Home Cinema ಸ್ವಾಗತಕ್ಕೆ ಸಿದ್ಧರಾಗಿ ಸದ್ಯದಲ್ಲೇ ಆಗಲಿದೆ ದುರ್ಯೋಧನನ ದರ್ಶನ..! ಕಣ್ತುಂಬಿಕೊಳ್ಳುವ ಕಾಲ ಕೂಡಿ ಬಂತು ಕುರುಕ್ಷೇತ್ರದ ಕದನ..!

ಸ್ವಾಗತಕ್ಕೆ ಸಿದ್ಧರಾಗಿ ಸದ್ಯದಲ್ಲೇ ಆಗಲಿದೆ ದುರ್ಯೋಧನನ ದರ್ಶನ..! ಕಣ್ತುಂಬಿಕೊಳ್ಳುವ ಕಾಲ ಕೂಡಿ ಬಂತು ಕುರುಕ್ಷೇತ್ರದ ಕದನ..!

279
0
SHARE

ಆರಂಭದಿಂದ್ಲೂ ಡಿ ಬಳಗದ ಕೂತುಹಲ, ಕೌತುಕಕ್ಕೆ ಕಾರಣವಾಗಿರುವ ಕುರುಕ್ಷೇತ್ರದ ಕದನ ಕಣ್ತುಂಬಿಕೊಳ್ಳೋ ಕಾಲ ಬರೋದ್ಯಾವಾಗ, ಹೀಗೊಂದು ಪ್ರಶ್ನೆ ಅನೇಕರಲ್ಲಿತ್ತು. ಇದಕ್ಕೆ ತಕ್ಕಂತೆ..ಚಿತ್ರತಂಡ, ಇವತ್ತು, ನಾಳೆ. ನಾಡಿದ್ದು ಅಂತೇಳ್ತಾನೇ ಹಾಡುಗಳ ಹಬ್ಬವನ್ನ ಮುಂದೂಡುತ್ತಾನೇ ಬಂದಿತ್ತು. ಅಭಿಮಾನಿಗಳ ಕಾಯುವಿಕೆ, ಕಾತುರತೆ ಹೆಚ್ಚಿಸುತ್ತಾನೇ ಬಂದಿತ್ತು. ಆದ್ರೀಗ ಅದೇ ಕಾಯುವಿಕೆ, ಕಾತುರತೆಗೆ ಬ್ರೇಕ್ ಬೀಳುವ ಕಾಲ ಸನ್ನಿಹಿತವಾಗುತ್ತಿದೆ.

ಯಸ್, ಕುರುಕ್ಷೇತ್ರ ಫೈನಲಿ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ.ಹೌದು, ಕುರುಕ್ಷೇತ್ರ ಬಿಡುಗಡೆಗೆ ಸಿದ್ಧವಾಗಿದೆ. ಸೆನ್ಸಾರ್ ಅಂಗಳದಲ್ಲೂ ಪಾಸಾಗಿದೆ. ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ, ಚಿತ್ರ ನೋಡಿ ಖುಷಿ ಪಟ್ಟಿದೆ. ಬಹುದಿನಗಳ ನಂತ್ರ ಪೌರಾಣಿಕ ಸಿನಿಮಾ ನೋಡಿದ ಧನ್ಯತಾಭಾವದಲ್ಲೇ, ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ನೀಡಿದೆ. ಅಂದ ಹಾಗೇ ಇಲ್ಲಿ ಇನ್ನೊಂದು ನಿಬ್ಬೇರಗಾಗುವ ಸಂಗತಿ ಇದೆ. ಅದುವೇ ಸಿನಿಮಾದ ಒಟ್ಟು ಅವಧಿ. ಹೌದು. ಸೆನ್ಸಾರ್‌ನಲ್ಲಿ ಗೆದ್ದ ಕುರುಕ್ಷೇತ್ರದ ಅವಧಿ ಭರ್ತಿ ೩ ಘಂಟೆ ೫ ನಿಮಿಷದಷ್ಟಿದೆ.

ಇನ್ನೂ ಸೆನ್ಸಾರ್ ಅಂಗಳದಲ್ಲಿ ಕುರುಕ್ಷೇತ್ರ ಪಾಸಾದ ಬೆನ್ನಲ್ಲೇ, ಸಿನಿಮಾ ಬಿಡುಗಡೆ ಯಾವಾಗ ಅನ್ನುವ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿರುವ ಹೊತ್ತಿನಲ್ಲೇ, ಸಿನಿಮಾದ ತ್ರೀಡಿ ಕೆಲ್ಸ ಇನ್ನೂ ಪೂರ್ಣಗೊಂಡಿಲ್ಲ ಅನ್ನುವ ಸುದ್ದಿ ಕೇಳಿ ಬರುತ್ತಿದೆ. ಹೌದು, ೨ಡಿ ವರ್ಷನ್‌ನಲ್ಲಿ ಸಂಪೂರ್ಣ ಸಿದ್ಧಗೊಂಡಿರುವ ಕುರುಕ್ಷೇತ್ರದ ತ್ರೀಡಿ ಕೆಲ್ಸಗಳೂ ಇನ್ನೂ ಬಾಕಿ ಇವೆ.ಇನ್ನೂ ತ್ರೀಡಿ ಕೆಲ್ಸಗಳನ್ನ ಇನ್ನೂ ಬಾಕಿ ಇಟ್ಟುಕೊಂಡಿರುವ ಚಿತ್ರತಂಡಕ್ಕೆ, ಚಿತ್ರವನ್ನ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ, ಅಂದ್ರೆ ಫೆಬ್ರುವರಿ ೧೬ಕ್ಕೆ ಬಿಡುಗಡೆ ಮಾಡುವ ತವಕ ಇದೆ.

