Home Elections 2019 ಹಿಂದೂ ಓಲೈಕೆಗಾಗಿ ದಶ ಅವತಾರ ಎತ್ತಿದ್ದಾರೆ ರಾಹುಲ್..?! ಅಧಿಕಾರಕ್ಕಾಗಿ ಬಿಜೆಪಿಯದ್ದೇ ಹಾದಿ ಹಿಡಿದ ಕಾಂಗ್ರೆಸ್ ಅಧ್ಯಕ್ಷ..?!...

ಹಿಂದೂ ಓಲೈಕೆಗಾಗಿ ದಶ ಅವತಾರ ಎತ್ತಿದ್ದಾರೆ ರಾಹುಲ್..?! ಅಧಿಕಾರಕ್ಕಾಗಿ ಬಿಜೆಪಿಯದ್ದೇ ಹಾದಿ ಹಿಡಿದ ಕಾಂಗ್ರೆಸ್ ಅಧ್ಯಕ್ಷ..?! ಕಾಂಗ್ರೆಸ್ ಬಿಡುತ್ತಿರೋ ಧರ್ಮಾಸ್ತ್ರಕ್ಕೆ ಕೇಸರಿ ಪಡೆಯಾಗುತ್ತಾ ಖಲ್ಲಾಸ್.!?

1955
0
SHARE

ಮಧ್ಯಪ್ರದೇಶದಲ್ಲಿ ಸತತ ಮೂರು ಅವಧಿಗಳಿಂದ ಅಧಿಕಾರ ಹಿಡಿಯಲು ಸಾಧ್ಯವಾಗದೆ ಕಂಗೆಟ್ಟಿರುವ ಕಾಂಗ್ರೆಸ್, ಈ ಬಾರಿ ಶತಾಯಗತಾಯ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಹೀಗಾಗಿ 2003ರಿಂದ ಹಿಂದುತ್ವ ಕಾರ್ಯಸೂಚಿಯ ವಿರುದ್ಧ ಹೋರಾಟ ಮಾಡುವ ಚುನಾವಣಾ ತಂತ್ರ ನಿಭಾಯಿಸುತ್ತಿದ್ದ ಪಕ್ಷವೀಗ ಯೂಟರ್ನ್ ತೆಗೆದುಕೊಂಡಿದೆ. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕಿಳಿಸಲು ‘ಟೆಂಪಲ್ ರನ್’ ತಂತ್ರದ ಮೊರೆ ಹೊಕ್ಕಿದೆ. ವಿಶೇಷವಾಗಿ ರಾಹುಲ್ ಗಾಂಧಿನ್ನು ‘ದೈವ ಭಕ್ತ’ರಂತೆ ಚಿತ್ರಿಸುವ ಮೂಲಕ ತಾವು ಹಿಂದುತ್ವದ ವಿರೋಧಿಗಳಲ್ಲ ಮತ್ತು ಹಿಂದೂಗಳ ಪರ ಎಂದು ಬಿಂಬಿಸುವ ಪ್ರಯತ್ನಕ್ಕೆ ಮುಂದಾಗಿದೆ.ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಭಾವನೆಯನ್ನು ತೊಲಗಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡರು ದೇವಸ್ಥಾನಗಳಿಗೆ ಸತತ ಭೇಟಿ ನೀಡಿ ಪೂಜೆ ಸಲ್ಲಿಸುವ ಚಟುವಟಿಕೆಗಳನ್ನು ಹೆಚ್ಚು ಮಾಡುತ್ತಿದ್ದಾರೆ.

ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭಗಳಲ್ಲಿ ಇದು ಸಾಮಾನ್ಯ ಎನಿಸಿತ್ತು. ಆದ್ರೀಗ ತಮ್ಮ ದೇವಸ್ಥಾನ ಭೇಟಿಯನ್ನು ರಾಹುಲ್, ಮಧ್ಯಪ್ರದೇಶದ ಚುನಾವಣೆಗೂ ವಿಸ್ತರಿಸಿದ್ದಾರೆ.ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಮಾಡಿದ್ರು, ಆ ಸಮಯದಲ್ಲಿ ತೆಗೆದ ಫೋಟೋಗಳು ಈ ಎಲೆಕ್ಷನ್ ನಲ್ಲಿ ಕೆಲಸಕ್ಕೆ ಬರುತ್ತಿದೆ, ಪಂಚರಾಜ್ಯ ಚುನಾವಣೆಗೆ ಫೋಟೋಶೂಟ್ ಗೆಂದೆ ರಾಹುಲ್ ಮಾನಸ ಸರೋವರ ಯಾತ್ರೆ ಮಾಡಿದ್ರಾ ಅನ್ನೋ ಅನುಮಾನವೂ ಇಲ್ಲಿ ಎದ್ದು ಕಾಣುತ್ತಿದೆ. ಅಷ್ಟೆ ಅಲ್ಲ ಒಂದು ಕಡೆ ರಾಮ ಭಕ್ತನಾಗಿಯೂ ಕೆಲವೊಂದು ಕಡೆ ಶಿವಭಕ್ತನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ, ಮಾನಸ ಸರೋವರದ ಪಕ್ಷದ ಪ್ರಚಾರ ಪೋಸ್ಟರ್‌ಗಳಲ್ಲಿ ರಾಹುಲ್ ಗಾಂಧಿ ‘ಶಿವ ಭಕ್ತ’ನಾಗಿ ಕಾಣಿಸಿಕೊಂಡಿದ್ದರೆ,

