Home Cinema ಹುಟ್ಟಿದ ಹಬ್ಬಕ್ಕೆ ಆಗುತ್ತಾ, ಆಗಲ್ವಾ… “ಪವರ್ ಸ್ಟಾರ್” ದರ್ಶನ..? “ಅಪ್ಪು” ಮಾಡಿಕೊಂಡ “ಮನವಿ”ಗೆ ಬೆಲೆ ಕೊಡುತ್ತಾ...

ಹುಟ್ಟಿದ ಹಬ್ಬಕ್ಕೆ ಆಗುತ್ತಾ, ಆಗಲ್ವಾ… “ಪವರ್ ಸ್ಟಾರ್” ದರ್ಶನ..? “ಅಪ್ಪು” ಮಾಡಿಕೊಂಡ “ಮನವಿ”ಗೆ ಬೆಲೆ ಕೊಡುತ್ತಾ ಭಕ್ತಗಣ..?

442
0
SHARE

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಸದ್ಯ ನಟಸಾರ್ವಭೌಮ ಸಕ್ಸಸ್‌ನ ಅಲೆಯಲ್ಲಿ ತೇಲ್ತಿರುವ ನಟ. ಸದಾ ಅಭಿಮಾನಿಗಳನ್ನು ಗೌರವಿಸುವ, ಪ್ರೀತಿಯಿಂದ ಅಭಿಮಾನದ ಅಲೆಯಲ್ಲಿ ತೇಲುವ ಅಪ್ಪು. ಇತ್ತೀಚೆಗೆ ಅಭಿಮಾನಿಗಳಿಗೆ, ಅಭಿಮಾನದಿಂದ ಪ್ರೀತಿಯ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಯಸ್.. ಇನ್ನೇನು ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲ್ಲೇ ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಲು ಸಖತ್ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ಹುಟ್ಟುಹಬ್ಬ ಅಂದ್ರೆ ಅಭಿಮಾನಿಗಳ ಹಬ್ಬ, ಚಿತ್ರರಸಿಕರ ಹಬ್ಬ ಹಾಗಾಗಿ, ಅಭಿಮಾನಿಗಳು ಪ್ರೀತಿಯ ಅಪ್ಪು ಬರ್ತ್‌ಡೇಯನ ಹಿಂದಿನ ರಾತ್ರಿ ಸಂಭ್ರಮ ಸಡಗರದಿಂದ ಆಚರಣೆ ಮಾಡ್ತಾರೆ. ಆದ್ರೇ ಈ ಭಾರಿ ಇದಕ್ಕೆಲ್ಲಾ ಕಡಿವಾಣ ಹಾಕಿರುವ ಅಪ್ಪು ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ನಾನು ೧೬ ರಾತ್ರಿ ಸಿಗುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಅಷ್ಟೇ ಅಲ್ಲದೆ ಈ ಭಾರಿ ಅಭಿಮಾನಿಗಳಲ್ಲಿ ರಾತ್ರಿ ದರ್ಶನ ನೀಡದಿರಲು ನಿರ್ಧರಿಸಿರುವ ಅಪ್ಪು. ಸದಾಶಿವನಗರದ ದೊಡ್ಮನೆ ಅಂಗಳದಿಂದ ಇನ್ನೊಂದು ಮನವಿ ಮಾಡಿಕೊಂಡಿದ್ದಾರೆ. ಅದೇನಪ್ಪ, ಅಂದ್ರೆ ಸದಾ ಸಿಂಪ್ಲಿ ಸಿಟಿಯನ್ನು ಹೆಚ್ಚಾಗಿ ಇಷ್ಟ ಪಡುವ ಪುನೀತ್ ಈ ಭಾರಿ ಪಟಾಕಿ, ಹಾರ ತುರಾಹಿಗಳನ್ನು, ಉಡುಗೊರೆಗಳನ್ನು ತರಬಾರದೆಂಬ ಆದೇಶವನ್ನು ನೀಡಿದ್ದಾರೆ. ದೂರದ ಊರುಗಳಿಂದ ನೀವುಗಳು ನನ್ನನ್ನು ನೋಡಲು ಬರುವುದು.

ಬಂದು ಭೇಟಿ ಮಾಡುವುದೇ ನನಗೆ ದೊಡ್ಡ ಉಡುಗೊರೆ. ನೀವು ನನಗಾಗಿ ಮಾಡುವ ಖರ್ಚ್ಚನ್ನು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಿ. ಅಷ್ಟೇ ಸಾಕು ಎಂಬ ಮನವಿಯೊಂದನ್ನು ಅಪ್ಪು ಪ್ರೀತಿಯ ಅಭಿಮಾನಿಗಳಲ್ಲಿ ಮಾಡಿಕೊಂಡಿದ್ದಾರೆ.ಪ್ರತಿ ಬಾರಿಯಂತೆ ೧೭ರ ಬೆಳಗೆ ಅಭಿಮಾನಿಗಳನ್ನು ಅಪ್ಪು ಭೇಟಿ ಮಾಡಲಿದ್ದು. ಸೆಲ್ಫಿಗೆ ಅವಕಾಶ ಮಾಡಿಕೊಡಲಿದ್ದಾರೆ. ಆದ್ರೆ ಪ್ರತಿವರ್ಷದಂತೆ ೧೭ರಂದು ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಖತ್ ತಯಾರಿಗಳನ್ನು ಮಾಡಿಕೊಂಡಿದ್ರು. ರಾಜ್ಯದ ಮೂಲೆ ಮೂಲೆಗಳಿಂದ ರಾತ್ರೋರಾತ್ರಿ ಅಪ್ಪು ಮನೆ ಬಳಿ ಬಂದು ಕೇಕ್ ಕತ್ತರಿಸಿ ಸಂಭ್ರಮ ಪಡುವ ತವಕದಲ್ಲಿದ್ರು. ಆದ್ರೆ ಈ ಅವಕಾಶಕ್ಕೆ ಅಪ್ಪು ಕಡಿವಾಣ ಹಾಕಿದ್ದು.

