Home District “ಹೀಗೆ ಆದ್ರೆ ನಾನು ಹೇಮಾವತಿಗೆ ಡೈನಾಮೇಟ್ ಇಡ್ತೀನಿ, ತಾಕತ್ತಿದ್ರೆ ತಡೀರಿ ನೋಡೋಣ” ಎಂದ ಶಿವಲಿಂಗೇಗೌಡ…

“ಹೀಗೆ ಆದ್ರೆ ನಾನು ಹೇಮಾವತಿಗೆ ಡೈನಾಮೇಟ್ ಇಡ್ತೀನಿ, ತಾಕತ್ತಿದ್ರೆ ತಡೀರಿ ನೋಡೋಣ” ಎಂದ ಶಿವಲಿಂಗೇಗೌಡ…

507
0
SHARE

ಕೊನೆಗೂ ತುಮಕೂರಿನಲ್ಲಿ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ಇಂದು ನಡೆದಿದೆ.. ಕಲ್ಪತರು ನಾಡಿಗೆ ಹೇಮೇ ಹರಿಯಲು ಸೂಪರ್ ಸಿಎಂ ಹೆಚ್.ಡಿ.ರೇವಣ್ಣ ಅಡ್ಡಗಾಲು ಅನ್ನೋ ಆರೋಪದಿಂದ ಮುಕ್ತಗೊಳ್ಳಲು ಇಂದು ಸ್ವತಃ ರೇವಣ್ಣ ಅವ್ರ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ.. ಸಭೆಯಲ್ಲಿ ಒಂದೆಡೆ ಹೇಮಾವತಿ ನಾಲೆಗೆ ಡೈನಾಮೇಟ್ ಇಡ್ತೀನಿ, ಅದೇನ್ ಮಾಡ್ಕೋತೀರೋ ಮಾಡ್ಕೊಳಿ ಅಂತಾ ಅರಸೀಕೆರೆ ಶಾಸಕರು ಅಸಮಾಧಾನ ಹೊರಹಾಕಿದ್ರೆ,,

ಇನ್ನೊಂದೆಡೆ ದೇವೇಗೌಡರ ಕುಟುಂಬದ ಮೇಲೆ ಆರೋಪ ಮಾಡೋ ಮಾಜಿ ಸಂಸದ ಜಿ.ಎಸ್.ಬಸವರಾಜು ನೀರುಗಂಟಿಯಾಗಲೀ ಅಂತಾ ರೇವಣ್ಣ ಗುಟುರು ಹಾಕಿದ್ದಾರೆ.ಕಲ್ಪತರು ನಾಡು ತುಮಕೂರ ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ನೀರಿಗಾಗಿ ಇಂದು ಮಹತ್ವದ ಸಭೆ ನಡೆಯಿತು, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಸಭೆಯಲ್ಲಿ ಏಕಾಏಕಿ ಹೇಮಾವತಿ ನಾಲೆ ಹೊಡೆಯುವ ವಿಚಾರವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.. ತಿಪಟೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ನಾಲೆ ಹೊಡೆಯುತ್ತಿದ್ದು, ಅರಸೀಕೆರೆಗೆ ನೀರು ಬಾರದೇ ಅನ್ಯಾಯವಾಗುತ್ತಿದೆ.. ಹೀಗೆ ಆದ್ರೇ ನಾಲೆಗೆ ಡೈನಾಮೇಟ್ ಇಡ್ತೀನಿ, ಅದೇನ್ ಮಾಡ್ಕೊಳ್ತಿರೋ ಮಾಡ್ಕೊಳಿ. ನೋಡೇ ಬಿಡ್ತೀನಿ, ಕೇಸ್ ಆದರೂ ಪರವಾಗಿಲ್ಲ, ಡೈನಾಮೇಟ್ ಇಟ್ಟೇ ಇಡ್ತೀನಿ ಅಂತಾ ಸಭೆಯಲ್ಲಿ ತಮ್ಮ ಆಕ್ರೋಷ ಹೊರಹಾಕಿದ್ದಾರೆ..

