Home Crime ಹಗಲಲ್ಲಿ ಕ್ಯಾಬ್ ಡ್ರೈವರ್..! ಇರುಳಲ್ಲಿ ಪಕ್ಕಾ ಕಳ್ಳರು..?! ಕದಿಯೋದು ಏನು ಅಂತಾ ಗೊತ್ತಾದ್ರೆ ನೀವು ಶಾಕ್...

ಹಗಲಲ್ಲಿ ಕ್ಯಾಬ್ ಡ್ರೈವರ್..! ಇರುಳಲ್ಲಿ ಪಕ್ಕಾ ಕಳ್ಳರು..?! ಕದಿಯೋದು ಏನು ಅಂತಾ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ..!!

917
0
SHARE

ಅವ್ರು ಹಗಲಲ್ಲಿ ಓಲಾ, ಉಬರ್ ಕ್ಯಾಬ್ ಡ್ರೈವರ್ಸ್. ರಾತ್ರಿಯಾಗ್ತಿದ್ದಾಗೆ ಬೇರೆ ಕ್ಯಾಪ್ ಗಳ ಟಯರ್ ಗಳನ್ನ ಅಬೇಸ್ ಮಾಡಿ, ಸೆಕೆಂಡ್ ಹ್ಯಾಂಡ್ ಸೇಲ್ ಅಂತ ಮಾರಾಟ ಮಾಡ್ತಿದ್ದ ಖದೀಮಾಸ್. ಆದ್ರೆ, ಅವ್ರ ಆಟ ತುಂಬಾ ದಿನ ನಡೆಯೋದಕ್ಕೆ ನಮ್ ಪೊಲೀಸ್ರು ಬಿಟ್ಟಿಲ್ಲ. ರಾತ್ರೋ ರಾತ್ರಿ ಟೈರ್ ಕದ್ದು ಎಸ್ಕೇಪ್ ಆಗ್ತಿದ್ದವ್ರು ಕೈಗೆ ಕೋಳ ಹಾಕಿ, ಲಕ್ಷಾಂತರ ರೂಪಾಯಿ ಮೌಲ್ಯದ ಟಯರ್ ಗಳನ್ನ ಸೀಜ್ ಮಾಡಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾರೆ.

ಮಾಡಿದ ತಪ್ಪಿಗೆ ಹಿಂಗೆ ಕೈಗೆ ಕೋಳ ಹಾಕಿಸ್ಕೊಂಡು ನಿಂತಿರೋ ಇವ್ರು ಬಸವರಾಜ್, ಸುನೀಲ್, ಸಂತೋಷ್. ಎಲ್ಲರೂ ಬೆಂಗಳೂರಿನ ಬಾಗಲಗುಂಟೆ ನಿವಾಸಿಗಳು. ವೃತ್ತಿಯಲ್ಲಿ ಡ್ರೈವರ್ ಗಳಾಗಿದ್ದು, ಓಲಾ, ಉಬರ್ ಕ್ಯಾಬ್ ಗಳಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದಾರೆ, ಆದ್ರೆ ಅದ್ರ ಜೊತೆಗೆ ಸೈಡ್ ಬ್ಯುಸಿನೆಸ್ ಮಾಡ್ತಿದ್ದ ಇವ್ರು ಮನೆ ಮುಂದೆ ನಿಂತಿದ್ದ ಕಾರ್‌ಗಳ ಟಯರ್ ಕದ್ದು ಸೆಕೆಂಡ್ ಹ್ಯಾಂಡ್ ಗೆ ಮಾರಾಟ ಮಾಡ್ತಿದ್ರು.

ಟ್ರಾವೆಲ್ಸ್ ಫೀಲ್ಡ್ ನಲ್ಲಿ ಒಬ್ಬರಿಂದ ಒಬ್ಬರಿಗೆ ಕಾಂಟೆಕ್ಟ್ ಇರೊದನ್ನೆ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಯಾರಾದ್ರೂ ಟಯರ್ಸ್ ಬೇಕು ಅಂದ್ರೆ ಸಾಕು ಅದೇ ರಾತ್ರಿ ಸ್ಕೆಚ್ ಹಾಕಿಕೊಂಡ್ ಫೀಲ್ಡ್ ಗಿಳಿಯುತ್ತಿದ್ರು. ಮನೆ ಮುಂದೆ, ರೋಡ್ ಸೈಡ್ ನಲ್ಲಿ ನಿಲ್ಲಿಸಿದ್ದ ಕಾರ್ ಗಳನ್ನ ಟಾರ್ಗೆಟ್ ಮಾಡಿಕೊಂಡ್ ಕದ್ದು ಎಸ್ಕೇಪ್ ಆಗ್ತಿದ್ರು.

ಅದೇ ರೀತಿ ಮೊನ್ನೆ ಟಯರ್ ಗಳನ್ನ ಕದಿಯೋ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳ ಬಂಧನದಿಂದ 14 ಟಯರ್ ಕಳವು ಪ್ರಕರಣಗಳು ಪತ್ತೆಯಾಗಿದ್ದು, 7 ಲಕ್ಷ ರೂಪಾಯಿ ಬೆಲೆಯ ಟಯರ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಇನ್ನು ಮತ್ತೊಂದೆಡೆ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ಮಾಡಿದ ಪುಡಿರೌಡಿಗಳು ಅಡ್ಡಹಾಸ ಮೆರೆದಿರೋ ಘಟನೆ ಕಾಮಾಕ್ಷಿಪಾಳ್ಯ ದಲ್ಲಿ ನಡೆದಿದೆ.

ಇಲ್ಲಿನ ಕಾವೇರಿಪುರ 2ನೇ ಮುಖ್ಯರಸ್ತೆಯಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ರಿಟ್ಜ್ ಕಾರಿನಲ್ಲಿ ಬಂದ ಕೆಲ ಕಿಡಿಗೇಡಿಗಳು ಮದಿರೆ ನಿಶೆಯಲ್ಲಿ ರಸ್ತೆಬದಿ ನಿಲ್ಲಿಸಿದ್ದ ಟೆಂಪೋ ಟ್ರಾವೆಲ್ಲರ್, ಮಾರುತಿ 800 ಸೇರಿದಂತೆ ಸುಮಾರು ಐದಾರು ವಾಹನಗಳ ಮೇಲೆ ಮಾರಕಾಸ್ತ್ರಗಳಿಂದ ಮನ ಬಂದಂತೆ ದಾಳಿ ಮಾಡಿ ಎಸ್ಕೇಪ್ ಆಗಿದ್ದಾರೆ.

ಇನ್ನು ಕಿಡಿಗೇಡಿಗಳ ಕೃತ್ಯವನ್ನು ಸ್ಥಳೀಯರು ಮೊಬೈಲ್ ಗಳಲ್ಲಿ ಸೆರೆ ಮಾಡಿಕೊಂಡಿದ್ದು ಕಾಮಾಕ್ಷಿಪಾಳ್ಯ ಪೊಲೀಸ್ರಿಗೆ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಕಾಮಾಕ್ಷಿಪಾಳ್ಯ ಪೊಲೀಸ್ರು ಆರೋಪಿಗಳ ಬಂಧನಕ್ಕೆ ಶೋಧ ನಡೆಸ್ತಿದ್ದಾರೆ.

LEAVE A REPLY

Please enter your comment!
Please enter your name here