ಯುವರತ್ನನ ಮನವಿಗೆ ಅಭಿಮಾನಿಗಳು ತಲೆ ಭಾಗಿದ್ದು ಉತ್ಸವಕ್ಕೆ ಬ್ರೇಕ್ ಹಾಕಿದ್ದಾರೆ. ಅಪ್ಪುಗೆ ಫಸ್ಟ್ ಬರ್ತ್‌ಡೇ ವಿಷ್ ಮಾಡಲು ಕಾದು ಕುಳಿತ್ತಿದ್ದ ಫ್ಯಾನ್ಸ್, ನೆಚ್ಚಿನ ನಟನ ದರ್ಶನ ಸಿಗುವುದಿಲ್ಲವೆಂದು ಬೇಸರಿಕೊಂಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ. ಅರ್ಥಪೂರ್ಣವಾಗಿ ಅಭಿಮಾನಿಗಳ ಜೊತೆಗೆ ಆಚರಿಸಲು ಇಷ್ಟ ಪಡುತ್ತಿದ್ದಾರೆ. ಈ ಒಂದು ಪದ್ದತಿಗೆ ಅಪ್ಪು ಸಹ ಸೇರಿಕೊಂಡಿದ್ದು. ಸದ್ಯ ಕೆಲ ಅಪ್ಪು ಫ್ಯಾನ್ಸ್‌ಗಳು ಸಮಾಜಸೇವೆ ಮಾಡಲು ಸಹ ಮುಂದಾಗಿದ್ದಾರೆ.

ಕಳೆದ ಭಾರಿ ಅಪ್ಪು ಫ್ಯಾನ್ಸ್ ರಾಜರತ್ನೋತ್ಸವವನ್ನು ಆಚರಿಸಿದ್ರು. ಈ ಮೂಲಕ ತಮ್ಮ ನೆಚ್ಚಿನ ನಟಿನಿಗೆ ಅಭಿಮಾನ ಅಭಿಮಾನವನ್ನು ತೋರಿಸುವ ಮೂಲಕ ಸಂಭ್ರಮಿಸಿದ್ರು.
ಇನ್ನು, ನಾಳೆ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ನಟಸಾರ್ವಭೌಮ ಚಿತ್ರದ ಟೈಟಲ್ ಸಾಂಗ್ ಟ್ರ್ಯಾಕ್‌ಗೆ ಹೊಸ ಲಿರಿಕ್ಸ್ ಬರೆದು ಪವನ್ ಒಡೆಯರ್ ಹಾಡನ್ನು ರಿಲೀಸ್ ಮಾಡಲಿದ್ದು. ಜೇಮ್ಸ್ ಫಸ್ಟ್ ಲುಕ್, ಯುವರತ್ನ ಚಿತ್ರದ ಟೀಸರ್‌ಗಳು ರಿಲೀಸ್ ಆಗಲಿದೆ. ಸದ್ಯ ಹುಬ್ಬಳ್ಳಿಯಲ್ಲಿ ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ಮೂಡಿಬರ್ತಿರುವ ಯುವರತ್ನ ಚಿತ್ರ ಶೂಟಿಂಗ್‌ನಲ್ಲಿ ಅಪ್ಪು ಬಿಝೀಯಾಗಿದ್ದಾರೆ.

ಇದ್ರ ನಡುವೆಯು ಅಪ್ಪು ಹುಟ್ಟುಹಬ್ಬದಂದು ಅಭಿಮಾನಿಗಳಿಗಳನ್ನು ಭೇಟಿಯಾಗಲಿದ್ದಾರೆ.ಅದೇನೇ ಇದ್ರು.. ಯುವರತ್ನನ ಹುಟ್ಟುಹಬ್ಬ ಕ್ಷಣಗಣನೇ ಶುರುವಾಗಲಿದ್ದು. ವರ್ಷಕ್ಕೊಮ್ಮೆ ನಡೆಯುವ ಅಭಿಮಾನಿಗಳ ಈ ಉತ್ಸವದಲ್ಲಿ ಈ ಭಾರಿ ಅಭಿಮಾನಿಗಳು ಯಾವರೀತಿ ಭಾಗಿಯಾಗಲಿದ್ದಾರೆ. ಅಪ್ಪು ಮಾಡಿರುವ ಮನವಿಗೆ ಅಭಿಮಾನಿಗಳು ಯಾವರೀತಿ ಸ್ಪಂಧಿಸಲಿದ್ದಾರೆ ಎಂಬ ಕುತೂಹ ಹೆಚ್ಚಾಗುವಂತೆ ಮಾಡ್ತಿದೆ.

LEAVE A REPLY

Please enter your comment!
Please enter your name here