ಆದ್ರೆ ಚಿತ್ರಕೂಟದಲ್ಲಿ ‘ರಾಮ ಭಕ್ತ’ನಾಗಿದ್ದಾರೆ. ಜಬಲ್ಪುರ ಕ್ಷೇತ್ರದಲ್ಲಿ ಮಾತೆ ನರ್ಮದಾಳ ಪರಮಭಕ್ತನಾಗಿ ಹೋಗಿದ್ದಾರೆ. ಸಧ್ಯ ಮಧ್ಯಪ್ರದೇಶದಲ್ಲಿ ದೇವರ ಎದುರು ಕೈಮುಗಿದು ನಿಂತ ಭಕ್ತನಂತೆ ರಾಹುಲ್ ಅವರನ್ನು ಚಿತ್ರಿಸಿರುವ ಪೋಸ್ಟರ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.ಉದರ ನಿಮ್ಮಿತ್ತಂ ಬಹುಕೃತ ವೇಷಂ ಅನ್ನೋದು ಗಾದೆ, ಆದ್ರೀಲ್ಲಿ ಅಧಿಕಾರ ನಿಮ್ಮಿತ್ತಂ ಬಹುಕೃತ ಧರ್ಮಂ ಅನ್ನೋ ರೀತಿ ಬದಲಾಗಿ ಹೋಗಿದೆ. ಈ ಮಾತನ್ನ ಯಾವ ಕಾರಣಕ್ಕೆ ಹೇಳ್ತಾ ಇದ್ದೀವಿ ಅಂದ್ರೆ ಯಾವಾಗ ಯಾವ ಧರ್ಮಕ್ಕಾದ್ರು ಬಲು ಈಸಿಯಾಗಿ, ಬಲು ಬೇಗ ಬದಲಾಗೋ ಶಕ್ತಿ ಇರೋದು ಈ ರಾಜಕಾರಣಿಗಳಿಗೆ ಮಾತ್ರ, ಸೋ ಆದೇ ರೀತಿ, ರಾಹುಲ್ ಕೂಡ ಹಿಂದು ಭಕ್ತನಾಗಿ ಬದಲಾಗಿ ಹಿಂದು ದೇವರ ಹೆಸರಲ್ಲೇ ಮತ ಕೇಳುತ್ತಿದ್ದಾರೆ.

ಮತ ಯಾವುದಾದರೇನು ಪಕ್ಷಕ್ಕೆ ಹಾಕೋ ಮತವೇ ಮುಖ್ಯ ಅನ್ನೋದು ಇಲ್ಲಿನ ಧ್ಯೇಯ.ತನ್ನನ್ನು ಅಧಿಕಾರಕ್ಕೆ ತಂದರೆ ಮಧ್ಯಪ್ರದೇಶವನ್ನು ‘ಧಾರ್ಮಿಕ ಕೇಂದ್ರ’ವನ್ನಾಗಿ ಪರಿವರ್ತಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಬಿಜೆಪಿ ಧರ್ಮವನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತದೆ. ಆದರೆ, ಕಾಂಗ್ರೆಸ್ ನಿಜಕ್ಕೂ ರಾಜ್ಯವನ್ನು ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಿದೆ ಎಂದು ಹೇಳಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ರಾಹುಲ್ ಗಾಂಧಿ  ಬಿಜೆಪಿಯ ಭಾಷೆಯಲ್ಲಿ ಉತ್ತರ ನೀಡಲು ಕಲಿತಿದ್ದಾರೆ. ಇನ್ನೂ ಹೆಚ್ಚಿನ ಹಿಂದುತ್ವದೊಂದಿಗೆ ಬಿಜೆಪಿಯ ಹಿಂದುತ್ವ ಅಜೆಂಡಾಕ್ಕೆ ಎದಿರೇಟು ನೀಡುತ್ತಿದ್ದಾರೆ. ಭ್ರಷ್ಟಾಚಾರ, ಹಣದುಬ್ಬರ, ನಿರುದ್ಯೋಗ ಮಾತ್ರವಲ್ಲದೆ, ಹಿಂದುತ್ವದ ವಿಚಾರದಲ್ಲಿಯೂ ಹೆಚ್ಚು ಪರಿಣಾಮಕಾರಿಯಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸುತ್ತಿದ್ದಾರೆ.

