Home Cinema “ಹಿಂದೆಯಿಂದ ಬಂದ ಸರ್ಜಾ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದರು, ನನ್ನ ರೂಮಿಗೆ ಬಾ ಎಂದು ಸರ್ಜಾ ಒತ್ತಾಯಿಸಿದ್ರು”...

“ಹಿಂದೆಯಿಂದ ಬಂದ ಸರ್ಜಾ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದರು, ನನ್ನ ರೂಮಿಗೆ ಬಾ ಎಂದು ಸರ್ಜಾ ಒತ್ತಾಯಿಸಿದ್ರು” ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪಗಳ ಸುರಿಮಳೆ..?!

3792
0
SHARE

ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಕೊನೆಗೂ ದೂರು ನೀಡಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐದು ಪುಟಗಳ ದೂರಿನಲ್ಲಿ ಆರೋಪಗಳ ಸುರಿಮಳೆ ಹರಿಸಿದ್ದಾರೆ. 2015ರ ನವೆಂಬರ್ ರಿಹರ್ಸಲ್ ಮಾಡುವಾಗ ಹಲವು ಬಾರಿ ನನ್ನನ್ನು ತಬ್ಬಿಕೊಂಡ್ರು, ಮುತ್ತು ಕೊಟ್ರು. ಊಟಕ್ಕಾಗಿ ಪದೇ ಪದೆ ಯುಬಿ ಸಿಟಿಗೆ ಬರುವಂತೆ ಕರೆಯುತ್ತಿದ್ದರು.

ನಾನು ಎಷ್ಟೇ ಪ್ರತಿರೋಧಿಸಿದ್ರು ನನ್ನನ್ನು ಮೈ-ಕೈ ಮುಟ್ಟುತ್ತಿದ್ರು ಎಂದು ಉಲ್ಲೇಖಿಸಿದ್ದಾರೆ. ನನ್ನನ್ನು ಒಬ್ಬಂಟಿಯಾಗಿ ರೆಸಾರ್ಟ್ ‌ಕರೆಯುವ ಹಿಂದಿನ ಉದ್ದೇಶವೇನು? ಸಹಜವಾಗಿಯೇ ಇದು ಕಾಮತೃಷೆ ತೀರಿಸಿಕೊಳ್ಳಲೆಂದೆ‌ ಅವರು ನನ್ನ ರೆಸಾರ್ಟ್​​​ಗೆ ಕರೆದಿದ್ರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಲೈಂಗಿಕ ದೌರ್ಜನ್ಯದಡಿ ಈಗ ಅರ್ಜುನ್ ಸರ್ಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಐಪಿಸಿ ಸೆಕ್ಷನ್ 354,354ಎ, 506,509ರ ಅಡಿಯಲ್ಲಿ ಕೇಸ್ ದಾಖಲಿಸಿ ಅರ್ಜುನ್ ಸರ್ಜಾಗೆ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆಗೆ ಆಗಮಿಸುವಂತೆ ಪೊಲೀಸರು ಅರ್ಜುನ್ ಸರ್ಜಾಗೆ ಸೂಚನೆ ನೀಡಿದ್ದಾರೆ.ಇನ್ನು, ಅರ್ಜುನ್ ಸರ್ಜಾ ವಿರುದ್ಧ ಸಲ್ಲಿಸಿರೋ ಐದು ಪುಟಗಳ ದೂರಿನಲ್ಲಿ ಆರೋಪಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ದೂರಿನಲ್ಲಿರೋ ಅಂಶಗಳನ್ನು ನೋಡೋಣ ಬನ್ನಿ.2015ನವೆಂಬರ್ ನಲ್ಲಿ ವಿಸ್ಮಯ ಎಂಬ ಚಿತ್ರದಲ್ಲಿ ನಾನು ನಟಿಸುತ್ತಿದ್ದೆ.ಆ ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ.
ಬೆಂಗಳೂರಿನ ಹೆಬ್ಬಾಳ ಬಳಿಯಿರೋ ಬಂಗಲೆಯೊಂದರಲ್ಲಿ ಶೂಟಿಂಗ್ ಇತ್ತು.ಅಂದು ಶೂಟಿಂಗ್ ಸ್ಥಳಕ್ಕೆ ಬೆಳಿಗ್ಗೆ ಸುಮಾರು 7.30ಕ್ಕೆ ತಲುಪಿದೆ.2015ರ ಡಿಸೆಂಬರ್ ನಲ್ಲಿ ದೇವನಹಳ್ಳಿ ಆಸ್ಪತ್ರೆಯೊಂದರಲ್ಲಿ ಶೂಟಿಂಗ್ ಇತ್ತು.

