Home Crime ಹೆಂಡತಿ ಕೊಟ್ಟ ಪಂಚ್‌ಗೆ ಆಸ್ಪತ್ರೆ ಸೇರಿದ ಪತಿರಾಯ..?! ಬೇರೊಬ್ಬಳನ್ನು ಮದುವೆಯಾಗಿದ್ದಕ್ಕೆ ಗಂಡನ ಜೊತೆ ಹೆಂಡ್ತಿ ಬಾಕ್ಸಿಂಗ್..!!

ಹೆಂಡತಿ ಕೊಟ್ಟ ಪಂಚ್‌ಗೆ ಆಸ್ಪತ್ರೆ ಸೇರಿದ ಪತಿರಾಯ..?! ಬೇರೊಬ್ಬಳನ್ನು ಮದುವೆಯಾಗಿದ್ದಕ್ಕೆ ಗಂಡನ ಜೊತೆ ಹೆಂಡ್ತಿ ಬಾಕ್ಸಿಂಗ್..!!

652
0
SHARE

ಹೆಣ್ಣು ಒಲಿದ್ರೆ ನಾರಿ ಮುನಿದ್ರೆ ಮಾರಿ ಅನ್ನೂ ಗಾದೆ ಮಾತೊಂದಿದೆ. ಇಂದು ನಾವು ತೋರಿಸೋ ಸ್ಟೋರಿ ನೋಡಿದ್ರೆ ಗಾದೆ ಮಾತು ಅಕ್ಷರ ಸಹ ಸತ್ಯ ಅನಿಸುತ್ತದೆ. ಯಾಕೆಂದ್ರೆ ಗಂಡ ಏನೇ ಮಾಡಿದ್ರು ಸಹಿಸಿಕೊಂಡಿದ್ದ ಹೆಂಡತಿ ಇನ್ನೂಬ್ಬಳ ಕೈ ಹಿಡಿಯುತ್ತಿದ್ದಂತೆ ಪೊಲೀಸರ ಮುಂದೆಯೇ ಆತನಿಗೆ ಸಖತ್ ಗೂಸ ನೀಡಿದ್ದಾಳೆ.

ಒಂದುಕಡೆ ತಲೆ ತುಂಬಾ ಬ್ಯಾಂಡೇಜ್ ಕಟ್ಟಿಕೊಂಡು ಬೆಡ್ ಮೇಲೆ ಅಡ್ಡಡ್ಡಾ ಮಲಗಿರೋ ಪತಿರಾಯ.ಮತ್ತೊಂದು ಕಡೆ ಮುಖಕ್ಕೆ ಪ್ಲಾಸ್ಟರ್ ಹಾಕ್ಕೋಂಡು ತನ್ನ ಅಳಲು ತೋಡಿಕೊಳ್ಳುತ್ತಿರೂ ಪತ್ನಿ. ಈ ದೃಶ್ಯಗಳೆಲ್ಲ ಕಂಡು ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ.

ಎರಡನೇ ಮದುವೆ ಮಾಡಿಕೊಂಡು ಬಂದ ಪತಿರಾಯನಿಗೆ ಮೊದಲನೇ ಹೆಂಡತಿ ಪೊಲೀಸರೆದುರು ಹೊಡೆದು ಮಂಗಳಾರತಿ ಮಾಡಿದ್ದಾಳೆ. ನರಸಮ್ಮ ಮತ್ತು ರಾಮಾಂಜಿನಪ್ಪ ದಂಪತಿ ಕಳೆದ 14 ವರ್ಷಗಳಿಂದೆ ಮದುವೆಯಾಗಿದ್ರು. ಇತ್ತೀಚೆಗೆ ಹೆಣ್ಮಕ್ಕಳ ಚಟ ಜಾಸ್ತಿ ಮಾಡಿಕೊಂಡು ದಿನಕ್ಕೊಂದು ಹೆಣ್ಣಿನ ಜೊತೆ ಹೋಗುತ್ತಿದ್ದ ಪತಿರಾಯನ ಆಟ ನೋಡಿದ್ದ ಪತ್ನಿ ನಾನೊಂದು ತೀರ ನೀನೊಂದು ತೀರ ಅಂತ ದೂರವಾಗಿದ್ರು.