ರಾಹುಲ್ ರನ್ನ ಹಿಂದೂವಾಗಿ ಪರಿವರ್ತಿಸಿದ ಶ್ರೇಯಸ್ಸು ಬಿಜೆಪಿಗೆ ಸೇರುತ್ತದೆ, ಯಾಕೆಂದ್ರೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಉಪಯೋಗಿಸುತ್ತಿದ್ದದ್ದು ಇದೆ ಹಿಂದುತ್ವದ ಮಂತ್ರ ಈಗ ರಾಹುಲ್ ಗಾಂಧಿ ಕೂಡ ದಿಕ್ಕೂ ತೋಚದೆ ಹಿಂದುವಾಗಿ ಬದಲಾಗಿ ಹೋಗಿದ್ದಾರೆ.ಎಸ್ ರಾಹುಲ್ ಗಾಂಧಿ ಅಪ್ಪಟ ಶಿವ ಭಕ್ತರಾಗಿ ಬದಲಾಗಿದ್ದು ಅದೇ ಚುನಾವಣೆಯಿಂದ. ಗುಜರಾತ್ ಚುನಾವಣೆಯಲ್ಲಿ  ನರೇಂದ್ರ ಮೋದಿಗಿಂತಲು ಹೆಚ್ಚಿನದಾಗಿ ದೇವಸ್ಥಾನಗಳನ್ನ ಸುತ್ತಿದ ಖ್ಯಾತಿ ರಾಹುಲ್ ಗಾಂಧಿಗೆ ಸಲ್ಲ ಬೇಕು. ಇದುವರೆಗೂ ಜಾತ್ಯಾತೀತ ಮುಖವಾಡವನ್ನ ಹೊತ್ತಿದ್ದ ಕಾಂಗ್ರೆಸ್ ಮೃದು ಹಿಂದುತ್ವವಾದವನ್ನ ಹೊಂದಲೂ ಕಾರಣವಾಗಿದ್ದು ಇದೇ ಮೋದಿ ಅಂದ್ರು ತಪ್ಪಾಗಲಿಕ್ಕಿಲ್ಲ. ಈ ಮೃದು ಹಿಂದುತ್ವದ ಎಫೆಕ್ಟ್ ಏನು ಅಂತಾ ಗುಜರಾತ್ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಮನವರಿಕೆಯಾಗಿದೆ.

ಅದೇ ಕಾರಣಕ್ಕೆ ನಾನು ಶಿವ ಭಕ್ತ ಅಂತಾ ಬಹಿರಂಗವಾಗಿ ಹೇಳಿದ್ರು.  ಏಕೆಂದ್ರೆ ಗುಜರಾತ್ ಎಲೆಕ್ಷನ್ ನಲ್ಲಿ ಗದ್ದುಗೆ ಹಿಡಿಯದಿದ್ರು ಉತ್ತಮ ಸಾಧನೆಯನ್ನ ಕಾಂಗ್ರೆಸ್ ಮಾಡಿತ್ತು ಅದಕ್ಕೆ ಕಾರಣವಾಗಿತ್ತು. ಮತ್ತದೇ ಸಾಫ್ಟ್ ಹಿಂದುತ್ವ.ಸೋಮನಾಥೇಶ್ವರನ ಸನ್ನಿಧಿಗೆ ಹೋಗಿದ್ದ ರಾಹುಲ್ ಗಾಂಧಿ ಹಿಂದೂಯೇತರ ಕಾಲಂ ನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ರೂ ಇದನ್ನೆ ಅಸ್ತ್ರವನ್ನಾಗಿಸಿಕೊಂಡಿದ್ದ ಬಿಜೆಪಿ ರಾಹುಲ್ ಗಾಂಧಿ ಹಿಂದೂ ಧರ್ಮದವರೇ ಅಲ್ಲಾ ಅಂತಾ ಹುಯಿಲು ಎಬ್ಬಿಸಿದ್ರು, ಅಷ್ಟೆ ಯಾಕೆ ಬಿಜೆಪಿ ನಾಯಕರು ರಾಹುಲ್ ಗಾಂಧಿ ಕ್ರಿಶ್ಚಿಯನ್ ಪ್ರತಿ ಭಾನುವಾರ ಅವರು ಚರ್ಚ್ ಗೆ ಹೋಗುತ್ತಾರೆ ಅಂತಾ ಬಹಿರಂಗವಾಗಿ ಹೇಳಿದ್ರು. ಆಗ ರಾಹುಲ್ ಗಾಂಧಿ ಈ ಎಲ್ಲದಕ್ಕೂ ಸ್ಪಷ್ಟನೆಯನ್ನ ನೀಡಿದ್ರು. ರಾಹುಲ್ ಗಾಂದಿಯ ಧರ್ಮ ಯಾವುದು ಅನ್ನೋ ಚರ್ಚೆ ಕಾವೇರುವುದಕ್ಕೂ ಮುನ್ನವೇ ಎಂಟ್ರಿಕೊಟ್ಟ ರಾಹುಲ್ ಗಾಂಧಿ ನಾನು ಅಪ್ಪಟ ಶಿವ ಭಕ್ತ ಅಂತಾ ಹೇಳಿಕೆಯನ್ನ ನೀಡಿದ್ರು.

