Home District ಹಾಸನ ಲೋಕ ಸಂಗ್ರಾಮ:ದೊಡ್ಡ ಗೌಡರ ಕೋಟೆ ಭೇದಿಸಲು ಕಮಲ ಪಡೆ ರೂಪಿಸುತ್ತಿದೆ ರಣತಂತ್ರ…? ಪ್ರಜ್ವಲ್‌ಗೆ ಸಪೋರ್ಟ್...

ಹಾಸನ ಲೋಕ ಸಂಗ್ರಾಮ:ದೊಡ್ಡ ಗೌಡರ ಕೋಟೆ ಭೇದಿಸಲು ಕಮಲ ಪಡೆ ರೂಪಿಸುತ್ತಿದೆ ರಣತಂತ್ರ…? ಪ್ರಜ್ವಲ್‌ಗೆ ಸಪೋರ್ಟ್ ಮಾಡ್ತಾರಾ ಕೈ ನಾಯಕರು..? ದಳಪತಿಗಳ ವಿರುದ್ಧ ಕೆಂಡ ಉಗುಳುತ್ತ ಕಾದು ನೋಡುತ್ತಿದೆ ಕಮಲ ಪಾಳಯ..!

384
0
SHARE

ಹಾಸನದಲ್ಲಿ ಹೇಗಿದೆ ಈ ಬಾರಿ ಬಿಜೆಪಿ ಬಲಾಬಲ…?ದೇವೇಗೌಡರ ಕುಟುಂಬದ ಗೆಲುವಿನ ನಾಗಲೋಟಕ್ಕೆ ಬೀಳುತ್ತಾ ಬ್ರೇಕ್.ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಕೈ ಪಾಳೆಯ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಜಿಲ್ಲೆಯ ಕಮಲ ಪಾಳೆಯ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಜಿಲ್ಲಾ ಕೇಂದ್ರ ಹಾಸನದಲ್ಲಿ ಗೆದ್ದಿರುವ ಕಮಲ ಶಾಸಕ ಅವರನ್ನೇ ಈ ಬಾರಿಯ ಲೋಕಸಭೆ ಚುನಾವಣೆಗೂ ಅಭ್ಯರ್ಥಿ ಮಾಡುವ ಚರ್ಚೆ ನಡೆದಿದೆ ಎನ್ನಲಾಗಿದೆ. ಮತ್ತೊಂದೆಡೆ ದೇವೇಗೌಡರ ತವರು ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳಿಗೆ ಮಾಸ್ಟರ್ ಸ್ಟ್ರೋಕ್ ಕೊಡೋಕೆ ಸಜ್ಜಾಗಿರೋ ಕಮಲ ಪಾಳೆಯ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅಥವಾ ನಿವೃತ್ತ ಸೇನಾಧಿಕಾರಿ ಕ್ಯಾಫ್ಟನ್ ಗೋಪಿನಾಥ್ ಅವರನ್ನು ಕಣಕ್ಕಳಿಸುವ ಪ್ಲಾನ್ ಮಾಡಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ದೊಡ್ಡದಾಗಿಯೇ ಕೇಳಿ ಬರುತ್ತಿದೆ.

