Home Crime ಹಣಕಾಸಿನ ವಿಚಾರಕ್ಕೆ ಪತ್ನಿಯನ್ನೇ ಭೀಕರವಾಗಿ ಕೊಂದ ಪತಿರಾಯ..?! ಪೊಲೀಸರು ಹಿಡಿಯಲು ಹೋದಾಗ ಮಕ್ಕಳ ಮೇಲೆ ಗುಂಡು...

ಹಣಕಾಸಿನ ವಿಚಾರಕ್ಕೆ ಪತ್ನಿಯನ್ನೇ ಭೀಕರವಾಗಿ ಕೊಂದ ಪತಿರಾಯ..?! ಪೊಲೀಸರು ಹಿಡಿಯಲು ಹೋದಾಗ ಮಕ್ಕಳ ಮೇಲೆ ಗುಂಡು ಹಾರಿಸಿದ ಕಿರಾತಕ..!!

758
0
SHARE

ಪತಿಯಿಂದಲೇ ಪತ್ನಿಯ ಬರ್ಬರ ಕೊಲೆ.ಬೆಂಗಳೂರಿನ ಜಯನಗರದ ನಾಲ್ಕನೇ ‌ಬ್ಲಾಕ್ ನಲ್ಲಿ ಘಟನೆ.ಮಹಿಳೆ ಬರ್ಬರ ಹತ್ಯೆಗೆ ಬೆಂಗಳೂರಿನ ಜಯನಗರ ಸಾಕ್ಷಿಯಾಗಿದೆ.ಇಲ್ಲಿ ಗಂಡನೇ ತನ್ನ ಪತ್ನಿಯನ್ನ ಚಾಕುವಿನಿಂದ ಇರಿದು ನಂತರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.ಸಹನಾ(೪೨) ಹತ್ಯೆ ಯಾದ ಮಹಿಳೆ…ಜಯನಗರ 4ನೇ ಬ್ಲಾಕ್ ನಿವಾಸಿ 42 ವರ್ಷದ ಸಹನಾ, ತಾಳಿ ಕಟ್ಟಿದ ಗಂಡನಿಂದಲೇ ಹತ್ಯೆಯಾಗಿದ್ದಾರೆ. ಸಹನಾ ಪತಿ ಗಣೇಶ್ ನಿಂದಲೇ‌ ಕೃತ್ಯ.ಚಾಕುವಿನಿಂದ ಇರಿದು ಕೊಲೆಗೈದಿರುವ ಆರೋಪಿ‌ ಗಣೇಶ್…

ಗಣೇಶ್ ಸಹನಾ ದಂಪತಿ 12 ವರ್ಷಗಳ ಹಿಂದೆಯೇ ಮದುವೆಯಾಗಿದ್ರು. ದಂಪತಿಗೆ ಒಬ್ಬ ದತ್ತು ಮಗ ಸೇರಿದಂತೆ ಮೂವರು ಮಕ್ಕಳಿದ್ದರು. ಕೃತ್ಯವೆಸಗಿದ ಬಳಿಕ ಮೂವರ ಮಕ್ಕಳ ಜೊತೆಗೆ ಗಣೇಶ್ ಪರಾರಿಯಾಗಿದ್ದಾನೆ.ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ.ಹಣಕಾಸಿನ ವಿಚಾರಕ್ಕೆ ಕೊಲೆಗೈದಿರೋ ಶಂಕೆ.ಬೆಂಗಳೂರಿನ ಜಯನಗರದಲ್ಲಿ ಪತ್ನಿ ಮೇಲೆ ಶೂಟೌಟ್ ಮಾಡಿದ್ದ ಉದ್ಯಮಿ ಬಿಡದಿ ಬಳಿ ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಇಬ್ಬರು ಮಕ್ಕಳ ಮೇಲೂ ಫೈರಿಂಗ್ ಮಾಡಿದ್ದಾನೆ…

ತಲೆ ಮರೆಸಿಕೊಂಡಿರೋ ಗಣೇಶ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ. ಹಣಕಾಸಿನ ವಿಚಾರಕ್ಕೆ ಕೊಲೆಗೈದಿರೋ ಶಂಕೆ.ಬೆಂಗಳೂರಿನ ಜಯನಗರದಲ್ಲಿ ಪತ್ನಿ ಮೇಲೆ ಶೂಟೌಟ್ ಮಾಡಿದ್ದ ಉದ್ಯಮಿ ಬಿಡದಿ ಬಳಿ ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಇಬ್ಬರು ಮಕ್ಕಳ ಮೇಲೂ ಫೈರಿಂಗ್ ಮಾಡಿದ್ದಾನೆ…
ಹೆಂಡತಿಯನ್ನು ಹತ್ಯೆಗೈದು ಮಕ್ಕಳನ್ನು ಕರೆದುಕೊಂಡು ಬಿಡದಿ ಬಳಿಯ ಬನಗಿರಿಯಲ್ಲಿ ಗಣೇಶ್ ತಲೆಮರೆಸಿಕೊಂಡಿದ್ದ. ಈ ವೇಳೆ ಪೊಲೀಸರು ಆತನನ್ನು ಅರೆಸ್ಟ್ ಮಾಡಲು ತೆರಳಿದ್ದಾರೆ. ಆಗ ಹೆಣ್ಣು ಮಗುವಿನ ಹೊಟ್ಟೆ ಹಾಗೂ ಮಗನ ಕೈ ಹಾಗೂ ತೊಡೆಭಾಗಕ್ಕೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಅದೃಷ್ಟ ವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ…

ಇನ್ನು ಆಸ್ತಿ ವಿಚಾರಕ್ಕೆ ಪತ್ನಿ ಸಹನಾ ಜೊತೆ ಜಗಳವಾಗುತ್ತಿತ್ತು. ನನಗೆ ಸಾಲಗಾರರ ಹಾವಳಿ ಹೆಚ್ಚಾಗಿದ್ದರಿಂದ ನಾನು ಆಸ್ತಿ ಮಾರಲು ನಿರ್ಧರಿಸಿದ್ದೆ. ಇದಕ್ಕೆ ಪತ್ನಿ ಅಡ್ಡಿ ಪಡಿಸುತ್ತಿದ್ದಳು ಹೀಗಾಗಿ ಸಹನಾಳನ್ನು ಕೊಂದೆ. ಬಳಿಕ ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಮಕ್ಕಳನ್ನು ಸಾಹಿಸಿ ನಾನು ಕೂಡ ಆತ್ಮಹತ್ಯೆ ಮಾಡುವ ನಿರ್ಧಾರ ಮಾಡಿದ್ದೆಎಂದು ಪೊಲೀಸರ ತನಿಖೆ ವೇಳೆ ಆರೋಪಿ ಗಣೇಶ್ ಹೇಳಿದ್ದಾನೆ…

 

LEAVE A REPLY

Please enter your comment!
Please enter your name here