Home Latest ಹಿಂದುತ್ವದ ಕಡೆ ವಾಲುತ್ತಿರುವ ಚಂದ್ರಬಾಬು ನಾಯ್ಡು…

ಹಿಂದುತ್ವದ ಕಡೆ ವಾಲುತ್ತಿರುವ ಚಂದ್ರಬಾಬು ನಾಯ್ಡು…

904
0
SHARE

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ನಿಧಾನವಾಗಿ ಹಾರ್ಡ್ಕೋರ್ ಹಿಂದುತ್ವದ ಪರ ವಾಲುತ್ತಿರುವುದು ಆಂಧ್ರಪ್ರದೇಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇತ್ತೀಚೆಗೆ ಆಂಧ್ರಪ್ರದೇಶ ಅಧ್ಯಂತ ದೇವಸ್ಥಾನದ ಮೇಲೆ ದಾಳಿಗಳು ಹೆಚ್ಚಾಗುತ್ತಿರುವುದರಿಂದ ಇದನ್ನ ಎಂಕ್ಯಾಶ್ ಮಾಡಿಕೊಳ್ಳಲು ಚಂದ್ರಬಾಬುನಾಯ್ಡು ಹಿಂದುತ್ವದ ಪರ ವಾಲುತ್ತಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಜಗನ್ ಮೋಹನ್ ರೆಡ್ಡಿ ಅಧಿಕಾರ ವಹಿಸಿಕೊಂಡ ನಂತರ ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ದಾಳಿ ಯಾಗುತ್ತಿರುವುದು ಹೆಚ್ಚುತ್ತಿದೆ. ಇದು ಆಂಧ್ರಪ್ರದೇಶದ ಬಹುಸಂಖ್ಯಾತ ಹಿಂದುಗಳನ್ನು ಕೆರಳಿಸಿದೆ. ಇಷ್ಟಕ್ಕೂ ಜಗನ್ ಕ್ರಿಶ್ಚಿಯನ್ ಕಮ್ಯುನಿಟಿಗೆ ಸೇರಿದವರಾಗಿದ್ದು. ಇದರಿಂದಾಗಿಯೇ ದೇವಸ್ಥಾನಗಳ ಮೇಲೆ ದಾಳಿ ಹೆಚ್ಚುತ್ತಿದೆ ಎಂಬ ಮಾತು ಆಂಧ್ರಪ್ರದೇಶದಲ್ಲಿ ಕೇಳಿಬರುತ್ತಿದೆ.

ಈಗ ಇದ್ದಕ್ಕಿದ್ದ ಹಾಗೆ ಚಂದ್ರಬಾಬು ನಾಯ್ಡುರವರ ಮಾತು ಹಾಗೂ ನಡೆಯಲ್ಲಿ ಬಹಳಮಟ್ಟಿಗೆ ಬದಲಾವಣೆಯನ್ನು ಕಂಡಿರುವ ಆಂಧ್ರಪ್ರದೇಶದ ಜನತೆ. ಬಾಬು ಈಗ ಹಿಂದುತ್ವದ ಕಡೆ ವಾಲುತ್ತಿರುವ ದನ್ನ ಸ್ಪಷ್ಟವಾಗಿ ಹುಡುಕಿದ್ದಾರೆ. ಹಿಂದೆ ಚಂದ್ರಬಾಬುನಾಯ್ಡು ಎನ್ ಡಿಎ ಮಿತ್ರ ಪಕ್ಷವಾಗಿದರೂ. ಕಳೆದ 2018ರಲ್ಲಿ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟು NDA ಇಂದ ಹೊರಬಂದು ಮೋದಿಯ ವಿರುದ್ಧ ತೊಡೆತಟ್ಟಿ ನಂತರ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಮಾನವಾಗಿ ಸೋಲು ಕಂಡರು.

ಜಗನ್ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ದೇವಸ್ಥಾನಗಳ ಮೇಲೆ ತೀವ್ರತರವಾದ ದಾಳಿಗಳು ನಡೆಯುತ್ತಿರುವುದರಿಂದ ಆಂಧ್ರ ಪ್ರದೇಶದ ಜನತೆ ಬಹಳವಾಗಿ ಜಗನ್ ಮೇಲೆ ಮುನಿಸಿಕೊಂಡಿದ್ದಾರೆ. ಇದನ್ನು ಮನಗಂಡಿರುವ ಚಂದ್ರಬಾಬುನಾಯ್ಡು ಪ್ರಕಾರ ಹಿಂದುತ್ವದ ಪರ ತಮ್ಮನ್ನು ತಾವು ಕಾಣಿಸಿಕೊಂಡಿರುವುದರಿಂದ ಅದರ ಲಾಭ ಮುಂದಿನ ದಿನಗಳಲ್ಲಿ ಚಂದ್ರಬಾಬು ನಾಯ್ಡು ಸಿಗುತ್ತದೆ ಎಂಬ ಲೆಕ್ಕಾಚಾರ ರಾಜಕೀಯ ಪಂಡಿತರ ಪಂಡಿತರ ಮಾತು.

ಜಗನ್ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರುವರಾಗಿರುವುದು ಅವರಿಗೆ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಜಗನ್ ರವರ ಪಕ್ಷ ವೈಎಸ್ ಆರ್ ಕಾಂಗ್ರೆಸ್ NDA ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಅದರ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾದರು.

LEAVE A REPLY

Please enter your comment!
Please enter your name here