Home Cinema ಹರಿಕೃಷ್ಣ-ವಾಣಿ ಸುಮಧುರ ದಾಂಪತ್ಯದ ಬಗ್ಗೆ ಏನಿದು ವದಂತಿ..!

ಹರಿಕೃಷ್ಣ-ವಾಣಿ ಸುಮಧುರ ದಾಂಪತ್ಯದ ಬಗ್ಗೆ ಏನಿದು ವದಂತಿ..!

970
0
SHARE

ಹರಿಕೃಷ್ಣ-ವಾಣಿ ಹರಿಕೃಷ್ಣ… ಸ್ಯಾಂಡಲ್‌ವುಡ್ ಕಂಡ ಅಪ್ರತಿಮ ಗಾಯಕರು ಮತ್ತು ಸಂಗೀತ ನಿರ್ದೇಶಕರು. ಚಂದನವನಲ್ಲಿ ತುಂಬಾನೇ ಡಿಮ್ಯಾಂಡ್ ಇರುವ ದಂಪತಿ ಕೂಡ ಹೌದು. ಇತ್ತೀಚೆಗಷ್ಟೇ ದಾಸನಿಗೆ ಯಜಮಾನನ ಟೆಚ್ ನೀಡಿದ್ದ ಹರಿಕೃಷ್ಣ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ರು.

ಇನ್ನು ಶುಭ ಮರ್ಡರ್ ಕೇಸ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಸಂಗೀತ ನಿರ್ದೇಶಕಿಯಾಗಿರುವ ವಾಣಿ ಹರಿಕೃಷ್ಣ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ರು. ಇದೀಗ ಸುಮಧುರವಾಗಿದ್ದ ಸಂಸಾರದಲ್ಲಿ ಸದ್ಯ ಅಪಸ್ವರ ಕೇಳಿಬಂದಿದೆ. ಅದು ಮತ್ಯಾವ ಕಾರಣಕ್ಕಲ್ಲ ಸಂಗೀತದ ವಿಚಾರಕ್ಕೆ ಅಂದ್ರೆ ನೀವು ಅಚ್ಚರಿ ಪಡ್ತೀರಾ.

ಹೌದು.. ಹರಿಕೃಷ್ಣ ದಾಂಪತ್ಯದಲ್ಲಿ ಅಪಸ್ವರ ಕೇಳಿಬಂದಿದೆ ಎಂಬ ಸುದ್ದಿ ಸದ್ಯ ಗಾಂಧೀನಗರದಲ್ಲಿ ಬೇಜಾನ್ ಸದ್ದು ಮಾಡ್ತಿದೆ. ಆದ್ರೆ ಅದ್ಯಾವ ರೀತಿಯ ವಿಚಾರ ಎನ್ನುವುದನ್ನು ಮತ್ಯಾರೋ ಹೇಳ್ತಿಲ್ಲ. ಖುದ್ದು ವಾಣಿ ಹರಿಕೃಷ್ಣ ತಮ್ಮ ಮನಸ್ಸಿನಲ್ಲಿರುವ ಬೇಸರವನ್ನು ಹೊರಹಾಕಿದ್ದಾರೆ. ವಿ ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿರುವ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದಲ್ಲಿ ವಾಣಿ ಅವರ ಕಂಠದಲ್ಲಿ ಒಂದು ಹಾಡನ್ನು ಹಾಡಿದಲಾಗಿತ್ತು. ಆದರೆ, ಅದೇ ಏನಾಯಿತೋ ಏನೋ ಗೊತ್ತಿಲ್ಲ ಈ ಹಾಡಿಗೆ ಈಗ ಕತ್ತರಿ ಬಿದ್ದಿದೆ. ಅನುರಾದ ವರ್ಷನ್ ಆಗಿದೆ. ಇದು ವಾಣಿ ಅವರಿಗೆ ನೋವು ಮೂಡಿಸಿದೆ. ಹೆಂಡತಿ ಕಂಠಕ್ಕೆ ಕತ್ತರಿ ಹಾಕಿದ್ದಕ್ಕೆ ಸಂಗೀತ ನಿರ್ದೇಶಕ ಮತ್ತು ಪತಿಯ ಮೇಲೆ ವಾಣಿ ಹರಿಕೃಷ್ಣ ಬೇಸರಗೊಂಡಿದ್ದಾರೆ. ಅದೇ ನೋವಿನಲ್ಲೇ ಪೇಸ್ ಬುಕ್‌ನಲ್ಲಿ ಈ ರೀತಿ ಫೋಸ್ಟ್ ಮಾಡುವ ಮೂಲಕ ಫ್ಯಾನ್ಸ್ ಜೊತೆಗೆ ನೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಬದುಕೇ ಬೇಡ ಅನ್ನಿಸಿಬಿಡುತ್ತದೆ, ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ, ಈಗ” ಕುರುಕ್ಷೇತ್ರ” ಹಾಗೂ “ ರಾಂಧವ” ಚಿತ್ರಗಳಲ್ಲಿ ನನ್ನನ್ನು ಹಾಡಿಸಿ, ಧ್ವನಿ ಉಳಿಸಿಲ್ಲ. ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನು ಹಾಡಿಸುವುದಾದರೆ… ಇಂತಿ ಅಕ್ಷರ ಹರಿ( ವಾಣಿ ಹರಿ)

