Home Cinema ಹುಷಾರ್ ನಾಲಿಗೆ ಮೇಲೆ ಹಿಡಿತವಿರಲಿ, ಹೀಗಂದ್ರೇಕೆ ರಶ್ಮಿಕಾ..! “ಓ ಭ್ರಮೆ”…..

ಹುಷಾರ್ ನಾಲಿಗೆ ಮೇಲೆ ಹಿಡಿತವಿರಲಿ, ಹೀಗಂದ್ರೇಕೆ ರಶ್ಮಿಕಾ..! “ಓ ಭ್ರಮೆ”…..

584
0
SHARE

ರಶ್ಮಿಕಾ ಮಂದಣ್ಣ.. ಅಖಿಲ ಕರ್ನಾಟಕ ಪಡ್ಡೆಗಳ ಹೃದಯದ ಒಡತಿ. ನೋಡಲು ಸುಂದರ.. ಅಭಿನಯನೂ ಮಧುರ.. ಒಂಧರ್ಥದಲ್ಲಿ ರಶ್ಮಿಕಾ ಬಗ್ಗೆ ಸದ್ಯ ಹೇಳಲು ಪದಗಳೇ ಸಿಗುವದಿಲ್ಲ.
ದಕ್ಷಿಣ ಚಿತ್ರರಂಗವನ್ನ ಅಕ್ಷರಶ ಆಳುತ್ತಿರುವ ರಶ್ಮಿಕಾ, ಬೆಂಗಳೂರು.. ಹೈದ್ರಾಬಾದ್ ಅಂಥ ಓಡಾಡುತ್ತಿದ್ದಾರೆ.

ಅದು, ಅಭಿಮಾನಿಗಳೂ ಅಭಿಮಾನ ಪಡುವಂಥ ಸಿನಿಮಾ ಮಾಡುವ ಕನಸು ಹೊತ್ತು. ಬಟ್, ರಶ್ಮಿಕಾ ಕಾಣ್ತಿರುವ ಇದೇ ಕನಸು ಕೆಲವರಿಗೆ ಕಿರಿಕಿರಿಯನ್ನುಂಟು ಮಾಡ್ತಿದೆ ಅನ್ಸುತ್ತೆ. ಹಾಗಾಗಿ, ಕಾಲ್ ಎಳೆಯೋ ಕ್ರಿಮಿಗಳೂ ಸಾಮಾಜಿಕ ಜಾಲತಾಣದಲ್ಲಿ ತುಸು ಹೆಚ್ಚೇ ಬೆಳೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಅನ್ನುವಂತೆ ರಶ್ಮಿಕಾ ಇತ್ತೀಚಿಗೆ ವ್ಯಕ್ತಿಯೊಬ್ಬನ ಮೇಲೆ ಕೆಂಡ ಕಾರಿದ್ದಾರೆ. ಅದು, ಅಭಿಮಾನಿಯ ಅಭಿಮಾನಕ್ಕೆ ಶರಣು ಅನ್ನುವ ಮೂಲಕ.ಹೌದು, ಅಸಲಿಗೆ.. ರಶ್ಮಿಕಾ ಮಂದಣ್ಣಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ.

ಇದೇ ಅಭಿಮಾನಿಗಳಿಗಾಗಿ ಅಂಥನೇ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಕೂಡಾ ಆಗಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಕಷ್ಟ ಸುಖ ಕೇಳುತ್ತಾ ಅಭಿಮಾನಿಗಳ ಅಭಿಮಾನ ಕಂಡು ಹಿರಿ ಹಿರಿ ಹಿಗ್ಗುವ ರಶ್ಮಿಕಾಗೆ, ಇತ್ತೀಚಿಗೆ ವ್ಯಕ್ತಿಯೊಬ್ಬ ತನ್ನ ಅಭಿಮಾನಿಗೆ ನಿಂದಿಸಿದ ರೀತಿ ತುಂಬಾನೇ ನೋವುಂಟು ಮಾಡಿದೆ. ಹಾಗಾಗೇ ಅಭಿಮಾನಿಯನ್ನ ನಿಂದಿಸಿದ ವ್ಯಕ್ತಿ ಮೇಲೆ ಗರಂ ಆಗಿದ್ದಾರೆ ರಶ್ಮಿಕಾ.

