Home District “ಹುಚ್ಚರು ನೀವು, ಅತಿಯಾಯ್ತು ನಿಮ್ಮದು ಜಾಡಿಸಿ ಒದೆಯಬೇಕು” ಅಂತಾ ರಮೇಶ್ ಆವಾಜ್..!

“ಹುಚ್ಚರು ನೀವು, ಅತಿಯಾಯ್ತು ನಿಮ್ಮದು ಜಾಡಿಸಿ ಒದೆಯಬೇಕು” ಅಂತಾ ರಮೇಶ್ ಆವಾಜ್..!

554
0
SHARE

ಗೋಕಾಕ್ ಸಾಹುಕಾರ್… ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಫುಲ್ ಗರ್ಂ ಆಗಿದ್ದಾರೆ. ಎಂಟು ದಿನಗಳ ಅಜ್ಞಾತವಾಸದ ಬಳಿಕ ಮಾಧ್ಯಮದವರ ಕಣ್ಣಿಗೆ ಕಾಣಿಸಿಕೊಂಡಿದ್ದು. ಮಾಧ್ಯಮದವರನ್ನ ಒದೆಯಬೇಕೆಂದು ಬೈಯುವದರ ಮೂಲಕ ಗೋಕಾಕ್ ಸಾಹುಕಾರ್ ದರ್ಪ ಪ್ರದರ್ಶಿಸಿದ್ದಾರೆ. ಇನ್ನೂ ರಮೇಶ್ ಜಾರಕೀಹೊಳಿಯವರನ್ನು ಬಿಜೆಪಿ ಪಕ್ಷಕ್ಕೆ ಕರೆತರುವ ಯಾವುದೇ ರಾಜಕೀಯ ಬೆಳವಣಿಗೆಗಳು ನಡೆದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ.

ನೀವು ಹುಚ್ಚರಿದ್ದೀರಿ, ನಿಮ್ಮನ್ನು ಒದಿಯಬೇಕು, ಜಾಡಿಸಿ ಒದಿಯಬೇಕು ಅತಿಯಾಯ್ತು ನಿಮ್ಮದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ.ಕಳೆದ ಎಂಟು ದಿನಗಳಿಂದ ಸ್ವತಃ ಕಾಂಗ್ರೆಸ್ನವರಿಗೇ ಸಿಗದೆ ಕಣ್ಮರೆಯಾಗಿದ್ದ ರಮೇಶ್ ಜಾರಕಿಹೊಳಿ ಗೋಕಾಕ್ ಮಿಲ್ನಲ್ಲಿರುವ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡಿ ನಿವಾಸಕ್ಕೆ ಹಿಂದಿರುಗುವಾಗ ಪ್ರತ್ಯಕ್ಷರಾಗಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ, ಮಾಧ್ಯಮಗಳು ರಮೇಶ ಜಾರಕಿಹೊಳಿ ಮುಂದಿನ ನಡೆ ಏನು ಎಂದು ಪ್ರಶ್ನಿಸಿಲು ಗೋಕಾಕ ನಿವಾಸದ ಮುಂದೆ ಠಿಕಾಣಿ ಹೂಡಿದ್ದರು.

ಆದ್ರೆ ಬ್ಯಾಡ್ಮೀಂಟನ್ ಆಡಿ ರಿಲ್ಯಾಕ್ಸ್ ಆದ ರಮೇಶ ಜಾರಕಿಹೊಳಿ ಅವರು, ಮಾಧ್ಯಮಗಳ ಕ್ಯಾಮೆರಾಮಗಳನ್ನ ಕಂಡು ಗರ್ಂ ಆದ್ರು. ತಮ್ಮ ಇನ್ನೋವಾ ಕಾರಿನಿಂದ ಕೇಳಗೆ ಇಳಿಯುತ್ತಿದ್ದಂತೆ ನಿಮಗೆ ಜಾಡಿಸಿ ಒದಿಯಬೇಕು.. ನಿಮ್ಮದು ಅತಿಯಾಯ್ತು.. ಹುಚ್ಚರಿದೀರಿ ಅಂತಾ ಬಾಯಿ ಹರಿಬಿಟ್ಟಿದ್ದಾರೆ.ಸಚಿವ ಸ್ಥಾನ ಕಳೆದುಕೊಂಡು ಸತತ ಒಂದು ವಾರದ ಕಾಲ ಪ್ರಯತ್ನ ನಡೆಸಿದರೂ ರಮೇಶ್ ಜಾರಕಿಹೊಳಿಗೆ ಮ್ಯಾಜಿಕ್ ನಂಬರ್ ಎಂದೆನಿಸಿರುವ 15 ಶಾಸಕರನ್ನು ಬಿಜೆಪಿ ಕ್ಯಾಂಪ್ ಗೆ ಕರೆ ತರಲು ವಿಫಲರಾಗಿದ್ದಾರೆ.

ಹೀಗಾಗಿ ಅವರು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮತ್ತೊಂದೆಡೆ ರಮೇಶ್ ಜಾರಕೀಹೊಳಿಯವರನ್ನು ಬಿಜೆಪಿ ಪಕ್ಷಕ್ಕೆ ಕರೆತರುವ ಯಾವುದೇ ರಾಜಕೀಯ ಬೆಳವಣಿಗೆಗಳು ನಡೆದಿಲ್ಲ. ಮಾದ್ಯಮಗಳಲ್ಲಿ ಬರುತ್ತಿರುವ ವಿಷಯ ಸತ್ಯಕ್ಕೆ ದೂರವಾದದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಒಟ್ಟಾರೆ ತೆರೆಮರೆಯಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದ ಬಿಜೆಪಿ ನಾಯಕರು ಮತ್ತು ರಮೇಶ್ ಜಾರಕಿಹೊಳಿ ಪ್ಲಾನ್ ಸದ್ಯಕ್ಕೆ ವಿಫಲವಾಗಿದೆ.. ರಮೇಶ್ ಜಾರಕಿಹೊಳಿ ಗುಮ್ಮನಿಂದ ಮೈತ್ರಿ ಸರ್ಕಾರ ಪಾರಾಗಿದೆ.. ಆದ್ರೆ ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಗಳಲ್ಲಿರೋ ಅತೃಪ್ತ ಶಾಸಕರನ್ನ ಸೆಳೆಯಲು ಮತ್ತೆ ಮುಂದಾಗಬಹುದು…

LEAVE A REPLY

Please enter your comment!
Please enter your name here