Home District ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ಇಂದು ಕೊನೆ ದಿನ..!ತಾಯಿಯ ದರ್ಶನ ಪಡೆದು ಪುನೀತರಾದ ಚಿತ್ರರಂಗದ ಗಣ್ಯರು..!

ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ಇಂದು ಕೊನೆ ದಿನ..!ತಾಯಿಯ ದರ್ಶನ ಪಡೆದು ಪುನೀತರಾದ ಚಿತ್ರರಂಗದ ಗಣ್ಯರು..!

494
0
SHARE

ನವೆಂಬರ್ 1 ರಿಂದ ಆರಂಭವಾಗಿರುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಾಳೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ವಿವಿಧೆಡೆಗಳಿಂದ ಭಕ್ತರ ದಂಡೇ ಆಗಮಿಸುತ್ತಿದೆ. ಅಹೋರಾತ್ರಿವರೆಗೂ ದೇವಿಯ ದರ್ಶನಕ್ಕೆ ಅವಕಾಶವಿದ್ದು, ಶುಕ್ರವಾರ ಮಧ್ಯಾಹ್ನ ವಿಶ್ವರೂಪ ದರ್ಶನ ನಂತರ 12.30ಕ್ಕೆ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ.

ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಕೆಲವೇ ಗಂಟೆಗಳಲ್ಲಿ ವಿಧ್ಯುಕ್ತವಾಗಿ ತೆರೆ ಬೀಳಲಿದೆ. ದೇವಿಯ ಸಾರ್ವಜನಿಕ ದರ್ಶನಕ್ಕೆ ಕಡೆಯ ದಿನವಾದ ಇಂದು, ಬೆಳಗ್ಗೆಯಿಂದಲೇ ತಂಡೋಪ ತಂಡವಾಗಿ ಭಕ್ತರು ಆಗಮಿಸಿ ಹಾಸನಾಂಬೆಯ ದರ್ಶನ ಪಡೆದರು.ಹೀಗಾಗಿ ಕಡೇ ದಿನ ಸರತಿ ಸಾಲು ಹಾಗೂ ದೇವಾಲಯ ಮುಂಭಾಗ ಭಕ್ತರ ನೂಕು ನುಗ್ಗಲು ಉಂಟಾಗಿ, ಗುಂಪು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು.

ಕಡೆಯ ದಿನವಾದ ಇಂದು ಚಲನಚಿತ್ರ ನಿರ್ದೇಶಕರಾದ ನಿರ್ದೇಶಕರಾದ ತರುಣ್ ಸುಧೀರ್, ಎ.ಪಿ.ಅರ್ಜುನ್, ನಿರ್ಮಾಪಕ ಕೆ.ಮಂಜು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ದೇವಿಯ ದರ್ಶನ ಪಡೆದು ಸಂಭ್ರಮ ಪಟ್ಟರು.ರಜಾ ದಿನವಾದ್ದರಿಂದ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಹೀಗಾಗಿ ದೇವಾಲಯ ಪ್ರಾಂಗಣ ಭಕ್ತರ ಜಾತ್ರೆಯಿಂದ ತುಂಬಿ ತುಳುಕುತ್ತಿತ್ತು.

ಸರತಿ ಸಾಲುಗಳು ಭರ್ತಿಯಾಗಿದ್ದವು. ಮೊದಲ ಬಾರಿಗೆ ದೇವಿಯ ದರ್ಶನ ಪಡೆದ ನಿರ್ಮಾಪಕ ಕೆ.ಮಂಜು ಸಾಕಷ್ಟು ಖುಷಿ ಪಟ್ಟರಲ್ಲದೆ ನಮ್ಮ ಪ್ರತಿಯೊಂದು ಕೆಲಸಕ್ಕೂ ಒತ್ತಾಸೆಯಾಗಿರು ತಾಯೆ ಎಂದು ಬೇಡಿಕೊಂಡಿದ್ದೇವೆ ಎಂದರು.ಮತ್ತೊಬ್ಬ ನಿರ್ದೇಶಕ ಅರ್ಜುನ್ ಸಹ ಮೊದಲ ಬಾರಿಗೆ ಹಾಸನಾಂಬೆ ದರ್ಶನ ಪಡೆದು ತಮಗೆ ಹಾಗೂ ನಾಡಿನ ಜನಕ್ಕೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರು.

ಮೊದಲ ಬಾರಿಗೆ ದೇವಿ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೆ, ಇದೊಂದು ರೋಮಾಂಚನದ ಕ್ಷಣ ಎಂದರು.ಶುಕ್ರವಾರ ಮಧ್ಯಾಹ್ನ ದೇವಿಯ ವಿಶ್ವರೂಪ ದರ್ಶನದ ನಂತರ 12.30 ರ ಸುಮಾರಿಗೆ ದೇವಿಯ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ಮುಚ್ಚಲಿದ್ದು, ಈ ಬಾರಿಯ ದರ್ಶನೋತ್ಸವಕೆ ತೆರೆ ಬೀಳಲಿದೆ.

LEAVE A REPLY

Please enter your comment!
Please enter your name here