Home Crime ಹಾಸಿಗೆ ಹಂಚಿಕೊಂಡವಳು ಮಾಡಿದ್ಲು ಹೇಸಿಗೆ ಕೆಲಸ..!? ಪೊಲೀಸ್ ಪೇದೆ ಆತ್ಮಹತ್ಯೆಯ ಹಿಂದಿತ್ತು ಹುಡುಗಿಯ ಕಥೆ..! ಕಾಸಿಗಾಗಿ...

ಹಾಸಿಗೆ ಹಂಚಿಕೊಂಡವಳು ಮಾಡಿದ್ಲು ಹೇಸಿಗೆ ಕೆಲಸ..!? ಪೊಲೀಸ್ ಪೇದೆ ಆತ್ಮಹತ್ಯೆಯ ಹಿಂದಿತ್ತು ಹುಡುಗಿಯ ಕಥೆ..! ಕಾಸಿಗಾಗಿ ಪ್ರಿಯತಮನ ವಿರುದ್ಧವೇ ಕೊಟ್ಟಳು ರೇಪ್ ಕೇಸ್..!

3782
0
SHARE

ಮೊನ್ನೆ ಧಾರವಾಡದಲ್ಲಿ ಚುಮು ಚುಮು ಚಳಿಯಿತ್ತು. ಜನ ಆ ಚಳಿಗೆ ಮುದುಡಿ ಕಂಬಳಿ ಹೊದ್ದು ಮಲಗಿದ್ರು. ಆದ್ರೆ ಇದೇ ಧಾರವಾಡ ಪೊಲೀಸ್ ಪೇದೆ ಟ್ರೈನಿಂದ್ ಸೆಂಟರ್ ನಲ್ಲಿ ಮಾತ್ರ ದಟ್ಟ ಮಂಜಿದ್ರು ತರಬೇತಿ ಪೇದೆಗಳು ಪೆರೆಡ್ ಗಾಗಿ ಮೈದಾನಕ್ಕೆ ಆಗಮಿಸಿದ್ರು. ಇನ್ನು ಮಂಜು ಸರಿದಿರಲಿಲ್ಲ. ಇನ್ನು ಸೂರ್ಯ ಹುಟ್ಟೋದಕ್ಕೆ ಸುಮಾರು ಸಮಯವಿತ್ತು. ಆ ಮಂಜಿನಲ್ಲೇ ಅಸ್ಪಷ್ಟವಾಗಿ ಮರವೊಂದರಲ್ಲಿ ಏನೋ ನೇತನಾಡ್ತಿರೋದು ಕಂಡು ಬಂದಿತ್ತು. ಅಲ್ಲಿ ಪೆರೆಡ್ ಗೆ ಅಂತ ಬಂದಿದ್ದವರಿಗೆ ಅದೇನು ನೇತನಾಡ್ತಾ ಇರೋದು ಅನ್ನೋದು ಗೊತ್ತೇ ಆಗಲಿಲ್ಲ. ದೂರದಲ್ಲಿದ್ದ ಅವರಿಗೆ ಅದೇನು ಅನ್ನೋ ಕುತೂಹಲ. ಯಾವುದಕ್ಕೂ ಹತ್ತಿರ ಹೋಗಿ ನೋಡೋಣ ಅಂತ ಹೋಗಿದ್ರು. ಯಾವಾಗ ಆ ಮರದ ಹತ್ತಿರ ಹೋದ್ರೋ ಆಗ ಅವ್ರಿಗೆ ಶಾಕ್ ಆಗಿತ್ತು.