ಇದನ್ನೇ ಕಾಯುತ್ತಿದ್ದ ಗಂಡ ಮತ್ತೊಂದು ಮದುವೆಯಾಗಿದ್ದಾನೆ. ಹೆಂಡತಿ ಇರುವಾಗಲೆ ಮತ್ತೊಂದು ಮದುವೆಯಾದ ಗಂಡನ ಬಗ್ಗೆ ತಿಳಿದುಕೊಂಡ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಠಾಣೆಗೆ ಬಂದ ಗಂಡನನ್ನ ಹಿಗ್ಗಾಮುಗ್ಗಾ ಥಳಿಸುವ ಮುಖಾಂತರ ಪೊಲೀಸರ ಮುಂದೆಯೇ ರಣಚಂಡಿ ಅವಾತರ ತಾಳಿದ್ದಾಳೆ.

ನ್ಯಾಯ ಮಾಡೋಣ ಅಂತ ಇಬ್ಬರನ್ನ ಪೊಲೀಸ್ ಠಾಣೆಗೆ ಕರೆದ ಪೊಲೀಸರೆದುರೆ ಗಂಡ ಹೆಂಡತಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಕಿತ್ತಾಟವನ್ನು ಬಿಡಿಸಿದ ಪೊಲೀಸರು ಗಾಯಗೊಂಡಿದ್ದ ಗಂಡ ರಾಮಾಂಜಿನಪ್ಪನನ್ನ ಸ್ಥಳೀಯ ಆಸ್ವತ್ರೆಗೆ ದಾಖಲಿಸಿದ್ದಾರೆ.

ಆಸ್ವತ್ರೆ ಸೇರಿದ ರಾಮಾಂಜಿನಪ್ಪನನ್ನ ಏನಪ್ಪ ಇದೆಲ್ಲ ಅಂತ ಕೇಳಿದ್ರೆ, ಸರ್ ನನ್ನ ಪತ್ನಿ ನಾನು ಮನೆಗೆ ಹೋಗ್ಲಿಲ್ಲ ಅಂದ್ರೆ ಅನುಮಾನ ಪಡೋದು ಪ್ರಶ್ನಿಸೋದು ಮಾಡ್ತಿದ್ಲು, ಜತೆಗೆ ಆಸ್ತಿಯಲ್ಲಿ ಭಾಗ ಬೇಕು ಅಂತ ಪದೇ ಪದೇ ಕಿರುಕುಳ ನೀಡ್ತಿದ್ದು,ಯಾರ ಮಾತಿಗೂ ಬೆಲೆ ಕೊಡದೆ ಕಿರುಕುಳ ನೀಡದ್ತಿದ್ದಕ್ಕೆ ದೂರವಾಗಿದ್ವಿ.

ಈ ನಡುವೆ ನ್ಯಾಯ ಪಂಚಾಯ್ತಿ ಮಾಡೋಣ ಅಂತ ಪೊಲೀಸರು ಕರೆದಿದ್ದಾರೆ ಅಂತ ಹೋದ್ರೆ ಆಸ್ತಿ ವಿಚಾರಕ್ಕೆ ಈ ರೀತಿ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಅಂತ ಹೆಂಡತಿ ಮೇಲೆ ಪ್ರತ್ಯಾರೋಪ ಮಾಡ್ತಿದ್ದಾನೆ..

ಒಟ್ಟಾರೆ ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದಕ್ಕೆ ತದ್ವಿರುದ್ದವಾಗಿದೆ. ನಾಲ್ಕು ಮೂಲೆ ಮಧ್ಯೆ ಇರಬೇಕಾದ ವಿಷಯ ಬೀದಿಗೆ ಬಂದಿದೆ. ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ಘಟನೆಯ ಅಸಲಿಯತ್ತು ತಿಳಿದು ಬರಲಿದೆ.

LEAVE A REPLY

Please enter your comment!
Please enter your name here