ನಿಮಗೆ ಗೊತ್ತಿರಲಿ, ರಶ್ಮಿಕಾ ಅಭಿನಯದ ಸಿನಿಮಾದ ಹಾಡುಗಳೂ, ಸೊಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ವೆ. ಕೋಟಿ ಕೋಟಿ ಜನ ರಶ್ಮಿಕಾ ಅಭಿನಯದ ಚಿತ್ರದ ಹಾಡುಗಳನ್ನ ನೋಡಿ ಎಂಜಾಯ್ ಮಾಡ್ತಾರೆ. ಎಷ್ಟರ ಮಟ್ಟಿಗೆ ಅಂದ್ರೆ ೨ ಕೋಟಿ ೫ ಕೋಟಿ ಜನ ಹಾಡನ್ನ ನೋಡಿರ‍್ತಾರೆ. ಇದು, ಸಹಜವಾಗಿ ಅಭಿಮಾನಿಗಳ ಸಂಭ್ರಮ.. ಸಂತಸವನ್ನೂ ಹೆಚ್ಚಿಸಿರುತ್ತೆ. ಹಾಗಾಗೇ, ತಮ್ಮ ಖುಷಿಯನ್ನ ಹಂಚಿಕೊಳ್ಳಲು ಅಭಿಮಾನಿಗಳು ಇದೇ ಸಾಮಾಜಿಕ ಜಾಲತಾಣದ ಮೊರೆ ಹೋಗಿರ‍್ತಾರೆ.

ಇದೇ ಥರ ತನಗಾದ ಸಂತಸವನ್ನ ಅಭಿಮಾನಿಯೊಬ್ಬ ಇತ್ತೀಚಿಗೆ ಹಂಚಿಕೊಂಡಿದ್ದ. ರಶ್ಮಿಕಾ ಯುಟ್ಯೂಬ್‌ನ ರಾಣಿ ಅಂದಿದ್ದ. ಆದ್ರೆ.. ಅದೇನೋ ಅಂಥಾರಲ್ಲ. ಸತ್ಯ ಅರಗಿಸಿಕೊಳ್ಳಲಾಗದವರು.. ಸಾವಿರ ಮಾತು ಮಾತನಾಡ್ತಾರೆ ಅಂಥ. ಅದೇ ರೀತಿ, ಅಭಿಮಾನಿ ಮಾಡಿದ್ದ ಯುಟ್ಯೂಬ್ ರಾಣಿಯ ಕಮೆಂಟ್‌ಗೆ ಇನ್ಯಾರೊ ಒಬ್ಬ ಬಂದು, ಥೇಟ್ ಸುದೀಪ ಸ್ಟೈಲ್‌ನಲ್ಲಿ ಓ ಭ್ರಮೆ ಅಂದಿದ್ದ.

ಓ ಭ್ರಮೆ:‘ ಹಲೋ ಬಾಸ್, ರಶ್ಮಿಕಾ ಯೂಟ್ಯೂಬ್ ರಾ ಣಿ ಎನ್ನುವ ಮಾತು ದೊಡ್ಡ ಜೋಕ್ .ಅವರು ಕೇವಲ ನಿಮ್ಮ ಫ್ಯಾನ್ ಪೇಜ್‌ಗಳಿಗೆ ರಾಣಿ ಹೊರತು ಹೊರ ಜಗತ್ತಿಗೆ ಅಲ್ಲ. ಇಲ್ಲಿ ಯಾರೂ ಅವರನ್ನು ಕೇರ್ ಮಾಡಲ್ಲ. ಈ ಪೋಸ್ಟ್‌ನ್ನ ನೋಡಿದ್ರೇ ಎಲ್ಲರೂ ಹುಚ್ಚರಂತೆ ನಗುತ್ತಾರೆ. ನೀನು ಹೋಗಿ ಏನಾದರು ಕೆಲಸ ಮಾಡು. ಆಕೆಯನ್ನು ನೋಡುತ್ತಾ ನಿನ್ನ ಸಮಯ ವ್ಯರ್ಥ ಮಾಡಬೇಡ’ಇದು, ನಿಂದಕನೊಬ್ಬ ರಶ್ಮಿಕಾ ಅಭಿಮಾನಿಯನ್ನ ನಿಂದಿಸಿದ ರೀತಿ. ಇದೇ ನಿಂದನೆ ನೋಡಿದ ರಶ್ಮಿಕಾ ಸಹಜವಾಗಿ ಕೆರಳಿದ್ದಾರೆ. ಹಾಗಾಗೇ, ನಿಂದಿಸಿದ ವ್ಯಕ್ತಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ರಶ್ಮಿಕಾ

ಲಿಮಿಟೆಶನ್ ಇರ‍್ಲಿ:ಎಲ್ಲಾ ವಿಚಾರಕ್ಕೂ ಲಿಮಿಟೇಷನ್ ಇರುತ್ತದೆ. ನನ್ನ ಮೇಲೆ ಟೀಕೆ ಮಾಡುವುದು, ಕಮೆಂಟ್ ಮಾಡುವ ಹಕ್ಕು ನಿಮಗೆ ಇದೆ. ನನ್ನ ಬಗ್ಗೆ ಕಮೆಂಟ್ ಮಾಡಿ ನಾನು ನಿಮ್ಮ ಕಮೆಂಟ್ ಸ್ವೀಕರಿಸುತ್ತೇನೆ. ಅದನ್ನು ಈ ರೀತಿ ಹೇಳುವ ವಿಧಾನ ಸರಿಯಲ್ಲ. ಹಾಗಂತ ನೀವು ನನ್ನ ಅಭಿಮಾನಿಗಳ ಬಗ್ಗೆ ಈ ರೀತಿ ಮಾತನಾಡುವುದಕ್ಕೆ ನಿಮಗೆ ಯಾವುದೇ ಹಕ್ಕಿಲ್ಲ. ಈ ಒಂದು ಮೆಸೇಜ್ ನಾನು ಹುಡುಗರಿಗೆ ಹೇಳ್ತಿರೋದಲ್ಲ. ಯಾರು ನನ್ನ ಅಭಿಮಾನಿಗಳ ಬಗ್ಗೆ ನೆಗೆಟೀವಾಗಿ ಮಾತನಾಡ್ತಿದ್ದಾರೋ ಅವರಿಗೆ ಹೇಳ್ತಿರೋದು.

