Home Latest ಹೆಂಗಸರು-ಗಂಡಸರು ಅಂತಾನೂ ನೋಡದೆ ಜಮೀನಿಗಾಗಿ ಹೊಡೆದಾಡಿದ ಕುಟುಂಬಗಳು..!!

ಹೆಂಗಸರು-ಗಂಡಸರು ಅಂತಾನೂ ನೋಡದೆ ಜಮೀನಿಗಾಗಿ ಹೊಡೆದಾಡಿದ ಕುಟುಂಬಗಳು..!!

1418
0
SHARE

ಗೋಮಾಳ ಜಮೀನಿಗಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಗೋಮಾಳಕ್ಕಾಗಿ ಹೆಂಗಸರು, ಗಂಡಸರು ಎನ್ನದೆ ಎರಡು ಕುಟುಂಬದವರು ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ. ದಾವಣಗೆರೆ ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಾಲವರ್ತಿ ಗ್ರಾಮದ ಸಿದ್ದಪ್ಪ ಹಾಗೂ ದುರ್ಗಮ್ಮ ಎನ್ನುವರು 40 ವರ್ಷಗಳಿಂದ ಗೋಮಾಳ ಜಾಗದಲ್ಲಿ ಉಳುಮೆ ಮಾಡುತ್ತಿದ್ದರು…

ಆದ್ರೆ ಕಳೆದ ನಾಲ್ಕು ವರ್ಷಗಳಿಂದ ಅದೇ ಗ್ರಾಮದ ನಾಗರಾಜು ಎನ್ನುವರು ಜಮೀನಿಗಾಗಿ ತಕರಾರು ತೆಗೆದಿದ್ರು. ಹಾಗಾಗಿ ಗೋಮಾಳ ಜಮೀನಿನ ವಿಚಾರ ಕೋರ್ಟ್ ಮೆಟ್ಟಲೇರಿತ್ತು. ಇನ್ನು ಪ್ರಕರಣ ಸಂಬಂಧ ಇದೇ ತಿಂಗಳ 28ರಂದು ನಾಗರಾಜ್‌ಗೆ ಉಳುಮೆ ಮಾಡುವಂತೆ ಅದೇಶಿಸಿತ್ತು. ಇದನ್ನು ಪ್ರಶ್ನಿಸಿ, ಸಿದ್ದಪ್ಪನ ಕುಟುಂಬ ಅಬ್ಜಕ್ಷನ್ ಹಾಕಿದ್ರು…

ನಿನ್ನೇ ನಾಗರಾಜ್ ಕುಟುಂಬದವರು ಜಮೀನು ಉಳುಮೆ ಮಾಡುವಾಗ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ.ಉಳುಮೆ ಮಾಡಲು ಬಂದಿದ್ದ ಟ್ರ್ಯಾಕ್ಟರ್ ಕೆಳಗೆ ಮಲಗಿದ ಸಿದ್ದಪ್ಪ, ಜಮೀನು ಊಳದಂತೆ ವಿರೋಧ ವ್ಯಕ್ತಪಡಿಸಿದ್ರು.ನಿನ್ನೇ ನಾಗರಾಜ್ ಕುಟುಂಬದವರು ಜಮೀನು ಉಳುಮೆ ಮಾಡುವಾಗ ಇಬ್ಬರಿಗೂ ಜಗಳ…

ಉಳುಮೆ ಮಾಡಲು ಬಂದಿದ್ದ ಟ್ರ್ಯಾಕ್ಟರ್ ಕೆಳಗೆ ಮಲಗಿ ವಿರೋಧ ವ್ಯಕ್ತಪಡಿಸಿದ ಸಿದ್ದಪ್ಪ.ಆಗ ಮಾತಿಗೆ ಮಾತು ಬೆಳೆದು ಎರಡು ಕುಟುಂಬದವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇನ್ನು ಎರಡು ಕುಟುಂಬದವರಿಗೂ ಗಾಯಗಾಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

 

LEAVE A REPLY

Please enter your comment!
Please enter your name here