ಎಡ್ಡಿ ಆರ್ಯ ನಿರ್ದೇಶನದಲ್ಲಿ ಬರ್ತಿರುವ ಈ ಸಿನಿಮಾದ ಕಥೆ, ರಷ್ಯಾದಲ್ಲಾದ ಉಲ್ಕಾಪಾತದ ಸುತ್ತ ಸುತ್ತಲಿದೆ. ಸದ್ಯ ಬಿಡುಗಡೆಯಾಗಿರುವ ಮೊದಲ ಟ್ರೇಲರ್ನಲ್ಲಿ ಸಾಕಷ್ಟು ಅಂಶಗಳು ಅನಾವರಣವಾಗಿದೆ. ಇಂಟ್ರೆಸ್ಟಿಂಗಾಗಿ ಮೂಡಿಬಂದಿರುವ ಜೊತೆಗೆ ನೋವಿನ ಆಕ್ರಂದನವಿದೆ. ದೇಶದ ಮಿಲಿಟರಿ ಪಡೆಯ ಆವಿಷ್ಕಾರದ ವಿಫಲತೆಗೆ ತುತ್ತಾದ ಝಲಕ್ ಕೂಡ ಪುಟ್ಟ ಟ್ರೇಲರ್ನಲ್ಲಿ ಕಟ್ಟಿಕೊಟ್ಟಿದೆ ಚಿತ್ರತಂಡ.
ಸುದೀಪ. ಅಭಿನಯ ಚಕ್ರವರ್ತಿ. ತಮ್ಮ ಅಭಿನಯದಿಂದ ಕೊಟ್ಯಂತರ ಅಭಿಮಾನಿ ಬಳಗ ಹೊಂದಿರುವ ದೀಪುವಿನ ಹಾಲಿವುಡ್ನ ರೈಷನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎಸ್, ರೈಷನ್ ಸುದೀಪ ಮಾಡ್ತಿರುವ ಮೊದಲ ಹಾಲಿವುಡ್ ಪ್ರಯತ್ನವಿರುವ ಸಿನಿಮಾ. ಈಗಾಗಲ್ಲೇ ಸುದೀಪ್ ಚಿತ್ರಕ್ಕಾಗಿ ಫೋಟೋ ಶೂಟ್ ಮುಗಿಸಿದ್ದು, ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ನ್ನು ಚಿತ್ರತಂಡ ರಿವೀಲ್ ಮಾಡಿತ್ತು.
ಸುದೀಪ್ ಲುಕ್ ನೋಡಿದ ಸುದೀಪ್ ಅಭಿಮಾನಿಗಳಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿತ್ತು. ಆದ್ರೇ ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೇಲರ್ನಲ್ಲಿ ಸುದೀಪ್ ದರ್ಶನ ವಾಗಿಲ್ಲ. ಹಾಗಾಗಿನೇ ಅಭಿಮಾನಿಗಳಲ್ಲಿ ಆತಂಕಗೊಂಡಿದ್ದಾರೆ. ಹಾಲಿವುಡ್ಗೆ ಸುದೀಪ್ ಹಾರ್ತಿದ್ದಾರಾ, ಇಲ್ಲಾ ಅನ್ನುವ ಸಂಶಯವನ್ನು ವ್ಯಕ್ತಪಡಿಸ್ತಿದ್ದಾರೆ.ಇಂತಹ ಆತಂಕ ಇನ್ನೇನು ಸುದೀಪ್ ಫ್ಯಾನ್ಸ್ಗಳಲ್ಲಿ ಹೆಚ್ಚಾಗ್ತಿರುವಾಗ್ಲೇ ಎಡ್ಡಿ ಆರ್ಯನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ವೊಂದನ್ನು ನೀಡಿದ್ದಾರೆ.
ಸುದೀಪ್ ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿರುವ ಎಡ್ಡಿ. ಅಭಿನಯ ಚಕ್ರವರ್ತಿ ಅಭಿನಯಕ್ಕೆ ಫಿದಾ ಆಗಿದ್ದು, ಎಡ್ಡಿ ಖುದ್ದು ಸುದೀಪ್ ಫ್ಯಾನ್ಸ್ಗಳಿಗಾಗಿ ಹೊಸ ವರ್ಷನ್ನ್ನು ಡಿಸೆಂಬರ್ ಒಳಗೆ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ. ಚಿತ್ರದ ಟ್ರೇಲರ್ಗೆ ನೀಡಿರುವ ರೆಸ್ಪಾನ್ಸ್ಗೆ ಥ್ಯಾಕ್ಸ್ ಹೇಳಿದ್ದಾರೆ.ಇದಕ್ಕಿಂತ ಇನ್ನೇನ್ ಬೇಕು ಸುದೀಪಿಯನ್ಸ್ ಸಂಭ್ರಮ ಪಡಲು.
