Home Crime ಸ್ವಾಮೀಜಿ ಮೇಲೆ #Metoo ಆರೋಪ..! ಮಠದಲ್ಲೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದ ಮಹಿಳೆ..!

ಸ್ವಾಮೀಜಿ ಮೇಲೆ #Metoo ಆರೋಪ..! ಮಠದಲ್ಲೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದ ಮಹಿಳೆ..!

462
0
SHARE

ವನಕಲ್ಲು ಮಲ್ಲೇಶ್ವರ ಮಠದ ಸ್ವಾಮೀಜಿ ಮೇಲೆ ಮಹಿಳೆ ಒಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈಗ ಇದಕ್ಕೆ ಮಠದ ಸ್ವಾಮೀಜಿ ಪ್ರಸ್ ಮೀಟ್ ಮಾಡುವ ಮೂಲಕ ಆರೋಪವನ್ನ ತಳ್ಳಿ ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದ ಬಸವಣ್ಣ ದೇವರ ಮಠದಲ್ಲಿ ನಡೆದಿದೆ.

ಇನ್ನು ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆ ವನಕಲ್ಲು ಮಲ್ಲೇಶ್ವರ ಮಠದ ಬಸವರಮಾನಂದ ಸ್ವಾಮೀಜಿ ಮೇಲೆ ಬೆಂಗಳೂರಿನ ಅಂಜನಾ ನಗರದ ನಿವಾಸಿ ಶಾರದ ಎಂಬುವರು ಮಠದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನೆಲಮಂಗಲದ ದಾಬಸ್ಪೇಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದಕ್ಕೆ ಈಗ ಮಠದ ಸ್ವಾಮೀಜಿ ಇದು ಶುದ್ದ ಸುಳ್ಳು, ಈ ಮಹಿಳೆಯಾರೆಂದು ನನಗೆ ಗೊತ್ತಿಲ್ಲಾ, 1ದಿನ ಮಠಕ್ಕೆ ಬಂದು ದರ್ಶನ ಮಾಡಿದ್ದಾರೆ.

4 ರಿಂದ 5 ಬಾರಿ ಪೋನ್ ಮುಖಾಂತರ ಮಾತನಾಡಿದ್ದೆ, ನಾನಿಲ್ಲದ ಸಮಯದಲ್ಲಿ ಮಠಕ್ಕೆ ಬಂದು ಒಂದು ರಾತ್ರಿ ಉಳಿದು ಕೊಂಡಿದ್ದಾರೆಂದು ಮಹಿಳೆ ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.ಇನ್ನು ಆರೋಪಕ್ಕೆ ಮೂಲ ಕಾರಣ ಈ ಹಿಂದೆ ಈ ಮಠದ ಸ್ವಾಮಿಯಾಗಿದ್ದ, ಮದುಮಯಾನಂದ ಸ್ವಾಮೀಜಿ ಈ ಮಹಿಳೆಯನ್ನ ಕಳುಹಿಸಿ ನನ್ನ ಮುಖಕ್ಕೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ.

ಅವರಿಗೆ ಈ ಮಠದ ಆಸ್ತಿ ಮೇಲೆ ಕಣ್ಣಿದೆ, ಏನಾದರು ಮಾಡಿ ಮಠವನ್ನು ಅವರ ಅಧಿನದಲ್ಲಿ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಈ ಹಿಂದೆ ಸಿದ್ದಯೋಗನಂದ ಸ್ವಾಮಿಜಿಯವರು ಈ ವನಕಲ್ಲು ಮಲ್ಲೇಶ್ವರ ಮಠದ ಸ್ವಾಮಿಜಿಯಾಗಿದ್ದು, ಮದುಮಯಾನಂದ ಸ್ವಾಮೀಜಿಯವರ ಕಿರುಕುಳ ತಾಳಲಾರದೆ ಮಠದಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇನ್ನು ಈ ಆತ್ಮಹತ್ಯೆ ಪ್ರಕರಣವನ್ನ ನಾನ್ನು ಸುಪ್ರೀಮ್ ಕೋರ್ಟ್ನಲ್ಲಿ ಮರುಪರಿಶೀಲನಗೆ ಕೊರಿರುವುದರಿಂದ, ಮದುಮಯಾನಂದ ಸ್ವಾಮೀಜಿ ಮಹಿಳೆಯನ್ನು ಕಳುಹಿಸಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವನಕಲ್ಲು ಮಲ್ಲೇಶ್ವರ ಮಠದ ಬಸವರಮಾನಂದ ಸ್ವಾಮಿಗಳು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here