ಏತನ್ಮಧ್ಯೆ ದೇವೇಗೌಡರ ಕುಟುಂಬದ ಬದ್ಧ ವೈರುಗಳಾಗಿರುವ ಮಾಜಿ ಸಚಿವರಾದ ಕಾಂಗ್ರೆಸ್ ನ ಎ.ಮಂಜು ಅಥವಾ ಬಿ.ಶಿವರಾಂ ಗೆ ಗಾಳ ಹಾಕೋದು. ಅವರು ಒಪ್ಪದೇ ಇದ್ರೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಇಲ್ಲವೇ ಶೋಭಾ ಕರಂದ್ಲಾಜೆ ಅವರನ್ನು ಜಿಲ್ಲೆಗೆ ಕರೆತರುವ ಚರ್ಚೆಯೂ ನಡೆದಿದೆ ಎನ್ನಲಾಗಿದೆ.ಯೆಸ್… ಸದ್ಯಕ್ಕೆ ಹಾಸನ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಗಿರುವ ಮೊದಲ ಪ್ಲಸ್ ಎಂದರೆ ಅದು ಹಾಲಿ ಹಾಸನ ಶಾಸಕ ಪ್ರೀತಂಗೌಡ.. ಪ್ರೀತಂ ಗೌಡ ಹಾಸನ ರಾಜಕೀಯ ಪಡಸಾಲೆಯಲ್ಲಿ ಇತ್ತೀಚೆಗೆ ಚನಾವಣೆಗೆ ಬಂದ ಹೆಸರು. ವಯಸ್ಸಿನ್ನೂ 38 ವರ್ಷ. ಮಾಜಿ ಸಚಿವ ಬಿಜೆಪಿಯ ಸಿಟಿ ರವಿಯವರಿಗೆ ಹತ್ತಿರವಾದ ಪ್ರೀತಂ, ಅವರೆಲ್ಲೇ ಹೋದರೂ ಎಲ್ಲೇ ಇದ್ದರೂ  ಅವರ ಹಿಂದೆಯೇ ಇರುತ್ತಿದ್ದ ಪ್ರೀತಂ ಬರು ಬರುತ್ತಾ ಅವರ ಚುನಾವಣೆಗಳಿಗೆ ತನ್ನ ಜೇಬಿನಿಂದ ಲಕ್ಷ ಲಕ್ಷ ಹಣ ಖರ್ಚು ಮಾಡುವಷ್ಟು ಬೆಳೆದು ನಂತರ ನಿಧಾನವಾಗಿ ರಾಜಕೀಯಕ್ಕೆ ಧುಮುಕಿದ್ರು..

ಹೀಗೆ ರಾಜಕೀಯಕ್ಕೆ ಬಂದ ಪ್ರೀತಂ ಕಣ್ಣು ಬಿದ್ದಿದ್ದು ತಮ್ಮ ಸ್ವಂತ ಜಿಲ್ಲಾ ಕೇಂದ್ರ ಹಾಸನದ ಮೇಲೆ.. ಅಲ್ಪ ಸ್ವಲ್ಪ ಸಮಾಜಸೇವೆ ಮಾಡುತ್ತ ಮುನ್ನಲೆಗೆ ಬಂದು 2018 ರ ವಿಧಾನಸಭಾ ಚುನಾವಣೆಯಲ್ಲಿ ದಳಪತಿಗಳ ಕೋಟೆ ಛಿದ್ರ ಮಾಡಿ ಗೆಲುವಿನ ನಗೆ ಬೀರಿದರು.. ಆ ಮೂಲಕ 1989 ರ ನಂತರ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವಂತೆ ಮಾಡಿ ರಾಜ್ಯದ ಗಮನ ಸೆಳೆದರು. ಆ ಮೂಲಕ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಬಿಜೆಪಿ ಬಾವುಟ ಹಾರುವಂತೆ ಮಾಡಿದರು… ಹಾಗಾಗಿ ಪ್ರೀತಂ ಗೌಡ ಕಮಲ ಪಾಳಯದ ಕನಸಿಗೆ ಮೊದಲ ಖಾತೆ ತೆರೆದು ಬಿಜೆಪಿಗೆ ಬಲ ನೀಡಿದ್ದಾರೆ.. ಆ ಬಲವೇ ಇದೀಗ ಗೌಡರ ಕುಂಟುಂಬದ ವಿರುದ್ಧ ಯಾರನ್ನಾದ್ರೂ ಅಭ್ಯರ್ಥಿಯನ್ನ ಕಣಕ್ಕಿಳಿಸಿ ತೊಡೆ ತಟ್ಟುವಂತೆ ಮಾಡಿದೆ..