ಕನ್ನಡ ನಟನೊಬ್ಬನ ಈ ಸಾಧನೆ ಕಂಡು, ಅದ್ರಲ್ಲೂ ತಮ್ಮ ನೆಚ್ಚಿನ ನಟನ ಈ ದಿಗ್ವಿಜಯ ಕಂಡು, ಕುಣಿದು ಕುಪ್ಪಳಿಸುತ್ತಿರುವ ಸುದೀಪ ಭಕ್ತರ ಖುಷಿಗೆ ಸದ್ಯ ಮಿತಿನೇ ಇಲ್ಲದಂತಾಗಿದೆ.
ಉಲ್ಕಾಪಾತದ ಸುತ್ತ ಸಿನಿಮಾ ಸುತ್ತುವದರಿಂದ, ಬಹುದೊಡ್ಡ ತಾರಾಬಳಗ ಸಿನಿಮಾದಲ್ಲಿರಲಿದೆ. ಇನ್ನು ಸುದೀಪ ಚಿತ್ರದಲ್ಲಿ ಆರ್ಮಿ ಮಾರ್ಷಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕೆಲ ತಿಂಗಳ ಹಿಂದಷ್ಟೇ ರೈಸನ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಕಿಚ್ಚ ಸುದೀಪ್ ಮಿಂಚಿದ್ರು.
ಮೊದಲ ಹಾಲಿವುಡ್ ಸಿನಿಮಾದಲ್ಲಿ ಅಮೇರಿಕ ಮಿಲಿಟರಿ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ರು. ಸುದೀಪ್ ಮೊದಲ ನೋಟದಲ್ಲೇ ಆಕರ್ಷಕ ಖಡಕ್ ಲುಕ್ನಲ್ಲಿ ದ ರ್ಶನ ಕೊಟ್ಟಿದ್ರು.ಸದ್ಯ ಕಿಚ್ಚ ಫಸ್ಟ್ ಲುಕ್ನಲ್ಲೇ ಕಮಾಲ್ ಮಾಡಿದ್ರು. ಇನ್ನು ನಿರ್ದೇಶಕರು ಸುದೀಪ್ಗಾಗಿನೇ ಸಪ್ರೈಟ್ ಟ್ರೇಲರ್ರನ್ನು ಸದ್ಯದಲ್ಲೇ ರಿಲೀಸ್ ಮಾಡುವುದಾಗಿ ಹೇಳಿರೋದು ಸುದೀಪೀಯನ್ಸ್ ಸಂತಸಕ್ಕೆ ಕಾರಣವಾಗಿದೆ.
ಅದ್ರಲ್ಲಿ ಸುದೀಪ್ ಲುಕ್ ಇನ್ನಷ್ಟು ಕಣ್ಣು ಕುಕ್ಕೋದ್ರಲ್ಲಿ ಡೌಟಿಲ್ಲ.ಅಂದ ಹಾಗೇ ಎಡ್ಡಿಯ ಈ ರೈಷನ್ ಸಿನಿಮಾದ ಚಿತ್ರೀಕರಣದಲ್ಲಿ ಸುದೀಪ ಈಗಾಗಲ್ಲೇ ಭಾಗಿಯಾಗಿದ್ದಾರೆನ್ನಲಾಗ್ತಿದ್ದು, ಇನ್ನುಳಿದ ವಿಚಾರವನ್ನ ಸದ್ಯದಲ್ಲೇ ಶೇರ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದ್ದೆ. ಈ ಚಿತ್ರಕ್ಕೆ ಫಿಲಿಪ್. ಜೆ. ಪಡ್ಡೂಲ್ ಮ್ಯೂಸಿಕ್ ನೀಡಿದ್ದು, ಸೌಂಡ್ ಟ್ರ್ಯಾಕ್ ಕೂಡ ರಿಲೀಸ್ ಆಗಿದೆ.
ಅದೇನೆ ಇದ್ರೂ ಸದ್ಯ ಸ್ಯಾಂಡಲ್ವುಡ್ನಿಂದ ಸೀದಾ ಹಾಲಿವುಡ್ನಲ್ಲಿ ಕಮಾಲ್ ಮಾಡ್ತಿರುವ ಕನ್ನಡದ ಅಭಿನಯ ಚಕ್ರವರ್ತಿ, ವಿದೇಶಿ ನೆಲದಲ್ಲೂ ತಮ್ಮ ಕೀರ್ತಿ ಪತಾಕೆಯನ್ನ ಹಾರಿಸಲಿ ಅನ್ನೋದೆ ಸಮಸ್ತ ಸುದೀಪ ಅಭಿಮಾನಿಗಳ ಆಶಯವಾಗಿದೆ.