ಈಗೇ ತಮ್ಮ ನೋವನ್ನು ವಾಣಿ ಹರಿಕೃಷ್ಣ ಪೋಸ್ಟ್ ಮಾಡುವ ಮೂಲಕ ಹೊರಹಾಕಿದ ಬೆನ್ನಲ್ಲೇ ಸಾಕಷ್ಟು ಅನುಮಾನಗಳು ಹರಿದಾಡಿದ್ವು. ಅರೇ.. ಹರಿಕೃಷ್ಣ ಮತ್ತು ವಾಣಿ ಹರಿಕೃಷ್ಣ ಇಬ್ಬರು ದಾಂಪತ್ಯ ಮುರಿದು ಬಿತ್ತಾ ಎಂಬ ಮಾತುಗಳು ಕೇಳಿಬಂದಿದ್ದು ನಿಜ. ಆದ್ರೆ ವಿ. ಹರಿಕೃಷ್ಣ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ. ಜಿ.ಕೆ ವೆಂಕಟೇಶ್ ಮೊಮ್ಮಗಳು ವಾಣಿಹರಿ ಕೃಷ್ಣ ಈಗ ಈಕೆ ದೊಡ್ಡ ಗಾಯಕಿ. ಸಂಸಾರ ನೌಕೆಯಲ್ಲಿ ಜೊತೆಯಾದ ಈ ಇಬ್ಬರು ಈಗಾಗಲ್ಲೇ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಒಂದು ಹಾಡಿಗಾಗಿ ಇಬ್ಬರು ಸಂಸಾರವನ್ನೇ ಮುರಿದುಕೊಂಡ್ರಾ ಎಂಬ ಪ್ರಶ್ನೆಗಳು ಕೂಡ ಇದೇ ವೇಳೆ ಹರಿದಾಡಿತ್ತು. ಆಂದ್ರೆ ಸಂಸಾರದಲ್ಲಿ ಅನ್ಯೋನ್ಯ ವಾಗಿರುವ ದಂಪತಿ. ಹಾಡಿನ ವಿಚಾರಕ್ಕೆ ಬೇಸರಗೊಂಡಿದ್ದಾರೆಂದು ತಿಳಿದು ಬಂದಿದೆ.

ಗಂಡ ಹರಿಕೃಷ್ಣ ಸಂಯೋಜನೆಯಲ್ಲಿ ಈಗಾಗಲ್ಲೇ ಹಲವು ಹಾಡುಗಳನ್ನು ಹಾಡಿರುವ ವಾಣಿ ಹರಿಕೃಷ್ಣ ಅವರಿಗೆ ಈಗ ಗಂಡನೇ ತಮ್ಮ ಹಾದಿಗೆ ತೊಡಕಾಗಿದ್ದಾರಾ ಎಂಬ ಅನುಮಾನ ಮೂಡಿಸಿದೆ. ನಿಮಗೆ ಗೊತ್ತಿರುವಂತೆ ಕುರುಕ್ಷೇತ್ರ ಚಿತ್ರದ ಹಾಡುಗಳು ಒಂದೊಂದಾಗಿ ರಿಲೀಸ್ ಆಗ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಟ್ರೆಂಟ್ ಕ್ರಿಯೇಟ್ ಆಗ್ತಿದೆ. ಇನ್ನು ದುರ್ಯೋಧನನ ಆಗಮನಕ್ಕಾಗಿ ಕಾದುಕುಳಿತಿರುವ ಅಭಿಮಾನಿಗಳು ಹಾಡುಗಳನ್ನು ಬಿಟ್ಟು ಬಿಡದೇ ಕೇಳ್ತಿದ್ದಾರೆ. ಇಷ್ಟೇಲ್ಲಾ ನಿರೀಕ್ಷೆ ಕ್ರಿಯೇಟ್ ಮಾಡ್ತಿರುವ ಜೊತೆಗೆ ಪಂಚ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗ್ತಿರುವ ಚಿತ್ರದಲ್ಲಿ ವಾಣಿ ಅವರ ಕಂಠದಲ್ಲಿ ಒಂದು ಹಾಡನ್ನು ಹಾಡಿಸಲಾಗಿತ್ತು. ಅದೇ ವಾಣಿ ನೋವಿಗೆ ಕಾರವಾಗಿದೆ. ಆದರೆ, ಅದೇ ಏನಾಯ್ತೋ ಏನೋ ಇದೀಗ ವಾಣಿ ಹಾಡಿದ ಹಾಡು ಇದೀಗ ಅನುರಾಧ ಭಟ್ ಧ್ವನಿಯಾಸಿದ್ದಾರೆ.

