Home Cinema ಹುಚ್ಚೆಬ್ಬಿಸಿದ K G F ಕ್ರೇಜ್..! ದಾಖಲೆಗಳಲ್ಲ ಪೀಸ್ ಪೀಸ್..!

ಹುಚ್ಚೆಬ್ಬಿಸಿದ K G F ಕ್ರೇಜ್..! ದಾಖಲೆಗಳಲ್ಲ ಪೀಸ್ ಪೀಸ್..!

1424
0
SHARE

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ 2000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮೊದಲ ದಿನ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು 5 ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಅಲ್ಲದೆ ರಾಜ್ಯದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೆಜಿಎಫ್’ ಬಿಡುಗಡೆಯಾಗಿದ್ದು ತಮಿಳುನಾಡಿನ 174 ಥಿಯೇಟರ್‌ಗಳಲ್ಲಿ, ಕೋಲಾರದ 3 ಚಿತ್ರಮಂದಿರಗಳಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಚಿತ್ರ ತೆರೆಕಂಡಿದೆ. ಇನ್ನು ಅಮೆರಿಕಾ, ಕೆನಡಾ, ಯು.ಕೆ ನಲ್ಲೂ ಕೆಜಿಎಫ್ ಯಶಸ್ವಿಯಾಗಿ ಬಿಡುಗಡೆಯಾಗಿ ಕಂಡಿದೆ. ಚಿತ್ರಮಂದಿರದಲ್ಲಿ ಯಶ್ ಅಭಿಮಾನಿಗಳಿಂದ ತಿಂಡಿ ವಿತರಣೆ ಮಾಡಿದ್ದು, ಮಧ್ಯರಾತ್ರಿಯಿಂದಲೇ ಥಿಯೇಟರ್‌ಗಳ ಬಳಿ ಟಿಕೆಟ್‌ಗಾಗಿ ಅಭಿಮಾನಿಗಳ ಕ್ಯೂನಲ್ಲಿ ನಿಂತು ಸಿನೆಮಾ ನೋಡಿದ್ದಾರೆ.

ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ. ಇನ್ನು ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ ತಾಂತ್ರಿಕ ದೋಷದಿದಂದ ಕೆಜಿಎಫ್ ಚಿತ್ರ ಪ್ರದರ್ಶನ ಕಂಡಿಲ್ಲ, ಹೇಗಾಗಿ ಅಭಿಮಾನಿಗಳು ರೊಚ್ಚಿಗೆದ್ದಿದ್ರು.. ಇನ್ನು ನರ್ತಕಿ ಚಿತ್ರಮಂದಿದರದಲ್ಲಿರುವ ಕಟೌಟ್‌ಗೆ ರಾಕಿಂಗ್ ಸ್ಟಾರ್ ಯಶ್ ಹೆಲಿಕಾಫ್ಟರ್ ಮೂಲಕ ಹೂವನ್ನು ಹಾಕಿದರುರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಬಿಡುಗಡೆ 5 ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಕರ್ನಾಟಕದಲ್ಲಿ 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ ತೆರೆಕಂಡಿದೆ.ಮಧ್ಯರಾತ್ರಿಯಿಂದಲೇ ಟಿಕೆಟ್ ಗಾಗಿ ಅಭಿಮಾನಿಗಳು ಕ್ಯೂ ನಿಂತಿದ್ದಾರೆ. ತಮಿಳುನಾಡಿನ 174 ಥಿಯೇಟರ್ ಚಿತ್ರ ರಿಲೀಸ್ಆಗಿದೆ.ಭಾರತ ದೇಶದಲ್ಲಿ ಮಾತ್ರವಲ್ಲದೇ ಅಮೆರಿಕಾ,ಕೆನಡಾ ಹಾಗೂ ಯುಕೆಯಲ್ಲೂ ಕೆಜಿಎಫ್ ಬಿಡುಗಡೆಯಾಗಿದೆ.

ಕೆಜಿಎಫ್ ನಲ್ಲಿ 70 ರ ದಶಕದ ಝಲಕ್ ತೆರೆ ಮೇಲೆ ಮೂಡಿಬಂದಿದೆ.ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಆಗಿದೆ.ಸಿನಿಮಾವನ್ನು ಪೈರಸಿ ಮಾಡದಂತೆ ಚಿತ್ರಮಂದಿರದಲ್ಲಿ ನೋಡುವಂತೆ ಅಭಿಮಾನಿಗಳಗೆ ರಾಕಿಂಗ್ ಸ್ಟಾರ್ ಯಶ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡಿ ಅಭಿಮಾಮಿಗಳಿಗೆ ಮನವಿ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here