ಕ್ಷೇತ್ರ : ಹಾಸನ ಲೋಕಸಭಾ ಕ್ಷೇತ್ರಯಾರ್ ಯಾರ ನಡುವೆ ಪೈಪೋಟಿ : ಬಿಜೆಪಿ ಅಭ್ಯರ್ಥಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ನಡುವೆ..ಕಾಂಗ್ರೆಸ್ – ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ :  ಜೆಡಿಎಸ್ ಮೈತ್ರಿ ಅಭ್ಯರ್ಥಿ;- ಹೆಚ್. ಡಿ.ದೇವೇಗೌಡರು, ಪ್ರಜ್ವಲ್ ರೇವಣ್ಣ,ಬಿಜೆಪಿ : ಪ್ರೀತಂ ಗೌಡ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ , ನಿವೃತ್ತ ಸೇನಾಧಿಕಾರಿ ಕ್ಯಾಫ್ಟನ್ ಗೋಪಿನಾಥ್, ಕಾಂಗ್ರೆಸ್ ನ ಎ.ಮಂಜು ಅಥವಾ ಬಿ.ಶಿವರಾಂ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಶೋಭಾ ಕರಂದ್ಲಾಜೆ..ಎಲ್ಲೆಡೆ ಪ್ರಸಕ್ತ ಲೋಕಸಭೆ ಚುನಾವಣೆ ಸದ್ದು ಜೋರಾಗಿದ್ದರೆ, ರಾಜ್ಯ ರಾಜಕೀಯದ ಶಕ್ತಿ ಕೇಂದ್ರ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಎಂಪಿ ಚುನಾವಣೆಯ ಆಖಾಡ ಗುಪ್ತಗಾಮಿನಿ ಹಾಗೂ ಗೊಂದಲದ ಗೂಡಾಗಿದೆ.

ಇದಕ್ಕೆ ಪ್ರಮುಖ ಕಾರಣ, ಹಾಲಿ ಸಂಸದರೂ ಆಗಿರುವ ದೇವೇಗೌಡರು ಮತ್ತೊಮ್ಮೆ ಸ್ಪರ್ಧೆ ಮಾಡಲು ಮನಸ್ಸು ಮಾಡದೇ ಇರುವುದು. ದೊಡ್ಡಗೌಡರ ಬದಲಿಗೆ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ದಟ್ಟವಾಗಿದ್ದರೂ, ಯುವ ನಾಯಕನ ಹೆಸರು ಅಂತಿಮ ಗೊಂಡಿಲ್ಲ. ಈ ನಡುವೆ ಸಮ್ಮಿಶ್ರ ಸರಕಾರದ ದೋಸ್ತಿ ಪಕ್ಷ ಕಾಂಗ್ರೆಸ್, ಹಾಸನದಿಂದ ಪ್ರಜ್ವಲ್ ಅಭ್ಯರ್ಥಿ ಯಾಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಹಾಸನ ರಾಜಕೀಯ ಕೌತುಕದ ಕಣವಾಗಿ ಮಾರ್ಪಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಹೆಚ್.ಡಿ.ರೇವಣ್ಣ ಅವರ ವಿರುದ್ಧ ಸ್ಪರ್ಧೆ ಮಾಡಿದ್ದ ಬಾಗೂರು ಮಂಜೇಗೌಡ ಅವರಂತೂ, ನಾನೂ ಕೂಡ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ. ಈ ವಿಚಾರದಲ್ಲಿ ನಮ್ಮ ನಾಯಕರು ಕೈಗೊಳ್ಳುವ ತೀರ್ಮಾಣಕ್ಕೆ ನಾವು ಬದ್ಧ.