ತಮ್ಮ ಗಂಡನ ಚಿತ್ರಗಳಿಂದ್ಲೇ ಈರೀತಿ ನೋವು ಉಂಟಾಗುತ್ತಿರುವುದು ವಾಣಿಯ ಬೇಸರಕ್ಕೆ ಕಾರಣವಾಗಿದೆ. ಟ್ವೀಟ್ ಮಾಡಲು ಕಾರಣವಾಗಿದೆ. ಚಿತ್ರರಂಗದಲ್ಲಿ ಒಬ್ಬರ ಅವಕಾಶವನ್ನು ಇನ್ನೊಬ್ಬರು ಕಿತ್ತುಕೊಳ್ಳುವುದು ಸಾಮಾನ್ಯ ಆದ್ರೆ. ವಾಣಿಯ ಪಾಲಿನಲ್ಲಿ ಆಗಲ್ಲ. ಬಂದ ಅವಕಾಶವನ್ನು ಬಳಸಿಕೊಂಡ್ರು. ಅದರಿಂದ ಫಲ ಸಿಗದೆ ನೋವು ಕೋಡ್ತಿರೋದು ಸರಿಸಿಕೊಳ್ಳಲಾಗ್ತಿಲ್ಲ.. ಇನ್ನು ಇದೇ ೧೫ದಕ್ಕೆ ರಿಲೀಸ್ ಆಗ್ತಿರುವ ರಾಂಧವ ಚಿತ್ರದ ಬಗ್ಗೆ ವಾಣಿ ಬೇಸರ ವ್ಯಕ್ತಪಡಿಸಿದ್ದಾರೆ. ಸುನೀಲ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು. ಪೌರಾಣಿಕ ಚಿತ್ರದಲ್ಲಿ ವಾಣಿ ಹಾಡು ಮಾಯವಾಗಿರೋದಕ್ಕೆ ಕಾರಣ ಏನೇಂದು ಈ ಬಗ್ಗೆ ಸುನೀಲ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು ವಾಣಿ ಹಾಡಿರುವ ಹಾಡು ಈಗೆ ಕೈ ಬಿಡ್ತಿರುವುದು ಇದೇ ಮೊದಲೇನಲ್ಲ.. ಕುರುಕ್ಷೇತ್ರ ದೊಡ್ಡ ಸಿನಿಮಾ, ಚಿತ್ರರಂಗದಲ್ಲಿ ಒಬ್ಬರ ಅವಕಾಶವನ್ನು ಒಬ್ಬರು ಕುತ್ತುಕೊಳ್ಳುವ್ದುದು ಸಾಮಾನ್ಯ. ಆದೇ ಗಂಡನೇ ಈ ರೀತಿ ಮಾಡಿರುವದು ಅಚ್ಚರಿ ಜೊತೆ ಹಲವು ಅನುಮಾನ ಹುಟ್ಟು ಹಾಕಿದೆ. ಖ್ಯಾತ ಸಂಗೀತಗಾರರೊಬ್ಬರ ಮೊಮ್ಮಗಳಿಗೆ ಆಗಿರುವ ಈ ಅನುಭವ ಚಿತ್ರರಂಗದಲ್ಲಿ ಯಾವುದೇ ಪ್ರತಿಭೆಗೆ ಮುಂದಾಗಬಾರದು ಎಂಬುದು ಅಭಿಮಾನಿಗಳ ಕೋರಿಕೆಯಾಗಿದೆ.

LEAVE A REPLY

Please enter your comment!
Please enter your name here