ಅಭಿಮಾನಿಗಳ ಸಂಭ್ರಮ ಹೆಚ್ಚಿಸುವ ಇರಾದೆ ಇದೆ. ಇದೇ ನಿಟ್ಟಿನಲ್ಲಿ ಚಿತ್ರದ ತ್ರೀಡಿ ಕೆಲ್ಸಗಳನ್ನ. .ಪೂರ್ಣಗೊಳಿಸಲು ಚಿತ್ರತಂಡ ಶ್ರಮ ವಹಿಸುತ್ತಿದೆ. ಬಟ್, ಇಟ್ಟುಕೊಂಡಿರುವ ಇದೇ ಗುರಿಯನ್ನ, ಚಿತ್ರತಂಡ ತಲುಪುತ್ತಾ ಅನ್ನುವ ಅನುಮಾನನೂ ಇದೇ ವೇಳೆ ಅನೇಕರಿಗಿದೆ. ಹಾಗಾಗೇ, ಕುರುಕ್ಷೇತ್ರದ ಕದನ ಕಣ್ತುಂಬಿಕೊಳ್ಳುವ ಭಾಗ್ಯ ಸಿಗುವದು ಏಪ್ರಿಲ್‌ನಲ್ಲೇ ಅನ್ನುವ ಭವಿಷ್ಯವಾಣಿನೂ ಗಾಂಧಿನಗರದಲ್ಲಿ ಕೇಳಿ ಬರ‍್ತಿದೆ.ಕುರುಕ್ಷೇತ್ರ ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆಗೊಂಡ್ರೆ, ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೇನು ಗಿಫ್ಟ್ ಇಲ್ವಾ ಅಂಥ ಅಭಿಮಾನಿಗಳು ಬೇಸರ ಪಟ್ಟುಕೊಳ್ಳುವಂಗಿಲ್ಲ.

ಕಾರಣ, ಕುರುಕ್ಷೇತ್ರದ ಹಾಡುಗಳೂ ಅಷ್ಟೊತ್ತಿಗೆಲ್ಲಾ ಹೊರಬರಲಿವೆ. ನಿಮಗೆ ಗೊತ್ತಿರಲಿ ಕುರುಕ್ಷೇತ್ರದಲ್ಲಿ ನಾಲ್ಕು ಹಾಡುಗಳ ಜೊತೆಯಲ್ಲಿ, ಒಟ್ಟು ೧೨ ಶ್ಲೋಕಗಳಿವೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಕುರುಕ್ಷೇತ್ರದ ಹಾಡುಗಳಿಗೆ, ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಇನ್ನೂ ಹುಟ್ಟುಹಬ್ಬಕ್ಕೆ.. ಟ್ರೇಲರ್ ನೋಡಿ ಶಿಳ್ಳೆ ಚಪ್ಪಾಳೆ ಹೊಡೆಯುವ ಅವಕಾಶನೂ ಅಭಿಮಾನಿಗಳಿಗೆ ಸಿಗಲಿದೆ.ಅಂದ ಹಾಗೇ, ನಾಗಣ್ಣ ನಿರ್ದೇಶಿಸಿ.. ಮುನಿರತ್ನ ನಿರ್ಮಿಸುತ್ತಿರುವ ಕುರುಕ್ಷೇತ್ರದಲ್ಲಿ ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಕಿಲ್, ಸೇರಿ ಬಹುದೊಡ್ಡ ತಾರಾಬಳಗ ಇದೆ. ಹಾಗಾಗಿ, ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿವೆ.

ಇದಕ್ಕೆ ತಕ್ಕಂತೆ.. ಚಿತ್ರದ ಅಂಗಳದಲ್ಲಿ ಹೊರ ಬೀಳ್ತಾನೇ ಬಂದ ಸುದ್ದಿಗಳು ಚಿತ್ರದ ಮೇಲಿನ ನಿರೀಕ್ಷೆಗಳನ್ನ ದುಪ್ಪಟ್ಟಾಗಿಸುತ್ತಾನೇ ಇವೆ.ಇನ್ನೂ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಇರುವ ಕುರುಕ್ಷೇತ್ರಕ್ಕೆ, ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಕೃಷಿ ಇದೆ. ಜೋನಿ ಹರ್ಷ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಲಿದ್ದಾರೆ. ಇನ್ನು ಜಯನನ್ ವಿನ್ಸಂಟ್ ಕ್ಯಾಮಾರಾ ಕಣ್ಣಿನಲ್ಲಿ ಕುರುಕ್ಷೇತ್ರ ಸೆರೆಯಾಗಿದೆ. ಅದೇನೆ ಇರ‍್ಲಿ, ಸದ್ಯ ಕುರುಕ್ಷೇತ್ರ ಸೆನ್ಸಾರ್ ಘಟ್ಟವನ್ನ ದಾಟಿ ಮುನ್ನುಗಿದೆ. ಇನ್ನೇನ್ ಇದ್ರೂ ಹಾಡುಗಳೂ ಬಿಡುಗಡೆಯಾಗಬೇಕು. ಟ್ರೇಲರ್ ಹೊರಬರ‍್ಬೇಕು. ಅಲ್ಲಿವರೆಗೂ ಕಾಯಬೇಕಷ್ಟೇ…

LEAVE A REPLY

Please enter your comment!
Please enter your name here