊಡಬೇಕು ಅಂತ ಇಶಾ ಅಂಬಾನಿಯೇ ಸ್ಪೆಷಲ್ ಕೇರ್ ತೆಗೆದುಕೊಂಡು ಈ ಕಾರ್ಡ್ ಸೆಲೆಕ್ಟ್ ಮಾಡಿದ್ದಾಳಂತೆ..ಇನ್ನೂ ಇಷ್ಟಕ್ಕೂ ಈ ಕಾರ್ಡಲ್ಲಿ ಅಂತದ್ದೇನಿದೆ ಅಂತ ನೀವು ಕೇಳ್ಬಹುದು.. ಕಾರ್ಡಿಗೆ ಬಂಗಾರದ ಎಂಬ್ರಾಯಿಡರಿ ಇದ್ದು ಗುಲಾಬಿ ಬಣ್ಣದ  ಬಾಕ್ಸ್ ನಲ್ಲಿರೋ  ಅದನ್ನು ತೆರೆದಾಗ ಗಾಯತ್ರಿ ಮಂತ್ರ ಕೇಳಬಹುದು. ಇನ್ನು ಇದರಲ್ಲಿ ಗಾಯತ್ರಿ ದೇವಿಯ ಫೊಟೊ ಇರುವ ಬಂಗಾರದ ಪುಟ್ಟ ಪುಟ್ಟ ನಾಲ್ಕು ಬಾಕ್ಸ್ ಗಳನ್ನು ಇರಿಸಲಾಗಿದೆ. ಇದರಲ್ಲಿ ವಿವಾಹಕ್ಕೆ ಆಹ್ವಾನಿಸಲಾಗಿದೆ. ರಾಯಲ್ ವೆಡ್ಡಿಂಗ್ ಕಾರ್ಡ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಮಾಡುತ್ತಿದೆ.

ದೇಶದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆ ಇಂದು ಮುಂಬೈನಲ್ಲಿ ನಡೆಯುತ್ತಿದೆ. ಮುಕೇಶ್ ಅಂಬಾನಿ ಮನೆಯಲ್ಲಿಯೇ ಮದುವೆ ಸಮಾರಂಭ ನಡೆಯುತ್ತಿದೆ. ಇದಕ್ಕಾಗಿ 27 ಅಂತಸ್ತಿನ ಅಂಬಾನಿ ಮನೆ ಸಕಲ ರೀತಿಯಿಂದಲೂ ಸಿದ್ಧವಾಗಿದೆ. ಎಲ್ಲ ಅಂತಸ್ತಿನಲ್ಲೂ ವಿಶೇಷ ಅಲಂಕಾರ ಮಾಡಲಾಗಿದೆ. ಮಂಗಳವಾರದಿಂದಲೇ ಅತಿಥಿಗಳು ಮುಂಬೈಗೆ ಆಗಮಿಸುತ್ತಿದ್ದು, ಹೋಟೆಲ್​ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮದುವೆಯಲ್ಲಿ ಕೇವಲ ಆಪ್ತರಿಗೆ ಹಾಗೂ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, 600 ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆಯಂತೆ. ಈ ವೇಳೆ ಮುಖೇಶ್​ ಅಂಬಾನಿ, ಇಶಾ ಅಂಬಾನಿ, ನೀತಾ ಅಂಬಾನಿ ಹಾಗೂ ಕುಟುಂಬದವರು ಬಾಲಿವುಡ್ ಹಾಡಿಗೆ ಹೆಜ್ಜೆಗೆ ಹಾಕಿದ್ರು.

ಸಂಗೀತ, ಮೆಹಂದಿ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಕಲಾವಿದರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ರು. ಇದ್ರ ಜೊತೆಗೆ ರಾಜಕೀಯ ಗಣ್ಯರಾದ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಪ್ರಣಬ್ ಮುಖರ್ಜಿ ಸೇರಿದಂತೆ ಕೆಲ ವಿಐಪಿ ರಾಜಕೀಯ ನಾಯಕರು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಿ ಮೋದಿ ಮದುವೆಗೆ ಬರುವ ಸಾಧ್ಯತೆಯಿರೋ ಹಿನ್ನಲೆ, ಮನೆ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.ಇನ್ನು ಮುಂಬೈನಲ್ಲಿ ನಡೆಯುತ್ತಿರೋ ಈ ಅದ್ದೂರಿ ಮದುವೆಗೆಂದು ಆಗಮಿಸೋ ಗಣ್ಯರಿಗಾಗಿ ಈಗಾಗಲೇ ನೂರಕ್ಕೂ ಹೆಚ್ಚು ಚಾರ್ಟೆಡ್ ವಿಮಾನಗಳನ್ನ ಬುಕ್ ಮಾಡಲಾಗಿದೆಯಂತೆ. ವಿಮಾನ ನಿಲ್ದಾಣದಿಂದ  ಇವ್ರನ್ನ ಕರೆತರೋಕೆ ಜಾಗ್ವಾರ್, ಫೋರ್ಸ್, ಮರ್ಸಡೀಸ್ ಬೆಂಜ್, ಸೇರಿದಂತೆ ಸಾವಿರಾರು ಐಷಾರಾಮಿ ಕಾರ್ ಗಳನ್ನೂ ಬುಕ್ ಮಾಡಲಾಗಿದೆ.

