Home Crime ಹಸುಗೂಸಿನ ಕೈ ಬ್ಯಾಂಡೇಜ್ ಕತ್ತರಿಸಲು ಹೋಗಿ ಬೆರಳನ್ನೇ ಕಟ್ ಮಾಡಿದ ಬೇಜವಾಬ್ದಾರಿ ವೈದ್ಯ ಮಹಾಷಯ..!

ಹಸುಗೂಸಿನ ಕೈ ಬ್ಯಾಂಡೇಜ್ ಕತ್ತರಿಸಲು ಹೋಗಿ ಬೆರಳನ್ನೇ ಕಟ್ ಮಾಡಿದ ಬೇಜವಾಬ್ದಾರಿ ವೈದ್ಯ ಮಹಾಷಯ..!

608
0
SHARE

ವೈದ್ಯೋ ನಾರಾಯಣ ಹರಿ ಅನ್ನೋ ಮಾತಿದೆ. ಆದ್ರೆ ಇಲ್ಲೋರ್ವ ವೈದ್ಯನೋರ್ವನ ಬೇಜವಾಬ್ದಾರಿತನದಿಂದ ಮೂರು ತಿಂಗಳ ಹಸುಗೂಸಿನ ಬೆರಳು ತುಂಡಾಗಿದೆ. ಇಂತಹದೊಂದು ಘಟನೆಗೆ ಸಾಕ್ಷಿಯಾಗಿರೋದು ಕುಂದಾನಗರಿ ಬೆಳಗಾವಿ.

ಬೆಳಗಾವಿ ನಗರದ ಖಡೇಬಝಾರನಲ್ಲಿರೋ ಬೆಳಗಾಂ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಬಾಬಣ್ಣ ಹುಕ್ಕೇರಿ ಎಂಬ ವೈದ್ಯ ಮಹಾಶಯ ಮಗುವಿನ ಕೈಗೆ ಹಾಕಿದ್ದ ಸಲೈನ್ ಬಾಂಡೇಜ್ ತೆಗೆಯುವಾಗ ಕತ್ತರಿಯಿಂದ ಮಗುವಿನ ಕಿರುಬೆರಳು ಕತ್ತರಿಸಿದ್ದಾನೆ.

ಕಿತ್ತೂರು ಮೂಲದ ೩ ತಿಂಗಳ ಮಗುವನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕ್ಕಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊನ್ನೆ ಮಗುವನ್ನ ಡಿಸ್ಚಾರ್ಜ್ ಮಾಡುವಾಗ ಈ ವೈದ್ಯ ಮಹಾಶಯನ ನಿರ್ಲಕ್ಷದಿಂದ ಮಗುವಿನ ಬೆರಳು ಕಟ್ ಆಗಿದೆ.

ನೋವು ತಾಳಲಾರದೇ ಮಗು ಬಿಕ್ಕಿ ಬಿಕ್ಕಿ ಅಳುತ್ತಿದ್ದುದ್ದನ್ನ ನೋಡಿದ ವೈದ್ಯ ತುಂಡಾದ ಬೆರಳು ಜೋಡಿಸಲು ಹರಸಾಹಸ ಪಟ್ಟಿದ್ದಾನೆ. ಸಹಜವಾಗಿಯೇ ಇದರಿಂದ ಕೆರಳಿದ ಪೋಷಕರು ವೈದ್ಯನ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಖಡೇಬಝಾರ ಪೋಲಿಸ್ ಠಾಣೆ ಮೇಟ್ಟಿಲೇರಿದ್ದಾರೆ.

LEAVE A REPLY

Please enter your comment!
Please enter your name here