ಅವ್ರೆಲ್ಲಾ ಆ ಕುಳಿರ್ಗಾಳಿಯ ಚಳಿಯಲ್ಲೂ ತಣ್ಣಗೆ ಬೆವರೋದಕ್ಕೆ ಶುರುಮಾಡಿದ್ರು. ಅವ್ರಿಗೆ ತಾವು ಪೆರೆಡ್ ಗೆ ಬಂದಿದ್ದೇವೆ ಅನ್ನೋದು ಮರೆತು ಹೋಗಿತ್ತು. ಯಾಕಂದ್ರೆ ಆ ಮರದಲ್ಲಿ ನೇತಾಡ್ತಾ ಇದ್ದಿದ್ದು ಅದೇ ಟ್ರೈನಿಂಗ್ ಸೆಂಟರ್ ನ ಪೇದೆಯೊಬ್ಬನ ಶವ. ಅವ್ರಿಗೆ ಅದನ್ನ ನಂಬೋದಕ್ಕೆ ಆಗಲಿಲ್ಲ. ಎಲ್ಲರಿಗೂ ಅದು ಕನಸೋ ನನಸೋ ಅನ್ನೋದು ಕೂಡಾ ಗೊತ್ತಾಗಲಿಲ್ಲ. ಅಂತಹದ್ದೊಂದು ದೃಶ್ಯವನ್ನ ಬೆಳ್ಳಂಬೆಳ್ಳಗ್ಗೆ ನಾವು ನೋಡ್ತೀವಿ ಅಂತಾನು ಅವ್ರು ಅಂದುಕೊಂಡಿರಲಿಲ್ಲ. ಅಷ್ಟಕ್ಕು ಅಲ್ಲಿ ನೇತನಾಡ್ತಿದ್ದ ವ್ಯಕ್ತಿ ಬೇರ್ಯಾರು ಆಗಿರಲಿಲ್ಲ. ಅವನೇ ಪೇದೆ ಮನೋಹರ್. ಮೂಲತಃ ಬಿಜಾಪುರದ ಸಿಂದಗಿಯವನು. ಒಂದು ವರ್ಷದಿಂದ ಇದೇ ಟ್ರೈನಿಂಗ್ ಸೆಂಟರ್ ನಲ್ಲಿ ತರಭೇತಿ ಪಡೆಯುತ್ತಿದ್ದ.

ತಕ್ಷಣವೇ ಅಲ್ಲಿದ್ದವರೆಲ್ಲಾ ಸೇರಿ ವಿದ್ಯಾಗಿರಿ ಪೊಲೀಸ್ರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ರು. ಪೊಲೀಸ್ರು ಕೂಡಾ ಆ ಚಳಿಯಲ್ಲಿ ನಡುಗುತ್ತಲೇ  ಅಲ್ಲಿಗೆ ಬಂದಿದ್ರು. ನಂತ್ರ ಆ ಡೆಡ್ ಬಾಡಿಯನ್ನ ಮರದಿಂದ ಇಳಿಸಿದ್ರು. ಅಲ್ಲದೆ ಬಾಡಿಯನ್ನ ಪೋಸ್ಟ್ ಮಾರ್ಟಂಗ್ ಗೂ ಕಳುಹಿಸಿದ್ರು. ನಿಧಾವಾಗಿ ಅಲ್ಲಿ ಮಂಜು ಸರಿದು ಸೂರ್ಯ ಕಿರಣಗಳು ಭೂಮಿಗೆ ಬೀಳೋದಕ್ಕೆ ಶುರುವಾಯ್ತು. ಅದೇ ವೇಳೆ ಆತನ ಸಾವಿನ ಹಿಂದಿನ ಕಾರಣಗಳು ಬಿಚ್ಚಿಕೊಳ್ಳೋದಕ್ಕೆ ಶುರುವಾಯ್ತು. ಯಾಕಂದ್ರೆ ಒಬ್ಬ ವ್ಯಕ್ತಿ ಸೂಸೈಡ್ ಮಾಡಿಕೊಳ್ತಾನೆ ಅಂದ್ರೆ ಅದಕ್ಕೆ ಬಲವಾದ ಕಾರಣಗಳು ಇರುತ್ತೆ. ಇವನ ಸಾವಿನ ಹಿಂದೆ ಕೂಡಾ ಇಂತಹದ್ದೆ ಒಂದು ಕಾರಣವಿತ್ತು.