ಅಷ್ಟೆ ಅಲ್ಲ ತನ್ನ ಅಜ್ಜ ಮುತ್ತಜ್ಜರು ಕಾಶ್ಮೀರಿ ಪಂಡಿತರಾಗಿದ್ರು, ನಾವೇಲ್ಲರು ಜನಿವಾರ ಧರಿಸಿರೋ ಬ್ರಾಹ್ಮಣರು ಅಂತಾ ರಾಹುಲ್ ಗಾಂಧಿ ಘಂಟಾ ಘೋಷವಾಗಿ ಹೇಳಿದ್ರು. ಬಿಜೆಪಿಯ ಮಾತಿಗೆ ತಿರುಗೇಟು ನೀಡಲು ಹಾಗೆ ಹೇಳಿದ್ರೋ, ಅಥವ ನಿಜವಾಗಿಯೇ ರಾಹುಲ್ ಗಾಂಧಿ ಶಿವ ಭಕ್ತರೋ ಗೊತ್ತಿಲ್ಲ, ಒಟ್ನಲ್ಲಿ ಆ ಎಲೆಕ್ಷನ್ ಎಫೆಕ್ಟ್ ರಾಹುಲ್ ಗಾಂದಿಯನ್ನ ಶಿವಭಕ್ತರನ್ನಾಗಿ ರೂಪಿಸಿತ್ತು,ಕಾಂಗ್ರೆಸ್ ಪಾಲಿಗೆ ಕೊನೆಯ ಸಂಜೀವಿನಿ ಲೋಕಸಭೆಯಲ್ಲಿದೆ, ಅದಕ್ಕುನ್ನ ಪ್ರಾಕ್ಟಿಸ್ ಮ್ಯಾಚ್ ನಂತೆ ಪಂಚರಾಜ್ಯ ಚುನಾವಣೆ ಎದುರಾಗಲಿದೆ,

ಈ ಎರಡು ಚುನಾವಣೆ ದೇಶದ ದಿಕ್ಕು ಮಾತ್ರವಲ್ಲ ಪಕ್ಷದ ದಿಕ್ಕನ್ನೂ ಬದಲಿಸದೆ, ಏಕೆಂದ್ರೆ ಈ ಬಾರಿ ಕಾಂಗ್ರೆಸ್ ಏನಾದ್ರು ಸೋತಿದ್ದೇ ಆದಲ್ಲಿ ಶತಮಾನ ಪಕ್ಷದ ನಿರ್ನಾಮ ಅಂತಾನೇ ಭಾವಿಸಬೇಕು, ಬಿಜೆಪಿ ಗೆದ್ದಿದ್ದೇ ಆದಲ್ಲಿ ಮತ್ತೆ ಸುದೀರ್ಘ ಕಾಲ ಆಡಳಿತ ನಡೆಸಲಿದೆ. ಒಟ್ಟಾರೆ ರಾಹುಲ್ ಗಾಂಧಿ ಹಾಕುತ್ತಿರೋ ಜನಿವಾರ, ಖಾವಿ ಬಟ್ಟೆ, ಧರಿಸುತ್ತಿರೋ ತಿಲಕ, ಕೈ ಕೊಡುತ್ತಾ ಕೈ ಹಿಡಿಯುತ್ತಾ, ಬಿಜೆಪಿಯ ಅಸ್ತ್ರವನ್ನ ಮರು ಅಸ್ತ್ರವಾಗಿ ಬಳಸುತ್ತಿರೋ ರಾಹುಲ್ ಗೆ ಗೆಲುವು ಸಿಗುತ್ತಾ,? ಆ ಎಲ್ಲಾ ಪ್ರಶ್ನೆಗೆ ಉತ್ತರ ಈ ಪಂಚರಾಜ್ಯ ಫಲಿತಾಂಶ ಮತ್ತು ಲೋಕಸಭಾ ಫಲಿತಾಂಶ ಬರೋವರೆಗೂ ಕಾಯಲೇ ಬೇಕು.

LEAVE A REPLY

Please enter your comment!
Please enter your name here