ಆದ್ರೆ ಹೈಕಮಾಂಡ್ ಒಪ್ಪಿದ್ರೆ ನಾನು ಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧ ಎಂದು ಘೋಷಿಸಿದ್ದಾರೆ. ಇದೂ ಕೂಡ ಪ್ರಜ್ವಲ್ ಗೆ ಮುಳುವಾಗಲಿದೆ. ಈ ನಡುವೆ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ನಮ್ಮನ್ನು ಯಾವುದರಲ್ಲೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಹರಿಹಾಯ್ದಿರುವ ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರು, ರೇವಣ್ಣ ಅವರ ಸರ್ವಾಧಿಕಾರಿ ಧೋರಣೆ ಹೀಗೆ ಮುಂದುವರಿದರೆ, ಲೋಕಸಭೆ ಚುನಾವಣೆಯಲ್ಲಿ ನಾವೇನು ಮಾಡಬೇಕು ಎಂದು ಜಿಲ್ಲೆಗೆ ಭೇಟಿಕೊಡೋ ಸಚಿವರು ಹಾಗೂ ರಾಜ್ಯ ನಾಯಕರ ಮುಂದೆ ಅಸಮಾಧಾನ ಹೊರ ಹಾಕುತ್ತಿದ್ದಾರೆ.ಇದೆಲ್ಲವನ್ನ ತೆರೆ ಮರೆಯಲ್ಲಿ ಸೂಕ್ಮವಾಗಿ ಗಮನಿಸುತ್ತ ರಾಜ್ಯ ರಾಜಕೀಯದ ಶಕ್ತಿ ಕೇಂದ್ರ ಎನಿಸಿಕೊಂಡಿರುವ ಹಾಸನ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಗೌಡರನ್ನ ಕಟ್ಟಿ ಹಾಕಬೇಕು ಅಂತ ಕಮಲಪಾಳಯ ಇನ್ನಿಲ್ಲದ ತಂತ್ರಗಳ ಮೊರೆ ಹೋಗಿದೆ…

ಆರು ಬಾರಿ ಶಾಸಕರಾಗಿ, ನಡುವೆ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ ಗೌಡರು, 1989 ರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಒಂದು ಕಾಲದ ತಮ್ಮ ರಾಜಕೀಯ ಸಂಗಾತಿಯಾಗಿದ್ದ ಜಿ.ಪುಟ್ಟಸ್ವಾಮಿಗೌಡರ ವಿರುದ್ಧ  7836 ಮತಗಳ ಅಂತರದಿಂದ ಪರಾಭವಗೊಂಡ ನಂತರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡೋದನ್ನೇ ನಿಲ್ಲಿಸಿಬಿಟ್ಟರು.
1991 ರಲ್ಲಿ ಪ್ರಥಮ ಬಾರಿಗೆ 10 ನೇ ಲೋಕಸಭೆ ಚುನಾವಣೆಗೆ ತವರು ಜಿಲ್ಲೆಯಿಂದಲೇ ಸ್ಪರ್ಧೆ ಮಾಡಿದ ದೇವೇಗೌಡರು, ಗೆಲುವಿನ ನಗೆ ಬೀರಿದರು. ಅಲ್ಲಿಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಎರಡರಲ್ಲೂ ಪ್ರಥಮ ಸ್ಪರ್ಧೆಯಲ್ಲೇ ಜಯ ಸಾಧಿಸಿದ್ದು ದೊಡ್ಡಗೌಡರ ಸಾಧನೆ. 1998 ರಲ್ಲಿ 2ನೇ ಬಾರಿಗೆ ಕಣಕ್ಕಿಳಿದ ಗೌಡರು, ಆಗಲೂ ವಿಜಯಮಾಲೆಗೆ ಕೊರಳೊಡ್ಡಿದರು. ಆದ್ರೆ 1999 ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋತರು.