 ಹೀಗೆ ಚೆನ್ನಾಗಿದ್ದಾಗ ಇಬ್ಬರು ಸೆಕ್ಸ್ ಮಾಡಿಕೊಳ್ತಿದ್ದಾಗ ಆತ ಅದನ್ನ ಆಕೆಯ ಒಪ್ಪಿಗೆಯ ಮೇಲೆಯೇ ರೆಕಾರ್ಡ್ ಮಾಡಿಕೊಂಡಿದ್ದ. ಅದನ್ನ ತನ್ನ ಫೋನ್ ನಲ್ಲಿ ಹಾಗೆಯೇ ಇಟ್ಕೊಂಡಿದ್ದ. ಆದ್ರೆ ಸ್ವಲ್ಪ ದಿನ ಆಗ್ತಿದ್ದ ಹಾಗೆ ಆಕೆಯ ಕ್ಯಾರೆಕ್ಟರ್ ಸರಿಯಿಲ್ಲ ಅನ್ನೋದು ಆತನಿಗೆ ಗೊತ್ತಾಗಿತ್ತು. ಅದನ್ನ ಆಕೆಯ ಹತ್ತಿರವು ಹೇಳಿ ಇನ್ನು ಹೀಗೆ ಮಾಡಬಾರದು ಅಂತೆಲ್ಲಾ ಹೇಳಿದ್ದ. ಅಲ್ಲಿಗೆ ಎಲ್ಲವೂ ಸರಿಯಾಯ್ತು ಅಂತ ಆತ ಸುಮ್ಮನಿದ್ದ.ಆದ್ರೆ ಆರತಿ ಮಾತ್ರ ಸರಿಯಾಗಲೇ ಇಲ್ಲ. ಕೆಲವೇ ದಿನಗಳಲ್ಲಿ ಆಕೆಯ ವಿಷಯ ಅವರ ಮನೆಯವರಿಗೂ ಗೊತ್ತಾಗಿತ್ತು. ಆಗ ಈತ ತಾನು ಆಕೆಯನ್ನ ಪ್ರೀತಿಸ್ತಿರೋದಾಗಿ ಹೇಳಿದ್ದ. ಆಗ ಆಕೆಯ ಮಾವ ಮನೋಜ್ ಎಂಬಾತ ಇವರಿಬ್ಬರ ಮಧ್ಯೆ ಬಂದಿದ್ದ. ಆತ ನನಗೆ ಎಲ್ಲಾ ವಿಷಯ ಗೊತ್ತಾಗಿದೆ. ನಿನ್ನೆ ಹತ್ತಿರವಿರೋ ವಿಡಿಯೋ ಕೊಡು ಅಂತ ಹೆದರಿಸಿದ್ದಾನೆ. ಆತ ವೀಡಿಯೋ ಕೊಡದೇ ಇದ್ದಾಗ ಅವನ ಮೇಲೆ ಹಲ್ಲೆ ನಡೆಸಿ ಆ ವೀಡಿಯೋ ತಗೊಂಡು ಹೋಗಿದ್ದ.

ಆ ವೀಡಿಯೋ ಆತನ ಕೈಗೆ ಸಿಕ್ತಿದ್ದ ಹಾಗೆ ಆತ ಆಕೆಯ ಮನೆಗೆ ಹೋಗಿದ್ದಾನೆ. ಈ ವೀಡಿಯೋ ಮನೆಯಲ್ಲಿ ತೋರಿಸ್ತೀನಿ ಇಲ್ಲ ಅಂದ್ರೆ ನೀನು ನನ್ನ ಜೊತೆ ಮಲಗಬೇಕು ಅಂತ ಹೆದರಿಸಿದ್ದ. ಹೀಗಾಗಿ ಆಕೆ ಮನೋಜ್ ಜೊತೆ ಒನ್ ನೈಟ್  ಕಳೆದಿದ್ದ ಅಂತ ಮನೋಹರ್ ಹೇಳಿದ್ದಾನೆ.ಇಷ್ಟೆಲ್ಲಾ ಆದ ಮೇಲೆ ಅವಳ ಸಹವಾಸವೇ ಬೇಡ ಅಂತ ಆತ ಕೂಡಾ ಸುಮ್ಮನಾಗಿದ್ದ. ಯಾಕಂದ್ರೆ ಯಾರದ್ದೊ ಜೊತೆ ಸಂಬಧ ಇರೋಳನ್ನ ಮದುವೆಯಾದ್ರೆ ಅದು ಚೆನ್ನಾಗಿರೋದಿಲ್ಲ ಅಂತ ಸುಮ್ಮನಾಗಿದ್ದ. ನಂತ್ರ ಆಕೆಗೆ ಇನ್ನೊಬ್ಬ ಹುಡುಗನ ಜೊತೆ ಎಂಗೇಜ್ ಮೆಂಟ್ ಕೂಡಾ ಆಗಿತ್ತು. ಆಗಲೂ ಮನೋಹರ್ ಎಲ್ಲಾ ಮುಗಿದು ಹೋಯ್ತು ಅವಳು ಮದುವೆಯಾಗಿ ಚೆನ್ನಾಗಿರಲಿ ಅಂತ ಸುಮ್ಮನಾಗಿದ್ದ. ಆದ್ರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನೋ ಹಾಗೆ ಆಕೆ ಮತ್ತೆ ನಾಲ್ಕು ತಿಂಗಳ ಬಳಿಕ ಮನೋಹರ್ ಗೆ ಫೋನ್ ಮಾಡಿದ್ಲು.

