Home Crime ಹಾಸನದಲ್ಲಿ ಸರ್ಕಾರಿ ನೌಕರನ ಮೇಲೂ #Metoo ಆರೋಪ ಮಾಡಿದ ಮಹಿಳೆ..!? ಆರೋಪದ ಹಿಂದೆ ಹನಿಟ್ರಾಪ್ ಕೈವಾಡದ...

ಹಾಸನದಲ್ಲಿ ಸರ್ಕಾರಿ ನೌಕರನ ಮೇಲೂ #Metoo ಆರೋಪ ಮಾಡಿದ ಮಹಿಳೆ..!? ಆರೋಪದ ಹಿಂದೆ ಹನಿಟ್ರಾಪ್ ಕೈವಾಡದ ಶಂಕೆ..!?

1871
0
SHARE

ಮೀ ಟೂ ಆರೋಪ ಇತ್ತೀಚಿಗೆ ಎಲ್ಲೆಡೆ ಸಮೂಹ ಸನ್ನಿಯಂತೆ ವ್ಯಾಪಿಸಿದೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಹಾಸನದ ಮಹಿಳೆಯೊಬ್ಬಳು, 60 ಆಸು ಪಾಸಿನ ಸರಕಾರಿ ನೌಕರನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ.ಕೃಷ್ಣೇಗೌಡ ಎಂಬಾತನಿಂದ ತನಗೆ ಆಗಿದೆ ಎನ್ನಲಾದ ಅನ್ಯಾಯ ಮತ್ತು ಕಿರುಕುಳ ಕುರಿತ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ.

ಹಾಸನ ಜಿಲ್ಲೆಯ ಚನ್ನಪಟ್ಟಣ ಮೂಲದ ವಿವಾಹಿತ ಮಹಿಳೆ ಅದೇ ಬಡಾವಣೆಯ ಸರ್ಕಾರಿ ನೌಕರ ಕೃಷ್ಣೇಗೌಡ ಎಂಬುವವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಮಹಿಳೆ ಮಾಡಿದ ಈ ಆರೋಪ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು. ಆದ್ರೆ ಮೀ ಟೂ ಆರೋಪ ಮಾಡಿರುವ ಮಹಿಳೆ, ಕನ್ನಡಪರ ಸಂಘಟನೆ ಮುಖಂಡ ಚೇತನ್ ಹಾಗೂ ಇತರೆ ಇಬ್ಬರ ಸಹಕಾರ ಪಡೆದು ಹಣ ಮತ್ತು ಚಿನ್ನಕ್ಕಾಗಿ ಇಷ್ಟೆಲ್ಲಾ ಡ್ರಾಮ ಮಾಡಿದ್ದಾಳೆ ಎಂಬ ಅನುಮಾನ ಹುಟ್ಟುಹಾಕಿದೆ.

ಏಕೆಂದರೆ ಮುಖಕ್ಕೆ ಬಟ್ಟೆಕಟ್ಟಿಕೊಂಡು ಮಹಿಳೆ ಈಗ ಮಾಡುತ್ತಿರುವ ಮೀ ಟೂ ಆರೋಪದ ಘಟನೆ ನಡೆದು ಬರೋಬ್ಬರಿ 5 ತಿಂಗಳು ಕಳೆದಿವೆ. ಅಲ್ಲಿಂದ ಇಲ್ಲೀವರೆಗೂ ಆಕೆ ಲೈಂಗಿಕ ದೌರ್ಜನ್ಯದ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಇನ್ನೂ ಮಹಿಳೆ ಮಾಡಿದ ಆರೋಪದ ಹಿಂದೆ ಹನಿಟ್ರ್ಯಾಪ್ ದಂಧೆಯ ಕೈವಾಡದ ಬಲವಾದ ಶಂಕೆ ಮೂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ನಡುವೆ ಕೆಲ ದಿನಗಳ ಹಿಂದೆ ಕೃಷ್ಣೇಗೌಡ ಪೊಲೀಸ್ ಠಾಣೆಗೆ ತೆರಳಿ ಚೇತನ್ ಮತ್ತು ಇತರರು ನನ್ನನ್ನು ಹೆದರಿಸಿ ನನ್ನ ಮೈ ಮೇಲಿದ್ದ ಸುಮಾರು 52 ಗ್ರಾಂ ಚಿನ್ನ ಮತ್ತು 7 ಸಾವಿರ ಹಣ ಕಿತ್ತಿದ್ದಾರೆ ಎಂದು ಲಿಖಿತ ದೂರು ನೀಡಿದ್ದರು.ಇದಾದ ಬಳಿಕ ತಾವು ಬಜಾವ್ ಆಗಲು, ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನನಗೆ ರಾತ್ರಿ ವೇಳೆ ಸ್ಪಷ್ಟವಾಗಿ ಕಣ್ಣು ಕಾಣುವುದಿಲ್ಲ. ಆದರೂ ಖಾಸಗಿ ಕಾಲೇಜು ಬಳಿಗೆ ಕರೆಸಿಕೊಂಡು ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ರು.

ನಾವು ಹೇಳಿದಂತೆ ಹೇಳು ಎಂದು ವೀಡಿಯೋ ಸಹ ಮಾಡಿಕೊಂಡರು. ಒಂದು ವೇಳೆ ನಾನು ಆಕೆಗೆ ಲೈಂಗಿಕ ದೌರ್ಜನ್ಯ ನೀಡಿದ್ರೆ ಅಂದೇ ಏಕೆ ಪೊಲೀಸರಿಗೆ ದೂರು ನೀಡಲಿಲ್ಲ. ಇದೆಲ್ಲಾ ಹಣಕ್ಕಾಗಿ ನಡೆದಿರುವ ವ್ಯವಸ್ಥಿತ ಪಿತೂರಿ ಎಂದು ಕೃಷ್ಣೇಗೌಡ ಪ್ರತ್ಯಾರೋಪ ಮಾಡಿದ್ದಾರೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಪ್ರಕಾಶ್ ಗೌಡ, ತನಿಖೆಗೆ ಆದೇಶ ಮಾಡಿದ್ದಾರೆ.

ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ. ಆದ್ರೂ ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಲೈಂಗಿಕ ದೌರ್ಜನ್ಯದಂಥ ಪ್ರಕರಣ ಗಂಭೀರವಾಗಿದ್ದು, ನೇರವಾಗಿ ದೂರು ನೀಡಿ ಎಂದು ಮನವಿ ಮಾಡಿದ್ದಾರೆ.ಇಡೀ ಪ್ರಕರಣದ ರೂವಾರಿ ಎನ್ನಲಾಗಿರುವ ಕನ್ನಡಪರ ಸಂಘಟನೆ ಮುಖಂಡ ಚೇತನ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಹಣ ಮಾಡಲು ವ್ಯವಸ್ಥಿತ ಜಾಲದ ಕೈವಾಡ ಎಂಬ ಶಂಕೆ ಮೂಡಿದ್ದು, ಪೊಲೀಸ್ ತನಿಖೆಯ ನಂತರ ಸತ್ಯಾಸತ್ಯತೆ ಬಯಲಾಗಬೇಕಿದೆ.

LEAVE A REPLY

Please enter your comment!
Please enter your name here