ಬಳಿಕ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಇದೆಲ್ಲಾ ಸಭೆಯಲ್ಲಿ ಹೆದರಿಸೋದಕ್ಕೆ ಹೇಳಿದೆ ಅಷ್ಟೇ, ನೀರಿಲ್ಲದೇ ನಾವು ಪರಿತಪಿಸುವಂತಾಗಿದೆ ಅಂತಾ ಯೂ ಟರ್ನ್ ಹೊಡೆದಿದ್ದಾರೆ.ಇನ್ನೂ ಇದಕ್ಕೂ ಮೊದಲು, ತುಮಕೂರಿಗೆ ಹೇಮಾವತಿ ನೀರು ಹರಿಸಲು ಹೆಚ್.ಡಿ.ದೇವೇಗೌಡ ಕುಟುಂಬದವರು ಅಡ್ಡಗಾಲಾಗಿದ್ದಾರೆ ಅನ್ನೋ ಆರೋಪ ಮಾಡಿದ್ದ ಮಾಜಿ ಸಂಸದ ಜಿ.ಎಸ್.ಬಸವರಾಜುಗೆ ಟಾಂಗ್ ನೀಡಿದ್ದ ಹೆಚ್.ಡಿ.ರೇವಣ್ಣ, ಮಾಜಿ ಸಂಸದರು ನೀರುಗಂಟಿ ಕೆಲಸ ಮಾಡಲಿ ಎಂದು ಲೇವಡಿ ಮಾಡಿದ್ದಾರೆ..

ಜಿ.ಎಸ್.ಬಸವರಾಜು ಅವ್ರಿಗೆ ಮುಂದಿನ ಲೋಕಸಭಾ ಚುನಾವಣೆವರೆಗೂ ಕೆಲಸ ಇಲ್ಲದಂತಾಗಿದ್ದು,, ಸುಖಾಸುಮ್ಮನೆ ನಮ್ಮ ವಿರುದ್ದ ಆರೋಪ ಮಾಡ್ತಾರೆ.. ಡ್ಯಾಂ ಕೀ ಅವ್ರಿಗೆ ಕೊಡ್ತೇನೇ, ಅವರೇ ನೀರು ಗಂಟಿ ಕೆಲಸ ಮಾಡಿ,ಎಷ್ಟು ಬೇಕೋ ಅಷ್ಟು ನೀರು ಹರಿಸಿಕೊಳ್ಳಲಿ ಅಂತಾ ರೇವಣ್ಣ ಗುಟುರು ಹಾಕಿದ್ದಾರೆ..ಇನ್ನೂ ಹೇಮಾವತಿ ಸಭೆ ವಿಚಾರವಾಗಿ ಡಿಸಿಎಂ ಜೊತೆ ಮಾತನಾಡಲು ಪ್ರಯತ್ನಿಸಿದ್ದ ಹೆಚ್.ಡಿ.ರೇವಣ್ಣಗೆ ಕೊನೆಗೂ ಇಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಕರೆ ಮಾಡಿ ಮಾತನಾಡಿದರು..

ಸಭೆ ಬಳಿಕ ಹೆಚ್.ಡಿ.ರೇವಣ್ಣ ಕರೆ ಮಾಡಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್ ಗೆ, ಅಣ್ಣ ನಿನ್ನೆಯಿಂದ ಪೋನ್ ಮಾಡಿದ್ರೂ ನೀವು ಸ್ವೀಕರಿಸಲಿಲ್ಲ ಅಂತಾ ರೇವಣ್ಣ ಅವಲತ್ತುಕೊಂಡ್ರು. ಒಟ್ಟಾರೆಯಾಗಿ ಇಂದು ನಡೆದ ಸಭೆಯಲ್ಲಿ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಸಮರ್ಪಕವಾಗಿ ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮುಂದುವರೆದು ಬೆಂಗಳೂರಿನಲ್ಲಿ ಸಿಎಂ ಹಾಗೂ ಡಿಸಿಎಂ ಸಮಕ್ಷಮದಲ್ಲಿ ಸಭೆ ಸೇರೋದಾಗಿ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here