ಇದು, ರಶ್ಮಿಕಾ ಅಭಿಮಾನಿಯನ್ನ ನಿಂದಿಸಿದ ವ್ಯಕ್ತಿಗೆ ಹೇಳಿದ ಮಾತು. ಇಷ್ಟೇ ಅಲ್ಲ .. ನಿಂದಿಸಿದ ವ್ಯಕ್ತಿಗೆ ನೀವೆ ನಿಮ್ಮ ಕೆಲ್ಸ ಮಾಡಿ ಅನ್ನುವ ಸಲಹೆಯನ್ನೂ ಕೊಟ್ಟಿದ್ದಾರೆ ರಶ್ಮಿಕಾ.ನಿಮ್ಮ ಕೆಲ್ಸ ನೀವ್ ಮಾಡಿ.:ನಿಮಗೆ ನಮ್ಮ ಕೆಲಸ ಇಷ್ಟವಾಗಿಲ್ಲ ಅಂದ್ರೆ ದೂರ ಇರಿ. ನೀವು ಸುಮ್ಮನೆ ನನ್ನ ಹಾಗೂ ನಿಮ್ಮ ಸಮಯವನ್ನು ಯಾಕೆ ವ್ಯರ್ಥ ಮಾಡುತ್ತಿದ್ದೀರಾ.

ರಶ್ಮಿಕಾ ತಮ್ಮ ಆಕ್ರೋಶವನ್ನು ಹೊರಹಾಕ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ಅವರನ್ನು ಸಮಾಧಾನ ಪಡಿಸಿದ್ದಾರೆ. ನೀವು ಶಾಂತಿಯಿಂದ ಇರಿ, ಖುಷಿಯಾಗಿರಿ. ನಾವು ನಿಮ್ಮ ಬೆಂಬಲಕ್ಕೆ ಸದಾ ಇರುತ್ತೇವೆಂದು ರಶ್ಮಿಕಾ ಟ್ವೀಟ್‌ಗೆ ರೀ ಟ್ವೀಟ್ ಮಾಡಿವ ಮೂಲಕ ಸಪೋರ್ಟ್ ಮಾಡಿದ್ದಾರೆ.ಸದ್ಯಕ್ಕೆ ಯಾವುದೇ ಜಗಳ, ಕಿರಿಕ್‌ಗಳಿಲ್ಲದೆ ಬರೀ ಸಿನಿಮಾ ವಿಚಾರಕ್ಕೆ ಸುದ್ದಿಯಾಗ್ತಿದ್ದ ರಶ್ಮಿಕಾ ಟ್ವೀಟ್ ಜೋರಾಗಿ ಸದ್ದು ಮಾಡ್ತಿದ್ದು.

ರಶ್ಮಿಕಾ ಅಭಿಮಾನಿಗಳ ತಂಟೆಗೆ ಬಂದ್ರೆ ಸುಮ್ಮನಿರುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಸದ್ಯ ಯಜಮಾನ ಚಿತ್ರದ ಬಿಡುಗಡೆ ಎದುರು ನೋಡ್ತಿರುವ ರಶ್ಮಿಕಾ ಮತ್ತೊಮ್ಮೆ ಟಾಕ್ ಆಫ್ ದಿ ಟೌನ್ ಆಗೋದಕ್ಕೆ ಸಜ್ಜಾಗಿದ್ದು. ಫ್ಯಾನ್ಸ್ ಜಗಳದ ಮೂಲಕ ಸೌಂಡ್ ಮಾಡುತ್ತಾ ಪೇಚಿಗೆ ಸಿಲುಕಿರೊದು ಮಾತ್ರ ಸುಳ್ಳಲ್ಲ.ಅದೇನೇ ಇದ್ರು.. ಟಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿರುವ ರಶ್ಮಿಕಾ. ಯಜಮಾನನ ಯಜಮಾನಿಯಾಗಿ ಸ್ಯಾಂಡಲ್‌ವುಡ್ ಕ್ರಷ್ ಹಾಗಿಯೇ ಅಭಿಮಾನಿಗಳಲ್ಲಿ ಉಳಿಯುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಸದ್ಯ ಅಭಿಮಾನಿಗಳನ್ನು ಬಿಟ್ಟು ಬಿಡದಂತೆ ಕಾಡ್ತಿದೆ.

LEAVE A REPLY

Please enter your comment!
Please enter your name here