ಬೆಳಿಗ್ಗೆ 7.30ರಿಂದ ಸಂಜೆ 5 ಗಂಟೆವರೆಗೆ ಚಿತ್ರಿಕರಣ ನಡೆಯುತ್ತಿತ್ತು.ಶೂಟಿಂಗ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸತೊಡಗಿದ್ರು.ಶೂಟಿಂಗ್ ಬಳಿಕ ಖಾಸಗಿಯಾಗಿ ತಮ್ಮನ್ನು ಭೇಟಿ ಮಾಡುವಂತೆ ಒತ್ತಾಯಿಸಿದ್ರು.ಖಾಸಗಿಯಾಗಿ ಸ್ವಲ್ಪ ಸಮಯ ಇಬ್ಬರು ಒಟ್ಟಿಗೆ ಕಳೆಯೋಣ ಅಂತಾ ಹೇಳಿದ್ದರು.ಅದೇ ತಿಂಗಳು ಒಂದು ದಿನ ನಾನು ಕಾರಿನಲ್ಲಿ ಹೋಗುತ್ತಿದ್ದೆ.ನನ್ನ ಜೊತೆ ಬೋರೆಗೌಡ, ಕಿರಣ್ ಎಂಬುವರು ಕೂಡ ಇದ್ದರು.

ದೇವನಹಳ್ಳಿ ಸಿಗ್ನಲ್ ಬಳಿ ನನ್ನ ಕಾರು ನಿಂತಾಗ ಸೈಡ್ ನಲ್ಲಿ ಸರ್ಜಾ ಕಾರು ಬಂತು.ಕಾರಿನ ವಿಂಡೋ ಗ್ಲಾಸ್ ಇಳಿಸಿದ ಸರ್ಜಾ ತಮ್ಮನ್ನು ರೇಸಾರ್ಟ್ ಗೆ ಆಹ್ವಾನಿಸಿದ್ರು.ರೇಸಾರ್ಟ್ ನಲ್ಲಿ ಇಬ್ಬರು ಕೆಲ ಸಮಯ ಕಳೆಯೋಣ ಎಂದು ಪೀಡಿಸಿದ್ದರು.ನಾವಿಬ್ಬರೂ ಬಿಟ್ರೆ ನಮ್ಮ ರೂಮಿನಲ್ಲಿ ಬೇರೆ ಯಾರು ಇರೋದಿಲ್ಲ ಎಂದಿದ್ದರು.2016 ಜುಲೈ ತಿಂಗಳಲ್ಲಿ ಸರ್ಜಾ ನನ್ನನ್ನು ಯುಬಿ ಸಿಟಿಗೆ ಕರೆದೊಯ್ದಿದ್ದರು.
ಹಿಂದೆಯಿಂದ ಬಂದ ಸರ್ಜಾ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದರು.

ಊಟ ಮಾಡುವಾಗ ಅರ್ಜುನ್ ಸರ್ಜಾ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ರು.ಲಾಬಿಯಲ್ಲಿ ಏಕೆ ಕಾಯುತ್ತಿದ್ದೀಯ ನನ್ನ ರೂಮಿಗೆ ಬಾ ಎಂದು ಸರ್ಜಾ ಒತ್ತಾಯಿಸಿದ್ರು.ನಾನು ಬರಲ್ಲ ಎಂದಾಗ ನನಗೆ ಸರ್ಜಾ ಬೆದರಿಕೆ ಹಾಕಿ ನನ್ನ ವೃತ್ತಿ ಹಾಳು ಮಾಡುತ್ತೇನೆ ಎಂದಿದ್ದರು.ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ತಮ್ಮ ಜೊತೆ ಅಸಹ್ಯವಾಗಿ ವರ್ತಿಸಿದ್ದರು.ರಿಹರ್ಸಲ್ ಹೆಸರಿನಲ್ಲಿ ನನ್ನ ಮಾನ ಹಾನಿಗೆ ಸರ್ಜಾ ಪ್ರಯತ್ನ ನಡೆಸಿದ್ದರು.

ಸಮಯ ಸಿಕ್ಕಾಗೆಲ್ಲಾ ಕೆಟ್ಟ ರೀತಿಯಲ್ಲಿ ಸನ್ನೆ ಮಾಡುವುದ ಸ್ಮೂಚ್ ಮಾಡಲ ಯತ್ನಿಸುತ್ತಿದ್ದರು.ಈ ವಿಚಾರವನ್ನ ನನ್ನ ಸ್ನೇಹಿತೆ ಯಶಸ್ವಿನಿಯಲ್ಲಿ ಹೇಳಿಕೊಂಡಿದ್ದೇನೆ.ಲೈಗಿಂಕ ಕಿರುಕುಳದಿಂದ ಮಾನಸಿಕವಾಗಿ, ದೈಹಿಕವಾಗಿ ನೊಂದಿದ್ದೇನೆ.ಚಿತ್ರರಂಗದಲ್ಲಿ ಮತ್ತು ರಾಜಕೀಯವಾಗಿ ಸರ್ಜಾ ಬಹಳ ಪ್ರಭಾವಿ ವ್ಯಕ್ತಿ.ಮೀಟೂ ಅಭಿಯಾನದಲ್ಲಿ ಆರೋಪ ಮಾಡಿದ ಮೇಲೆ ನನಗೆ ಜೀವ ಬೆದರಿಕೆ ಇದೆ.ನಿದ್ದೆ ಇಲ್ಲದ ರಾತ್ರಿಗಳನ್ನು ನಾನು ಕಳೆಯುತ್ತಿದ್ದೇನೆ, ನನ್ನ ವೃತ್ತಿ ಜೀವನಕ್ಕೆ ಆಪತ್ತು ಇದೆ.

LEAVE A REPLY

Please enter your comment!
Please enter your name here