Home District ಹರಕೆಯ ಹೆಸರಿನಲ್ಲಿ ಮಕ್ಕಳ ಜೀವದ ಜೊತೆ ಚೆಲ್ಲಾಟ; ದರ್ಗಾದಲ್ಲಿ ನಡೆಯಿತು ಮೂಡನಂಬಿಕೆಗಳ ಪರಮಾವಧಿ

ಹರಕೆಯ ಹೆಸರಿನಲ್ಲಿ ಮಕ್ಕಳ ಜೀವದ ಜೊತೆ ಚೆಲ್ಲಾಟ; ದರ್ಗಾದಲ್ಲಿ ನಡೆಯಿತು ಮೂಡನಂಬಿಕೆಗಳ ಪರಮಾವಧಿ

469
0
SHARE

ಹಾವೇರಿ. ಆಧುನಿಕ ಜಗತ್ತಿನಲ್ಲಿ ಇನ್ನು ಮೂಡನಂಬಿಕೆಗಳು ಸಾಕಷ್ಟು ಬೇರು ಬಿಟ್ಟಿವೆ.ಇದಕ್ಕೆ ತಾಜಾ ಉದಾಹರಣೆ ಅಂತದ್ರೆ,ಮೂಢನಂಬಿಕೆಯಿಂದ ಪುಟ್ಟ ಪುಟ್ಟ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುವಂತ ಪ್ರಸಂಗವೊಂದು ನಡೆದಿದೆ.ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣದ ಹಜರತ್ ಫೀರ್ ಸಯ್ಯದ್ಅಲ್ಲಾವುದ್ದಿನ ಷಾ ಖರ್ದಿ ದರ್ಗಾದಲ್ಲಿ ನಡೆದಿದೆ.

ಮಕ್ಕಳಾಗದಿದ್ರೆ ಹಾಗೂ ಮಗುವಿನ ಆರೋಗ್ಯ ಸಮಸ್ಯೆ ನಿವಾರಣೆಗೆ ಪುಟ್ಟ ಮಕ್ಕಳನ್ನ ತೊಟ್ಟಿಲಿನಲ್ಲಿ ಕಟ್ಟಿ ಬಾವಿಗೆ ಬಿಟ್ಟು ನೀರುತಾಗಿಸಿ ಮೇಲೆತ್ತುವ ಹರಕೆಪದ್ದತಿ ನಡೆದಿದೆ.ಈ ದರ್ಗಾದಲ್ಲಿನ ವಿಚಿತ್ರ ಆಚರಣೆಯನ್ನ ನೋಡಿದ್ರೆ ಎಂಥವರಿಗಾದ್ರು ಭಯವಾಗುತ್ತೆ. ಪುಟ್ಟ ಕಂದಮ್ಮಗಳ ಪ್ರಾಣದ ಜೊತೆ ಆಟವಾಡುವಂತ ಈ ವಿಚಿತ್ರ ಪದ್ದತಿ ದರ್ಗಾದ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದಿದೆ. ಮಕ್ಕಳ ಪ್ರಾಣಕ್ಕೆ ಸಂಚಕಾರ ತರುವ ಇಂತ ಪದ್ದತಿಗಳು ಇನ್ನೂ ಜೀವಂತವಾಗಿದೆ ಎನ್ನುವುದೆ ವಿಷಾದಕರ ಸಂಗತಿ.

LEAVE A REPLY

Please enter your comment!
Please enter your name here