ಅಷ್ಟೇ ಅಲ್ಲದೇ ಕಳೆದ ನಾಲ್ಕೈದು ದಿನಗಳಿಂದ ಈ ಕಾರ್ಯಕ್ರಮ ನಡೆಯುತ್ತಿರೋ ಹಿನ್ನಲೆಯಲ್ಲಿ ಉದಯ್ ಪುರ ಹಾಗೂ ಮುಂಬೈನಲ್ಲಿ ಎಲ್ಲ ಫೈವ್ ಸ್ಟಾರ್ ಹೋಟೆಲ್ ಗಳನ್ನೂ ಬುಕ್ ಮಾಡಲಾಗಿದೆ. ಈ ಒಂದು ಮದುವೆಯಲ್ಲಿ 5.100 ಜನ ಊಟಕ್ಕೆ ಬಡಿಸೋ ಸಿಬ್ಬಂದಿಗಳಿದ್ದಾರೆ ಅಂದ್ರೆ ಅಲ್ಲಿಗೆ ಇದೆಂತ ಮದುವೆ ಅಂತ ನೀವೇ ಲೆಕ್ಕ ಹಾಕಿ.ಭಾರತದ ನಂ.1 ಸಿರಿವಂತ ಮುಕೇಶ್ ಅಂಬಾನಿ ಮನೆಯಲ್ಲಿ ಮಗಳ ಮದುವೆಯ ಸಂಭ್ರಮ. ಉದಯಪುರದ ಅರಮನೆಯಲ್ಲಿ ನಡೆಯುವ ಈ ರಾಯಲ್ ವೆಡ್ಡಿಂಗ್‌ಗೆ ಅದ್ಧೂರಿ ತಯಾರಿ ನಡೆದಿದ್ದು,. ಸಿರಿವಂತರ ಮನೆ ಮದುವೆಯಲ್ಲಿ ವಿಶೇಷ ಆಹ್ವಾನಿತರಿಗೆ ಮಾತ್ರ ಎಂಟ್ರಿ ಎಂಬ ಭಾವನೆ ಸಹಜ.

ಆದರೆ, ಇದಕ್ಕೆ ಅಪವಾದವೆಂಬಂತೆ ಈ ಸಿರಿವಂತ ದಂಪತಿಗಳು ಸಾವಿರಾರು ಬಡ, ವಿಶೇಷ ಚೇತನರಿಗೂ ಊಟ ಹಾಕಿದ್ರು. ಅಲ್ಲದೇ  ಸದಾ ಬಡವರ ಹೊಟ್ಟೆ ತುಂಬಿಸುವಂಥ ‘ಅನ್ನದಾನ’ ಯೋಜನೆಗೂ ಮಗಳ ಮದುವೆ ಮೂಲಕವೇ ನಾಂದಿ ಹಾಡುತ್ತಿದೆ ಈ ಶ್ರೀಮಂತ ಕುಟುಂಬ.ಉದಯಪುರದಲ್ಲಿ ನಡೆಯುತ್ತಿರುವ ಅನ್ನ ಸೇವಾ ಯೋಜನೆಯಲ್ಲಿ 5000 ಮಂದಿಗೆ ಅಂಬಾನಿ ಕುಟುಂಬ ಅನ್ನದಾನ ಮಾಡುತ್ತಿದೆ. ಇದರಲ್ಲಿ ಸಾವಿರಾರು ಮಂದಿ ವಿಶೇಷ ಚೇತನರೂ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೇ ಖುದ್ದು ಅಂಬಾನಿ ದಂಪತಿಯೇ ಬಡವರಿಗೆ ಊಟ ಬಡಸುತ್ತಿರುವುದು ಮತ್ತೊಂದು ವಿಶೇಷ.

ಇಶಾ ಮತ್ತು ಆನಂದ್‌ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಹಾಗೂ 500 ಕಂಪನಿಗಳ ಸಿಇಒಗಳು ಉದಯಪುರಕ್ಕೆ ಆಗಮಿಸಿದ್ದಾರೆ. ಅಲ್ಲದೇ ಬಾಲಿವುಡ್‌ ತಾರೆಯರಾದ ಅನಿಲ್‌ ಕಪೂರ್‌, ವಿದ್ಯಾಬಾಲನ್‌, ಸಿದ್ಧಾರ್ಥ್‌ ರಾಯ್‌ ಕಪೂರ್‌, ಜಾನ್‌ ಅಬ್ರಹಮ್‌, ಜಾವೇದ್‌ ಜಾಫರಿ ಹಾಗೂ ಸಚಿನ್‌ ತೆಂಡೂಲ್ಕರ್‌-ಅಂಜಲಿ ತೆಂಡೂಲ್ಕರ್‌, ಪ್ರಿಯಾಂಕಾ ಚೋಪ್ರಾ-ನಿಕ್‌ ಜೋನಸ್‌, ಸಾಕ್ಷಿ ಸಿಂಗ್‌ ಧೋನಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.ಅದೇನೆ ಇರ್ಲಿ ಒಟ್ಟಾರೆಯಾಗಿ ಭಾರತವನ್ನ ಬಡ ರಾಷ್ಟ್ರ ಅಂತ ಮೂಗುಮುರಿಯೋ ಜನರಿಗೆ ಈ ಮದುವೆ  ಒಂದು ಪಾಠವಾಗದಂತೂ ಸತ್ಯ. ಇದ್ರ ಮದ್ಯೆ ಇಷ್ಟೊಂದು ಆಡಂಬರದ ಮದುವೆಗಳು ಬೇಕಾ ಅನ್ನೋ ಪ್ರಶ್ನೆ ಕೂಡ  ಮೂಡದೇ ಇರದು..

LEAVE A REPLY

Please enter your comment!
Please enter your name here