ಆಕೆ ಫೋನ್ ಮಾಡಿ ಮತ್ತೆ ಇಬ್ಬರು ಒಂದಾಗಿದ್ದಾರೆ. ನಾನು ನಿನ್ನನ್ನ ಬಿಟ್ಟು ಬೇರೆಯವರನ್ನ ಮದುವೆಯಾಗೋದಿಲ್ಲ ಅಂತ ಆಕೆ ಹೇಳಿದ್ಲು. ಇವನು ಇನ್ನು ಮೇಲೆ ನೀನು ಸರಿಯಿರೋದಾದ್ರೆ ಮದುವೆ ಆಗೋಣ ಅಂತ ಹೇಳಿದ್ದ. ಆತ ಸಾಯೋ ಎರಡು ವರ್ಷಗಳವರೆಗೆ ಆಕೆಗೆ ತನ್ನೆಲ್ಲಾ ಸಂಬಂಳವನ್ನ ಖರ್ಚು ಮಾಡಿದ್ದ. ಮನೆಗೆ ಒಂದು ರೂಪಾಯಿಯನ್ನ ಕೊಡದೆ ಎಲ್ಲವನ್ನ ಆಕೆಗೆ ಖರ್ಚು ಮಾಡ್ತಿದ್ದ. ಮತ್ತೆ ಇಬ್ಬರು ಒಂದಾದ ಮೇಲೆ ಆಗಾಗ ಆಕೆ ಧಾರವಾಡಕ್ಕೆ ಬಂದು ಹೋಗ್ತಿದ್ಲು. ಮತ್ತೆ ಅದೇ ಲಾಡ್ಜ್ ಗೆ ಬಂದು ಹೋಗ್ತಿದ್ಲು. ಅಲ್ಲಿಗೆ ಎಲ್ಲವೂ ಸರಿಯಾಗಿತ್ತು ಅಂತ ಆತ ಅಂದುಕೊಂಡಿದ್ದ. ಆದ್ರೆ ಆರತಿ ಮಾತ್ರ ಯಾವುದೇ ಕಾರಣಕ್ಕೂ ಬದಲಾಗೋ ಹಾಗೆ ಕಾಣ್ತಿರಲಿಲ್ಲ. ಆತ ಧಾರವಾಡದಲ್ಲಿದ್ರೆ ಆಕೆ ಬಿಜಾಪುರದಲ್ಲಿ ತನ್ನ ಕೆಟ್ಟಚಾಳಿಯನ್ನ ಮುಂದುವರೆಸ್ತಿದ್ಲು. ಇವನಿಗೆ ಏನು ಗೊತ್ತಾಗೋದಿಲ್ಲ ಅಂತ ಆಕೆ ಆಡಿದ್ದೇ ಆಟವಾಗಿ ಹೋಗಿತ್ತು. ಆದ್ರೆ ಆ ಎಲ್ಲಾ ವಿಷಯವು ಆತನಿಗೆ ಗೊತ್ತಾಗಿತ್ತು. ಹೀಗಾಗಿ ಆತ ಒಮ್ಮೆ ಅವಳನ್ನ ಧಾರವಾಡಕ್ಕೆ ಕರೆಸಿಕೊಂಡು ದೊಡ್ಡಗಾಗಿ ಗಲಾಟೆ ಮಾಡಿದ್ದ. ಅಲ್ಲದೆ ನಾನು ನಿನಗಾಗಿ ಎನೆಲ್ಲಾ ತ್ಯಾಗ ಮಾಡಿದ್ದೀನಿ  ಆದ್ರೆ ನೀನು ಮಾತ್ರ ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯ ಅಂತ ಆತ ಗಲಾಟೆ ಮಾಡಿದ್ದ.

