Home Crime ಹಣ ತೆಗೆದುಕೊಳ್ಳೋ ಮುನ್ನ ಮತದಾರರೇ ಎಚ್ಚರ ಎಚ್ಚರ..!? ಕತ್ತಲಾಗ್ತಿದ್ದಾಗೆ ನಿಮ್ಮ ಕೈ ಸೇರುತ್ತೆ ಖೋಟಾ ನೋಟುಗಳು…

ಹಣ ತೆಗೆದುಕೊಳ್ಳೋ ಮುನ್ನ ಮತದಾರರೇ ಎಚ್ಚರ ಎಚ್ಚರ..!? ಕತ್ತಲಾಗ್ತಿದ್ದಾಗೆ ನಿಮ್ಮ ಕೈ ಸೇರುತ್ತೆ ಖೋಟಾ ನೋಟುಗಳು…

475
1
SHARE

ಮತದಾನಕ್ಕೆ ಇನ್ನೆರಡು ದಿನ ಬಾಕಿ ಇದೆ. ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲ್ಲಿದ್ದು, ಡೋರ್ ಟು ಡೋರ್ ಪ್ರಚಾರದಲ್ಲಿ ಮಾಡೋ ಕಸರತ್ತೆ ವರ್ಕೌಂಟ್ ಆಗೋದು. ಅಂದೇ ಮತದಾರರ ಆಮಿಷ ಈಡೇರಿಸೋದು, ಹಣ ಹಂಚಿಕೆ ಮಾಡೋದು. ಆದ್ರೆ, ಈ ಬಾರಿ ಅಸಲಿ ನೋಟುಗಳಿಗಿಂತ ಖೋಟಾ ನೋಟುಗಳ ಕುಣಿತವೇ ಹೆಚ್ಚಂತೆ ಎಚ್ಚರ…

ಇಷ್ಟೋಂದು ಟೈಟ್ ಸೆಕ್ಯೂರಿಟಿ ನಡುವೆಯೂ ಕಳ್ಳ ಮಾರ್ಗಗಳಲ್ಲಿ ಮತದಾರರಿಗೆ ಹಂಚಿಕೆ ಮಾಡೋದಕ್ಕೆ ನಮ್ ಪೊಲಿಟಿಕಲ್ ಪಾರ್ಟಿ ಲೀಡರ್ಸ್ ಯಾವ ರೀತಿ ಎಣ್ಣೆ, ಹಣ ಸರಬರಾಜು ಮಾಡ್ತಿದ್ದಾರೆ ಅನ್ನೋದನ್ನ. ಆದ್ರೆ, ಎಷ್ಚೇ ಸರ್ಚಿಂಗ್ ಮಾಡಿದ್ರು. ಈಗಾಗ್ಲೇ ತಾವು ಟಾರ್ಗೆಟ್ ಇಟ್ಕೊಂಡಿರುವಷ್ಟು ಕ್ಯಾಶ್, ಡ್ರಿಂಕ್ಸ್ ಸೇರಿದಂತೆ ಏನ್ ಏನ್ ಕೊಟ್ರೆ ಸುಲಭವಾಗಿ ವೋಟ್ ಬೀಳುತ್ವೆ ಅನ್ನೋ ವಸ್ತುಗಳನ್ನೆಲ್ಲಾ ಸ್ಟೋರ್ ಮಾಡಿ ಇಟ್ಕೊಂಡಿದ್ದಾರೆ…

ಪಕ್ಕಾ ಇನ್ಫಾರ್ಮೇಷನ್ ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಇಲ್ಲಿಯವರೆಗೆ ಕೋಟಿ ಕೋಟಿ ಹಣ, ಎಣ್ಣೆ, ಸೇರಿದಂತೆ ಹಲವಾರು ವಸ್ತುಗಳನ್ನ ಸೀಜ್ ಮಾಡಿಕೊಂಡಿದ್ದಾರೆ. ಆದ್ರೆ, ಕೊನೆಯದಾಗಿ ಇರೋ ಬ್ರಹ್ಮಾಸ್ತ್ರವೇ ಹಣದ ಹಂಚಿಕೆ. ಹೀಗಾಗಿ, ಎಲ್ಲಾ ಬೆಂಬಲಿಗರ ಮನೆಗಳು ಕಂತೆ ಕಂತೆ ಕ್ಯಾಶ್ ಸೇರಿಸಿ ಭದ್ರ ಪಡಿಸಿಕೊಂಡಿದ್ದಾರೆ..

ಕೆಲ ಮೂಲಗಳ ಪ್ರಕಾರ ಚುನಾವಣಾ ಕಣದಲ್ಲಿರೋ ಅಭ್ಯರ್ಥಿಗಳು ಅಸಲಿ ನೋಟುಗಳನ್ನೆ ಹಂಚಿಕೆ ಮಾಡೋದಕ್ಕೆ ನೀಡಿದ್ರೆ, ಮಧ್ಯದಲ್ಲಿರುವ ಲೀಡರ್ಸ್‌ಗಳು ನೆರೆ ರಾಜ್ಯದಿಂದ ಬಂದಿರೋ ಖೋಟಾ ನೋಟುಗಳನ್ನು ಮತದಾರರಿಗೆ ಹಂಚಿಕೆ ಮಾಡು್ತ್ತಿದ್ದಾರೆ ಎಂದು ತಿಳಿದು ಬಂದಿದೆ.ಮತದಾರರಿಗೆ ಭರವಸೆ ನೀಡಿ ಮೋಸ ಮಾಡೋ ಜನ ಪ್ರತಿನಿಧಿಗಳು, ಮತದಾನಕ್ಕೆ ಖೋಟಾ ನೋಟುಗಳನ್ನ ನೀಡೋ ಮೂಲಕವೂ ವಂಚಿಸೋ ಪ್ಲಾನ್ ಮಾಡಿದ್ದಾರಂತೆ…

ಅದಕ್ಕೆ ಸಾಕ್ಷಿಯಾಗಿ ಈಗಾಗ್ಲೇ ಚೆಕ್ ಪೋಸ್ಟ್ ಗಳಲ್ಲಿ ಸೀಜ್ ಆಗಿರೋ ಹಣದಲ್ಲಿ ಶೇ. 20ರಷ್ಟು 500 ರೂಪಾಯಿ ಮುಖಬೆಲೆಯ ಖೋಟಾ ನೋಡುಗಳು ಕಂಡು ಬಂದಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ…

1 COMMENT

  1. ಸಿಕ್ಕಿರುವಂತಹ 500 ಮತ್ತು 2000ದ ಖೋಟಾ ನೋಟುಗಳು ಹೇಗಿವೆ ಎಂದು ತೋರಿಸಲಿಲ್ಲವಲ್ಲಾ?

LEAVE A REPLY

Please enter your comment!
Please enter your name here