Home Crime ಹಸುವಿನ ಗುಪ್ತಾಂಗಕ್ಕೆ ಮಧ್ಯದ ಬಾಟಲಿಯಿಂದ ಚುಚ್ಚಿದ ದುಷ್ಕರ್ಮಿಗಳು..!

ಹಸುವಿನ ಗುಪ್ತಾಂಗಕ್ಕೆ ಮಧ್ಯದ ಬಾಟಲಿಯಿಂದ ಚುಚ್ಚಿದ ದುಷ್ಕರ್ಮಿಗಳು..!

705
0
SHARE

ಮದ್ಯದ ಅಮಲಿನಲ್ಲಿ ದುಷ್ಕರ್ಮಿಗಳು ಕೊಟ್ಟಿಗೆಯಲ್ಲಿದ್ದ ಹಸುವನ್ನು ನಿರ್ಜನ ಪ್ರದೇಶದಲ್ಲಿದ್ದ ನಿರ್ಮಾಣ ಹಂತದ ಮನೆಯಲ್ಲಿ ಕೂಡಿ ಹಾಕಿ, ಕಾಲುಗಳನ್ನ ಕಟ್ಟಿ, ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ, ಸಾಯಿಸಿರೋ ಅಮಾನವೀಯ ಘಟನೆ ಕೆ.ಆರ್. ಪುರಂ ಠಾಣಾ ವ್ಯಾಪ್ತಿಯ ಭಟ್ಟರಹಳ್ಳಿಯಲ್ಲಿ ನಡೆದಿದೆ.

ಪ್ರತಿದಿನ ರಾತ್ರಿ ಸಮಯದಲ್ಲಿ ಅನೇಕ ಪುಂಡ ಪೋಕರಿಗಳು ಬೀಡಿ, ಸಿಗರೇಟ್, ಮದ್ಯ, ಗಾಂಜಾ ಸೇವಿಸಲು ಈ ಮನೆಗೆ ಬರುತ್ತಾರೆ. ಮದ್ಯದ ಅಮಲಿನಲ್ಲಿದ್ದವರೇ ಇಂತಹ ಕೃತ್ಯ ಮಾಡಿರುವ ಶಂಕೆ ಇದೆ. ಹಸುವಿನ ಕಾಲುಗಳನ್ನು ಕಟ್ಟಿ, ಮದ್ಯದ ಬಾಟಲಿಯಿಂದ ಎಲ್ಲೆಂದರಲ್ಲಿ ತಿವಿದು, ಭೀಕರವಾಗಿ ಸಾಯಿಸಿದ್ದಾರೆ.

ಇನ್ನು ನಾರಾಯಣಪ್ಪ ಎಂಬುವರಿಗೆ ಈ ಹಸು ಸೇರಿದ್ದು, ಇದೇ ಹಸುವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಹಾಲು ಮಾರಿ ಜೀವನದ ಬಂಡಿ ಸಾಗಿಸುತ್ತಿದ್ದ ಬಡಕುಟುಂಬಕ್ಕೆ, ಮುಂದಿನ ಜೀವನ ನಿರ್ವಹಣೆಗೆ ಕಷ್ಟದಾಯಕವಾಗಿದೆ.

LEAVE A REPLY

Please enter your comment!
Please enter your name here