ಈ ಗಲಾಟೆಯಾದ ಮೇಲೆ ಆಕೆ ಅವನಿಂದ ಸಂಪೂರ್ಣವಾಗಿ ದೂರವಾದ್ಲು ಅಲ್ಲದೆ ಆಕೆ ಇವನ ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ಮುಂದಾದ್ಲು. ಆತನನ್ನೇ ಮದುವೆಯಾಗ್ತೀನಿ ಅಂತ ಬಂದಿದ್ದವಳು ಈಗ ಅವನ ಪ್ರಾಣ ತೆಗೆಯೋ ಮಟ್ಟಕ್ಕೆ ಕಾಟ ಕೊಡೋದಕ್ಕೆ ಮುಂದಾಗಿದ್ಲು. ಚೆನ್ನಾಗಿರೋವಾಗ ಯಾವುದನ್ನ ತಮ್ಮ ಖುಷಿಗೆ ಅಂತ ಮಾಡಿಕೊಂಡಿದ್ರೋ ಈಗ ಅದನ್ನೇ ಬ್ರಹ್ಮಾಸ್ತ್ರವನ್ನಾಗಿ ಮಾಡಿಕೊಳ್ಳೋದಕ್ಕೆ ಶುರುಮಾಡಿದ್ರು. ಅಲ್ಲದೆ ಆತ ಸಂಬಂಧಿ ಪಡೆದಿದ್ದ ಇವರಿಬ್ಬರ ಸೆಕ್ಸ್ ವೀಡಿಯೋ ಅದಾಗ್ಲೆ ಬಿಜಾಪುರ ಮತ್ತು ಧಾರವಾಡದಲ್ಲಿ ಹಾಟ್ ಕೇಕ್ ಆಗಿತ್ತು. ಅದು ಎಲ್ಲರ ಮೊಬೈಲ್ ಸೇರಿ ವೈರಲ್ ಆಗಿ ಹೋಗಿತ್ತು.ಅದ್ಯಾವಾಗ ಮನೋಹರ್ ಆರತಿ ಜೊತೆ ಜಗಳ ಮಾಡಿದ್ನೋ ಆಗ ಆಕೆ ಇವನ ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ಮುಂದಾದ್ಲು. ಆಕೆ ನೇರವಾಗಿ ಧಾರವಾಡದ ಟ್ರೈನಿಂಗ್ ಸೆಂಟರ್ ಗೆ ಬಂದು ದೂರನ್ನ ನೀಡಿದ್ಲು.

ಇದೇ ಟ್ರೈನರ್ ಪಾರಶೆಟ್ಟಿಯವರು ಆಕೆಯಿಂದ ದೂರು ಪಡೆದಿದ್ರು. ನನ್ನ ಜೊತೆ ಆತ ಸೆಕ್ಸ್ ಮಾಡಿರುವ ವೀಡಿಯೋ ಇದೆ. ಹಾಗೆ ನನಗೆ ಕೆಲಸ ಕೊಡಿಸ್ತೀನಿ ಅಂತ ನನ್ನ ಡಾಕ್ಯುಮೆಂಟ್ ತಗೊಂಡಿದ್ದಾನೆ ಅಂತ ಆರೋಪ ಮಾಡಿದ್ಲು. ನಂತ್ರ ಪಾರಶೆಟ್ಟಿ ಆತನನ್ನ ಕರೆಸಿ ಆತನ ಬಳಿಯಿದ್ದ ಪೆನ್ ಡ್ರೈವ್ ಅನ್ನ ವಶಪಡಿಸಿಕೊಂಡು ಅದರಲ್ಲಿ ಇದ್ದ ಎಲ್ಲಾ ಸಾಕ್ಷಿಗಳನ್ನ ನಾಶ ಮಾಡಿದ್ದಾರೆ ಅಂತ ಆತ ಸಾಯೋ ಮೊದಲು ಆರೋಪ ಮಾಡಿದ್ದಾನೆ.ಇದೆಲ್ಲಾ ಆದ ಬಳಿಕ ಆರತಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ಲು. ಅದ್ಯಾವಾಗ ದೂರು ದಾಖಲಿಸಿದ್ಲೋ ಅಲ್ಲಿಗೆ ಮನೋಹರ ಪೂರ್ತಿ ಸೋತು ಹೋಗಿದ್ದ. ಅಲ್ಲದೆ ತಾನು ಮಾಡಿದ್ದು ತಪ್ಪಲ್ಲ ಅಂತ ನಿರೂಪಿಸೋದಕ್ಕೆ ಆತ ಬಳಿ ಯಾವುದೇ ದಾಖಲೆಗಳು ಆಗ ಉಳಿಸಿದಿರಲಿಲ್ಲ. ಹೀಗಾಗಿ ಆತ ಅತ್ಯಾಚಾರಿ ಅಂತ ಕರೆಸಿಕೊಂಡು ಬದುಕೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿ ಸಾಯುವ ನಿರ್ಧಾರ ಮಾಡಿದ್ದ.