ಆಗ 1989 ರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ್ದ, ಜಿ.ಪುಟ್ಟಸ್ವಾಮಿಗೌಡರೇ ಎಂಪಿ ಲೋಕಸಭೆ ಚುನಾವಣೆಯಲ್ಲೂ ಪರಾಜಯದ ರುಚಿ ತೋರಿಸಿದರು.
ಆದರೆ ತವರು ಜಿಲ್ಲೆಯಲ್ಲಿ ಎದುರಾದ ಸೋಲಿನ ಕಹಿಯನ್ನು 2002 ರ ಕನಕಪುರ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ದೇವೇಗೌಡರು ಮರೆತರು. ಅಲ್ಲಿಂದ ಆರಂಭವಾದ ಮಣ್ಣಿನ ಮಗನ ಗೆಲುವಿನ ಜೈತ್ರಯಾತ್ರೆ,  2004, 2009 ಮತ್ತು 2014  ಸತತವಾಗಿ ಮುಂದುವರಿಯಿತು. ಹಾಸನ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಆರಂಭದ 1951, 1957 ಮತ್ತು 1962 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಸಾಧನೆಯ ಮೂಲಕ ಲೋಕಸಭೆಗೆ ಪ್ರವೇಶ ಮಾಡಿದ್ದ ಸಿದ್ಧನಂಜಪ್ಪ ಅವರನ್ನು ಬಿಟ್ಟರೆ, ಆ ದಾಖಲೆ ಮುರಿದ ಕೀರ್ತಿ, ದೇವೇಗೌಡರಿಗೆ ಸಂದಿದೆ. ಹಾಸನ ಜಿಲ್ಲೆ ಹೊಳೆನರಸೀಪುರ ಕ್ಷೇತ್ರದಿಂದ ಒಟ್ಟು 7 ಬಾರಿ ಸ್ಪರ್ಧಿಸಿ 6 ಬಾರಿ ಗೆದ್ದಿದ್ದ ಗೌಡರು, ಲೋಕಸಭೆ ಚುನಾವಣೆಯಲ್ಲೂ ಒಟ್ಟು 7 ಬಾರಿ ಚುನಾವಣೆ ಎದುರಿಸಿ, ಒಟ್ಟಾರೆ 6 ಬಾರಿ ಸಂಸದರಾಗಿ ಆಯ್ಕೆಯಾಗಿರುವುದು ದೇವೇಗೌಡರ ಹೆಗ್ಗಳಿಕೆ.

ಇದು ಈ ಕ್ಷೇತ್ರದ ಜಾತಿ ವಾರು ಅಂಶವಾದ್ರೆ, ಇದೇ 2018 ರ ಪ್ರಕಾರ ಇಲ್ಲಿನ ಮತದಾರರ ಸಂಖ್ಯೆ ಈ ಕೆಳಕಂಡಂತಿದೆ.ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು: ಒಟ್ಟು 14,29,765 .ಪುರುಷರು 7,21, 677 ಲಕ್ಷ.ಮಹಿಳೆಯರು 7,08,053 ಲಕ್ಷ.ಇತರರು 35.ಇದು 2018 ರ ಮತದಾರರ ಜನಗಣತಿಯ ಮಾಹಿತಿ.. ಹತ್ತಿರ ಹತ್ತಿರ 15 ಲಕ್ಷ ಮತದಾರರನ್ನ ಹೊಂದಿರೋ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರವಾಗಿದ್ದು, ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಈ ಬಾರಿ ಸೋಲಿಲ್ಲದ ಸರದಾರ ದೇವೇಗೌಡರ ಬದಲಿಗೆ ಅವರ ಮೊಮ್ಮಗ ಪ್ರಜ್ವಲ್ ಸ್ಪರ್ಧಿಸುತ್ತಿದ್ದು, ಅವರನ್ನ ಹಣಿಯೋಕೆ ಕಮಲ ಪಡೆ ಇನ್ನಿಲ್ಲದ ತಂತ್ರಗಳನ್ನ ಹೆಣೆಯುತ್ತಿದೆ… ಅಂತಿಮವಾಗಿ ವಿಜಯ ಮಾಲೆ ಯಾರ ಕೊರಳಿಗೆ ಬೀಳುತ್ತೆ ಅನ್ನೋದನ್ನ ಚುನಾವಣೆವರೆಗೂ ನಾವು ನೀವೆಲ್ಲ ಕಾಯಲೇಬೇಕಿದೆ…

LEAVE A REPLY

Please enter your comment!
Please enter your name here