Home Crime ಹಣಕಾಸಿನ ವಿಚಾರಕ್ಕೆ ಗೆಳೆಯನನ್ನೇ ಕೊಚ್ಚಿಕೊಂದ ಕುಚುಕು ಗೆಳೆಯರು..! ದೊಡ್ಡಬಳ್ಳಾಪುರದಲ್ಲಿ ನಡುರಾತ್ರಿ ಸದ್ದು ಮಾಡಿದ ಲಾಂಗು ಮಚ್ಚು..!

ಹಣಕಾಸಿನ ವಿಚಾರಕ್ಕೆ ಗೆಳೆಯನನ್ನೇ ಕೊಚ್ಚಿಕೊಂದ ಕುಚುಕು ಗೆಳೆಯರು..! ದೊಡ್ಡಬಳ್ಳಾಪುರದಲ್ಲಿ ನಡುರಾತ್ರಿ ಸದ್ದು ಮಾಡಿದ ಲಾಂಗು ಮಚ್ಚು..!

3424
0
SHARE

ಇವರೆಲ್ಲ ಚಿಕ್ಕಂದಿನಿಂದಲೂ ಒಂದೇ ಏರಿಯಾದಲ್ಲಿ ತಿಂದು ತೇಗಿ ಗ್ಯಾಂಗ್ ಕಟ್ಟಿಕೊಂಡು ಹವಾ ಮೇಂಟೇನ್ ಮಾಡ್ತಿದ್ದ ಕುಚುಕು ಗೆಳೆಯರು………ಜತೆಗೆ ದೊಡ್ಡಬಳ್ಳಾಪುರದಲ್ಲಿ ಒಂದಷ್ಟು ಸೆಟ್ಲಿಮೇಂಟ್ ಮಾಡಿಕೊಂಡು ಅಪರಾದ ಚಟುವಟಿಕೆಗಳಲ್ಲು ತೊಡಗೊಕೊಂಡಿದ್ರು. ಆದ್ರೆ ಈ ನಡುವೆ ಹಣ ಕಾಸಿನ ವಿಚಾರಕ್ಕೆ ಸ್ನೇಹಿತರ ನಡುವೆ ಉಂಟಾದ ವೈಮನಸ್ಸು ಇಧಿಗ ಕೊಲೆಯಲ್ಲಿ ಅಂತ್ಯವಾಗಿದೆ.

ಈ ರೀತಿ ಲಾಂಗು ಮಚ್ಚಿನ ಹೊಡೆತಕ್ಕೆ ಸಿಲುಕಿ ರಸ್ತೆ ಬದಿಯಲ್ಲೇ ಹೆಣವಾಗಿರೂ ಈತನ ಹೆಸರು ಗಂಗಾಧರ್ ಅಲಿಯಾಸ್ ದಾಸ ಅಲಿಯಾಸ್ ಇಡ್ಲಿ ದಾಸ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ದೇವರಾಜ ನಗರ ನಿವಾಸಿ. ಈತ ಚಿಕ್ಕ ವಯಸಿನಿಂದಲೆ ಸ್ನೇಹಿತರ ಜೊತೆಗೂಡಿ ಒಂದಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಒಂದಷ್ಟು ಪಡ್ಡೆ ಹುಡುಗರನ್ನಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ನಂತೆ.

ಆದ್ರೆ ಈ ನಡುವೆ ಚಿಕ್ಕಂದಿನಿಂದ ಜೊತೆಯಲ್ಲಿದ್ದುಕೊಂಡು ತಿಂದು ಕುಡಿದಿದ್ದ ಸ್ನೇಹಿತರಾದ ರೌಡಿಶೀಟರ್ ಲೋಕೇಶ್, ಆನಂದ್ ಮತ್ತು ಸ್ವಾಮಿ ಅನ್ನೂ ಈ ಮೂವರು ಗಂಗಾಧರ್ ನನ್ನ ಎಣ್ಣೇ ಪಾರ್ಟಿ ಮಾಡೋಕ್ಕೆ ಅಂತ ಮನೆ ಬಳಿಯಿರೂ ಟವರ್ ಹತ್ತಿರ ಕರೆದೊಗಿದ್ದು, ಕಂಠಪೂರ್ತಿ ಕುಡಿಸಿದ್ದಾರೆ. ಈ ವೇಳೆ ಎಣ್ಣೇ ನಶೆಯಲ್ಲಿದ್ದ ಗಂಗಾಧರ್ ಅಲಿಯಾಸ್ ಇಡ್ಲಿದಾಸನ ಮೇಲೆ ಲಾಂಗು ಮಚ್ಚುಗಳಿಂದ ನೋಡ ನೋಡುತ್ತಿದ್ದಂತೆ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇಡ್ಲಿದಾಸ ಸ್ಥಳದಲ್ಲೆ ಸಾವನ್ನಪಿದ್ದಾನೆ.

ಎಣ್ಣೇ ಪಾರ್ಟಿ ಹೆಸರಲ್ಲಿ ಗಂಗಾಧರ್ ಗೆ ಮುಹೂರ್ತ ಪೀಕ್ಸ್ ಮಾಡಿದ್ದಾರೆ. ಇನ್ನೂ ಸ್ನೇಹಿತರ ಸಂಚು ಹರಿಯದೆ ಎಂದಿನಂತೆ ಎಣ್ಣೇ ಹೊಡೆಯಲು ಹೋದ ಗಂಗಾಧರ್ ಅಲಿಯಾಸ್ ಇಡ್ಲಿದಾಸ ಸ್ನೇಹಿತರಿಂದಲೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಇನ್ನೂ ಈ ವೇಳೆ ಎಣ್ಣೇ ಪಾರ್ಟಿಯಲ್ಲಿ ಬಾಗವಹಿಸಿದ ಮೃತ ಇಡ್ಲಿದಾಸನ ಸ್ನೇಹಿತ ಪವನ್ ಮೇಲು ಆರೋಪಿಗಳು ಹಲ್ಲೆಗೆ ಮುಂದಾಗಿದ್ದು, ಅದೃಷ್ಟವಶಾತ್ ಪವನ್ ಆರೋಪಿಗಳಿಂದ ತಪ್ಪಿಸಿಕೊಂಡು ಸಣ್ಣಾಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಒಟ್ಟಾರೆ ಹಣಕಾಸಿನ ವಿಚಾರಕ್ಕೆ ತಿಂದು ತೇಗಿದ್ದ ಸ್ನೇಹಿತನಿಗೆ ಕುಚುಕು ಗೆಳೆಯರೆ ಮುಹೂರ್ತ ಇಟ್ಟಿದ್ದು ಮಾತ್ರ ನಿಜಕ್ಕೂ ದುರಂತ.

LEAVE A REPLY

Please enter your comment!
Please enter your name here