ಆಕೆ ನನ್ನನ್ನ ಲವ್ ಮಾಡಿದ್ದಾಳೆ ನನ್ನ ಜೊತೆ ತಿರುಗಿದ್ದಾಳೆ, ಆದ್ರೆ ಈಗ ತನಗೆ ಉಪಯೋಗ ಆಗಲಿ ಅಂತ ಕಾನೂನನ್ನ ದುರುಪಯೋಗಪಡಿಸಿಕೊಳ್ತಿದ್ದಾಳೆ ಅಂತ ಆತ ಕಣ್ಣೀರು ಹಾಕಿದ್ದಾನೆ. ಎರಡು ವರ್ಷಗಳಿಂದ ಆಕೆಯ ಟಾರ್ಚರ್ ನಾನು ನಲುಗಿ ಹೋಗಿದ್ದೇನೆ ಇನ್ನು ಆಕೆಯೊಂದಿಗೆ ಸೆಣಸಾಡೋದಕ್ಕೆ ಸಾಧ್ಯವಿಲ್ಲ ಅಂತ ಆತ ಸಾಯೋ ಮೊದಲು ತನ್ನ ಅಳಲನ್ನ ಎಲ್ಲರಿಗೂ ತಿಳಿಸಿದ್ದಾನೆ. ಅವನಿಗೆ ಆಕೆ ಮಾಡಿದ ಅನ್ಯಾಯವೇನು ಅನ್ನೋದನ್ನ ವೀಡಿಯೋದಲ್ಲಿ ಹೇಳಿದ್ದಾನೆ. ಮನೋಹರ್ ವಿರುದ್ಧ ಅತ್ಯಾಚಾರದ ದೂರು ದಾಖಲಾದ ನಂತ್ರ ಆತ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಹೀಗಾಗಿ ಇನ್ನು ಇಂತಹ ಆರೋಪಗಳನ್ನ ಹೊತ್ತು ಬದುಕೋದಕ್ಕೆ ಆಗೋದಿಲ್ಲ ಅಂತ ಆತ ನಿರ್ಧರಿಸಿಬಿಟ್ಟಿದ್ದ.

ಹೀಗಾಗಿ ಸಾಯೋ ಮೊದಲು ಆಕೆಯೊಂದಿಗಿನ ಸರಸ ವಿರಸ ಎಲ್ಲವನ್ನು ಆತ ವೀಡಿಯೋದಲ್ಲಿ ಹೇಳಿದ್ದ. ಅಲ್ಲದೆ ನಾನು ಯಾಕೆ ಆತ್ಮಹತ್ಯೆಯನ್ನ ಮಾಡಿಕೊಳ್ತಿದ್ದೀನಿ ಅದಕ್ಕೆ ಕಾರಣ ಯಾರು ಅನ್ನೋದನ್ನ ಡಿಟೇಲ್ ಆಗಿ ಹೇಳಿ ರೆಕಾರ್ಡ್ ಮಾಡಿದ್ದ. ಸಾಯುವ ಮೊದಲು ನನ್ನ ಸಾವಿಗೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಅಂತ ಮನವಿ ಮಾಡಿಕೊಂಡಿದ್ದಾನೆ. ಮನೋಹರ್ ಗೆ ಒಂದೊಳ್ಳೆ ಸರ್ಕಾರಿ ನೌಕರಿಯಿತ್ತು.

ಆತನ ಜೊತೆ ಆಕೆ ಮದುವೆಯಾಗಿದ್ರೆ ಆಕೆಯ ಬಾಳು ಬಂಗಾರವಾಗ್ತಿತ್ತು. ಆದ್ರೆ ಹುಚ್ಚು ಯೌವ್ವನ ಹೊಳೆಯಲ್ಲಿ ಮಿಂದೆದ್ದವಳಿಗೆ ಸಂಸಾರ ಮಾಡೋ ಬುದ್ಧಿ ಇರಲಿಲ್ಲ. ಹೀಗಾಗಿ ಕಲಿಗಾಲದಲ್ಲಿ ಕುರಿ ಮೊಟ್ಟೆಯಿಡ್ತು ಅನ್ನೋ ಹಾಗೆ ಆಕೆ ದುರ್ಬುದ್ಧಿ ತೋರಿಸಿದ್ಲು. ಇದೇ ಕಾರಣಕ್ಕೆ ಅಮಾಯಕನೊಬ್ಬ ಬಲಿಯಾಗಿದ್ದಾನೆ. ಈಗಾಗ್ಲೇ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಆದ್ರೆ ತನಿಖೆ ಸತ್ಯದ ಪರವಾಗಿರಬೇಕು ಅನ್ನೋದು ಎಲ್ಲರ ಆಶಯ.

 

LEAVE A REPLY

Please enter your comment!
Please enter your name here