Home Crime ಹೆಂಗಸರು ಮತ್ತು ಹುಡುಗಿಯರು ಧರಿಸುವ ಒಳ ಉಡುಪುಗಳನ್ನು ಕದ್ದು ಅವುಗಳನ್ನು ಧರಿಸಿ ಕಾಮ ತೃಷೆ ತೀರಿಸಿಕೊಳ್ಳುತ್ತಿದ್ದ...

ಹೆಂಗಸರು ಮತ್ತು ಹುಡುಗಿಯರು ಧರಿಸುವ ಒಳ ಉಡುಪುಗಳನ್ನು ಕದ್ದು ಅವುಗಳನ್ನು ಧರಿಸಿ ಕಾಮ ತೃಷೆ ತೀರಿಸಿಕೊಳ್ಳುತ್ತಿದ್ದ ಕಲ್ಲೇಶ.!ವಿಕೃತಕಾಮಿ ಉಮೇಶ್ ರೆಡ್ಡಿ ಮಾದರಿಯ ಕಲ್ಲೇಶ.

1251
0
SHARE

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರದಲ್ಲಿ ವಿಕೃತಕಾಮಿ ಉಮೇಶ್ ರೆಡ್ಡಿ ಮಾದರಿಯ ವ್ಯಕ್ತಿ ಪತ್ತೆಯಾಗಿದ್ದಾನೆ, ವಿಕೃತಕಾಮಿ ಕಲ್ಲೇಶನನ್ನು ಸೆರೆ ಹಿಡಿದಿರುವ ಹೊಸದುರ್ಗ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ಹೊಸದುರ್ಗ ನಗರದಲ್ಲಿರುವ ಜೂನಿಯರ್ ಕಾಲೇಜ್ ಸಮೀಪದ ಬಿ ಸಿ ಎಂ ಹಾಸ್ಟೇಲ್ ನಲ್ಲಿ ಬೆತ್ತಲೆಯಾಗಿ ಅಡ್ಡಾಡುತ್ತಾ,

ಹುಡುಗಿಯರ ಒಳ ಉಡುಪುಗಳನ್ನು ಧರಿಸುವುದು ಮತ್ತು ಅವುಗಳನ್ನು ಆಶ್ಲೀಲವಾಗಿ ಬಳಸುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿರುತ್ತದೆ, ಈ ವಿಚಾರವಾಗಿ ಹಾಸ್ಟೆಲ್ ಮೇಲ್ವಿಚಾರಕರು ಪೊಲೀಸರಿಗೆ ದೂರು ನೀಡುತ್ತಾರೆ, ಸದರಿ ದೂರನ್ನು ದಾಖಲಿಸಿಕೊಂಡ ಹೊಸದುರ್ಗ ಪೊಲೀಸರು ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ಎಸ್ಪಿ ಶ್ರೀನಾಥ್ ಎಂ ಜೋಷಿ ಯವರ ಮಾರ್ಗದರ್ಶನದಲ್ಲಿ ತಂಡ ರಚಿಸಿ ಆರೋಪಿಯ ಪತ್ತೆಗಾಗಿ ಶೋಧ ನಡೆಸುತ್ತಿರುವ ಸಂದರ್ಭದಲ್ಲಿ

ಅನುಮಾನಾಸ್ಪದನಾಗಿ ಒಬ್ಬ ವ್ಯಕ್ತಿಯು ಬಿಸಿಎಂ ಹಾಸ್ಟೆಲ್ ಬಳಿ ಕಾಣಿಸಿಕೊಳ್ಳುತ್ತಾನೆ, ತಕ್ಷಣ ಅವನನ್ನು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದಾಗ ಈತ ಸುಮಾರು ಒಂದೂವರೆ ವರ್ಷದಿಂದ ಹೊಸದುರ್ಗ ಪಟ್ಟಣದಲ್ಲಿ ವಾಸವಿದ್ದು ಹೊಸದುರ್ಗದ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ಮತ್ತು ಹುಡುಗಿಯರ ಹಾಸ್ಟೆಲ್ ಬಳಿ ಹೋಗಿ ಹೆಂಗಸರು ಮತ್ತು ಹುಡುಗಿಯರು ಧರಿಸುವ ಒಳ ಉಡುಪುಗಳನ್ನು ಕದ್ದು ಅವುಗಳನ್ನು ಧರಿಸಿಕೊಳ್ಳುವುದು ಮತ್ತು ಕಾಮ ತೃಷೆ ತೀರಿಸಿಕೊಳ್ಳಲು ಬಳಸಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈತನ ಹೆಸರು ಕಲ್ಲೇಶ ಅಲಿಯಾಸ್ ಚಿಕ್ಕಣ್ಣ ಎಂದು ತಿಳಿದುಬಂದಿದ್ದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಈ ಹಿಂದೆ ಕೂಡ ಹೊಸದುರ್ಗ ತಾಲೂಕಿನ ಶೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 7 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾನೆ, ಆರೋಪಿಯಿಂದ ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆದಿದೆ.

LEAVE A REPLY

Please enter your comment!
Please enter your name here